ಏಷ್ಯಾ ಅಂತರರಾಷ್ಟ್ರೀಯ ಚಾಂಪಿಯನ್ ಷಿಪ್ ಪಂದ್ಯಾವಳಿಯಲ್ಲಿ ಎಂ.ಪುನೀತ್
ಏಷ್ಯಾ ಅಂತರರಾಷ್ಟ್ರೀಯ ಚಾಂಪಿಯನ್ ಷಿಪ್ ಪಂದ್ಯಾವಳಿಯಲ್ಲಿ ಭಾಗವಹಿಸುವ ಅವಕಾಶ ಶಿಡ್ಲಘಟ್ಟ ತಾಲ್ಲೂಕಿನ ಮೇಲೂರಿನ ಎಂ.ಪುನೀತ್ ಪಡೆದಿದ್ದಾನೆ. ನೇಪಾಳದ ಕಠ್ಮಂಡುವಿನ ಕ್ರೀಡಾಂಗಣದಲ್ಲಿ ನಡೆದ ದಕ್ಷಿಣ ಏಷ್ಯಾ ಮಟ್ಟದ ಅಂತರರಾಷ್ಟ್ರೀಯ ಲಾನ್ ಟೆನ್ನಿಸ್ ಪಂದ್ಯಾವಳಿಯಲ್ಲಿ (12 ವರ್ಷದೊಳಗಿನ) ತಾಲ್ಲೂಕಿನ ಮೇಲೂರು ಗ್ರಾಮದ ಟೆನ್ನಿಸ್ ಆಟಗಾರ ಎಂ.ಪುನೀತ್ ಮನೋಹರ್ ಗೆಲ್ಲುವ ಮೂಲಕ ಕಝಕಿಸ್ತಾನದಲ್ಲಿ ನಡೆಯುವ ಏಷ್ಯಾ ಅಂತರರಾಷ್ಟ್ರೀಯ ಚಾಂಪಿಯನ್ ಷಿಪ್ ಪಂದ್ಯಾವಳಿಯಲ್ಲಿ ಭಾಗವಹಿಸುವ ಅವಕಾಶ ಪಡೆದಿದ್ದಾನೆ.
ಏಷ್ಯಾ ಅಂತರರಾಷ್ಟ್ರೀಯ ಚಾಂಪಿಯನ್ ಷಿಪ್ ಪಂದ್ಯಾವಳಿಯಲ್ಲಿ ಅವಕಾಶ
ನೇಪಾಳ,ಭೂತಾನ್,ಮಾಲ್ಮೀಮ್ಸ್,ಪಾಕಿಸ್ತಾನ, ಬಾಂಗ್ಲಾದೇಶ,ಶ್ರೀಲಂಕಾ ದೇಶಗಳೊಂದಿಗೆ ಭಾಗವಹಿಸಿದ್ದ ಭಾರತದ ಮೂರು ಮಂದಿ ಬಾಲಕರು ಹಾಗು ಮೂರು ಮಂದಿ ಬಾಲಕಿಯರ ಟೆನ್ನಿಸ್ ಆಟಗಾರರ ತಂಡದಲ್ಲಿ ಮೇಲೂರು ನಿವಾಸಿ ವೈದ್ಯ ಡಾ.ಮನೋಹರ್, ನಮ್ರತಾ ದಂಪತಿ ಪುತ್ರ ಎಂ.ಪುನೀತ್ ಮನೋಹರ್ ಭಾಗವಹಿಸಿ ಭಾರತದ ತಂಡವನ್ನು ಪ್ರತಿನಿಧಿಸಿದ್ದನು ಪಂದ್ಯಾವಳಿಯಲ್ಲಿ ಎಲ್ಲಾ ನಾಲ್ಕೂ ಸುತ್ತುಗಳಲ್ಲೂ 6-0, 6-0 ಅಂಕಗಳೊಂದಿಗೆ ಗೆದ್ದು ಎಂ.ಪುನೀತ್ ಮನೋಹರ್ ಹೊಸ ದಾಖಲೆ ಸೃಷ್ಟಿಸಿದ್ದಾನೆ.
ಇದನ್ನೂ ಓದಿ:- ಗಂಗಾಕಲ್ಯಾಣ ಯೋಜನೆಯ ಕೊಳವೆಬಾವಿ ಕೊರೆಸಲಾಗಿದೆ
ಕಠ್ಮಂಡುವಿನಲ್ಲಿ ನಡೆದ ಈ ಪಂದ್ಯಾವಳಿಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಬಾಲಕರ ತಂಡದಲ್ಲಿ ಎಂ.ಪುನೀತ್ ಮನೋಹರ್, ಆರವ್ ಚಲ್ಲಾನಿ,ಯುವನ್ ಗರ್ಗ್ ಭಾಗವಹಿಸಿದ್ದು ಇಂದ್ರಕುಮಾರ್ ಮಹಾಜನ್ ಕೋಚ್ ಆಗಿದ್ದಾರೆ.
ಬಾಲಕಿಯರ ತಂಡದಲ್ಲಿ ಖುಷಿ ಕದಿಯಾನ್, ಸರನಾ ಗೆಹೋಟ್, ಶ್ರಿಷ್ಟಿಕಿರಣ್ ಭಾಗವಹಿಸಿದ್ದು, ಆಶಾಶರ್ಮ ಕೋಚ್ ಆಗಿ ಮಾರ್ಗದರ್ಶನ ನೀಡಿದ್ದಾರೆ.
ಏಷ್ಯಾ ಅಂತರರಾಷ್ಟ್ರೀಯ ಚಾಂಪಿಯನ್ ಷಿಪ್ ಪಂದ್ಯಾವಳಿಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಕೀರ್ತಿ
ಎಂ.ಪುನೀತ್ ತಂದೆ ಡಾ.ಮನೋಹರ್ ಮಾತನಾಡಿ, ನೇಪಾಳದ ಕಂಡುವಿನಲ್ಲಿ ನಡೆದ ದಕ್ಷಿಣ ಏಷ್ಯಾದ ಟೆನ್ನಿಸ್ ಪಂದ್ಯಾವಳಿಯಲ್ಲಿ ನನ್ನ ಮಗ ಎಂ.ಪುನೀತ್ ಭಾರತ ತಂಡವನ್ನು ಪ್ರತಿನಿಧಿಸಿ ಎಲ್ಲಾ ನಾಲ್ಕು ಸುತ್ತಿನಲ್ಲೂ ಗೆದ್ದು ಕಝಕಿಸ್ತಾನದಲ್ಲಿ ನಡೆಯುವ ಏಷ್ಯಾ ಅಂತಾರಾಷ್ಟ್ರೀಯ ಚಾಂಪಿಯನ್ಷಿಪ್ ಪಂದ್ಯಾವಳಿಯಲ್ಲಿ ಭಾಗವಹಿಸುವ ಅವಕಾಶ ಪಡೆದಿದ್ದಾನೆ, ಅದಕ್ಕೂ ಮೀರಿ ಎಲ್ಲಾ ನಾಲ್ಕು ಸುತ್ತಿನಲ್ಲೂ 6-0 ಅಂತರದಿಂದ ಗೆದ್ದು ಈ ಪಂದ್ಯಾವಳಿಯಲ್ಲಿ ಹೊಸ ದಾಖಲೆ ಸೃಷ್ಟಿಸಿದ್ದು ದೇಶಕ್ಕೆ
ಕೀರ್ತಿ ತಂದಿದ್ದಾನೆ ಇನ್ನಷ್ಟು ಪ್ರೋತ್ಸಾಹ ನೀಡಿ ಇನ್ನೂ ಹೆಚ್ಚಿನ ಸಾಧನೆ ಮಾಡಲು ಎಲ್ಲಾರ ಸಹಕಾರ,ನೆರವು ಆಶೀರ್ವಾದ ಬೇಕಿದೆ ಎಂದು ಹೇಳಿದರು.