ಇ-ತ್ಯಾಜ್ಯ ಬೇಕಿದೆ ಪರಿಹಾರ

ಇ-ತ್ಯಾಜ್ಯ ಬೇಕಿದೆ ಪರಿಹಾರ

ಭಾರತದಲ್ಲಿ‌ ಇತ್ಯಾಜ್ಯ ಬಾರಿ ಪ್ರಮಾಣದಲ್ಲಿ ಸೃಷ್ಟಿಯಾಗುತ್ತಿದ್ದು. ಐದು ವರ್ಷಗಳಲ್ಲಿ ಶೇ.72.54ರಷ್ಟು ಹೆಚ್ಚಳವಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಈ ಬಗ್ಗೆ ರಾಜ್ಯಸಭೆಯಲ್ಲಿ 2024ರ ಡಿ. 16ರಂದು ಮಾಹಿತಿ ನೀಡಿರುವ ವಸತಿ ಮತ್ತು ನಗರ ವ್ಯವಹಾರಗಳ ರಾಜ್ಯ ಸಚಿವ ಟೋಖನ್ ಸಾಹು ಅವರು, 2019-20ರಲ್ಲಿ 10,14,961 ಟನ್‌ಗಳಷ್ಟಿದ್ದ (ಎಂಟಿ) ಇ-ತ್ಯಾಜ್ಯದ ಪ್ರಮಾಣ2023-24ರ ಹೊತ್ತಿಗೆ17,51,236 ಟನ್‌ಗಳಿಗೆ ಹೆಚ್ಚಳವಾಗಿದೆ ಎಂದಿದ್ದಾರೆ.

ಕೈಗಾರಿಕೀಕರಣ ಮತ್ತು ನಗರೀಕರಣದಿಂದ ದೇಶದಲ್ಲಿ ಎಲೆಕ್ಟ್ರಾನಿಕ್ ಉಪಕರಣಗಳ ಬಳಕೆ ಹೆಚ್ಚಾಗಿದೆ. ಎಲೆಕ್ನಿಕಲ್ ಮತ್ತು ಎಲೆಕ್ಟ್ರಾನಿಕ್ ಉತ್ಪನ್ನಗಳ ಬಳಕೆ ಹೆಚ್ಚಾದಂತೆ, ಇ-ತ್ಯಾಜ್ಯವೂ ಹೆಚ್ಚುತ್ತಿದೆ. ಗಮನಾರ್ಹ ವಿಚಾರವೆಂದರೆ, ಕೋವಿಡ್ ಸಂದರ್ಭದಲ್ಲಿ, ಅಂದರೆ, 2019ರಿಂದ 2021ರವರೆಗೆ, ಇ-ತ್ಯಾಜ್ಯವು ಭಾರಿ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ವರ್ಕ್ ಪ್ರಮ್ ಹೋಮ್. ಆನ್‌ಲೈನ್ ಪಾಠ, ಪ್ರವಚನಗಳು ಹೆಚ್ಚಾಗಿದ್ದೇ ಇದಕ್ಕೆ ಕಾರಣ. ಎಲೆಕ್ನಿಕಲ್ ಮತ್ತು ಎಲೆಕ್ಟ್ರಾನಿಕ್ ಸಾಧನಗಳ (ಇಇಇ) ಸರಾಸರಿ ಆಯಸ್ಸು ಮತ್ತು ಅವುಗಳ ಉತ್ಪಾದಕರಿಂದ ಪಡೆದ ಮಾರಾಟದ ದತ್ತಾಂಶ ಆಧರಿಸಿ ರಾಷ್ಟ್ರೀಯ ಮಟ್ಟದಲ್ಲಿ ಇ- ತ್ಯಾಜ್ಯದ ಪ್ರಮಾಣವನ್ನು ಲೆಕ್ಕ ಹಾಕಲಾಗುತ್ತದೆ ಎಂದು ಸಚಿವರು ತಿಳಿಸಿದ್ದಾರೆ.
ಇ-ತ್ಯಾಜ್ಯವನ್ನು ಸರಿಯಾದ ರೀತಿಯಲ್ಲಿ ವಿಲೇವಾರಿ ಮಾಡಬೇಕು, ಸೂಕ್ತ ರೀತಿಯಲ್ಲಿ ಸಂಸ್ಕರಣೆ ಮಾಡಬೇಕು. ಇಲ್ಲದಿದ್ದರೆ ಅವುಗಳಲ್ಲಿರುವ ಸೀಸ, ಪಾದರಸ, ಕ್ಯಾಡ್ಮಿಯಂ, ಸಿಲಿಕಾನ್, ತಾಮ್ರ, ಕೋಬಾಲ್ಟ್, ಆರ್ಸೆನಿಕ್ ಮುಂತಾದ ಲೋಹಗಳು ಜಲಮೂಲ ಮತ್ತು ಮಣ್ಣು ಸೇರಿ ಮಾಲಿನ್ಯಕ್ಕೆ ಕಾರಣವಾಗುತ್ತವೆ. ಮನುಷ್ಯನ ಆರೋಗ್ಯದ ಮೇಲೆಯೂ ಇವು ಗಂಭೀರ ಪರಿಣಾಮಉಂಟುಮಾಡುತ್ತವೆ.

ಕೇಂದ್ರ ಸರ್ಕಾರವು ‘ವಿಸ್ತರಿತ ಉತ್ಪಾದಕರ ಜವಾಬ್ದಾರಿ’ಯ (ಇಪಿಆ‌ರ್) ಮೂಲಕ ಇ-ತ್ಯಾಜ್ಯ ಸಂಗ್ರಹಣೆ ಮತ್ತು ಸಂಸ್ಕರಣೆಯ ಕಾರ್ಯದಲ್ಲಿ ಸಾಧನಗಳ ಉತ್ಪಾದಕರನ್ನೂ ಒಳಗೊಳ್ಳುತ್ತಿದೆ. ಭಾರತದಲ್ಲಿ ಇ-ತ್ಯಾಜ್ಯ ಸಂಗ್ರಹಣೆ ಮತ್ತು ಸಂಸ್ಕರಣೆ ಅಸಾಂಪ್ರದಾಯಿಕ ರೀತಿಯಲ್ಲಿಯೇ ಹೆಚ್ಚಾಗಿ ನಡೆಯುತ್ತಿದೆ. ಇದು ಕೂಡ ಅನೇಕ ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ಹೀಗಾಗಿ ಅವುಗಳ ಸಂಸ್ಕರಣೆ ಮತ್ತು ರಮರುಬಳಕೆಯ ಕಾರ್ಯದಲ್ಲಿ ಉತ್ಪಾದಕರು, ಮಾರಾಟಗಾರರ ನೋಂದಣಿ ಮುಂತಾದ ಕ್ರಮಗಳ ಮೂಲಕ ಇ-ತ್ಯಾಜ್ಯದ ಪ್ರಮಾಣವನ್ನು ಗಣನೀಯವಾಗಿ ಕಡಿಮೆ ಮಾಡಬಹುದು ಎನ್ನುವುದು ಕೇಂದ್ರದ ಲೆಕ್ಕಾಚಾರ.

ಇದನ್ನೂ ಓದಿ: ಸಂದೇಹ ನಿವಾರಿಸಿಕೊಳ್ಳುವ ಹೊತ್ತು

ಹೆಚ್ಚಿನ ರಾಜ್ಯಗಳಲ್ಲಿ ಇ-ತ್ಯಾಜ್ಯ ಸಂಸ್ಕರಣೆಯ ವ್ಯವಸ್ಥೆ ಇದೆ. 2019-20ರಲ್ಲಿ ಶೇ 22ರಷ್ಟು ಇದ್ದ ಇ-ತ್ಯಾಜ್ಯ ಸಂಸ್ಕರಣೆಯ ಪ್ರಮಾಣವು 2023-24ರ ಹೊತ್ತಿಗೆ ಶೇ 43ಕ್ಕೆ ಏರಿಕೆಯಾಗಿದೆ. ಇಷ್ಟಾದರೂ ಶೇ 53ರಷ್ಟು ಪ್ರಮಾಣ ಸಂಸ್ಕರಣೆಯಾಗದೆಯೇ ಉಳಿಯುತ್ತಿದೆ. ಇ-ತ್ಯಾಜ್ಯ ಸೃಷ್ಟಿ ಆಗುತ್ತಿರುವ ಪ್ರಮಾಣ ಮತ್ತು ಸಂಸ್ಕರಣೆ ಆಗುತ್ತಿರುವ ಪ್ರಮಾಣದ ನಡುವೆ ಭಾರಿ ಅಂತರವಿರುವ ಬಗ್ಗೆ ಕಳವಳ ವ್ಯಕ್ತವಾಗಿದೆ.
ರಾಷ್ಟ್ರೀಯ ಮಟ್ಟದಲ್ಲಿ ಇ-ತ್ಯಾಜ್ಯದ ಪ್ರಮಾಣವನ್ನು ಅಳೆಯಲಾಗುತ್ತಿದ್ದು, ರಾಜ್ಯಗಳ ಮಟ್ಟದಲ್ಲಿ ಅದರ ಪ್ರಮಾಣ ಎಷ್ಟಿದೆ ಎನ್ನುವುದರ ಇತ್ತೀಚಿನ ಮಾಹಿತಿ ಲಭ್ಯವಿಲ್ಲ ಎಂದು ಕೇಂದ್ರವು ತಿಳಿಸಿದೆ. ಆದರೆ, ಈ ಬಗ್ಗೆ ಹಿಂದೆ ಕೇಂದ್ರದ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆ ಪ್ರಕಟಿಸಿದ್ದ ದತ್ತಾಂಶವನ್ನು ಗಮನಿಸಿದರೆ, ದೇಶದ ಇ-ತ್ಯಾಜ್ಯ ಸೃಷ್ಟಿಯ ಒಂದು ಅಂದಾಜು ಸಿಗುತ್ತದೆ. ಹೆಸರಾಗಿರುವ ಬೆಂಗಳೂರಿನ ದೇಶ ನಗರಗಳ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದಿದೆ. ದೇಶದ ಈ ತ್ಯಾಜ್ಯದಲ್ಲಿ ಸಿಲಿಕಾನ್ ಸಿಟಿ ಶೇ.10.1 ರಷ್ಟು ಪಾಲು ಪಡೆದಿದೆ.

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಇ-ತ್ಯಾಜ್ಯ ವಿಲೇವಾರಿಗಾಗಿ ನಗರದ ವಿವಿಧ ಭಾಗಗಳಲ್ಲಿ 20 ಇ-ತ್ಯಾಜ್ಯ ಕೇಂದ್ರಗಳನ್ನು ಸ್ಥಾಪಿಸಿದೆ. ಆದರೆ, ರಾಜ್ಯ ರಾಜಧಾನಿಯಲ್ಲಿ ಇ-ತ್ಯಾಜ್ಯದ ಸಂಗ್ರಹ ಮತ್ತು ವಿಲೇವಾರಿ ಅಸಾಂಪ್ರದಾಯಿಕ ರೀತಿಯಲ್ಲಿಯೇ ಹೆಚ್ಚಾಗಿ ನಡೆಯುತ್ತಿದೆ. ಸುಸ್ಥಿರ ಅಭಿವೃದ್ಧಿ ಕೇಂದ್ರವು 2022ರಲ್ಲಿ ನಡೆಸಿದ ಅಧ್ಯಯನದಲ್ಲಿ, ನಗರದ ಶೇ 75ಕ್ಕೂ ಹೆಚ್ಚು ಮಂದಿ ಇ-ತ್ಯಾಜ್ಯವನ್ನು ಸಮರ್ಪಕ ರೀತಿಯಲ್ಲಿ ವಿಲೇವಾರಿ ಮಾಡುತ್ತಿಲ್ಲ ಎನ್ನುವುದು ಕಂಡುಬಂದಿತ್ತು. ಮನೆಗಳಿಂದ ಹಸಿ ಕಸ ಮತ್ತು ಒಣ ಕಸದಂತೆ ಎಲೆಕ್ಟ್ರಾನಿಕ್ ಕಸವನ್ನೂ ಸಂಗ್ರಹಿಸಬೇಕು. ಆದರೆ, ಬಹುತೇಕರು ಒಣಕಸದಲ್ಲಿಯೇ ಇ-ತ್ಯಾಜ್ಯವನ್ನೂ ಸೇರಿಸಿ ವಿಲೇವಾರಿ ಮಾಡುತ್ತಿದ್ದಾರೆ. ನಗರದಲ್ಲಿ ಸಂಗ್ರಹವಾಗುತ್ತಿರುವ ಘನ ತ್ಯಾಜ್ಯದಲ್ಲಿ ಶೇ 2ರಷ್ಟು ಪ್ರಮಾಣವು ಇ-ತ್ಯಾಜ್ಯ ಎಂದು ಅಧ್ಯಯನ ತಿಳಿಸಿತ್ತು. ಸಾಹಸ್, ರಾಶಿ ಸೇರಿದಂತೆ ಹಲವು ಸಂಸ್ಥೆಗಳೂ ಕೂಡ ಇ-ತ್ಯಾಜ್ಯ ನಿರ್ವಹಣೆ ಕಾರ್ಯದಲ್ಲಿ ತೊಡಗಿವೆ.

Leave a Comment