ಒಬೆಲಿಸ್ಕ್: ಮಾನವನ ಭವಿಷ್ಯಕ್ಕೆ ಹೊಸ ಕುತ್ತು?

ಒಬೆಲಿಸ್ಕ್: ಮಾನವನ ಭವಿಷ್ಯಕ್ಕೆ ಹೊಸ ಕುತ್ತು?

ಇತ್ತೀಚೆಗೆ ವಿಜ್ಞಾನಿಗಳ ನಿದ್ದೆಗೆಡಿಸುವಂಥ ಜೀವಾಣುವೊಂದರ ಆವಿಷ್ಕಾರವಾಗಿದೆ ಇದೇ ಒಬೆಲಿಸ್ಕ್’ ಎಂಬ ಸೂಕ್ಷ್ಮಾತಿ ಸೂಕ್ಷ್ಮ ಜೀವಕಣ. ಮಲೇರಿಯಾ, ಬೇಧಿ, ಅತಿಸಾರದಂತಹ ರೋಗಗಳಿಗೆ ಕಾರಣ ಏಕಕೋಶಜೀವಿಗಳು ಕಾಲರಾ, ಕ್ಷಯ, ಗೊನೊರಿಯ ಮುಂತಾದ ರೋಗಳಿಗೆ ಕಾರಣ ವಿವಿಧ ಬಗೆಯ ಬ್ಯಾಕ್ಟಿರಿಯಾಗಳು. ಇವು ಆರೆ ಜೀವಕೋಶಗಳು, ವೈರಸ್ಸುಗಳು ಬ್ಯಾಕ್ಟಿರಿಯಾಗಳಿಗಿಂತಲೂ ಚಿಕ್ಕವು ಅವುಗಳ ಗಾತ್ರ 20ರಿಂದ 300 ನ್ಯಾನೊಮೀಟರ್‌ಗಳು (ಒಂದು ನ್ಯಾ.ಮೀ. ಅಂದರೆ ಒಂದು ಸಾವಿರ ಮೈ.ಮೀ.ನ ಒಂದು ಭಾಗ). ವೈರಸ್ಸುಗಳು ಸ್ವತಂತ್ರವಾಗಿ ಜೀವಿಸಲಾರವು. ಬೇರೆ ಜೀವಿಗಳ ಕೋಶಗಳನ್ನು ಆಕ್ರಮಿಸಿ, ಆ ಜೀವಕೋಶಗಳಲ್ಲಿ ವೃದ್ಧಿಸಿ ಆರೋಗ್ಯವಂತ ಜೀವಿಗಳ ಜೀವಕೋಶಗಳನ್ನು ಸೇರಿ ಸೋಂಕನ್ನು ಉಂಟುಮಾಡುತ್ತವೆ. ಮನುಷ್ಯನಲ್ಲಿ ಏಡ್ಸ್, ಕೊರೊನಾ, ಇನ್‌ಪ್ಲುಯೆಂಜಾ, ಮಿದುಳುಜ್ವರ ಮುಂತಾದ ಮಾರಕ ರೋಗಗಳು ವೈರಸ್ಸುಗಳಿಂದಉಂಟಾಗುತ್ತವೆ.ವೈರಸ್ಸುಗಳಿಗಿಂತ ಸಾವಿರ ಪಟ್ಟು ಚಿಕ್ಕವು ವೈರಾಯಿಡ್: ಅವು ಪರಾವಲಂಬಿ ಅನುವಂಶೀಯ ಅಣುಗಳು, ಈ ಸೋಂಕುಜೀವಾಣುಗಳು ಸಸ್ಯಗಳಲ್ಲಿ ಹಲವು ರೋಗಗಳನ್ನು ಉಂಟುಮಾಡುತ್ತವೆ. ‘ಹಸುಗಳಲ್ಲಿ ಹುಚ್ಚು’ (ಮ್ಯಾಡ್ ಕೌರೋಗ), ಮಾನವನ ‘ಸರ್ಪಸುತ್ತು ಡಿ’ (ಹರ್ಪಿಸ್ ಡಿ) ವೈರಾಯಿಡ್ ಸೋಂಕಿನಿಂದ ಉಂಟಾಗುವ ರೋಗಗಳು, ಈಗ ಕಂಡುಹಿಡಿಯಲಾದ ಒಬೆಲಿಸ್ಟ್‌ಗಳು ವೈರಾಯಿಡ್‌ಗಳಿಗಿಂತ ಚಿಕ್ಕವು, ಅವು ಚಿಕ್ಕ ಆರ್‌ಎನ್ಎಎ ತುಣುಕುಗಳು, ಕೇವಲರೈಬೊನ್ಯೂಕ್ಲಿಯೊಟೈಡುಗಳ ಸರಣಿಯನ್ನು ಮಾತ್ರ ಹೊಂದಿರುವಒಬೆಲಿಸ್ಕ್‌ಗಳಲ್ಲಿ, 2000ದಿಂದ 3000 ನ್ಯೂಕ್ಲಿಯೊಟೈಡುಗಳನ್ನು ಒಳಗೊಂಡ ಒಂದು ಎಳೆ ಮಾತ್ರ ಇದ್ದು ಅದು ವಿವಿಧ ಆಕಾರಗಳಲ್ಲಿ ಸುರುಳಿಯಾಗಿರುತ್ತದೆ (ಚಿತ್ರ ನೋಡಿ).

ಇದನ್ನೂ ಓದಿ:ರೈಲು ನಿಲ್ದಾಣದಲ್ಲಿ ಕಾಲ್ತುಳಿತ ವ್ಯವಸ್ಥೆಯ ಲೋಪಕ್ಕೆ ಕೈಗನ್ನಡಿ

ಇವುನ್ಯಾನೊಕಣಗಳು. ಇವುಗಳನ್ನು ಪತ್ತೆ ಹಚ್ಚಿದವರು 2006ರಲ್ಲಿ ಶರೀರಕ್ರಿಯಾವಿಜ್ಞಾನ ಹಾಗೂ ವೈದ್ಯಕೀಯ ಕ್ಷೇತ್ರದ ನೊಬೆಲ್ ಪ್ರಶಸ್ತಿ ಪಡೆದಸ್ಕ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದ ಅಂದ್ರೂ ಜಕಾರಿ ಫೈರ್.ಅಣುಜೀವವಿಜ್ಞಾನಿಗಳು ಮಾನವಶರೀರದ ಪ್ರತಿಯೊಂದು ಜೀವಕೋಶಗಳಲ್ಲಿ ಇರುವ ಮಾನವನ ಅನುವಂಶೀಯತೆಯನ್ನು ನಿರ್ಧರಿಸುವ ಡಿಎನ್‌ಎಯ ರಾಸಾಯನಿಕ ರಚನೆಯನ್ನು ವಿಶ್ಲೇಷಿಸಿ ಅದರಲ್ಲಿರುವ ನ್ಯೂಕ್ಲಿಯೊಟೈಡುಗಳ ಸರಣಿಯನ್ನುಕಂಡುಹಿಡಿಯುವ ಯೋಜನೆಯನ್ನು ಹಮ್ಮಿಕೊಂಡರು. ಈ ಯೋಜನೆಯ ಉದ್ದೇಶ ಮಾನವಅನುವಂಶೀಯತೆಯ ಸಂಪೂರ್ಣ ಲಕ್ಷಣಗಳನ್ನು ಅರಿತು,ಅದರನೀಲನಕ್ಷೆಯನ್ನು ತಯಾರಿಸುವುದು. ಮಾನವಡಿಎನ್‌ಎಯಲ್ಲಿರುವ ಬಿಲಿಯಗಟ್ಟಲೆ ಸಾರಜನಕ ಕ್ಷಾರಗಳ ಸರಣಿಯನ್ನು 2003ರಲ್ಲಿ ಬೇಧಿಸಿ, ಮಾನವ ಅನುವಂಶೀಯ ನಕ್ಷೆಯನ್ನು ತಯಾರಿಸಲಾಯಿತು. ಹೀಗೆ ಕಂಡುಹಿಡಿದ ಸಾರಜನಕ ಕ್ಷಾರಗಳ (ನ್ಯೂಕ್ಲಿಯೊಟೈಡ್) ಸರಣಿಯನ್ನು 2004ರಲ್ಲಿ ಕಂಪ್ಯೂಟರ್ ದತ್ತಾಂಶ ಮೂಲಕ್ಕೆ ಸೇರಿಸಲಾಯಿತು. ಇತ್ತೀಚೆಗೆ, ಅಂದರೆ 2024ರ ಅಂತ್ಯದಲ್ಲಿ ಅಂದ್ರೂ ಜಕಾರಿ ಫೈರ್ ಮತ್ತು ಸಂಗಡಿಗರು ಅಂತರ್ಜಾಲದ ದತ್ತಾಂಶದಲ್ಲಿ ಸೇರಿಸಲಾದ ಮಾನವ ಡಿಎನ್‌ಎಯ ಸರಣಿಯನ್ನು ಒಂದು ತುದಿಯಿಂದ ಇನ್ನೊಂದು ಕಡೆಗೆ ವಿಶ್ಲೇಷಿಸುತ್ತಿದ್ದಾಗ ಅದರಲ್ಲಿ ಪ್ರತಿಲೇಖನಗೊಳ್ಳಬಹುದಾದ ಭಾಗವನ್ನು ಗುರುತಿಸಿದರು. ಅವುಆರ್‌ಎನ್ಎತುಣುಕುಗಳನ್ನುತಯಾರಿಸಬಲ್ಲುವಾದರೂ, ಅನುವಂಶೀಯತೆ ನಿರ್ಧರಿಸುವಲ್ಲಿ ಅವುಗಳ ಪಾತ್ರವಿರುವುದಿಲ್ಲ. ಈ ಆರ್‌ಎನ್ಎ ಸಂಕೇತಗಳು ಆಕಾರದಲ್ಲಿ ಈಜಿಪ್ಟ್ ಮತ್ತು ಗ್ರೀಸ್‌ನ ಕೆಲವು ಸ್ಮಾರಕಗಳನ್ನು ಹೋಲುತ್ತವೆ. ಈ ಸ್ಮಾರಕಗಳಿಗೆ ‘ಒಬೆಲಿಸ್ಕ’ ಎಂಬ ಹೆಸರಿದೆ. ಅದರಿಂದ ಈ ಆರ್‌ಎನ್‌ಎಗಳಿಗೂ’ಒಬೆಲಿಸ್’ ಎಂದುಹೆಸರಿಸಲಾಯಿತು.


ಜಕಾರಿ ಫೈರ್ ಅವರೇ ಒಬೆಲಿಸ್ಟ್‌ಗಳ ಸಂಶೋಧನಾ ತಂಡ ಮುನ್ನಡೆಸುತ್ತಿದ್ದಾರೆ. 2024ರ ನವೆಂಬರ್ ಡಿಸೆಂಬರ್ ತಿಂಗಳಿನಲ್ಲಿ ಒಬೆಲಿಸ್ಟ್‌ಗಳ ಅವಿಷ್ಕಾರವಾಗಿದ್ದರೂ, ಅವುಗಳ ಕುರಿತ ಅಧಿಕೃತ ವರದಿ ಇನ್ನೂ ಪ್ರಕಟವಾಗಿಲ್ಲ. ಕೊಲ್ಡ್ ಸ್ಟಿಂಗ್ ಹಾರ್ಬರ್ ಪ್ರಯೋಗಾಲಯದ ನಿಯತಕಾಲಿಕೆ ‘ಬಯೋಆರ್’ನಲ್ಲಿ ಹಾಗೂ ‘ನೇಚರ್ ಲೈಫ್ ಸೈನ್’ ಪತ್ರಿಕೆಯಲ್ಲಿ ಪುಟ್ಟ ಟಿಪ್ಪಣಿಗಳು ಪ್ರಕಟವಾಗಿವೆ. ಈಶೋಧವುಈಗಸೂಕ್ಷ್ಮಜೀವಿಯ ಸಮುದಾಯಗಳನ್ನು ಅಧ್ಯಯನ ಮಾಡುವ ವಿಜ್ಞಾನಿಗಳ ಆಸಕ್ತಿಯನ್ನು ಕೆದರಿದೆ.ಜಕಾರಿ ಫೈರ್ ಅವರ ಅವಿಷ್ಕಾರವು ಈ ಆಶ್ಚರ್ಯಕರ ವಸ್ತುಗಳ ಕುರಿತು ಹಲವು ಊಹೆಗಳಿಗೆ ಎಡೆಮಾಡಿಕೊಟ್ಟಿದೆ. ಈ ವಸ್ತುಗಳು ನಿಜವಾಗಿಯೂ ಮಾನವ ಜೀವಕೋಶಗಳಲ್ಲಿ ಇವೆಯೇ? ಅಥವಾ ಅವು ಅಂತರ್ಜಾಲದ ಸರಣಿಗೆ ಮಾತ್ರ ಸೀಮಿತವಾಗಿರುವ ಕಣಗಳೇ? ಸದ್ಯಕ್ಕೆ ಮಾನವನ ಜೀವಕೋಶಗಳಿಂದ ಇಂಥ ಆರ್‌ಎನ್‌ಎ ತುಣುಕುಗಳನ್ನು ಪ್ರತ್ಯೇಕಿಸಲಾಗಿದ್ದು, ಅವುಗಳ ಅಸ್ತಿತ್ವವನ್ನು ದೃಢೀಕರಿಸಿವೆ. ಮಾನವ ತಳಿನಕ್ಷೆ ಮತ್ತು ಜೀನ್‌ಗಳ ಸಂಗ್ರಹವನ್ನು ಪರಿಶೀಲಿಸಿದಾಗ ಅವು ಈವರೆಗೆ ಕಂಡುಹಿಡಿಯಲಾದ ಯಾವುದೇ ಸೋಂಕುಜೀವಿಗಳೊಂದಿಗೆ ಹೊಂದಿಕೆಯಾಗುತ್ತಿಲ್ಲ.


ಒಬೆಲಿಸ್ಟ್‌ಗಳು ಸಸ್ಯಗಳಲ್ಲಿ ಕೆಲವುವಿಶಿಷ್ಟವಾದಕಾಯಿಲೆಗಳನ್ನು ಉಂಟುಮಾಡುವ ವೈರಾಯಿಡ್‌ಗಳನ್ನು ಹೋಲುತ್ತವೆಯಾದರೂ ಅವುಗಳಿಗಿಂತ ಇವು ಚಿಕ್ಕವು. ಆದರೆ ಇದುವರೆಗೆ ಒಬೆಲಿಸ್ಟ್‌ಗಳಿಂದ ಉಂಟಾಗುವ ಯಾವುದೇ ಕಾಯಿಲೆ ಕಂಡುಬಂದಿಲ್ಲ. ವೈರಸ್ಮತ್ತುವೈರಾಯಿಡ್‌ಗಳ ಅನುವಂಶೀಯ ವಸ್ತುವಿನ ಸರಣಿಯಲ್ಲಿ ಒಂದು ಅಣು ಬದಲಾದರೂ ಅದು ಮಾರಕ ಸೋಂಕುಜೀವಿಯಾಗಿ ಬದಲಾಗಬಹುದು. ಒಬೆಲಿಸ್ಕ್‌ಗಳು ಕೂಡ ಹಾಗೆಯೇ ಮುಂದೊಂದು ದಿನ ಸಾಂಕ್ರಾಮಿಕವಾಗಿ ಪರಿಣಮಿಸಬಹುದೆ?

Leave a Comment