ಆರ್‌ಸಿಬಿ ದಾಳಿಗೆ ಕುಸಿದ ಡೆಲಿ

ಆರ್‌ಸಿಬಿ ದಾಳಿಗೆ ಕುಸಿದ ಡೆಲಿ

ತಲಾ 3 ವಿಕೆಟ್ ಪಡೆದ ರೇಣುಕಾ, ಜಾರ್ಜಿಯಾ • ಗೆಲುವಿಗೆ 142 ರನ್ ಗುರಿ ವಡೋದರ (ಪಿಟಿಐ): ಅನುಭವಿಗಳಾದ ರೇಣುಕಾ ಸಿಂಗ್ ಮತ್ತು ಜಾರ್ಜಿಯಾ ವೇರ್‌ಹ್ಯಾಮ್ ಅವರ ಪರಿಣಾಮಕಾರಿ ಬೌಲಿಂಗ್ ನೆರವಿನಿಂದ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮಹಿಳಾ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯದಲ್ಲಿ ಸೋಮವಾರ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 141 ರನ್‌ಗಳಿಗೆ ಕಟ್ಟಿಹಾಕಿತು.

ವೇಗದ ಬೌಲರ್ ರೇಣುಕಾ 4 ಓವರುಗಳಲ್ಲಿ 23 ರನ್ನಿಗೆ 4 ವಿಕೆಟ್ ಪಡೆದರೆ, ಲೆಗ್‌ಸ್ಪಿನ್ನರ್‌ ವ್ಹೇರ್ ಹ್ಯಾಮ್ 25 ರನ್ನಿಗೆ 3 ವಿಕೆಟ್ ಕಬಳಿಸಿದರು. ಪವರ್‌ಪ್ಲೇ ಅವಧಿಯಲ್ಲಿ 1 ವಿಕೆಟ್‌ಗೆ 55 ರನ್ ಗಳಿಸಿ ಉತ್ತಮ ಆರಂಭ ಮಾಡಿದ್ದ ಡೆಲ್ಲಿ ತಂಡದ ಮೇಲೆ ನಂತರ ಆರ್‌ಸಿಬಿ ಬೌಲರ್‌ಗಳು ನಿರಂತರವಾಗಿ ಒತ್ತಡ ಹೇರಿದರು.

ಟಾಸ್ ಸೋತು ಬ್ಯಾಟ್ ಮಾಡಿದ ಡೆಲ್ಲಿ ತಂಡಕ್ಕೆ ರೇಣುಕಾ ಸಿಂಗ್ ಆರಂಭದಲ್ಲೇ ಪೆಟ್ಟು ನೀಡಿದರು. ಅನುಭವಿ ಶಫಾಲಿ ವರ್ಮಾ (0) ಅವರನ್ನು ಮಿಡ್‌ಆಫ್‌ನಲ್ಲಿ ಕ್ಯಾಚ್ ನೀಡಿದರು. ಮೆಗ್‌ಲ್ಯಾನಿಂಗ್ ಮತ್ತು ಜೆಮಿಮಾ ರಾಡ್ರಿಗಸ್ ತಂಡಕ್ಕೆ ಚೇತರಿಕೆ ನೀಡಲು ಯತ್ನಿಸಿದರು.

ಇದನ್ನೂ ಓದಿ:ದೊಡ್ಡಣ್ಣ’ನ ಹಾದಿಯಲ್ಲಿ ಬ್ರಿಟನ್

ಏಳನೇ ಓವರಿನಲ್ಲಿ ಐದು ಎಸೆತಗಳ ಅಂತರದಲ್ಲಿ ಎರಡು ವಿಕೆಟ್‌ಗಳನ್ನು ಕಳೆದುಕೊಂಡ ಕ್ಯಾಪಿಟಲ್ಸ್ ತಂಡ ನಂತರ ಚೇತರಿಸಿಕೊಳ್ಳಲಿಲ್ಲ. 22 ಎಸೆತಗಳಲ್ಲಿ 34 (4×4, 6×2) ರನ್ ಬಾರಿಸಿದ್ದ ಜೆಮಿಮಾ ರಾಡ್ರಿಗಸ್ ಅವರು ವೇರ್‌ಹ್ಯಾಮ್‌ ಬೌಲಿಂಗ್‌ನಲ್ಲಿ ರಿವರ್ಸ್ ಸ್ವೀಪ್‌ಗೆ ಯತ್ನಿಸಿ ರಿಚಾ ಘೋಷ್ ಅವರಿಂದ ಸ್ಟಂಪಿಂಗ್‌ಗೆ ಒಳಗಾದರು. ಮರು ಓವರಿನಲ್ಲಿ ನಾಯಕಿ ಮೆಗ್ ಲ್ಯಾನಿಂಗ್‌, ಶಾರ್ಟ್‌ಪಿಚ್ ಎಸೆತ ಆಡಲೆತ್ನಿಸಿ ಸ್ಟೇರ್‌ಲೆ-ಗ್‌ನಲ್ಲಿದ್ದ ಎಲ್ಲಿಸ್ ಪೆರಿಗೆ ಕ್ಯಾಚಿತ್ತರು.

ಏಕ್ತಾ ಬಿಷ್ ಬೌಲಿಂಗ್‌ನಲ್ಲಿ ಸಿಕ್ಸರ್ ಎತ್ತಿದ್ದ ಅನ್ನಾಬೆಲ್ ಸದರ್‌ಲ್ಯಾಂಡ್ (19) ಬೇರೂರುವಂತೆ ಕಂಡಿದ್ದರು. ಆದರೆ 11ನೇ ಓವರಿನಲ್ಲಿ ರೇಣುಕಾ ಈವಿಕೆಟ್ ಪಡೆದರು. ಎರಡನೇ ಪಂದ್ಯ ಆಡುತ್ತಿರುವ ವಿಕೆಟ್ ಕೀಪರ್ ಬ್ರೆಸ್ 19 ಎಸೆತಗಳಲ್ಲಿ 23 ರನ್ ಗಳಿಸಿದ್ದರಿಂದ ತಂಡ ನೂರರ ಮೊತ್ತ ದಾಟಿತು. ಅವರೂ ವ್ಹೇರ್‌ಹ್ಯಾಮ್ ಅವರಿಗೆ ವಿಕೆಟ್ ನೀಡಿದರು.

ಡೆಲ್ಲಿ ಕೊನೆಯ ಐದು ವಿಕೆಟ್‌ಗಳನ್ನು ಆರು ಓವರುಗಳಕಳೆದುಕೊಂಡು ಮೂರು ಎಸೆತಗಳಿರುವಂತೆ ಆಟ ಮುಗಿಸಿತು.: 19.3 ಓವರುಗಳಲ್ಲಿ 141 (ಜೆಮಿಮಾ ರಾಡ್ರಿಗಸ್ 34, ಸಾರಾ ಬ್ರೆಸ್ 23; ರೇಣುಕಾ ಸಿಂಗ್ 23ಕ್ಕೆ3, ಕಿಮ್ ಗಾರ್ತ್ 19ಕ್ಕೆ2, ಏಕ್ತಾ ಬಿಷ್ 35ಕ್ಕೆ2, ಜಾರ್ಜಿಯಾ ವ್ಹೇರ್‌ಹ್ಯಾಮ್ 25ಕ್ಕೆ3) ವಿರುದ್ಧ ಡೆಡ್ಲಿ ಕೊನೆಯ ಐದು ವಿಕೆಟ್ಗಳು 6 ಓವರ್ ಗಳ ಅಂತರದಲ್ಲಿರಾಯಲ್ ಚಾಲೆಂಜರ್ಸ್‌ ಬೆಂಗಳೂರು.

Leave a Comment