ಆಯಾವ್ಯಯದ ಲೆಕ್ಕಾಚಾರ ಇರದಿದ್ದರೆ ಬದುಕು ಆಯೋಮಯ.

ಆಯಾವ್ಯಯದ ಲೆಕ್ಕಾಚಾರ ಇರದಿದ್ದರೆ ಬದುಕು ಆಯೋಮಯ.

ಕಾಂಚಾಣ ಇದ್ದರೆ ಬದುಕು ಝಣಝಣ. ಇಲ್ಲದಿದ್ದರೆ ಭಣಭಣ ಹಣ ಎಂದರೆ ಹೆಣವೂ ಬಾಯಿ ತೆರೆಯುತ್ತದೆ -ಇವೆಲ್ಲ ದುಡ್ಡಿನ ಬಗ್ಗೆ ರೂಢಿಯಲ್ಲಿರುವಮಾತುಗಳು ಇಂದಿನ ದಿನಮಾನಗಳಲ್ಲಿ ಇದು ನಿಜವೂ ಹೌದು. ಆದರೆ ಈ ಹಣ ಅಷ್ಟು ಸುಲಭವಾಗಿ ಬರುವುದಿಲ್ಲ. ಬಂದರೂ ನಿಲ್ಲುವುದಿಲ್ಲ. ಲಕ್ಷ್ಮೀಚಂಚಲೆ. ಆಕೆಯನ್ನು ಒಲಿಸಿಕೊಳ್ಳಲು ಒಂದು ಶಿಸ್ತು, ಸಂಯಮ ಬೇಕು. ಅದುವೇ ಆರ್ಥಿಕ ಶಿಸ್ತು ದುಡಿಮೆ ನಾಲ್ಕಾಣಿ ಖರ್ಚು ಎಂಟಾಣಿ ಆದರೆ ಜೀವನ ಜರ್ಝರಿತಗೊಳ್ಳುತ್ತದೆ. ಈ ಶಿಸ್ತು ಬರಲು ಗಟ್ಟಿ ಮನಸ್ಸು ಬೇಕು. ಇದ್ದುದರಲ್ಲೇ ಸಾಕು ಎನ್ನುವ ತೃಪ್ತಿ ಇರಬೇಕು. ಪರರ ಸ್ಥಿತಿಗತಿ ಜತೆ ಹೋಲಿಕೆ ಸಲ್ಲದು ನಮ್ಮ ದುಡಿಮೆ ನಮಗೆ. ಬದಲಾದ ಸನ್ನಿವೇಶದಲ್ಲಿ ನಾವಿಂದು ಕೊಳ್ಳುಬಾಕತನ ಸಂಸ್ಕೃತಿಗೆ ಮಾರು ಹೋಗಿದ್ದೇವೆ. ಪ್ರತಿಷ್ಠೆಗೆ ಬಿದ್ದು ನಮ್ಮ ಆರ್ಥಿಕ ಇತಿಮಿತಿಗಳ ಗಡಿ ದಾಟಿ ಸಾಲದ ಕೂಪಕ್ಕೆ ಸಿಲುಕಿ ಮಾನಸಿಕವಾಗಿ ಸೊರಗುತ್ತಿದ್ದೇವೆ. ಉಳಿತಾಯದ ಮಂತ್ರ ಪಠಣ ಬಿಟ್ಟ ಪರಿಣಾಮ ಸಾಲದ ಸುಳಿಯಲ್ಲಿ ಸಿಲುಕಿದ್ದೇವೆ ಇದರಲ್ಲಾಗುವ ಏರುಪೇರು ಅಲ್ಲೋಲಕಲ್ಲೋಲವನ್ನೇ ಸೃಷ್ಟಿಸುತ್ತದೆ.

ವೈಯಕ್ತಿಕವಾಗಿ ಪ್ರತಿ ಕುಟುಂಬಕ್ಕೂ ಆರ್ಥಿಕ ಶಿಸ್ತು ಮತ್ತು ಸಮೃದ್ಧಿಗೆ ಬಜೆಟ್‌ನ ಲೆಕ್ಕಾಚಾರ ಇರಲೇಬೇಕು. ಇದು ಹಿಂದೆಂದಿಗಿಂತಲೂ ಇಂದು ಹೆಚ್ಚು ಪ್ರಸ್ತುತ ನಿತ್ಯ ವ್ಯಾಯಾಮಮಾಡುವುದರಿಂದ ಹೇಗೆ ಆರೋಗ್ಯ ಸರಿಯಾಗಿರುತ್ತದೆಯೋ ಹಾಗೆ ಖಚರ್ಮ ವೆಚ್ಚದ ಮೇಲೆ ಹಿಡಿತವಿದ್ದಲ್ಲಿ ಆರ್ಥಿಕ ಆರೋಗ್ಯವೂಸದೃಢವಾಗಿರುತ್ತದೆ ಆಯವ್ಯಯದ ಲೆಕ್ಕಾಚಾರ ಇರದಿದ್ದರೆ ಬದುಕೇ ಅಯೋಮಯ ಇರಲಿ ವ್ಯವಸ್ಥಿತ ಯೋಜನೆ: ಆದಾಯಕ್ಕೆ ತಕ್ಕಂತೆ ಖರ್ಚು ವೆಚ್ಚಗಳನ್ನು ಯೋಚಿಸಬೇಕು. ಭವಿಷ್ಯದ ಜೀವನದ ಗುರಿಗೆ ಇಂತಿಷ್ಟು ಎಂದು ಉಳಿತಾಯ ಮಾಡಬೇಕು. ಮಕ್ಕಳ ವಿದ್ಯಾಭ್ಯಾಸ, ಮದುವೆ ಮುಂತಾದವುಗಳಿಗೆ ಹಣ ಕೂಡಿಡುವ ಪ್ರವೃತ್ತಿ ಇರಬೇಕು. ಅದಾಯ ಮತ್ತು ಖರ್ಚಿನ ಸ್ಪಷ್ಟ ಚಿತ್ರಣ ಇರಬೇಕು. ಉತ್ಪಾದಕ ಮತ್ತು ಅನುತ್ಪಾದಕ ವೆಚ್ಚಗಳ ಬಗ್ಗೆ ಮಾಹಿತಿ ಇರಬೇಕು ಅತಿಯಾಗಿ ಹೊರಗೆ ಹೋಟೆಲ್‌ನಲ್ಲಿ ತಿನ್ನುವುದು, ಅನವಶ್ಯಕ ಪ್ರವಾಸ, ಬಟ್ಟೆಗಳ ಖರೀದಿ, ಕೈಯಲ್ಲಿ ದುಡ್ಡಿಲ್ಲದಿದ್ದರೂ ಕ್ರೆಡಿಟ್ ಕಾರ್ಡ್‌ ಬಳಸುವುದು ಇತ್ಯಾದಿ ಬಲು ಅಪಾಯಕಾರಿ, ನಿವೇಶನ, ಮ್ಯುಚುವಲ್‌ ಫಂಡ್‌ ನಲ್ಲಿ ಹೂಡಿಕೆ ಸುರಕ್ಷಿತ ಮತ್ತು ಇದು ಉತ್ಪಾದಕ ವೆಚ್ಚ ಇತ್ತೀಚೆಗೆ ಚಿನ್ನದ ಮೇಲಿನ ಹೂಡಿಕೆಯೂ ಲಾಭದಾಯಕವಾಗಿದೆ.

ಇದನ್ನೂ ಓದಿ:ಏಪ್ರಿಲ್ ಗೆ ಮಿಲಿಟರಿ ನೆರವು ಬಂದ್

ಬ್ಯಾಂಕ್ ಗಳಲ್ಲಿ ಠೇವಣಿಗೆ ಬಡ್ಡಿ ದರ ಕಡಿಮೆ ಇದೆ ಎಂದು ಉಳಿತಾಯ ಮಾಡದೇ ಇರುವ ಪ್ರಕರಣಗಳು ಹಲವಿವೆ. ಯಾರನ್ನೋ ನಂಬಿ ಹೂಡಿಕೆ ಮಾಡಿ ಕೈ ಸುಟ್ಟುಕೊಂಡವರೂ ಇದ್ದಾರೆ. ಇನ್ನು ಸಾಲ ಮಾಡುವವರು ಅದನ್ನು ತೀರಿಸಲು ಆಗುತ್ತದೆಯೋ ಇಲ್ಲವೋ ಮನೆಯ ಮಾಸಿಕ ಖರ್ಚು ವೆಚ್ಚಗಳನ್ನೆಲ್ಲಾ ನಿಭಾಯಿಸಿ ಕಂತು ಕಟ್ಟಲು ಸಾಧ್ಯವೋ ಇಲ್ಲವೋ ಎಂಬುದನ್ನು ವಿಚಾರಿಸಿ ಸಾಲಮಾಡುವುದು ಒಳಿತು. ಇಲ್ಲದೇ ಹೋದರೆ ಕಂತು ತುಂಬಲು ಮತ್ತೆ ಸಾಲ ಮಾಡುವ ಸ್ಥಿತಿ ಖಚಿತ ಭವಿಷ್ಯವನ್ನು ಊಹಿಸಲು ಯಾರಿಂದಲೂ ಸಾಧ್ಯವಿಲ್ಲ. ಸಮಯ, ಸಂದರ್ಭ ಹೀಗೆ ಇರುತ್ತದೆ ಎಂದು ಹೇಳಲು ಆಗುವುದಿಲ್ಲ. ಜೀವನದಲ್ಲಿ ಕೆಲವೊಮ್ಮೆ ಅನಿರೀಕ್ಷಿತ ಖರ್ಚು ವೆಚ್ಚಗಳು ದಿಢೀರ್ ಎದುರಾಗಬಹುದು ಆಗ ಕೈಯಲ್ಲಿ ಉಳಿತಾಯದ ಹಣ ಇದ್ದರೆಅಪದ್ಭಾಂಧವವಾಗುತ್ತದೆ.ಭವಿಷ್ಯದ ಕಾಳಜಿ ಇರಲಿ: ಕಾಲಕ್ಕೆ ತಕ್ಕಂತೆ ವ್ಯಕ್ತಿಯ ಆದಾಯದಲ್ಲೂ ವ್ಯತ್ಯಾಸವಾಗುತ್ತದೆ ಮತ್ತು ಆತನ ಆದ್ಯತೆಗಳು ಬದಲಾಗುತ್ತವೆ.

ಈ ಹಂತದಲ್ಲಿ ಮುನ್ನೆಚ್ಚರಿಕೆ ತುಂಬಾ ಅಗತ್ಯ. ಮಾರುಕಟ್ಟೆಯಲ್ಲಿನ ಹೊಸ ಹೊಸ ಉತ್ಪನ್ನಗಳ ಮೋಡಿಗೆ ಒಳಗಾಗಿ ಅಗತ್ಯ ಇದೆಯೋ ಇಲ್ಲವೋ ಯೋಚಿಸದೇ ಕೊಳ್ಳುವ ಪ್ರವೃತ್ತಿ ಕೊಂಚ ಅಪಾಯಕಾರಿಯೇ ಸರಿ ವಯಸ್ಸು ಇರುವಾಗ ಮಾಡದ ಮೋಜು ಮಸ್ತಿ ಇನ್ನು ಯಾವಾಗ ಮಾಡೋದು? ಎಂಬೆಲ್ಲಾ ಉಡಾಫೆ ಮಾತು ಅಥವಾ ಆಲೋಚನಾ ಕ್ರಮಗಳು ಕೂಡ ತಪ್ಪೇ. ಬೇಸಿಕ್ ನೀಡ್‌ಗಳಿಗೆ ಮಾಡುವ ಖರ್ಚು ಹೊರತುಪಡಿಸಿ ಮಾಡುವ ಉಳಿತಾಯ ಉಜ್ವಲ ಭವಿಷ್ಯಕ್ಕೆ ಪೂರಕ ನಿವೃತ್ತಿ ಯೋಜನೆ, ಮಕ್ಕಳ ಶೈಕ್ಷಣಿಕ ಖರ್ಚು ವೆಚ್ಚ ಸರಿದೂಗಿಸಲು ಅಗತ್ಯ ಏರ್ಪಾಟು, ಮದುವೆ ಮುಂಜಿಯಂತಹ ಶುಭ ಕಾರ್ಯಗಳ ಖರ್ಚು ವೆಚ್ಚ ಸೇರಿದಂತೆ ವೈಯಕ್ತಿಕ ಬಜೆಟ್ ರೂಪಿಸುವುದು ಪ್ರತಿಯೊಬ್ಬ ಪ್ರಜ್ಞಾವಂತ ನಾಗರಿಕನ ಕರ್ತವ್ಯ ದೃಢಸಂಕಲ್ಪ ಮತ್ತು ತ್ಯಾಗಮಯ ಪ್ರವೃತ್ತಿ ಆರ್ಥಿಕ ಸದೃಢತೆಯ ಮೂಲ ನಮ್ಮಲ್ಲಿ ಹಿರಿಯರು ಹೇಳಿದ ಒಂದು ಗಾದೆ ಮಾತಿದೆ. ಬಡವನಾಗಿ ಹುಟ್ಟುವುದು ತಪ್ಪಲ್ಲ. ಆದರೆ ಬಡವನಾಗಿ ಸಾಯುವುದು ತಪ್ಪು ಅಂದರೆ ಜೀವನದಲ್ಲಿ ಆರ್ಥಿಕ ಶಿಸ್ತು ಇದ್ದಲ್ಲಿ ಎಂಥ ಬಡವನಿದ್ದರೂ ಸಕಾಲಿಕ ಮತ್ತು ಸೂಕ್ತ ನಿರ್ಧಾರದಿಂದ ಶ್ರೀಮಂತನಾಗಬಲ್ಲ.

Leave a Comment