ಕರ್ನಾಟಕದ ರಘು ಚಾಂಪಿಯನ್
ಬೆಂಗಳೂರು: ಅತಿಥೇಯ ಕರ್ನಾಟಕ ಆಟಗಾರರ ವ್ಯವಹಾರವಾಗಿದ್ದ ಫೈನಲ್ ನ ನಿರ್ಣಾಯಕ ಗೇಮ್ ನಲ್ಲಿ ಮೂರು ಸಲ ಮ್ಯಾಚ್ ಪಾಯಿಂಟ್ ಉಳಿಸಿಕೊಂಡು ಎಂ.ರಘು ಮಾಜಿ ಚಾಂಪಿಯನ್ ಮಿಥುನ್ ಮಂಜುನಾಥ್ ಅವರನ್ನು ಸೋಲಿಸಿ 86ನೇ ಸೀನಿಯರ್ ರಾಷ್ಟ್ರೀಯ ಬ್ಯಾಡ್ಮಿಂಟನ್ ಚಾಂಪಿಯನ್ ಷಿಪ್ ನ ಪುರುಷರ ಸಿಂಗಲ್ಸ್ ಪ್ರಶಸ್ತಿ ಗೆದ್ದುಕೊಂಡರು.
ಕರ್ನಾಟಕ ಬ್ಯಾಡ್ಮಿಂಟನ್ ಸಂಸ್ಥೆ ( ಕೆಬಿಎ) ಸಭಾಂಗಣದಲ್ಲಿ ಮಂಗಳವಾರ ನಡೆದ ಫೈನಲ್ ನಲ್ಲಿ, 26 ವರ್ಷ ವಯಸ್ಸಿನ ರಘು 14 -21 ,14 -21,24 -24 ರಿಂದ ಮಿಥುನ್ ಅವರ ಸವಾಲನ್ನು ಹೆಮ್ಮೆಟ್ಟಿಸಿ ಮೊದಲ ಬಾರಿ ರಾಷ್ಟ್ರೀಯ ಚಾಂಪಿಯನ್ ಕಿರೀಟ ಧರಿಸಿದರು. ಮಂಡ್ಯದ ರಘು ಸೆಮಿಫೈನಲ್ ನಲ್ಲಿ ಆಗ್ರ ಶ್ರೇಯಾಂಕದ ಸತೀಶ್ ಕುಮಾರ್ ಅವರನ್ನು ಹಿಮ್ಮೆಟ್ಟಿಸಿದರು.
ತೆಲಂಗಾಣದ ಶ್ರೀಯಾನ್ಯಿ ವಲಿ ಶೆಟ್ಟಿ ಅವರ ಯಶಸ್ಸಿನ ಓಟಕ್ಕೆ ಅಂತ್ಯ ಹಾಡಿದ ಹರಿಯಾಣ ದೇವಿಕಾ ಸಿಹಾಗ್ ಮಹಿಳಾ ಸಿಂಗಲ್ಸ್ ಕಿರೀಟ ಮುಡಿಗೇರಿಸಿಕೊಂಡರು. 13ನೇ ಶ್ರೇಯಾಂಕದ ದೇವಿಕಾ 21 -15, 21- 16 ರಲ್ಲಿ ನೇರ ಗೇಮ್ ಗಳಿಂದ 12ನೇ ಶ್ರೇಯಾಂಕದ ಶ್ರೀ ಯಾನ್ಯಿ ಮೇಲೆ ಜಯಗಳಿಸಿದರು.
ಇದನ್ನೂ ಓದಿ:- ಸರ್ಕಾರಕ್ಕೆ ರೈತರ ಸಮಸ್ಯೆ ಅರ್ಥವಾಗುತ್ತಿಲ್ಲ
ಎರಡು ವರ್ಷ ಹಿಂದೆ ಇದೆ ಚಾಂಪಿಯನ್ ಷಿಪ್ ನಲ್ಲಿ ವಿಜೇತರಾಗಿದ್ದ ಮಿಥುನ್ ಮೊದಲ ಗೇಮ್ ನಲ್ಲಿ ಮೇಲಗೈ ಸಾಧಿಸಿ ಅದನ್ನು ತಮ್ಮದಾಗಿಸಿಕೊಂಡರು. ಆದರೆ 26 ವರ್ಷ ವಯಸ್ಸಿನ ರಘು ಎರಡನೇ ಜೀನ್ ನಲ್ಲಿ ಸುಧಾರಿಸಿಕೊಂಡು ಮೇಲುಗೈ ಪಡೆಯುವುದರೊಂದಿಗೆ ಪಂದ್ಯ ನಿರ್ಣಾಯವಕ ಗೇಮ್ ಗೆ ಬೆಳೆಯಿತು. ಬಾಲ್ಯ ಸ್ನೇಹಿತರ ಉತ್ತಮ ಹೋರಾಟದ ಈ ಗೇಮ್ ನ ಒಂದು ಹಂತದಲ್ಲಿ ರಘು 15- 19ರಲ್ಲಿ ಹಿನ್ನಡೆಯಲ್ಲಿದ್ದರೂ, ಸಂಯಮ ವಹಿಸಿ 19 -19 ರಲ್ಲಿ ಸಮ ಮಾಡಿಕೊಂಡರು.
26 ವರ್ಷ ವಯಸ್ಸಿನ ಮಿಥುನ್ ಮತ್ತೆ ಮುನ್ನಡೆದು ಮೂರು ಬಾರಿ ಮ್ಯಾಚ್ ಪಾಯಿಂಟ್ ಅವಕಾಶವನ್ನು ಗಳಿಸಿದ್ದರು. ಆದರೆ ನಿರ್ಣಾಯಕ ಹಂತದಲ್ಲಿ ಎಡವಿ ನಿರಾಸೆ ಅನುಭವಿಸಬೇಕಾಯಿತು. ಒತ್ತಡದ ಸಂದರ್ಭವನ್ನು ನಿಭಾಯಿಸಿದ ರಘು ಸುಮಾರು ಒಂದು ಗಂಟೆಯ ಸೆಣಸಾಟದಲ್ಲಿ ಗೆಲುವು ಪಡೆದರು.
ಸಂಸ್ಕಾರ-ಅರ್ಷ್ ಗೆ ಡಬಲ್ಸ್ ಕಿರೀಟ: ಜೂನಿಯರ್ ರಾಷ್ಟ್ರೀಯ ಚಾಂಪಿಯನ್ನರಾದ ಸಂಸ್ಕಾರ ಸಾರಸ್ವತ್ (ರಾಜಸ್ಥಾನ) ಅರ್ಷ್ ಮೊಹಮ್ಮದ್ (ಉತ್ತರ ಪ್ರದೇಶ) ಸೀನಿಯರ್ ರಾಷ್ಟ್ರೀಯ ವಿಭಾಗದಲ್ಲೂ ಮೊದಲ ಬಾರಿ ಚಾಂಪಿಯನ್ ಆದರು. ಈ ಜೋಡಿ ಫೈನಲ್ ನಲ್ಲಿ ಅಗ್ರ ಶ್ರೇಯಾಂಕದ ನವೀನ್ ಪಿ ಮತ್ತು ಲೋಕೇಶ್ ವಿ ಅವರಿಗೆ 12- 21 ,21-12, 21- 19 ರಿಂದ ಆಘಾತ ನೀಡಿತು.
ಆದರೆ ಇತರ ಎರಡು ಡಬಲ್ಸ್ ಫೈನಲ್ ಗಳಲ್ಲಿ ಅನುಭವವು, ಯುವೋತ್ಸಾಹವನ್ನು ಹಿಮ್ಮಟ್ಟಿಸಿತು. ಮಿಶ್ರ ಡಬಲ್ಸ್ ನಲ್ಲಿ ಎಂಟನೇ ಶ್ರೇಯಾಂಕ ದ ರೋಹನ್ ಕಪೂರ್ -ರುತ್ವಿಕ್ ಶಿವಾನಿ ಪ್ರಶಸ್ತಿ ತಮ್ಮದಾಗಿಸಿಕೊಂಡರು.
ಮಹಿಳಾ ಡಬಲ್ಸ್ ನಲ್ಲಿ ಎರಡನೇ ಶ್ರೇಯಾಂಕದ ಆರತಿ ಸಾರಾ ಸುನಿಲ್ (ಕೇರಳ)-ವರ್ಷಿಣಿ ವಿ ಎಸ್ (ತಮಿಳುನಾಡು) ಜೋಡಿ ಫೈನಲ್ ನಲ್ಲಿ 21 -18, 20 -22 ,21- 17 ರಿಂದ 8ನೇ ಶ್ರೇಯಾಂಕದ ಪ್ರಿಯಾದೇವಿ ಕೊಂಜೆಂಗ್ಬಾಮ್ (ಮಣಿಪುರ) ಶ್ರುತಿ ಮಿಶ್ರಾ(ಉತ್ತರ ಪ್ರದೇಶ) ಜೋಡಿಯನ್ನು ಸೋಲಿಸಿ ಪ್ರಶಸ್ತಿ ಜಯಿಸಿತು.
ಮಿಶ್ರು ಡಬಲ್ಸ್ ಫೈನಲ್ ನಲ್ಲಿ ಆಯುಷ್ ಅಗರವಾಲ್ ಶ್ರುತಿ ಮಿಶ್ರಾ (ಉತ್ತರ ಪ್ರದೇಶ) ಜೋಡಿ 21 -17 ,21 -18 ರಿಂದ 8ನೇ ಶ್ರೇಯಾಂಕದ ರೋಹನ್ ಕಪೂರ್ (ದೆಹಲಿ) ರುತ್ವಿಕಾ ಶಿವಾನಿ ಜೋಡಿಯನ್ನು ಮಣಿಸಿತು.