ಏಪ್ರಿಲ್ ಗೆ ಮಿಲಿಟರಿ ನೆರವು ಬಂದ್

ಏಪ್ರಿಲ್ ಗೆ ಮಿಲಿಟರಿ ನೆರವು ಬಂದ್

ಟ್ರಂಪ್ ಹೊಸ ಆದೇಶ !ಈವರೆಗೆ ಅಮೆರಿಕದಿಂದ 5.7 ಲಕ್ಷ ಕೋಟಿ ರೂ. ನೆರವು.
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಯೂಕೇನ್ ಅಧ್ಯಕ್ಷ ವೊಲಾದಿಮಿರ್ ಝಲೆನ್‌ ನಡುವೆ ಜಟಾಪಟಿ ನಡೆದ ಕೆಲವೇ ದಿನಗಳಲ್ಲಿ ಅಮೆರಿಕ ಸರ್ಕಾರ ಯೂಕ್ರೇನ್‌ಗೆ ನೀಡುತ್ತಿದ್ದ ಮಿಲಿಟರಿ ನೆರವನ್ನು ಸಂಪೂರ್ಣ ಸ್ಥಗಿತಗೊಳಿಸಿದೆ. ಯೂಕ್ರೇನ್‌ಗೆ ತಾತ್ಕಾಲಿಕವಾಗಿ ಮಾತ್ರ ಮಿಲಿಟರಿ ನೆರವನ್ನು ನಿಲ್ಲಿಸಲಾಗಿದೆ ಎಂದು ಶ್ವೇತಭವನ ತಿಳಿಸಿದೆ. ಯೂಕ್ರೇನ್ ನಾಯಕರು ಶಾಂತಿ ಸ್ಥಾಪನೆಗೆ ಬದ್ಧತೆಯನ್ನು ತೋರಿಸಿದ್ದಾರೆ ಎಂಬುದು ಟ್ರಂಪ್‌ಗೆ ಮನವರಿಕೆಯಾಗುವವರೆಗೆ ನೆರವು ಸ್ಥಗಿತ ವಾಗಿರಲಿದೆ ಎಂದು ಮೂಲಗಳು ತಿಳಿಸಿವೆ.


ಅಮೆರಿಕದ ಸ್ಟೇಟ್ ಡಿಪಾರ್ಟ್‌ ಮೆಂಟ್ ಪ್ರಕಾರ, 2022ರ ಫೆಬ್ರವರಿ 24ರಂದು ರಷ್ಯಾ, ಸೇನೆ ಯೂಕೇನ್ ಮೇಲೆ ದಾಳಿ ಮಾಡಿದ ಬಳಿಕ65.9 ಬಿಲಿಯನ್ ಡಾಲರ್ (5.7 ಲಕ್ಷ ಕೋಟಿ ರೂಪಾಯಿ) ಮಿಲಿಟರಿ ನೆರವನ್ನು ನೀಡಲಾಗಿದೆ. ಟ್ರಂಪ್ 2ನೇ ಬಾರಿಗೆ ಅಧಿಕಾರಕ್ಕೆ ಬಂದ ದಿನದಿಂದಲೂ ಯುದ್ಧ ನಿಲ್ಲಿಸಿ ಶಾಂತಿ ಸ್ಥಾಪಿಸಲು ಪ್ರಯತ್ನಿಸುತ್ತಿದ್ದಾರೆ ರಷ್ಯಾ ಸಹ ಶಾಂತಿ ಸ್ಥಾಪನೆಗೆ ಸಕಾರಾತ್ಮಕವಾಗಿ ಸ್ಪಂದಿಸುತ್ತಿದೆ.ಟ್ರಂಪ್ ಜತೆಗಿನ ವಾಗ್ವಾದದ ಬಳಿಕ ಈ ಕುರಿತು ಪ್ರತಿಕ್ರಿಯೆ ನೀಡಿದ್ದ ಝಲೆನ್‌ಸ್ಕಿ ಅಮೆರಿಕ ಮತ್ತು ಯೂಕೇನ್ ನಡುವೆ ಉತ್ತಮ ಸಂಬಂಧವಿದೆ ವಾಗ್ವಾದದ ಬಳಿಕವೂ ಅಮೆರಿಕ ನಮಗೆ ಬೆಂಬಲ ನೀಡಲಿದೆ ಎಂದು ತಿಳಿಸಿದ್ದರು ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಟ್ರಂಪ್ ಅಮೆರಿಕ ಇದನ್ನು ಇನ್ನು ಹೆಚ್ಚು ಕಾಲ ಸಹಿಸಿಕೊಳ್ಳುವುದಿಲ್ಲ ಎಂದು ತಿಳಿಸುವ ಮೂಲಕ ನೆರವು ನಿಲ್ಲಿಸುವ ಸೂಚನೆ ನೀಡಿದ್ದರು. ಅದರಂತೆ ಈಗ ಮಿಲಿಟರಿ ನೆರವಿಗೆ ತಾತ್ಕಾಲಿಕ ತಡೆ ಬಿದ್ದಿದೆ. ಕೆನಡಾ, ಮೆಕ್ಸಿಕೋ, ಚೀನಾಗೆ ಸುಂಕದ ಬರೆ ಕೆನಡಾ, ಮೆಕ್ಸಿಕೋ ಮತ್ತು ಚೀನಾ ಸೇರಿ ಹಲವು ದೇಶಗಳಉತ್ಪನ್ನಗಳ ಮೇಲೆ ಹೆಚ್ಚಿನ ಸುಂಕ ವಿಧಿಸುವ ಟ್ರಂಪ್ ನಿರ್ಧಾರ ಮಂಗಳವಾರದಿಂದ ಜಾರಿಗೆ ಬಂದಿದೆ.

ಇದನ್ನೂ ಓದಿ:‘ಅತಿ’ ಜಾಣನಿಗೆ ಬೇಕು ಕಡಿಬಾಣ

ಮಂಗಳವಾರ ಮಧ್ಯರಾತ್ರಿಯಿಂದ ಕೆನಡಾ ಮತ್ತು ಮೆಕ್ಸಿಕೋದ ಉತ್ಪನ್ನಗಳ ಮೇಲೆ ಶೇ. 25 ರಷ್ಟು ಸುಂಕ ವಿಧಿಸಲಾಗುತ್ತಿದೆ ಹಾಗೂ ಕೆನಡಾದ ಇಂಧನ ಉತ್ಪನ್ನಗಳ ಮೇಲೆ ಶೇ. 10ರಷ್ಟು ಆಮದು ಸುಂಕ ವಿಧಿಸಲಾಗುತ್ತಿದೆ. ಚೀನಾದ ಉತ್ಪನ್ನಗಳ ಮೇಲೆ ಫೆಬ್ರವರಿಯಲ್ಲಿ ಶೇ. 10ರಷ್ಟು ಸುಂಕ ವಿಧಿಸಲಾಗಿತ್ತು. ಈಗ ಇದು ದ್ವಿಗುಣಗೊಂಡಿದ್ದು ಮಂಗಳವಾರದಿಂದ ಶೇ. 20 ರಷ್ಟು ಸುಂಕ ವಿಧಿಸಲಾಗುತ್ತಿದೆ ಟ್ರಂಪ್ ಸುಂಕ ಹೆಚ್ಚಳ ಮಾಡುತ್ತಿದ್ದಂತೆ ಕೆನಡಾದ ಪ್ರಧಾನ ಮಂತ್ರಿ ಜಸ್ಟಿನ್ ಟ್ರುಡೋ ಅಮೆರಿಕ ಉತ್ಪನ್ನಗಳ ಮೇಲೆ ಸುಂಕ ಹೆಚ್ಚಿಸುವ ನಿರ್ಧಾರ ಪ್ರಕಟಿಸಿದ್ದಾರೆ. ಮುಂದಿನ 21 ದಿನಗಳಲ್ಲಿ ಅಮೆರಿಕದ 100 ಬಿಲಿಯನ್ ಡಾಲರ್ ಮೌಲ್ಯದ ಉತ್ಪನ್ನಗಳ ಮೇಲೆ ಸುಂಕ ವಿಧಿಸಲಾಗುವುದು ಎಂದು ತಿಳಿಸಿದ್ದಾರೆ. ಆದರೆ ಮೆಕ್ಸಿಕೋ ಸುಂಕ ಹೆಚ್ಚಳದ ಕುರಿತು ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಡೊನಾಲ್ಡ್ ಟ್ರಂಪ್ ರೈ ಅಂಗೈನಲ್ಲಿ ದೊಡ್ಡ ಗಾಯದ ಗುರುತು ಕಂಡು ಬಂದಿದೆ. ಸೋಮವಾರ ಅವರು ಶ್ವೇತಭವನದಲ್ಲಿ ಮಾತನಾಡುವಾಗ ಅವರ ಕೈಯಲ್ಲಿ 2 ಗಾಢ ಕೆಂಪು ಬಣ್ಣದ ಗುರುತುಗಳು ಇರುವುದು ಕಂಡು ಬಂದಿದೆ. ಇದು ಟ್ರಂಪ್ ಅವರ ಆರೋಗ್ಯದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಕಾರಣವಾಗಿದೆ. ಟ್ರಂಪ್ ಅವರ ಕೈನಲ್ಲಿ ಗುರುತು ಕಂಡು, ಅವರ ಆರೋಗ್ಯ ಕುಸಿಯುತ್ತಿರುವುದು ಕಂಡು ಬರುತ್ತಿದೆ ಎಂದು ವ್ಯಕ್ತಿಯೊಬ್ಬರು ಕಾಮೆಂಟ್ ಮಾಡಿದ್ದಾರೆ. ಟ್ರಂಪ್ ಗಾಲ್ಫ್ ಕಾರ್ಟ್‌ನಿಂದ ಕೆಳಗಿಳಿಯಲು ಕಷ್ಟಪಡುತ್ತಿರುವ ಮತ್ತೊಂದು ವಿಡಿಯೋ ಸಹ ವೈರಲ್ ಆಗಿದೆ.

Leave a Comment