ಆಧಾರ್ ಕಾರ್ಡ್ ತಿದ್ದುಪಡಿ ಡೆಡ್ಲೈನ್ ವಿಸ್ತರಣೆ, ಮತ್ತೆ 3 ತಿಂಗಳು ಅವಕಾಶ
ಆಧಾರ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬರಿಗೂ ಗಮನಕ್ಕೆ, ಹಲವಾರು ಜನರು ಆಧಾರ್ ಕಾರ್ಡನ್ನು ಮಾಡಿಸಿ ಹತ್ತು ವರ್ಷಗಳು ಕಳೆದರೂ ಕೂಡ ಅದನ್ನು ಅಪ್ಡೇಟ್ ಮಾಡಿಸಿರುವುದಿಲ್ಲ. ಹಾಗಾಗಿ ಸರ್ಕಾರವು, ಪ್ರತಿಯೊಬ್ಬರು ಆಧಾರ್ ಕಾರ್ಡನ್ನು ಅಪ್ಡೇಟ್ ಮಾಡಿಸಬೇಕೆಂದು ಆದೇಶವನ್ನು ಹೊರಡಿಸಿದೆ. 10 ವರ್ಷಗಳಿಗಿಂತ ಮೇಲ್ಪಟ್ಟು ಆಧಾರ್ ಕಾರ್ಡನ್ನು ಅಪ್ಡೇಟ್ ಮಾಡದಿದ್ದರೆ ಜೂನ್ 30 ಒಳಗೆ ನವೀಕರಿಸಿ.
ಯುಐಡಿಎಐ ಆಧಾರ್ ಕಾರ್ಡ್ ಸಂಬಂಧಿಸಿದ ವಿವರಗಳನ್ನು ನವೀಕರಿಸಲು ಬಳಕೆದಾರರಿಗೆ ಮಾಹಿತಿ ಹೊರಡಿಸಿದೆ. ಉಚಿತವಾಗಿ ಅಪ್ಡೇಟ್ ಮಾಡಲು ನೀಡಿದ್ದ ಸಮಯವನ್ನು ಮಾರ್ಚ್ 16 ರಿಂದ 2024 ರ ಜೂನ್14 ರವರೆಗೆ ವಿಸ್ತರಿಸಲಾಗಿದೆ. ಈ ಸಮಯವನ್ನು ವಿಸ್ತರಿಸುತ್ತಿರುವುದು ಇದು 3ನೇ ಬಾರಿ. ಮೊದಲಿಗೆ ಸೆಪ್ಟೆಂಬರ್ 14ರವರೆಗೂ ಗಡುವು ಇತ್ತು. ಬಳಿಕ ಡಿಸೆಂಬರ್ 14ಕ್ಕೆ ಅದನ್ನು ಹೆಚ್ಚಿಸಲಾಗಿತ್ತು. ಜನರು ಉತ್ತಮವಾಗಿ ಸ್ಪಂದಿಸುತ್ತಿರುವ ಹಿನ್ನೆಲೆಯಲ್ಲಿ ಉಚಿತವಾಗಿ ಆಧಾರ್ ಅಪ್ಡೇಟ್ ಮಾಡುವ ಸಮಯವನ್ನು ಹೆಚ್ಚಿಸಲಾಗಿದೆ ಎಂದು ಯುಐಡಿಎಐ ಹೇಳಿದೆ. ಆನ್ ಲೈನ್ ನಲ್ಲಿ ಆಧಾರ್ ಮಾಹಿತಿ ನವೀಕರಣಕ್ಕೆ ಯಾವುದೇ ಶುಲ್ಕ ಪಾವತಿಸಬೇಕಿಲ್ಲ.
ಯುಐಡಿಎಐ ಉಚಿತ ಆಧಾರ್ ನವೀಕರಣದ ಸಮಯವನ್ನು ಇನ್ನೂ ಮೂರು ತಿಂಗಳು ವಿಸ್ತರಿಸಿದೆ. ಇದರ ಪ್ರಕಾರ ಜೂ.14ರವರೆಗೆ ವಿಸ್ತರಿಸಲಾಗಿದೆ. ಆಧಾರ್ ಕಾರ್ಡ್ ಅನ್ನು ಉಚಿತವಾಗಿ ಅಪ್ ಡೇಟ್ ಮಾಡಲು ಅವಕಾಶವಿದೆ.
ಆಧಾರ್ ಕಾರ್ಡ್ ತಿದ್ದುಪಡಿ ಡೆಡ್ಲೈನ್ ವಿಸ್ತರಣೆ ಎಲ್ಲಿ ಹೇಗೆ ಮಾಡಿಸಬೇಕು?
ಹಲವಾರು ಜನರು ಆಧಾರ್ ಕಾರ್ಡನ್ನು ಮಾಡಿಸಿ ಹತ್ತು ವರ್ಷಗಳು ಕಳೆದರೂ ಕೂಡ ಅದನ್ನು ಅಪ್ಡೇಟ್ ಮಾಡಿಸಿರುವುದಿಲ್ಲ. ಹಾಗಾಗಿ ಸರ್ಕಾರವು, ಪ್ರತಿಯೊಬ್ಬರು ಆಧಾರ್ ಕಾರ್ಡನ್ನು ಅಪ್ಡೇಟ್ ಮಾಡಿಸಬೇಕೆಂದು ಆದೇಶವನ್ನು ಹೊರಡಿಸಿದೆ. 10 ವರ್ಷಗಳಿಗಿಂತ ಮೇಲ್ಪಟ್ಟು ಆಧಾರ್ ಕಾರ್ಡನ್ನು ಅಪ್ಡೇಟ್ ಮಾಡದಿದ್ದರೆ ಜೂನ್ 15 ಒಳಗೆ ನವೀಕರಿಸಿ. ಸಾಮಾನ್ಯವಾಗಿ ಆಧಾರ್ ಅಪ್ಡೇಟ್ ಮಾಡಲು 50 ರೂ. ಶುಲ್ಕ ಪಾವತಿಸಬೇಕು. ಆದರೆ ಆಧಾರ್ನ ಅಧಿಕೃತ ವೆಬ್ಸೈಟ್ ಮೂಲಕ ಅಪ್ ಡೇಟ್ ಮಾಡಿದರೆ ಯಾವುದೇ ಶುಲ್ಕ ಪಾವತಿಸಬೇಕಿಲ್ಲ. ಕೇವಲ ಆನ್ಲೈನ್ನಲ್ಲಿ ಅಪ್ಡೇಟ್ ಮಾಡಲು ಮಾತ್ರವೇ ಶುಲ್ಕ ಇರುವುದಿಲ್ಲ. ಆದರೆ, ಸೈಬರ್ ಸೆಂಟರ್,ಸಾಮಾನ್ಯ ಸೇವಾ ಕೇಂದ್ರ, ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಗಳಲ್ಲಿ ಅಪ್ಡೇಟ್ ಮಾಡಲು ಶುಲ್ಕ ಅನ್ವಯವಾಗುತ್ತದೆ.
ಆಧಾರ್ ಕಾರ್ಡ್ ತಿದ್ದುಪಡಿ ಯಾರಿಗೆಲ್ಲ ಇದು ಅನ್ವಯವಾಗುತ್ತದೆ ?
ಮುಖ್ಯವಾಗಿ 10 ವರ್ಷಗಳ ಆಧಾರ್ ಪೂರ್ಣಗೊಳಿಸಿದ ಬಳಕೆದಾರರು ಈ ಸೌಲಭ್ಯವನ್ನು ಬಳಸಬಹುದು. ಹಾಗೆಯೇ ಯುಐಡಿಎಐ ತಿಳಿಸಿದ ಪ್ರಕಾರ ದಾಖಲೆಗಳನ್ನು ನವೀಕರಿಸಲೇಬೇಕು. ಈ ಒಂದು ಹೊಸ ಬದಲಾವಣೆ ಮಾಡಿದರೆ ಇದರಿಂದ ನಿಮಗೆ ಬಹಳ ಸಹಾಯವಾಗಲಿದೆ. ಇನ್ನು ಪಡಿತರ ಚೀಟಿ, ಮತದಾರರ ಗುರುತಿನ ಚೀಟಿ, ಸರ್ಕಾರಿ ಗುರುತಿನ ಚೀಟಿಯಲ್ಲೂ ನಮ್ಮ ವಿಳಾಸವಿದೆ. ಆದರೆ ನಮ್ಮ ಪಾಸ್ಪೋರ್ಟ್ ಅನ್ನು ಐಡೆಂಟಿ ಕಾರ್ಡ್ ಮತ್ತು ಗುರುತಿನ ಕಾರ್ಡ್ ಆಗಿ ಬಳಸುತ್ತೇವೆ. ಇನ್ನು ನೋಡುವುದಾದರೆ ಶಾಲಾ ಪ್ರಮಾಣಪತ್ರದಲ್ಲಿ ಕೂಡ ಫೋಟೋ ಇದೆ. ಹಾಗಾಗಿ ಸಮಯಕ್ಕೆ ಅನುಗುಣವಾಗಿ ನವೀಕರಿಸುವುದು ಉತ್ತಮ. ಪ್ರತಿಯೊಬ್ಬ ವ್ಯಕ್ತಿಯು 10 ವರ್ಷಗಳ ನಂತರ ತನ್ನ ಆಧಾರ್ ವಿವರಗಳನ್ನು ನವೀಕರಿಸುವುದು ಕಡ್ಡಾಯವಾಗಿದೆ.
ಇದನ್ನೂ ಓದಿ:- ಸೋಲಾರ್ ಪಂಪ್ ಸೆಟ್ ಅಳವಡಿಸಲು ಸರ್ಕಾರದಿಂದ ಗುಡ್ ನ್ಯೂಸ್
ಆಧಾರ್ ಅಪ್ಡೇಟ್ಗೆ ಬೇಕಾಗುವ ದಾಖಲೆಗಳು
ಪಡಿತರ ಚೀಟಿ.
ಮತದಾರರ ಗುರುತಿನ ಚೀಟಿ.
ಪಾಸ್ಬುಕ್.
ಭಾರತೀಯ ಪಾಸ್ಪೋರ್ಟ್.
ಸರ್ಕಾರ ನೀಡಿದ ಗುರುತಿನ ಚೀಟಿ/ಪ್ರಮಾಣಪತ್ರ,
ST/SC/OBC ಪ್ರಮಾಣಪತ್ರ ಅಥವಾ
ಮದುವೆ ಪ್ರಮಾಣಪತ್ರ,
ಭಾವಚಿತ್ರವನ್ನು ಹೊಂದಿದ. ಅಂಗವೈಕಲ್ಯ ಗುರುತಿನ ಚೀಟಿ / ಅಂಗವಿಕಲತೆಯ ಪ್ರಮಾಣಪತ್ರ.
ಆಧಾರ್ ಕಾರ್ಡನ್ನು ಆನ್ಲೈನ್ ನಲ್ಲಿ ಅಪ್ಡೇಟ್ ಮಾಡುವ :
ಮೊದಲನೆಯದಾಗಿ ಆಧಾರ್ ಕಾರ್ಡನ್ನು ಅಪ್ಡೇಟ್ ಮಾಡಲು ಈ ಕೆಳಗಿನ ಲಿಂಕ್ ಮೇಲೆ
ಕ್ಲಿಕ್ ಮಾಡಿ
ನಂತರ ಲಾಗಿನ್ ಮಾಡಿ. ಇಲ್ಲಿ ನಿಮ್ಮ ಆಧಾರ್ ನಂಬರ್ ಹಾಕಿ, Captcha ಎಂಟರ್ ಮಾಡಿ,
Send OTP ಬಟನ್ ಮೇಲೆ ಕ್ಲಿಕ್ ಮಾಡಿ, ಓಟಿಪಿ ನಿಮ್ಮ ರಿಜಿಸ್ಟರ್ ಫೋನ್ ನಂಬರ್ಗೆ ಬರುತ್ತದೆ ಅದನ್ನು ENTER ಮಾಡಿ ಲಾಗಿನ್ ಆಗಿ.
ನಿಮಗೆ ಯಾವ ಮಾಹಿತಿಯನ್ನು ನವೀಕರಿಸಬೇಕು ಅದನ್ನು ಆಯ್ಕೆ ಮಾಡಿ. ಉದಾಹರಣೆಗೆ UDATE DOCUMENT ಆಯ್ಕೆ ಮಾಡಿ.
ಜನ್ಮ ದಿನಾಂಕ ಅಪ್ಡೇಟ್ ಮಾಡಲು ರೇಷನ್ ಕಾರ್ಡ್ ಅಥವಾ ಪಾನ್ ಕಾರ್ಡ್ ಸೆಲೆಕ್ಟ್ ಮಾಡಿ.
ಅದರ ಕೆಳಗೆ ಅಡ್ರೆಸ್ ಅಪ್ಡೇಟ್ ಮಾಡಲು ರೇಷನ್ ಕಾರ್ಡ್ ಅಥವಾ ಮ್ಯಾರೇಜ್ ಸರ್ಟಿಫಿಕೇಟ್ ಸೆಲೆಕ್ಟ್ ಮಾಡಿ.
ಈಗ ನಿಮ್ಮ ವಿಳಾಸ ದೃಢೀಕರಣ ದಾಖಲೆಯ ಸ್ಕ್ಯಾನ್ ಪ್ರತಿ ಅಪ್ಲೋಡ್ ಮಾಡಿ.
ಆ ಬಳಿಕ ‘Submit’ಬಟನ್ ಮೇಲೆ ಕ್ಲಿಕ್ ಮಾಡಿ.
7 ದಿನಗಳೊಳಗೆ ನಿಮ್ಮ ವಿಳಾಸ ಅಥವಾ ಇತರ ಯಾವುದೇ ಮಾಹಿತಿ ಆಧಾರ್ ನಲ್ಲಿ ಅಪ್ಡೇಟ್ ಆಗುತ್ತದೆ.
ಯುಐಡಿಎಐ ಉಚಿತ ಆಧಾರ್ ನವೀಕರಣದ ಸಮಯವನ್ನು ಇನ್ನೂ ಮೂರು ತಿಂಗಳು ವಿಸ್ತರಿಸಿದೆ 14/06/2024 ರ ವರೆಗೂ ಆಧಾರ್ ಕಾರ್ಡಿನ ನವೀಕರಣಕ್ಕೆ ಯಾವುದೇ ರೀತಿಯ ಶುಲ್ಕವನ್ನು ಪಾವತಿಸುವ ಅಗತ್ಯವಿರುವುದಿಲ್ಲ.