ಕರಡಿಯ ಕೂದಲಿನ ನಕಲು ಈ ನೂಲು

ಕರಡಿಯ ಕೂದಲಿನ ನಕಲು ಈ ನೂಲು

ಧ್ರು ವಪ್ರದೇಶಗಳಲ್ಲಿ ಚಳಿಯ ತೀವ್ರತೆಯ ಬಗ್ಗೆ ಪ್ರತ್ಯೇಕವಾಗಿ ವಿವರಿಸುವ ಅಗತ್ಯವಿಲ್ಲ. ಅತೀವ ಶೀತ ಅಲ್ಲಿ ಜೀವಿಗಳಿಗೆ ವಾಸಯೋಗ್ಯವಲ್ಲದ ವಾತಾವರಣವನ್ನು ನಿರ್ಮಾಣ ಮಾಡಿರುತ್ತದೆ. ಆದರೆ, ಹಿಮಕರಡಿಗೆ ಈ ಶೀತ ದೊಡ್ಡ ವೈರಿಯೇನಲ್ಲ. ಅದರ ಒತ್ತಾದ ಕೂದಲುಗಳನ್ನು ಶೀತ ಸೀಳಿಕೊಂಡ ಒಳಹೋಗಲಾರದೇ ಇರುವ ಕಾರಣ, ಹಿಮಕರಡಿಯ ಮೈ ಬೆಚ್ಚಗೇ ಇರುತ್ತದೆ! ಇದನ್ನು ಗಮನಿಸಿರುವ ವಿಜ್ಞಾನಿಗಳು ಬೆಚ್ಚನೆಯ ಉಡುಪಿಗೆ ಸ್ಫೂರ್ತಿ ಪಡೆದು ಹೊಸ ಬಗೆಯ ನೂಲನ್ನು ತಯಾರಿಸಿದ್ದಾರೆ. ಈ ನೂಲಿನಿಂದ ಬಟ್ಟೆ ತಯಾರಿಸಿದರೆ ಮೈಗೆ ಚಳಿಯೇ ತಾಗದಂತೆ!

ಚೀನಾದ ಹ್ಯಾಂಗೋದ ಜೆಯಿಯಾಂಗ್ ವಿಶ್ವವಿದ್ಯಾಲಯದ ಹೌ ಬಾಯ್ ಹಾಗೂ ಅವರ ವಿಜ್ಞಾನಿಗಳ ತಂಡದ ಆಶ್ರಯದಲ್ಲಿ ಈ ಸಂಶೋಧನೆ ನಡೆದಿದೆ. ಹಿಮಕರಡಿಯ ಕೂದಲಿನ ಮಾದರಿಯನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡಿ, ಅದೇ ಮಾದರಿಯಲ್ಲಿ ಕೃತಕವಾದ ನೂಲನ್ನು ತಯಾರಿಸಿ ಅದರಿಂದ ಬಟ್ಟೆಯನ್ನೂ ತಯಾರಿಸಿದ್ದಾರೆ. ಅದರ ಬಗ್ಗೆ ಇಲ್ಲೊಂದು ಸರಳ ವಿಶ್ಲೇಷಣೆಯಿದೆ.

ಪ್ರಾಣಿಮೂಲದ ಕೂದಲಿನಿಂದ ಬಟ್ಟೆ ತಯಾರಿಸುವುದುಮನುಷ್ಯನಿಗೆ ಹೊಸತೇನಲ್ಲ. ಕುರಿಯ ಉಣ್ಣೆಯಿಂದ ನೂಲು, ದಾರ, ಬಟ್ಟೆಯನ್ನು ಮಾಡುವುದು ನಮಗೆ ತಿಳಿದೇ ಇದೆ. ಕುರಿಯ ಉಣ್ಣೆಯಿಂದ ಮಾಡಿದ ಸೈಟರನ್ನು ಚಳಿಯಲ್ಲಿ ಧರಿಸುವುದು ಅದೆಷ್ಟು ಹಿತಕರ ಅಲ್ಲವೇ? ಅಂತೆಯೇ, ಕೂದಲು ಅಲ್ಲದೇ ಇದ್ದರೂ, ರೇಷ್ಮೆಹುಳುವಿನ ದೇಹಜನ್ಯವಾದ ಜೊಲ್ಲಿನಿಂದ ತಯಾರಾಗುವ ನೂಲಿನಿಂದ ಸಿದ್ಧಪಡಿಸಿದ ಬಟ್ಟೆಗಳು ಸಹ ಬೆಚ್ಚನೆಯ ಆಹ್ಲಾದಕರ ಅನುಭವವನ್ನು ನೀಡುತ್ತದೆ. ಬೆಚ್ಚನೆಯ ವಾತಾವರಣದಲ್ಲಿ ತಣ್ಣನೆಯ ಅನುಭವವನ್ನೂ ರೇಷ್ಮೆಯ ನೂಲುಗಳು ನೀಡುವುದು ಮತ್ತೊಂದು ವಿಶೇಷ.

ಇದನ್ನೂ ಓದಿ: ಖಾಲಿ ಇವೆ ‘ಕಾಯಂ’ ಹುದ್ದೆಗಳು!

ನೇರವಾಗಿ ಪ್ರಾಣಿಗಳ ಚರ್ಮವನ್ನೇ ಬಳಸಿ ಬಟ್ಟೆ ಮಾಡುವುದೂ ಇದೆ. ಇವಿಷ್ಟೇ ಅಲ್ಲದೇ, ಸಾಕಷ್ಟು ಬೇರೆಯದೇ ರೀತಿಯ ಉದಾಹರಣೆಗಳನ್ನೂ ನೀಡಬಹುದು. ಆದರೂ, ಪ್ರಾಣಿಜನ್ಯವಸ್ತುಗಳನ್ನು ಮನುಷ್ಯನು ಬಳಸುವುದು ಈಗ ಚರ್ಚಾಸ್ಪದ ವಿಷಯವಾಗಿದೆ. ಪ್ರಾಣಿಜನ್ಯವಸ್ತುಗಳನ್ನು ಬಳಸುವುದು ಅಮಾನವೀಯವೆಂದೂ, ಅದು ಕೆಲವು ಜಾತಿಯ ಪ್ರಾಣಿಗಳ ನಾಮಾವೇಷಕ್ಕೂಕಾರಣವಾಗುವುದೆಂದೂ ವಿಶ್ಲೇಷಿಸಲಾಗುತ್ತಿದೆ. ಹೀಗೆ ಪ್ರಾಣಿಗಳ ಸಂತತಿಯ ನಾಶವನ್ನು ತಡೆಗಟ್ಟಲು ನೆರವಾಗುವಂಥ ನೀತಿನಿಯಮಗಳೂ ಅಂತರರಾಷ್ಟ್ರೀಯ ಮಟ್ಟದಲ್ಲಿ ರೂಪುಗೊಂಡಿವೆ. ಈ ಹಿನ್ನೆಲೆಯಲ್ಲಿ ಈಗ ಚೀನಾದಲ್ಲಿ ನಡೆದಿರುವ ಈ ಸಂಶೋಧನೆಯು ಮಹತ್ವವನ್ನು ಪಡೆದಿದೆ. ಪ್ರಾಣಿಗಳ ಯಾವುದೇ ಬಗೆಯ ಉತ್ಪನ್ನಗಳನ್ನು ಬಳಸದೆಯೇ, ಅವುಗಳ ಗುಣಲಕ್ಷಣವನ್ನು ಹೋಲುವ ಉತ್ಪನ್ನಗಳನ್ನು ನಿರ್ಮಿಸಬಹುದೇ ಎಂಬುದೇ ಈ ಪ್ರಯೋಗವಾಗಿದೆ. ಈ ಪ್ರಯೋಗಕ್ಕೆ ಭಾಗಶಃ ಯಶಸ್ಪೂ ಸಿಕ್ಕಿದೆ.

ಏನಿದು ಸಂಶೋಧನೆ?

ಹಿಮಕರಡಿಗಳ ಮೈಮೇಲಿನ ಕೂದಲು ಬಹಳ ಒತ್ತಾಗಿರುತ್ತದೆ; ಅದು ಚಳಿಯನ್ನು ಒಳಬಿಡುವುದಿಲ್ಲ. ಹಾಗಾದರೆ, ಅದರ ಕಾರ್ಯನಿರ್ವಹಣೆ ಹೇಗೆ – ಎಂಬ ಸಂಶೋಧನೆಯೇ ಈಗ ನಡೆದಿರುವುದು.

ಹಿಮಕರಡಿಯ ಕೂದಲನ್ನು ಅಡ್ಡವಾಗಿ ಸೀಳಿ ಸೂಕ್ಷ್ಮ ದರ್ಶಕದಲ್ಲಿ ವೀಕ್ಷಿಸಿದರೆ, ಅದರಲ್ಲಿ ಎರಡು ಪ್ರಮುಖ ಭಾಗಗಳನ್ನು ಗುರುತಿಸಬಹುದು. ಒಂದು, ಮೃದುವಾದ ಮೇಲ್ಕೆ: ಮತ್ತೊಂದು, ಒಳಭಾಗದಲ್ಲಿರುವ ಗಟ್ಟಿಯಾದ ತಿರುಳು. ಇದರ ಈ ಗುಣವೇ ಶಾಖವನ್ನು ಕೂದಲು ತನ್ನ ಮೂಲಕ ಬಿಟ್ಟುಕೊಡದಿರುವಂತೆ ನೋಡಿಕೊಳ್ಳುವುದು. ಈ ಸರಳ ರಚನೆಯನ್ನು ಅನುಕರಿಸಿರುವ ಹೌ ಬಾಯ್ ಹಾಗೂ ಅವರ ವಿಜ್ಞಾನಿಗಳ ತಂಡವು, ದಾರವನ್ನು ಅತೀವ ಶೀತಕ್ಕೆ (ನೈಟ್ರೋಜನ್ ಕೋಲ್ಡ್) ಒಡ್ಡಿದ್ದಾರೆ. ಆಗ ಅದು ಗಟ್ಟಿಯಾಗುತ್ತದೆ. ಬಳಿಕ, ಅದಕ್ಕೆ ಥರ್ಮೋಪ್ಲಾಸ್ಟಿಕ್ಪಾಲಿಯೂರಥೇನ್ ಎಂಬ ಸಾಮಗ್ರಿಯಿಂದ ಒಂದು ಪದರವನ್ನು ಲೇಪಿಸಿದ್ದಾರೆ. ಈ ರೀತಿಯ ಪ್ರಕ್ರಿಯೆಗೆ ಒಳಗಾಗುವ ದಾರವನ್ನು ಬಳಿಕ ಕೊಠಡಿಯ ಉಷ್ಣಾಂಶಕ್ಕೆ ಬರುವವರೆಗೂ ಕಾದು, ಅದನ್ನು ಸ್ಟೆಟರ್ ಮಾದರಿಯ ಅಂಗಿಯಾಗಿ ನೇಯ್ದಿದ್ದಾರೆ.

ಈ ಪ್ರಯೋಗವು ಹಲವು ಕುತೂಹಲಕಾರಿ ಉತ್ತರಗಳನ್ನು ನೀಡಿವೆ. ಕುರಿಯ ಉಣ್ಣೆಯಿಂದ ನಿರ್ಮಿಸಿದ ಸ್ಟೇಟರ್‌ಗಿಂತ ಸುಮಾರು ಐದು ಪಟ್ಟು ಹೆಚ್ಚು ಚಳಿಯನ್ನು ತಡೆದುಕೊಳ್ಳುವ ಗುಣವನ್ನು ಈ ಹೊಸ ಬಗೆಯ ನೂಲಿನ ಸೈಟ‌ರ್ ತೋರಿಸಿದೆ. ಅಂದರೆ, ಇದು ಹೆಚ್ಚು ಬಲಿಷ್ಠವೂ ಸಮರ್ಥವೂ ಆದ ನೂಲೆಂದು ಸಾಬೀತಾಗಿದೆ. ಈ ಬಗೆಯಬಟ್ಟೆಗಳನ್ನು ಅತೀವ ಶೀತವಿರುವ ಪ್ರದೇಶಗಳಲ್ಲಿ ಧರಿಸಿದರೆ ಚಳಿಯಿಂದ ರಕ್ಷಣೆಯನ್ನು ಪಡೆಯಬಹುದು ಎಂಬ ವಾದವನ್ನು ಚೀನಾದ ಈ ವಿಜ್ಞಾನಿಗಳು ಮಂಡಿಸಿದ್ದಾರೆ.ಸಾಮಾನ್ಯವಾಗಿ ಚಳಿಯ ಸಮರ್ಥ ನಿರ್ವಹಣೆಗೆ ಬಹು ಪದರಗಳ ಉಡುಪುಗಳನ್ನು ಧರಿಸಬೇಕು ಎಂದು ವಿಜ್ಞಾನಿಗಳು ಹೇಳುತ್ತಾರೆ. ಅಂದರೆ, ಒಂದು ದಪ್ಪನೆಯ ಬಟ್ಟೆಯ ಬದಲಿಗೆ, ಒಂದರ ಮೇಲೊಂದರಂತೆ ತೆಳುವಾದ ಬಟ್ಟೆಗಳನ್ನೇ ಧರಿಸಿದರೆ ಶಾಖ ಒಳಗೆ ಇಳಿಯುವುದಿಲ್ಲ. ಈ ವಿಜ್ಞಾನವನ್ನೇ ಹೌ ಬಾಯ್ ಅನುಮೋದಿಸಿದ್ದಾರೆ. ಈ ಹೊಸ ನೂಲಿನಿಂದ ತಯಾರಾದ ಬಟ್ಟೆಗಳನ್ನು ಸಾಧ್ಯವಾದಷ್ಟು ತೆಳುವಾಗಿ ನಿರ್ಮಿಸಿ, ಬಹು ಪದರಗಳಲ್ಲಿ ಧರಿಸಿದರೆ ಅತ್ಯಂತ ಆಹ್ಲಾದಕರವಾದ ಬೆಚ್ಚನೆಯ ಅನುಭವವನ್ನು ಪಡೆಯಬಹುದು ಎಂದಿದ್ದಾರೆ.

ಮಾತ್ರವಲ್ಲ, ಇದು ಪ್ರಾಣಿಜನ್ಯ ನೂಲಿಗಿಂತ ಕಡಿಮೆ ತೂಕವನ್ನು ಹೊಂದಿದೆ. ಹಾಗಾಗಿ,ಈ ಬಟ್ಟೆಗಳನ್ನು ಧರಿಸಿದರೆ ದೇಹಕ್ಕೆ ತೂಕದ ಹೊರೆ ಇರುವುದಿಲ್ಲ. ಅಲ್ಲದೇ, ಇದು ಕೃತಕ ನೂಲು ಆಗಿರುವ ಕಾರಣ ಪ್ರಾಣಿಹಿಂಸೆಯೂ ಆಗುವುದಿಲ್ಲವಷ್ಟೆ.

Leave a Comment