ಅಮೆರಿಕ ಮಾಜಿ ಅಧ್ಯಕ್ಷ ಕಾರ್ಟರ್ ನಿಧನ ಭೇಟಿ ನೆನಪಿಗೆ ಹರ್ಯಾಣ ಹಳ್ಳಿ ಹೆಸರು ಕಾರ್ಟ್ರಪುರಿ!
ನವದೆಹಲಿ: ಅಮೆರಿಕದ 39ನೇ ಅಧ್ಯಕ್ಷ ಹಾಗೂ ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತ ಜಿಮ್ಮಿ ಕಾರ್ಟರ್ (100) ಅಮೆರಿಕ ಜಾರ್ಜಿಯಾದ ತಮ್ಮ ಹುಟ್ಟೂರು ಪ್ಲೇನ್ಸ್ನಲ್ಲಿ ನಿಧನರಾಗಿದ್ದಾರೆ. 1977ರಿಂದ 1981ರವರೆಗೆ ಅಧ್ಯಕ್ಷರಾಗಿದ್ದರು. ಹುಟ್ಟೂರಿನಲ್ಲಿ ಕಡಲೇಕಾಯಿ ರೈತರಾಗಿದ್ದ ಅವರು, ಪೀಚ್ ರಾಜ್ಯದ ಗರ್ವರ್ ಆಗಿ ಆಯ್ಕೆಯಾಗಿ ರಾಜಕೀಯ ಜೀವನ ಆರಂಭಿಸಿದ್ದರು. ಸಾಮಾಜಿಕ ಹಾಗೂ ಆರ್ಥಿಕ ಸಬಲೀಕರಣಕ್ಕೆ ನೀಡಿದ ಕೊಡುಗೆಗೆ 2002ರಲ್ಲಿ ನೊಬೆಲ್ ಪುರಸ್ಕಾರ ಪಡೆದಿದ್ದರು.
ಕಾರ್ಟಪುರಿ:
ಇದನ್ನೂ ಓದಿ:ಹತ್ಯೆ-ಆತ್ಮಹತ್ಯೆಯ ಕಾರುಬಾರು
ಭಾರತದೊಂದಿಗೆ ಕಾರ್ಟರ್ ವಿಶೇಷ ನಂಟು ಹೊಂದಿದ್ದರು. 1978ರ ಜ.3ರಂದು ಪತ್ನಿ ರೊಸಾಲಿನ್ ಜತೆ ಕಾರ್ಟರ್ ಜತೆಗೆ ದೆಹಲಿಯಿಂದ ಹರ್ಯಾಣದ ಹಳ್ಳಿ ದೌಲತ್ಪುರದ ನಾಸಿರಾಬಾದ್ ಗೆ ಪ್ರಯಾಣ ಬೆಳೆಸಿದ್ದರು. ಈ ಭೇಟಿ ಹಳ್ಳಿಗರಿಗೆ ಎಷ್ಟು ಸಂತೋಷ ಕೊಟ್ಟಿತ್ತು ಎಂದರೆ ಗ್ರಾಮಸ್ಥರು ಆ ಪ್ರದೇಶಕ್ಕೆ ‘ಕಾರ್ಟ್ರಪುರಿ’ ಎಂದು ಮರುನಾಮಕರಣ ಮಾಡಿದ್ದರು. ಗ್ರಾಮಸ್ಥರು ಕಾರ್ಟರ್ ಅಧಿಕಾರಾವಧಿ ಪೂರ್ಣಗೊಳ್ಳುವ ತನಕ ಪತ್ನಿ ರೊಸಾಲಿನ್ ಜತೆ ಕಾರ್ಟರ್ ಭಾರತ ಭೇಟಿ.
ಶ್ವೇತಭವನದೊಂದಿಗೆ ಸಂಪರ್ಕದಲ್ಲಿದ್ದರು.
ಬೆಳವಣಿಗೆ ನಂತರ ‘ಕಾರ್ಟಪುರಿ’ಯಲ್ಲಿ ಜ.3ರ ದಿನವನ್ನು ರಜಾದಿನ ಎಂದು ಘೋಷಿಸಲಾಯಿತು. ಕಾರ್ಟರ್ 2002ರಲ್ಲಿ ನೊಬೆಲ್ ಶಾಂತಿ ಪ್ರಶಸ್ತಿಗೆ ಪಾತ್ರರಾಗಿದ್ದಾಗ ಗ್ರಾಮಸ್ಥರು ಬೃಹತ್ ಉತ್ಸವಗಳನ್ನು ನಡೆಸಿ ಸಂಭ್ರಮಿಸಿದ್ದರು.
ತುರ್ತು ಪರಿಸ್ಥಿತಿ ಕೊನೆಗೊಂಡು ಜನತಾ ಪಕ್ಷ ಅಧಿಕಾರಕ್ಕೆ ಬಂದ ಒಂದು ವರ್ಷದ ನಂತರ ಕಾರ್ಟರ್ ಭಾರತಕ್ಕೆ ಬಂದಿದ್ದರು. ಭಾರತದಲ್ಲಿದ್ದ ಸಮಯದಲ್ಲಿ ಅವರು ಸಂಸತ್ತನ್ನು ಉದ್ದೇಶಿಸಿ ಮಾತನಾಡಿ, ಸರ್ವಾಧಿಕಾರಿ ಆಡಳಿತಗಳ ವಿರುದ್ಧ ಅಸಮಾಧಾನ ಹೊರಹಾಕಿದ್ದರು.