ಕರ್ನಾಟಕ ಸ್ವರ್ಣ ಸಿಕ್ಸರ್ ಅರ್ಧಶತಕ ದಾಟಿದ ಪದಕ ಬೇಟೆ

ಕರ್ನಾಟಕ ಸ್ವರ್ಣ ಸಿಕ್ಸರ್ ಅರ್ಧಶತಕ ದಾಟಿದ ಪದಕ ಬೇಟೆ

ಡೆಹ್ರಾಡೂನ್/ಹಲ್ದಾವಾನಿ: ದೇವಭೂಮಿ ಉತ್ತರಾಖಂಡದಲ್ಲಿ ನಡೆಯುತ್ತಿರು
38ನೇ ರಾಷ್ಟ್ರೀಯ ಕ್ರೀಡಾಕೂಟದ ಈಜು ವಿಭಾಗದಲ್ಲಿ ಕರ್ನಾಟಕದ ಪುರುಷರ ಹಾಗೂ ಮಹಿಳಾ ತಂಡಗಳು ಸಮಗ್ರ ಚಾಂಪಿಯನ್ ಪ್ರಶಸ್ತಿ ಗೆದ್ದುಕೊಂಡಿವೆ. ಕೂಟದ 7ನೇ ದಿನವೂ ರಾಜ್ಯದ ಈಜುಪಟುಗಳು 4 ಬಂಗಾರ ಪದಕದೊಂದಿಗೆ ಅಭಿಯಾನ ಮುಗಿಸಿದರೆ, ನಿತಿನ್ ಎಚ್.ವಿ- ಪ್ರಕಾಶ್ ರಾಜ್ ಮತ್ತು ಶಿಖಾ ಗೌತಮ್- ಅಶ್ವಿನಿ ಭಟ್ ಜೋಡಿ ಕ್ರಮವಾಗಿ ಬ್ಯಾಡ್ಮಿಂಟನ್‌ನ ಪುರುಷರ-ಮಹಿಳಾ ಡಬಲ್ಸ್ ವಿಭಾಗದಲ್ಲಿ ಸ್ವರ್ಣ ಸಾಧನೆ ಮಾಡಿತು. ಇದರೊಂದಿಗೆ ಕರ್ನಾಟಕ ಮಂಗಳವಾರ ಒಟ್ಟು 6 ಸ್ವರ್ಣ ಪದಕ ಗೆದ್ದ ಸಾಧನೆ ಮಾಡಿತು. ಕರ್ನಾಟಕ ಈಗ 28 ಚಿನ್ನ, 12 ಬೆಳ್ಳಿ ಹಾಗೂ 13 ಕಂಚು ಸಹಿತ ಥಒಟ್ಟು ಪದಕಗಳ ಸಂಖೆಯನ್ನು 53ಕ್ಕೇರಿಸಿಕೊಂಡಿದೆ.

ಜತೆಗೆ ಪದಕ ಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ. ಈಜು ಸ್ಪರ್ಧೆಯ ಅಂತಿಮ ದಿನವಾದ ಮಂಗಳವಾರ ಪುರುಷರ 100 ಮೀಟರ್ ಬ್ರೆಸ್ಟ್‌ಸ್ಟೋಕ್‌ನಲ್ಲಿ ರಾಜ್ಯದ ವಿದಿತ್ ಎಸ್ ಶಂಕರ್ 1 ನಿಮಿಷ 3.97 ಸೆಕೆಂಡ್‌ಗಳಲ್ಲಿ ಸ್ಪರ್ಧೆ ಮುಗಿಸಿ ಬಂಗಾರಕ್ಕೆ ಮುತ್ತಿಕ್ಕಿದರು. ತಮಿಳುನಾಡಿನ ಎಸ್. ಧನುಷ್ (1ನಿ,4.51ಸೆ) ಬೆಳ್ಳಿ, ಜಾರ್ಖಂಡ್‌ನ ರಾಣಾ ಪ್ರತಾಪ್ (1ನಿ.04.57ಸೆ) ಕಂಚು ಗೆದ್ದರು. 100 ಮೀಟರ್ ಫ್ರೀಸ್ಟೈಲ್‌ನಲ್ಲಿ ಒಲಿಂಪಿಯನ್ ಶ್ರೀಹರಿ ನಟರಾಜ್ 50.65 ಸೆಕೆಂಡ್‌ಗಳಲ್ಲಿ ಅಗ್ರಸ್ಥಾನಿಯಾಗಿ ಗುರಿ ತಲುಪಿ, ಕೂಟದಲ್ಲಿ 8ನೇ ಪದಕ ತನ್ನದಾಗಿಸಿಕೊಂಡರು. ಮಹಾರಾಷ್ಟ್ರದ ಹೀರ್ ಗಿತೇಶ್ ಷಾ (51.61ಸೆ), ರಿಷಭ್ ದಾಸ್ (51.71ಸೆ) ನಂತರದ ಎರಡು ಸ್ಥಾನ ಪಡೆದುಕೊಂಡರು.

ಇದನ್ನೂ ಓದಿ: ವರುಣ್ ಚಕ್ರವರ್ತಿ ಒಂದು ದಿನಕ್ಕೆ ಸೇರುತ್ತಾರೆ

ಕೂಟ ದಾಖಲೆ, ಸ್ವರ್ಣ ಪದಕ ನಂ.9 14 ವರ್ಷದ ಈಜುಪಟು ಧಿನಿಧಿ ದೇಸಿಂಫು ಮಹಿಳೆಯರ 100 ಮೀ. ಫ್ರೀಸ್ಟೈನಲ್ಲಿ ನೂತನ ಕೂಟ ದಾಖಲೆಯೊಂದಿಗೆ ಬಂಗಾರ ಪದಕ ಬಾಚಿಕೊಂಡರು. 57.34 ಸೆಕೆಂಡ್‌ಗಳಲ್ಲಿ ಅಗ್ರಸ್ಥಾನಿಯಾಗಿ ಗುರಿ ತಲುಪಿದ ಧಿನಿಧಿ, ಹಿಂದಿನ ಆವೃತ್ತಿಯಲ್ಲಿ ತಾನೇ ರಚಿಸಿದ 57.87ಸೆಕೆಂಡ್ ಗಳ ದಾಖಲೆ ಉತ್ತಮ ಪಡಿಸಿಕೊಂಡರು. ಮಿಶ್ರ 4/100 ಮೀ. ರಿಲೇ ಸ್ಪರ್ಧೆಯಲ್ಲಿ ಶ್ರೀಹರಿ ನಟರಾಜ್, ವಿದಿತ್ ಎಸ್ ಶಂಕರ್, ನೈಶಾ ಶೆಟ್ಟಿ ಹಾಗೂ ಧಿನಿಧಿ ದೇಸಿಂಘು ಒಳಗೊಂಡ ತಂಡ 4 ನಿಮಿಷ 3.91ಸೆಕೆಂಡ್‌ಗಳಲ್ಲಿ ಕ್ರಮಿಸಿ ಸ್ವರ್ಣ ಪದಕ ಒಲಿಸಿಕೊಂಡಿತು. ಈ ಮೂಲಕ ಶ್ರೀಹರಿ ಹಾಗೂ ಧಿನಿಧಿ ಕೂಟದಲ್ಲಿ ತಲಾ 9 ಚಿನ್ನದ ಪದಕ ಗೆದ್ದ ಸಾಧನೆ ಮಾಡಿದರು. ಶ್ರೀಹರಿ ಒಂದು ಬೆಳ್ಳಿ ಪದಕವನ್ನೂ ಗೆದ್ದಿದ್ದರೆ, ಧಿನಿಧಿ ತಲಾ ಒಂದು ಬೆಳ್ಳಿ, ಕಂಚಿನ ಪದಕವನ್ನೂ ಗೆದ್ದಿದ್ದಾರೆ. ಕರ್ನಾಟಕ ತಂಡ ಈಜಿನಲ್ಲಿ 22 ಚಿನ್ನ, 10 ರಜತ ಹಾಗೂ 5 ಕಂಚು ಸಹಿತ ಒಟ್ಟು 37 ಪದಕಗಳೊಂದಿಗೆ ಈಜುಕೊಳದ ಅಭಿಯಾನ ಮುಗಿಸಿತು.
ಬ್ಯಾಡ್ಮಿಂಟನ್‌ನಲ್ಲಿ ಡಬಲ್ ಬಂಗಾರ, 1 ರಜತ
ಸ್ಟೈಲ್

ಬ್ಯಾಡ್ಮಿಂಟನ್ ಸ್ಪರ್ಧೆಯ ಕೊನೇ ದಿನ ಕರ್ನಾಟಕ ತಂಡ 2 ಚಿನ್ನ, ತಲಾ 1 ರಜತ ಹಾಗೂ ಕಂಚಿನ ಪದಕದೊಂದಿಗೆ ತನ್ನ ಅಭಿಯಾನ ಮುಗಿಸಿತು. ಪುರುಷರ ಡಬಲ್ಸ್‌ನಲ್ಲಿ ನಿತಿನ್ ಎಚ್.ವಿ- ಪ್ರಕಾಶ್ ರಾಜ್ ಜೋಡಿ
21-16, 21-14 ನೇರಗೇಮ್ ಗಳಿಂದ ಕರ್ನಾಟಕದರೇ ಆದ ವೈಭವ್ ಹಾಗೂ ಅಶಿತ್ ಸೂರ್ಯ ಜೋಡಿಯನ್ನು ಮಣಿಸಿ ಸ್ವರ್ಣ ಸಂಪಾದಿಸಿತು. ವೈಭವ್ -ಅಶಿತ್ ಬೆಳ್ಳಿಗೆ ಸಮಾಧಾನ ಕಂಡರು. ಮಹಿಳಾ ಡಬಲ್ಸ್‌ನಲ್ಲಿ 26 ವರ್ಷ ಶಿಖಾ ಗೌತಮ್ ಹಾಗೂ ಅಶ್ವಿನ್ ಭಟ್ ಜೋಡಿ 21-17, 15-21, 21-12ರಿಂದ ಅತಿಥೇಯ ಉತ್ತರಾಖಂಡದ ಅನನ್ಯಾ ಬಿಷ್-ಏಂಜೆಲ ಪುನೀರ ಜೋಡಿ ಎದುರು ಗೆದ್ದು ಬೀಗಿತು. ಪುರುಷರ ಸಿಂಗಲ್ಸ್ ನಲ್ಲಿ ಸನೀತ್ ದಯಾನಂದ್ ಸೆಮಿ ಫೈನಲ್ ನಲ್ಲಿ ಸೋತು ಕಂಚಿಗೆ ತೃಪ್ತಿಪಟ್ಟರು.
ಅಶ್ವಿನ್ ಭಟ್- ಶಿಖಾ ಗೌತಮ್
ತಮಿಳುನಾಡಿನ ಸತೀಶ್ ಕುಮಾರ್, ಮಹಿಳಾ ಸಿಂಗಲ್ ನಲ್ಲಿ ಹರಿಯಾಣದ ಅನ್ಮೋಲ್ ಖರ್ಭಚಾಂಪಿಯನ್ ಎನಿಸಿದ್ದರು ಮಿಶ್ರ ಡಬಲ್ ನಲ್ಲಿ ಅಶ್ವಿತ್ ಸೂರ್ಯ ಜೋಡಿ ಕಂಚಿನ ಸಮಾಧಾನ ಕಂಡಿತು.

Leave a Comment