ಕಟ್ಟಡ ಕಾರ್ಮಿಕರ ಮಕ್ಕಳು ಯಾರೂ ಸಹ ಶಾಲೆಯಿಂದ ದೂರವಿರಬಾರದು

ಕಟ್ಟಡ ಕಾರ್ಮಿಕರ ಮಕ್ಕಳು ಯಾರೂ ಸಹ ಶಾಲೆಯಿಂದ ದೂರವಿರಬಾರದು
ಕಟ್ಟಡ ಕಾರ್ಮಿಕರ ಮಕ್ಕಳು ಯಾರೂ ಸಹ ಶಾಲೆಯಿಂದ ದೂರವಿರಬಾರದು ಶಾಲೆಯಿಂದ ಹೊರಗೆ ಉಳಿದ ಮಕ್ಕಳಿದ್ದಲ್ಲಿ ಮಾಹಿತಿ ಕೊಟ್ಟರೆ ಅಂತಹ ಮಕ್ಕಳಿಗೆ ಉನ್ನತ ಶಿಕ್ಷಣದವರೆಗೂ ಸರ್ಕಾರವೇ ಉಚಿತ ಶಿಕ್ಷಣ ಕೊಡಲಿದೆ ಎಂದು ಕಾರ್ಮಿಕ ನಿರೀಕ್ಷಕಿ ವಿಜಯಲಕ್ಷ್ಮಿ ತಿಳಿಸಿದರು.

ನಗರದ ಶಾರದಾ ಶಾಲೆ ಬಳಿ ಇರುವ ಸಂಘದ ಕಚೇರಿಯಲ್ಲಿ ತಾಲೂಕು ಬಣ್ಣ (ಪೈಂಟ್) ಕಾರ್ಮಿಕರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಮಿಕ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಅನರ್ಹರು ಕಾರ್ಮಿಕ ಇಲಾಖೆ ನೀಡುವ ಕಾರ್ಡ್ ಪಡೆದಿದ್ದರೆ ಕೂಡಲೇ ಇಲಾಖೆಗೆ ವಾಪಸ್‌ ಮಾಡಬೇಕು ಇಲ್ಲದಿದ್ದರೆ ಅಂತಹವರ ವಿರುದ್ಧ ಹಾಗೂ ಕಾರ್ಡ್ ಮಾಡಿಸಿಕೊಟ್ಟ ಸಂಘದ ವಿರುದ್ಧವೂ ಕ್ರಮ ಜರುಗಿಸಲು ಕಾನೂನಿನಲ್ಲಿ ಅವಕಾಶವಿದೆ ಎಂದು ಹೇಳಿದರು.

ಕಟ್ಟಡ ಕಾರ್ಮಿಕರ ಮಕ್ಕಳು ಶಾಲೆಗೆ ಕಳುಹಿಸಿ

ಕಟ್ಟಡ ನಿರ್ಮಾಣದಲ್ಲಿ ತೊಡಗಿದ ಕೂಲಿ ಕಾರ್ಮಿಕರನ್ನು ಹೊರತುಪಡಿಸಿ ಇತರ ಕೆಲಸ ಮಾಡುವವರು ಕಾರ್ಮಿಕರ ಕಾರ್ಡ್ ಪಡೆದಿದ್ದರೆ ಇಲಾಖೆಗೆ ವಾಪಸ್ ಮಾಡಬೇಕು ಎಂದರು. ಈಗಾಗಲೇ ಟೇಲರಿಂಗ್, ರೇಷ್ಮೆ ಕೆಲಸ, ಹೊಲ ಗದ್ದೆಗಳಲ್ಲಿ ಕೂಲಿ ಕೆಲಸ ಮಾಡುವವರಿಗೂ ಕಟ್ಟಡ ಕಾರ್ಮಿಕರಿಗೆ ನೀಡುವ ಕಾರ್ಡ್‌ಗಳನ್ನು ಮಾಡಿಕೊಡಲಾಗಿದೆ  ಅಂತಹವರಿಗೆ ಸಂಘದ ಪ್ರಮುಖರು ತಿಳಿವಳಿಕೆ ನೀಡಿ ಕಾರ್ಡನ್ನು ವಾಪಸ್ ಮಾಡಿಸಬೇಕು ಎಂದು ಮನವಿ ಮಾಡಿದರು.

ಈ ವೇಳೆ ಬಣ್ಣ ಅಂಗಡಿ ಮಾಲೀಕರ ಸಂಘದಿಂದ ಕಾರ್ಮಿಕ ಇಲಾಖೆಯ ವಿಜಯಲಕ್ಷ್ಮಿ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಬಣ್ಣ ಕಾರ್ಮಿಕರ ಸಂಘದ ಅಧ್ಯಕ್ಷ ವೆಂಕಟರಮಣಪ್ಪ,ಗೌರವಾಧ್ಯಕ್ಷ ಮುನಿರಾಜು, ಉಪಾಧ್ಯಕ್ಷ ನಟರಾಜ್,ಪ್ರಧಾನ ಕಾರ್ಯದರ್ಶಿ ಬಾಬು, ಸಹ ಕಾರ್ಯದರ್ಶಿ ನಾರಾಯಣಸ್ವಾಮಿ, ಸಂಚಾಲಕ ನಾರಾಯಣಸ್ವಾಮಿ,ಸಹ ಸಂಚಾಲಕ ಬಾಬು,ಖಜಾಂಚಿ ಸುಬ್ರಮಣಿ, ಸದಸ್ಯರಾದ ನಾರಾಯಣಸ್ವಾಮಿ, ಮಂಜುನಾಥ್,ಶಿವಣ್ಣ,ಮುಕೇಶ್,ತಿರುಮಲೇಶ್, ಶ್ರೀನಿವಾಸ್ ಮುಂತಾದವರು ಹಾಜರಿದ್ದರು.

 

Leave a Comment