ಕತ್ತಲೆಯಲ್ಲಿ ತೋಟದ ಮನೆಗಳು
ತುಮಕೂರು:ಗ್ರಾಮೀಣ ಭಾಗದ ತೋಟದ ಮನೆಗಳು, ಕೃಷಿ ಜಮೀನು-ಗಳಲ್ಲಿರುವ ಮನೆಗಳಿಗೆ ರಾತ್ರಿ ವೇಳೆ ವಿದ್ಯುತ್ ಸರಬರಾಜು ಸ್ಥಗಿತಗೊಂಡಿದ್ದು, ರೈತರನ್ನು ಕತ್ತಲೆ ಕೂಪಕ್ಕೆ ತಳ್ಳಿದೆ.
ಇತ್ತೀಚಿನ ದಿನಗಳಲ್ಲಿ ಹಳ್ಳಿಗಳ ಜನರು ತಮ್ಮ ತೋಟ, ಜಮೀನುಗಳಲ್ಲೂ ಮನೆಗಳನ್ನು ನಿರ್ಮಿಸಿಕೊಂಡು ವಾಸಿಸುತ್ತಿದ್ದಾರೆ. ವಿದ್ಯುತ್ ಸಂಪರ್ಕವನ್ನೂ ಪಡೆದುಕೊಂ ಡಿದ್ದಾರೆ. ಆದರೆ ವಿದ್ಯುತ್ ಸರಬರಾಜು ಇಲ್ಲದೆ ಸಂಕಷ್ಟ ತಂದೊಡ್ಡಿದೆ.
ಈವರೆಗೆ ಸಂಜೆ 6ರಿಂದ ಬೆಳಿಗ್ಗೆ 6 ಗಂಟೆ ವರೆಗೆ ಸಿಂಗಲ್ ಪೇಸ್ ವಿದ್ಯುತ್ ಸರಬರಾಜು ಮಾಡಲಾಗುತ್ತಿತ್ತು. ಇದ ರಿಂದ ಮನೆಗಳಿಗೆ ಬೆಳಕಿನಸೌಲಭ್ಯಸಿಕ್ಕಿತ್ತು. ಶ್ರೀಪೇಸ್ ಸರಬರಾಜಿನ ಸಮಯದಲ್ಲಿ ಕೊಳವೆ ಬಾವಿಗಳ ಮೋಟಾರ್ ಚಾಲನೆ ಮಾಡಿ ನೀರು ಹಾಯಿಸಿ ಕೃಷಿ ಚಟು-ವಟಿಕೆಗಳಿಗೆ ಬಳಸಿಕೊಳ್ಳುತ್ತಿದ್ದರು. ಆದರೆ ಸಿಂಗಲ್ ಪೇಸ್ ಸರಬರಾಜು ಇದ್ದ ಸಮಯದಲ್ಲಿ ಕೊಳವೆ ಬಾವಿಗಳ ಮೋಟಾರ್ ಚಾಲನೆ ಮಾಡುವುದರಿಂದ ವಿದ್ಯುತ್ ಸರಬರಾಜು ಕಡಿತಗೊಳ್ಳುತ್ತಿದೆ.
ಸಿಂಗಲ್ ಪೇಸ್ ವಿದ್ಯುತ್ ಸರಬರಾಜಿನ ವೇಳೆ ‘ಕಂಡೆನ್ಸರ್’ ಅಳವಡಿಸಿ ಕೊಳವೆ ಬಾವಿ ಮೋಟಾರ್ ಚಾಲನೆ ಮಾಡಲಾಗುತ್ತದೆ. ಆಗ ಸಾಮರ್ಥ್ಯ ತಾಳಲಾರದೆ ಸಂಪರ್ಕ ಕಡಿ-ತಗೊಳ್ಳುತ್ತದೆ. ತಕ್ಷಣ ಸರಿಪಡಿಸಿದರೂ ಮತ್ತೊಬ್ಬರು ಮೋಟಾರ್ ಚಾಲನೆ ಮಾಡಿದರೆ ಮತ್ತೆ ಸಂಪರ್ಕ ನಿಲ್ಲುತ್ತದೆ. ಇದೇ ರೀತಿ ಇಡೀ ರಾತ್ರಿ ನಿರಂತರವಾಗಿ ನಡೆಯುವುದರಿಂದ ಸಿಂಗಲ್ ಪೇಸ್‌ನಲ್ಲಿ ಸರಬರಾಜು ಮಾಡುವುದೂ ಕಷ್ಟ. ಕರವಾಗಿದೆ. ಹಾಗಾಗಿ ರಾತ್ರಿ ಹೊತ್ತು ಸಿಂಗಲ್ ಪೇಸ್ ವಿದ್ಯುತ್ ಸರಬರಾಜನ್ನು ಬೆಸ್ಕಾಂ ಅಧಿಕಾರಿಗಳು ನಿಲ್ಲಿಸಿದ್ದಾರೆ. ಇದರಿಂದಾಗಿ ತೋಟದ ಮನೆಗಳಿಗೆ ವಿದ್ಯುತ್ ಸರಬರಾಜು ಸ್ಥಗಿತಗೊಂಡಿದ್ದು, ರೈತರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಇದನ್ನೂ ಓದಿ: ದೊಡ್ಡ ಯಶಸ್ಸು ಬಹಳ ಅಪಾಯಕಾರಿ’
ತ್ರೀಪೇಸ್ ಇದ್ದಾಗ ಬಳಸಿ ಬೆಸ್ಕಾಂ ಕಡೆಯಿಂದ ಯಾವುದೇ ಸಮಸ್ಯೆಯಾಗಿಲ್ಲ. ಸಿಂಗಲ್ ಪೇಸ್ ವಿದ್ಯುತ್ ಸರಬರಾಜು ಇದ್ದ ಸಮಯದಲ್ಲಿ ಕೃಷಿ ಪಂಪ್‌ಸೆಟ್ ಚಾಲನೆ ಮಾಡುವುದರಿಂದ ವಿದ್ಯುತ್ ಸಂಪರ್ಕ ಕಡಿಗೊ-ಳ್ಳುತ್ತಿದೆ. ಶ್ರೀಪೇಸ್ ವಿದ್ಯುತ್ ಇದ್ದಾಗ ಪಂಪ್‌ಸೆಟ್ ಬಳಕೆ ಮಾಡುವಂತೆ ರೈತರಿಗೆ ಮನವಿ ಮಾಡಲಾಗಿದೆ ಎಂದು ಬೆಸ್ಕಾಂ ಸೂಪರಿಂಟೆಂಡಿಂಗ್ ಎಂಜಿನಿಯರ್ ಕೆ.ಎಲ್. ಲೋಕೇಶ್ ತಿಳಿಸಿದರು.
ಭಾಗದಲ್ಲಿ ಪ್ರತಿಭಟನೆಗೆ ಇಳಿದಿದ್ದಾರೆ. ಈಗ ಪರೀಕ್ಷೆಯ ಸಮಯವಾಗಿದ್ದು, ವಿದ್ಯಾರ್ಥಿಗಳ ಓದಿಗೆ ತೊಂದರೆಯಾ-ಗುತ್ತಿದೆ. ಕಳ್ಳರ ಕಾಟವೂ ಹೆಚ್ಚಾಗಿದ್ದು, ತೋಟದ ಮನೆಗಳಲ್ಲಿ ಇಡೀ ರಾತ್ರಿ ವಿದ್ಯುತ್ ಇಲ್ಲದೆ ಬದುಕುವುದು ಕಷ್ಟ-ಕರವಾಗಿದೆ. ಗ್ರಾಮೀಣ ಭಾಗದಲ್ಲಿ ಮನೆಗಳಿಗೆ ರಾತ್ರಿ ಸಮಯದಲ್ಲೇ ವಿದ್ಯುತ್ ಅತ್ಯಗತ್ಯ. ಇಂತಹ ಸಮಯದಲ್ಲೇ ನೀಡದಿದ್ದರೆ ಹಗಲು ಹೊತ್ತು ಕೊಟ್ಟು ಏನು ಪ್ರಯೋಜನ? ಯಾವುದೇ ಕಾರಣಕ್ಕೂ ತೋಟದ ಮನೆಗಳಿಗೆ ವಿದ್ಯುತ್ ಸರಬರಾಜು ನಿಲ್ಲಿಸಬಾರದು ಎಂಬುದು ರೈತರ ಒತ್ತಾಯವಾಗಿದೆ.
‘ಈ ಸಮಸ್ಯೆಯನ್ನು ನಾವು ಸೃಷ್ಟಿಸಿದ್ದಲ್ಲ. ರೈತರೇ ಸಮಸ್ಯೆ ತಂದುಕೊಂಡಿದ್ದಾರೆ.ಕೆಲವರು ಮಾಡುವ ತಪ್ಪಿಗೆ ವಿದ್ಯುತ್ ಸರಬರಾಜು ಸ್ಥಗಿತಗೊಳ್ಳುತ್ತದೆ. ಇದರಲ್ಲಿ ನಮ್ಮ ಪಾತ್ರವಿಲ್ಲ’ ಎಂದು ಬೆಸ್ಕಾಂ . ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ
ಈವರೆಗೆ ಸಮಸ್ಯೆ ಇಲ್ಲದ್ದು, ಈಗ ಏಕೆ ಸೃಷ್ಟಿಯಾಗಿದೆ. ಉಚಿತವಾಗಿ ವಿದ್ಯುತ್ ಕೊಟ್ಟು ರೈತರನ್ನು ಕತ್ತಲೆಗೆ ತಳ್ಳಿದೆ ಎಂಬುದು ರೈತರ ವಾದವಾಗಿದೆ.
ಈಚೆಗೆ ಶಿರಾ ಭಾಗದಲ್ಲಿ ರೈತರು ಪ್ರತಿಭಟನೆ ವ್ಯಕ್ತಪಡಿಸಿದ್ದು, ತಿಪಟೂರು ಬೆಸ್ಕಾಂವತಿಯಿಂದಸಾರ್ವಜನಿಕಪ್ರಕ ಟಣೆ ಹೊರಡಿಸಿದ್ದು, ‘ಸಿಂಗಲ್ ಪೇಸ್ ವಿದ್ಯುತ್ ಸರಬರಾಜು ಇದ್ದ ಸಮಯದಲ್ಲಿ ಪಂಪ್‌ಸೆಟ್ ಚಾಲನೆ ಮಾಡಬಾರದು.
ಚಾಲನೆ ಮಾಡಿದರೆ ವಿದ್ಯುತ್ ಸರಬ ರಾಜು ಸ್ಥಗಿತಗೊಳ್ಳಲಿದ್ದು, ಕೃಷಿ ಜಮೀನಿ ನಲ್ಲಿನ ರೈತರಿಗೆ ತೊಂದರೆಯಾಗಲಿದೆ’ ಎಂದು ಮನವಿ ಮಾಡಲಾಗಿದೆ.