ಏರ್‌ಪೋರ್ಟ್‌ಗೆ ಅವಕಾಶ ನೀಡಲ್ಲ

Written by karnatakanandi.com

Published on:

ಏರ್‌ಪೋರ್ಟ್‌ಗೆ ಅವಕಾಶ ನೀಡಲ್ಲ ಕ್ಷೇತ್ರ ವ್ಯಾಪ್ತಿಯಲ್ಲಿ ಎರ್‌ಪೋರ್ಟ್ ನಿರ್ಮಾಣಕ್ಕೆ ಅವಕಾಶ ಕೊಡುವುದಿಲ್ಲ. ರೈತರು ಆತಂಕಕ್ಕೆ ಒಳಗಾಗುವುದು ಬೇಡ ಎಂದು ಶಾಸಕ ಎನ್.ಶ್ರೀನಿವಾಸ್ ಅಭಯ ನೀಡಿದರು.

ಸೋಲದೇವನಹಳ್ಳಿ ಸರ್ಕಾರಿ ಶಾಲೆ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ರೈತರ ಸಭೆಯಲ್ಲಿ  ಮಾತನಾಡಿದ ಅವರು, ದೇವನಹಳ್ಳಿಯಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪರ್ಯಾಯವಾಗಿ ಮತ್ತೊಂದು ಹೊಸ ಏರ್‌ಪೋರ್ಟ್ ನಿರ್ಮಾಣ ವಿಚಾರವಾಗಿ ಕ್ಷೇತ್ರದ ಸೋಲದೇವನಹಳ್ಳಿ ವ್ಯಾಪ್ತಿಯಲ್ಲಿ ಸರ್ವೇ ಕಾರ್ಯ, ಹೆಲಿಕ್ಯಾಪ್ಟರ್ ಸರ್ವೇ, ಇಂಜಿನಿಯರ್‌ಗಳನ್ನು ಒಳಗೊಂಡ ಅಧ್ಯಯನ ತಂಡ ಭೇಟಿ ಇನ್ನಿತರ ವಿಚಾರಗಳಿಂದ ರೈತರು ಆತಂಕಕ್ಕೆ ಒಳಗಾಗಿರುವುದು ಸತ್ಯ. ಆದರೆ ಈ ಬಗ್ಗೆ ಕಳೆದ ವರ್ಷವೇ ಡಿ.ಕೆ.ಶಿವಕುಮಾರ್, ಡಿ.ಕೆ.ಸುರೇಶ್ ಜತೆಗಿನ ಅನೌಪಚಾರಿಕ ಸಭೆಯಲ್ಲಿ ಈ ಭಾಗಕ್ಕೆ ಏರ್‌ಪೋರ್ಟ್ ಬೇಡ ಎಂದಿದ್ದೇನೆ. ಬದಲಾಗಿ ಬೆಂಗಳೂರು ದಕ್ಷಿಣ ಭಾಗದ ಹೊಸೂರು, ಆನೇಕಲ್ ಭಾಗದಲ್ಲಿ ಮಾಡಿದರೆ ತಮಿಳುನಾಡು ಸರ್ಕಾರಕ್ಕೆ ಸ್ಪರ್ಧೆ ನೀಡಬಹುದು ಎಂದೂ ಸಲಹೆ ನೀಡಿದ್ದೇನೆ. ಅದಾಗ್ಯೂ ಕ್ಷೇತ್ರದಲ್ಲಿ ಏರ್‌ಪೋರ್ಟ್ ನಿರ್ಮಾಣಕ್ಕೆ ಮುಂದಾದಲ್ಲಿ ನಿಲ್ಲುವ ವಾಗ್ದಾನ ಶಾಸಕ ಸ್ಥಾನ ಬದಿಗೊತ್ತಿ ರೈತರ ಜತೆ ನಿಲ್ಲುವುದಾಗಿ ಮಾತುಕೊಟ್ಟಿದ್ದೇನೆ, ಅದರಂತೆಯೇ ನಡೆದು ಕೊಳ್ಳುತ್ತೇನೆ ಎಂದರು.

ಇದನ್ನೂ ಓದಿ:- ಸಂವಾದದ ಗುಡಿಯಲ್ಲಿ ಮಾತೆಂಬುದು ಜ್ಯೋತಿರ್ಲಿಂಗ

ರಸ್ತೆ ಅಭಿವೃದ್ಧಿ ಭರವಸೆ: ತಾಲೂಕಿನ ಬಹುತೇತ ಮುಖ್ಯ ರಸ್ತೆಗಳನ್ನು ಚತುಷ್ಪಪಥವಾಗಿ ಅಭಿವೃದ್ಧಿ ಮಾಡಲಾಗುತ್ತಿದ್ದು ಸ್ಥಳಾವಕಾಶ ಇದಲ್ಲಿ ಸೋಲದೇವನಹಳ್ಳಿ ರಸ್ತೆಯನ್ನು ಜೋಡಿ ರಸ್ತೆಯಾಗಿ ಅಭಿವೃದ್ಧಿ ಮಾಡಿಕೊಡುವುದಾಗಿ ಶಾಸಕರು ಭರವಸೆ ನೀಡಿದರು.

Leave a Comment