ಕೆನಡಿ ಕನ್ನಡಿ ಒಡೆದು ಹೋದದ್ದು ಹೇಗೆ….

ಕೆನಡಿ ಕನ್ನಡಿ ಒಡೆದು ಹೋದದ್ದು ಹೇಗೆ….

ಶೀತಲಸಮರದ ಉತ್ತುಂಗಕಾಲದಲ್ಲಿ 1961ರ ನವೆಂಬರ್ 3ರಂದು ಅಸ್ತಿತ್ವಕ್ಕೆ ಬಂದ ಯುಎಸ್‌ಎಐಡಿಯ ನೆರವು ನೀತಿ ಆಡುವರೆಗೆ ಅಮೆರಿಕಾ ಪಾಲಿಸಿಕೊಂಡು ಬಂದಿದ್ದನೀತಿಗಿಂತಬೇರೆಯಾಗಿತ್ತು. ಅದುವರೆಗೆ ಅಮೆರಿಕಾದ ಸರ್ಕಾರಗಳು ಧನ ನೆರವು ನೀಡುತ್ತಿದ್ದುದು ವಿದೇಶಗಳ ಸರ್ಕಾರಗಳಿಗೆ, ವಿವಿಧ ಅಭಿವೃದ್ಧಿ ಯೋಜನೆಗಳಿಗಾಗಿ ಆದರೆ ಆ ನೆರವನ್ನು ಹೊರಜಗತ್ತು ಬಳಸಿಕೊಂಡ ರೀತಿ ಮಾತ್ರ ಬೇರೆಯಾಗಿತ್ತು.ಅಮೆರಿಕಾದಿಂದ ನೆರವು ಪಡೆದ ಪಶ್ಚಿಮ ಯೂರೋಪಿಯನ್ ರಾಷ್ಟ್ರಗಳು ಮತ್ತು ಜಪಾನ್ ದ್ವಿತೀಯ ಮಹಾಯುದ್ದದಿಂದ ಕ್ಷತಿಗೊಂಡಿದ್ದ ತಮ್ಮ ಅರ್ಥವ್ಯವಸ್ಥೆಗಳನ್ನು ಅತ್ಯಂತ ಕ್ಷಿಪ್ರಕಾಲದಲ್ಲಿ ಅಂದರೆ 1950ರ ದಶಕದ ಆರಂಭದ ಹೊತ್ತಿಗೇ ಪುನರ್ನಿಮಿಸಿಕೊಂಡು ಆರ್ಥಿಕ ಅಭಿವೃದ್ಧಿಯಲ್ಲಿ ನಾಗಾಲೋಟ ಹಾಕುತ್ತಿದ್ದದ್ದು ಎಲ್ಲರ ಗಮನ ಸೆಳೆದಿತ್ತು. ಆದರೆ ಲ್ಯಾಟಿನ್ ಅಮೆರಿಕಾದ ಬಡ ರಾಷ್ಟ್ರಗಳು ಮತ್ತು ಹೊಸದಾಗಿ ಸ್ವಾತಂತ್ರ್ಯ ಗಳಿಸಿದ ಏಶಿಯನ್ ಮತ್ತು ಆಫ್ರಿಕನ್ ರಾಷ್ಟ್ರಗಳಿಗೆ ಹೋದ ಅಮೆರಿಕಾದ ಹಣದ ದೊಡ್ಡ ಭಾಗ ಸೇರುತ್ತಿದ್ದು. ಭ್ರಷ್ಟ ರಾಜಕೀಯ ನೇತಾರರ ಜೇಬಿಗೆ ಹೀಗಾಗಿ ಅಮೆರಿಕಾದ ನೆರವು ಜನಸಾಮಾನ್ಯರಿಗೆ ತಲುಪುತ್ತಿದ್ದುದು ವಾಷಿಂಗ್ ಟನ್‌ನ ನಿರೀಕ್ಷೆಗಿಂತಲೂ ಕಡಿಮೆಇನ್ನೂನಿರಾಶಾದಾಯಕ ವಿಷಯವೆಂದರೆ ಅಮೆರಿಕಾದಿಂದ ಆಗಾಧ ಧನಸಹಾಯ ತಮ್ಮ ದೇಶಕ್ಕೆ ಹರಿದುಬಂದಿದೆ ಎನ್ನುವುದು ಆಯಾಯ ದೇಶಗಳ ಜೊತೆಗೆ ಗೊತ್ತಾಗುತ್ತಲೇ ಇರಲಿಲ್ಲ !

ಅದೇಸಮಯದಲ್ಲಿಸೋವಿಯತ್ ಯೂನಿಯನ್ ಜಗತ್ತಿನ ಎಲ್ಲೆಡೆ ಕಮ್ಯೂನಿಸ್ಟ್ ಪಕ್ಷಗಳ ಸ್ಥಾಪನೆಗೆ ತೊಡಗಿತ್ತು ಮತ್ತು ಕಮ್ಯೂನಿಸ್ಟ್ ಸಿದ್ಧಾಂತವನ್ನು ಜನಪ್ರಿಯಗೊಳಿಸಲು ತನ್ನ ಪ್ರಚಾರ ಮಾಧ್ಯಮಗಳನ್ನು ಪರಿಣಾಮಕಾರಿಯಾಗಿ ಬಳಸುತ್ತಿತ್ತು.ಅಮೆರಿಕಾ ಮತ್ತು ಬಂಡವಾಳಶಾಹಿಯ ಬಗ್ಗೆ ದುಷ್ ಪ್ರಚಾರ ಸೋವಿಯತ್ ಪ್ರಚಾರ ನೀತಿಯಮುಖ್ಯಭಾಗವಾಗಿತ್ತು. ಜತೆಗೆ ಸೋವಿಯತ್ ಗುಪ್ತಚರ ಸಂಸ್ಥೆ ಕೆಜಿಬಿ (ಕೊಮಿತೆತ್ ಗೋಸುದರ್ಸ್ತ್ ವೆನ್ನೋನಿ ಭಿಝೋಪಸ್ನೋಸ್ತಿ) ಜಗತ್ತಿನೆಲ್ಲೆಡೆ ಪತ್ರಕರ್ತರು, ಬುದ್ದಿಜೀವಿಗಳು ವಿಚಾರವಾದಿಗಳು, ಸಾಹಿತಿಗಳು ಸಂಸ್ಕೃತಿ ಚಿಂತಕರು ಮುಂತಾದ ಅಭಿಪ್ರಾಯ ನಿರ್ಮಾತೃಗಳನ್ನು ಹಣ ಹಾಗೂ ಇತರ ಆಮಿಷಗಳಿಂದ ತನ್ನ ಬುಟ್ಟಿಗೆ ಹಾಕಿಕೊಂಡು ಅವರ ಮೂಲಕ ಕಮ್ಯೂನಿಸ್ಟ್ ಸಿದ್ಧಾಂತ ಮತ್ತು ಸೋವಿಯತ್ ಪ್ರೀತಿಯನ್ನು ಎಲ್ಲೆಡೆ ಬಿತ್ತುವ ಕೆಲಸದಲ್ಲೂ ನಿರತವಾಗಿತ್ತು.ಈತಂತ್ರದಿಂದಾಗಿ ಕಡಿಮೆ ಖರ್ಚಿನಲ್ಲಿ ಸೋವಿಯತ್ ಯೂನಿಯನ್ ಏಶಿಯಾ.

ಇದನ್ನೂ ಓದಿ:ಆಯಾವ್ಯಯದ ಲೆಕ್ಕಾಚಾರ ಇರದಿದ್ದರೆ ಬದುಕು ಆಯೋಮಯ.

ಆಫ್ರಿಕಾ ಮತ್ತು ಲ್ಯಾಟಿನ್ ಅಮೆರಿಕಾಗಳಲ್ಲಿ ಅಪಾರ ಜನಪ್ರಿಯತೆ ಗಳಿಸಿತ್ತು ಮತ್ತು ಅಗಾಧ ಹಣವನ್ನು ಚೆಲ್ಲಿದಾಗ್ಯೂ ಅಮೆರಿಕಾ ಅಂತಹ ಜನಪ್ರಿಯತೆಗಳಿಸಿಕೊಳ್ಳುವುದರಲ್ಲಿ ವಿಫಲವಾಗಿತ್ತು ಇದನ್ನು ಸರಿಪಡಿಸುವ ಗುರಿ ಹೊಂದಿದ ಯುಎಸ್‌ಎಐಡಿ ಜನರಿಗೆ ನೇರವಾಗಿ ತಲುಪುವಂಥ ಯೋಜನೆಗಳಿಗೆ ಧನಸಹಾಯ ನೀಡುವುದನ್ನು ತನ್ನ ಮುಖ್ಯ ಉದ್ದೇಶವಾಗಿಸಿಕೊಂಡಿತು ನೆರೆ, ಬರಗಾಲ ಮುಂತಾದ ಪ್ರಾಕೃತಿಕ ವಿಕೋಪಗಳಿಗೆ ತುತ್ತಾದಅಭಿವೃದ್ಧಿಶೀಲಜನರಿಗೆ ನೇರವಾಗಿ ಸಹಾಯಒದಗಿಸುವುದು ಶೈಕ್ಷಣಿಕ ಕ್ಷೇತ್ರದಲ್ಲಿ ಸಹಾಯ ಒದಗಿಸುವುದು, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅಮೆರಿಕಾದಲ್ಲಿ ವ್ಯಾಸಂಗ ಮತ್ತು ಸಂಶೋಧನೆಗಾಗಿ ನೀಡುವ ಧನಸಹಾಯವನ್ನು ವ್ಯಾಪಕಗೊಳಿಸುವುದು ಮುಂತಾದ ಮಾರ್ಗಗಳಿಂದ ಅಮೆರಿಕಾತಮ್ಮಅಭ್ಯುದಯದಲ್ಲಿ ಸಹಕರಿಸುತ್ತಿದೆ. ಇದು ಕೇವಲ ಸಿದ್ಧಾಂತ ಪ್ರಚಾರವಲ್ಲ, ಬದುಕನ್ನು ಉನ್ನತಗೊಳಿಸಿಕೊಳ್ಳಲು ನಿಜವಾದ ಸಹಕಾರ ಎಂಬ ಭಾವನೆ ಜಾಗತಿಕವಾಗಿ ಪ್ರಸರಿಸುವಂತೆ ಮಾಡುವುದು ಯುಎಸ್ ಎಐಡಿಯ ಕಾರ್ಯಯೋಜನೆ, ಜತೆಗೆ, ಸೋವಿಯತ್ ತಂತ್ರವನ್ನು ಒಂದಷ್ಟು ಮಟ್ಟಿಗೆ ಅನುಕರಿಸಿ ತೃತೀಯ ಜಗತ್ತಿನ ಅಭಿಪ್ರಾಯನಿರ್ಮಾತೃಗಳನ್ನೂ ಬುಟ್ಟಿಗೆ ಹಾಕಿಕೊಂಡು ಅವರ ಮುಲಕ ಅಮೆರಿಕಾದ ಗುಣಗಾನ ಮಾಡಿಸುವುದೂ ಯುಎಸ್‌ಎಐಡಿಯ ಉದ್ದೇಶಗಳಲ್ಲೊಂದಾಗಿತ್ತು.

ಇವೆಲ್ಲವುಗಳ ಮೂಲಕ, ಅಧ್ಯಕ್ಷ ಜಾನ್ ಎಫ್ ಕೆನಡಿ ಘೋಷಿಸಿದಂತೆ ಅಮೆರಿಕಾವನ್ನು ಜಾಗತಿಕವಾಗಿ ಜನಪರಗೊಳಿಸುವುದು ಮತ್ತು ಅಮೆರಿಕಾದ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳುವುದು ಯುಎಸ್‌ಎಐಡಿಯ ಉದ್ದೇಶ. ಇದು ಕೆನಡಿಯವರ ‘ಹೊಸ ದಿಗಂತ ನೀತಿಗೆ ಚೆನ್ನಾಗಿ ಹೊಂದಿಕೊಳ್ಳುತ್ತಿತ್ತು. ಇದಾಗಿ ಆರು ದಶಗಳು ಕಳೆದುಹೋಗಿವೆ, ಪೊಟೋಮಾಕ್ ನದಿಯಲ್ಲಿ ಬಹಳಷ್ಟು ನೀರು ಹರಿದುಹೋಗಿದೆ. ಮೂವತ್ತೈದನೇ ಅಧ್ಯಕ್ಷ ಜಾನ್‌ ಎಫ್ ಕೆನಡಿಯವರ ‘New Horizon (ಹೊಸ ದಿಗಂತ) ಯೋಜನೆಯ ಭಾಗವಾದ ಯುಎಸ್ಎ ಐಡಿ ಇಂದು ತಮ್ಮ’ Make America Great Again (MAGA. ಮ್ಯಾಗ) ನೀತಿಗೆ ಹೊಂದಿಕೆಯಾಗುವುದಿಲ್ಲ ಎಂದು ನಲವತ್ತೇಳನೇ ಅಧ್ಯಕ್ಷ ಡೊನಾಲ್ಡ್ ಜಿ ಟ್ರಂಪ್ ಹೇಳುತ್ತಿದ್ದಾರೆ! 1961ರಲ್ಲಿ ಉತ್ಸಾಹಿ ಯುವ ಅಧ್ಯಕ್ಷ ಆರಂಭಿಸಿದ ಯೋಜನೆ 2025ರಲ್ಲಿ ಅತ್ಯುತ್ಸಾಹಿ ವಯಸ್ಯ ಅಧ್ಯಕ್ಷರಿಗೆ ಹೇಗೆ? ಯುಎಸ್‌ಎಐಡಿಗೆ ಏನಾಗಿಹೋಗಿದೆ?

ಜಾನ್ ಎಫ್. ಕೆನಾಡಿ1963ರ ನವೆಂಬರ್ 22 ರಂದು ಡಲ್ಲಾಸ್ ನಗರದಲ್ಲಿ ಹಂತಕನ ಗುಂಡಿಗೆ ಬಲಿಯಾದರು. ಅದರೊಂದಿಗೆ ಅವರ ‘ಹೊಸ ದಿಗಂತ ಕಿರಿದಾಯಿತು ಅಥವಾ ಮಾರ್ಪಾಡುಗೊಂಡಿತು. ಹೊಸ ಅಧ್ಯಕ್ಷ ಲಿಂಡನ್ బి. ಜಾನ್ಸನ್ ಯು ಎಸ್ ಎ ಐ ಡಿ ಎಂ ಕಾರ್ಯಯೋಜನೆ ಹಾಗೂ ಕಾರ್ಯವಿಧಾನಗಳನ್ನು ಮೊದಲಿಗಿಂತಲೂ ಹತ್ತಿರವಾಗಿಸಿದರು. ಆ ಮೂಲಕ ಸಿಐಎಯಿಂದ ಭಾರಿ ಪ್ರಮಾಣದ ಹಣ ಯುಎಸ್‌ಎಐಡಿ ಮೂಲಕ ಜಗತ್ತಿನಾದ್ಯಂತ ಬುಡಮೇಲು ಕೃತ್ಯಗಳಿಗಾಗಿ ಹರಿಯುವ ವ್ಯವಸ್ಥೆಯಾಯಿತು. ಇದೊಂದು ಅತೀವ ಚಾಕಚಕ್ಯತೆಯಿಂದ ರೂಪಿಸಿದ ಯೋಜನೆ ಯಾವುದೇ ಅಭಿವೃದ್ಧಿಶೀಲ ದೇಶದಲ್ಲಿ ಪ್ರಭಾವ ಹರಡು ಅಸ್ತಿತ್ವದಲ್ಲಿ ಇರಬಹುದಾದ ಅಮೆರಿಕಾ ವಿರೋಧಿ ಸರ್ಕಾರವನ್ನು ಉರುಳಿಸಲು ಸಿಐಎ ಒಳಸಂಚು ನಡೆಸುವ, ಹತ್ಯೆಯ ಕಾರಸ್ಥಾನ ರಚಿಸುವುದಕ್ಕಿಂತಲೂ ಅ ಸರ್ಕಾರಕ್ಕೆ ದೇಶದೊಳಗೇ ವಿರೋಧವನ್ನು ಸೃಷ್ಟಿಸಿ, ಬೆಳೆಸಿ ಅದು ಅಮೆರಿಕಾ-ವಿರೋಧಿ ಸರ್ಕಾರವನ್ನು ಆಹುತಿ ತೆಗೆದುಕೊಳ್ಳುವಂತೆ ಮಾಡುವುದು ಅಮೆರಿಕಾಗೆ ಹೆಚ್ಚು ‘ಗೌರವ’ದ ದಾರಿ! ಆದರೆ ಅದಕ್ಕಾಗಿ ಸಿಐಎ ಸರ್ಕಾರ-ವಿರೋಧಿ ರಾಜಕಾಣಿಗಳಿಗೆ ಅಥವಾ ಆಂದೋಲನಕಾರರ ಕೈಗೆ ನೇರವಾಗಿ ಹಣ ಹಾಕುವುದು ಸರಿಯಾದ ವಿಧಾನವಾಗಿ ಕಾಣಲಾರದು ಎನ್ನುವುದು ಸಹಜವೇ ಆದರೆ ಸಿಐಎನ ಅದೇ ಹಣವನ್ನು ಅಮಾಯಕ ಹಾಗೂ ಚಂದದ ಹೆಸರಿನ ಯುಎಸ್‌ಎಐಡಿ ಮುಖಾಂತರ ‘ರಾಜಕೀಯ ಜಾಗೃತಿ ಸೃಷ್ಟಿ’ ಅಥವಾ ‘ಮತದಾರ ಜಾಗೃತಿ ಯೋಜನೆ’ ಮುಂತಾದ ಆಕರ್ಷಕ ಹೆಸರಿನಲ್ಲಿ ಎನ್‌ಜಿಓಗಳಿಗೆ.

ಆ ಮೂಲಕ ಸರ್ಕಾರ-ವಿರೋಧಿ ಕೈಗಳಿಗೆ ತಲುಪಿಸುವುದು ಕೈ ಕೆಸರಾಗದೇ ಬಾಯಿ ಮೊಸರು ಮಡಿಕೊಳ್ಳಲು ಜಾನ್ಸನ್ ಆಡಳಿತ ಹೂಡಿದ ಹುನ್ನಾರ ಮೊದಲಿಗೆ ನೆರೆಯ ಲ್ಯಾಟಿನ್ ಅಮೆರಿಕಾದ ದೇಶಗಳಲ್ಲಿ ವ್ಯಾಪಕವಾಗಿ ಆರಂಭವಾಗಿ ಯಶಸ್ವಿಯಾದ ಈ ವಿಧಾನ ಕ್ಷಿಪ್ರ ಕಾಲದಲ್ಲಿ ಎಶಿಯಾ ಮತ್ತು ಆಫ್ರಿಕಾಗಳಿಗೆ ವಿಸ್ತರಣೆಯಾಯಿತು. ನಂತರದ ವರ್ಷಗಳಲ್ಲಿ ಈ ವಿಧಾನದ ಮೂಲಕ ಹಲವಾರು ದೇಶಗಳಲ್ಲಿ ಸರ್ಕಾರ ವಿರೋಧಿ ಅಂದೋಲನಗಳು ಸಾಮಾನ್ಯವಾಗಿಹೋದವು. ಚುನಾವಣೆಗಳ ಸಮಯದಲ್ಲಿ ಆಡಳಿತ ಪಕ್ಷಕ್ಕೆ ವಿರೋಧವಾಗಿ ಮತ ಚಾಲಾಯಿಸುವಂತೆ ಮತದಾರರನ್ನು ಪ್ರಚೋದಿಸುವ ಕೃತ್ಯಗಳಿಗೆ ಯುಎಸ್‌ಎಐಡಿ ಹಣ ಬಳಕೆಯಾಗತೊಡಗಿತು. ಪೈಸಾ ಫೇಂಕೋ, ತಮಾಷಾ ದೇಖೋ! ಶೀತಲ ಸಮರ ಅಂತ್ಯಗೊಂಡ 1990-91ನೇ ಇಸವಿಯವರೆಗೆ ಜಗತ್ತಿನಲ್ಲಿ ನಡೆದ ರಾಜಕೀಯ ವಿದ್ಯಮಾನಗಳನ್ನು ಲೆಕ್ಕಹಾಕಿದರೆ ನಮಗೆ ಸಿಗುವ ಸಂಖ್ಯೆ ಗಾಬರಿ ಹುಟ್ಟಿಸುತ್ತೆ ಸಿಐಎ-ಯುಎಸ್‌ಎಐಡಿ ಜಂಟಿ ಕಾರ್ಯಯೋಜನೆಗಳಿಂದ ಅಭಿವೃದ್ಧಿಶೀಲ ಜಗತ್ತಿನ 72 ದೇಶಗಳಲ್ಲಿ ಸರ್ಕಾರ ಬದಲಾವಣೆಯ ಪ್ರಯತ್ನಗಳು ನಡೆದಿವೆ ಮತ್ತು ಆ ಪ್ರಯತ್ನ 66 ದೇಶಗಳಲ್ಲಿ ಯಶಸ್ವಿಯಾಗಿದೆ! ಅಧ್ಯಕ್ಷ ಕೆನಡಿ ಹುಟ್ಟುಹಾಕಿದ. ಲಿಂಡನ್ ಬಿ. ಜಾನ್ಸನ್ ಮಾರ್ಪಡಿಸಿದ ‘United States Agency for International Development ತನ್ನ ಹಸ್ವರೂಪ USAID’ಯನ್ನು ಒಂದು ಪದವಾಗಿ ತೆಗೆದುಕೊಂಡರೆ ಅದು ನೀಡುವ ಅರ್ಥ ಅಮೆರಿಕಾದ ನೆರವು ಅಂತ. ಅಮೆರಿಕಾದ ನೆರವುಕಾರ್ಯಗತವಾಗುತ್ತಿದ್ದುದು ಈ ಬಗೆಯಲ್ಲಿ!


ಈ ನಡುವೆ 1980ರ ದಶಕದಲ್ಲಿ ಅಧ್ಯಕ್ಷ ರೊನಾಲ್ ರೀಗನ್‌ರ ರಿಪಬ್ಲಿಕನ್ ಆಡಳಿತದಲ್ಲಿ ಯುಎಸ್‌ಎಐಡಿ ಒಂದೆರಡು ಅಕ್ರಮ ಸಂತಾನಗಳನ್ನು ಹೆತ್ತು ಸೋವಿಯತ್ ಯೂನಿಯನ್ ಮತ್ತು ಪೂರ್ವ ಯೂರೋಪಿಯನ್ ಕಮ್ಯೂನಿಸ್ಟ್ ದೇಶಗಳಲ್ಲೂ ತನ್ನ ಕಂಬಂಧಬಾಹುಗಳನ್ನು ಚಾಚಿದ್ದೂ ನಡೆಯಿತು. ಇದೊಂದು ಆಸಕ್ತಿಕರ ಕಥೆ ಕಮ್ಯೂನಿಸ್ಟ್ ವ್ಯವಸ್ಥೆಯಿಂದ ಆರ್ಥಿಕ ಅಭಿವೃದ್ಧಿ ಸಾಧಿಸಲಾಗದೆ ಪೂರ್ವ ಯೂರೋಪಿಯನ್ ದೇಶಗಳು ದಿನೇದಿನೇ ಬಡತನದತ್ತ ಸಾಗುತ್ತಿದ್ದುದು ಹಾಗೂ ಅದನ್ನು ಮುಚ್ಚಿಕೊಳ್ಳಲು ಉತ್ತೇಕ್ಷಿತ ಆರ್ಥಿಕ ಅಂಕಿಅಂಶಗಳನ್ನು ಜಗತ್ತಿನ ಮುಂದೆ ಇಡುತ್ತಿದ್ದುದು ಈಗ ಹಳೆಯ ಸುದ್ದಿ, ಆ ಸ್ವಅಪ್ರಾಮಾಣಿಕ ಮಾರ್ಗವನ್ನು ತೊರೆದ ಚೀಸೀ ನಾಯಕ ಡೆಂಗ್ ಪಿಯಾವೋಪಿಂಗ್ ‘ರಾಜಕೀಯದಲ್ಲಿ ಕಮ್ಯೂನಿಸಂ ಆರ್ಥಿಕ ಕ್ಷೇತ್ರದಲ್ಲಿ ಅಗತ್ಯವಿರುವಷ್ಟು ಬಂಡವಾಳಶಾಹಿ’ ಎಂಬ ನಿಲುವು ತಳೆದು ಚೀನಿ ಅರ್ಥವ್ಯವಸ್ಥೆಯನ್ನು 1978ರಲ್ಲೇ ಮುಕ್ತಗೊಳಿಸಿದ್ದರು. ಅದರಿಂದಾಗಿ ಚೀನಾ ಸಾಧಿಸತೊಡಗಿದ ಆರ್ಥಿಕ ಪ್ರಗತಿ ಮತ್ತದರ ವೇಗ ಪೂರ್ವ ಯೂರೋಪ್‌ನ ಬಡ ಕಮ್ಯೂನಿಸ್ಟ್ ದೇಶಗಳ ಜನರ ಗಮನ ಸೆಳೆಯಿತು. ಹೀಗಾಗಿ ಅಲ್ಲಿ ಕಮ್ಯೂನಿಸ್ -ವಿರೋಧಿ ದನಿಗಳು ಮೆಲ್ಲಮೆಲ್ಲನೆ ಎಳಲಾರಂಭಿಸಿದವು.

ಪೋಲ್ಯಾಂಡ್‌ನಲ್ಲಂತೂ ಹೊಸ ಚಿಂತನೆಯ ಲೆಖ್ ವಯೆಂಸಾ (ಬರೆಯುವುದು ‘ವ್ಯಾಲೇಸಾ’ ಅಂತ!) ಗ್ ಡ್ಯಾನ್‌ಸ್ಕ್ (ಇದನ್ನು ಉಚ್ಚರಿಸಲು ನಿಮಗೆ ತೊಡಕಾದರೆ ಅದು ನನ್ನ ತಪ್ಪಲ್ಲ!) ಬಂದರುಕಟ್ಟೆಯಲ್ಲಿ ಕೆಲಸಗಾರರನ್ನು ಒಟ್ಟುಗೂಡಿಸಿ ‘ಸಾಲಿಡ್ಯಾರಿಟಿ’ ಎಂಬ ಗುಂಪು ಕಟ್ಟಿಕೊಂಡು ಕಮ್ಯೂನಿಸ್ಟ್ ಸರ್ಕಾರಕ್ಕೆ ಸೆಡ್ಡುಹೊಡೆದು ನಿಂತಿದ್ದರು. ಆ ಗಾಳಿ ಪೂರ್ವ ಯೂರೋಪಿನ ಇತರ ಕಮ್ಯೂನಿಸ್ಟ್ ದೇಶಗಳಿಗೂ ಬೀಸತೊಡಗಿತ್ತು.ಈ ವಾತಾವರಣದಲ್ಲಿ ಪೂರ್ವ ಯೂರೋಪ್‌ನಲ್ಲಿ ಅಮೆರಿಕಾ ಮತ್ತದರ ‘ಪ್ರಜಾಪ್ರಭುತ್ತೀಯ ಮೌಲ್ಯ’ಗಳ ಪ್ರಭಾವ ಹರಡುವ ಅವಕಾಶವನ್ನು ಕಂಡ ರೀಗನ್ ಆಡಳಿತ ಅದಕ್ಕಾಗಿ ಯುಎಸ್ ಎ ಐ ಡಿ ಯ ಮಕ್ಕಳಂತೆ ಕಾರ್ಯನಿರ್ವಹಿಸಲು1983ರಲಿ’National Endowment for Democracy’ (ಎನ್‌ಇಡಿ) ಹಾಗೂ ತಮ್ಮ ರಿಪಬ್ಲಿಕನ್ ಪಕ್ಷದ ಪ್ರಭಾವದಲ್ಲಿರುವಂಥ ‘International Republican Institute (ಐಆರ್ ಐ) ಎಂಬ ಸಂಸ್ಥೆಯೊಂದನ್ನು ಹುಟ್ಟುಹಾಕಿತು. ತಾವೇಕೆ ಹಿಂದೆ ಬೀಳಬೇಕು ಎಂದು ಡೆಮೋಕ್ರಾಟಿಗರೂ ‘National Democratic Institute’ (ಎನ್‌ಡಿಐ) ಎಂಬ ಸಂಸ್ಥೆಯನ್ನು ಸೃಷ್ಟಿಸಿದರು. ಎಷ್ಟಾದರೂ ಯುಎಸ್‌ಎಐಡಿಯನ್ನು ಸೃಷ್ಟಿಸಿದವರು ಮತ್ತು ಅದಕ್ಕೆ ಇಂದಿನ ರೂಪವನ್ನು ಕೊಟ್ಟವರು ಡೆಮೋಕ್ರಾಟಿಗರೇ ಅಲ್ಲವೇ? ನಂತರಈಮೂರೂ ಸಂಸ್ಥೆಗಳುಯುಎಸ್‌ಎಐಡಿಯ ಅಂಗಸಂಸ್ಥೆಗಳಂತೆ ಜಗತಿನಾದ್ಯಂತ ಹಾವಳಿ ಎಬ್ಬಿಸತೊಡಗಿದವು ಕಳೆದ ವರ್ಷ ಬಾಂಗ್ಲಾದೇಶದಲ್ಲಿ ಜರುಗಿದ ಅಹಿತಕಾರಿ ಬೆಳವಣಿಗೆಗಳಲ್ಲಿ ರಿಪಬ್ಲಿಕನ್ನರ ಐಆರ್‌ಐ ಮತ್ತು ಡೆಮೋಕ್ರಾಟಿಗರ ಎನ್‌ಡಿಐ ಒಟ್ಟಿಗೇ ಸಂಚು ಹೂಡಿದ್ದವು ಎಂಬ ಸತ್ಯ ಯುಎಸ್‌ಎಐಡಿ ಎರಡನ್ನೂ ಹೇಗೆ ಒಟ್ಟುಗೂಡಿಸಿ ನಮ್ಮ ನೆರೆಯಲ್ಲಿ ಅವಾಂತರ ಸೃಷ್ಟಿಸಬಲ್ಲಂಥ ಸಾಮರ್ಥ್ಯವನ್ನುಹೊಂದಿರುತ್ತುಎನ್ನುವುದಕ್ಕೆಉದಾಹರಣೆ.


ಶೀತಲ ಸಮರೋತ್ತರ ಕಾಲದುದ್ದಕ್ಕೂ ಯುಎಸ್‌ಎಐಡಿ ಮತ್ತದರ ಅಕ್ರಮ ಸಂತಾನಗಳು ಏಶಿಯಾ, ಯೂರೋಪ್, ಆಫಿಕಾ ಮತ್ತು ಲ್ಯಾಟಿನ್ ಅಮೆರಿಕಾಗಳ ಕನಿಷ್ಠ ನೂರು ದೇಶಗಲ್ಲಿ ರಾಜಕೀಯ ಅಸ್ಥಿರತೆಯನ್ನು ಸೃಷ್ಟಿಸಿವೆ ಅಥವಾ ಅದಕ್ಕಾಗಿ ಹಕ್ಕೆ ಪ್ರಯತ್ನ ನಡೆಸಿವೆ. ಇವುಗಳ ಕಾರ್ಯವ್ಯಾಪ್ತಿ 136 ದೇಶಗಳಿಗೆ ಹರಡಿದೆ. ಕಳೆದ ಒಂದು ಒಂದೂವರೆ ದಶಕದಿಂದೀಚಿಗಿನ ಕಾಲದಲ್ಲಿ ನಮಗೆ ಸಿಗುವ ಉದಾಹರಣೆಗಳಲ್ಲಿ ಕೆಲವನ್ನು ನೋಡೋಣ. ಡೆಮೋಕ್ರಟಿಗರ ಇತ್ತೀಚಿನ ಹುಚ್ಚೆಂದರು’Diversity, Equity, Inclusivity’ ಚಿಕ್ಕದಾಗಿ ‘DEI’ ಎಂದು ಕರೆಯಲಾಗುವ ಇದು ಸಮಾಜದ ಯಾವುದೇ ಸ್ಥಾಪಿತ ನಿಯಮಗಳನ್ನು ಮೌಲ್ಯಗಳನ್ನು ಧಿಕ್ಕರಿಸುತ್ತದೆ. ವಿಕಿಪೀಡಿಯಾ ಅಥವಾ ಇನ್ನಾವುದೇ ಆನ್‌ಲೈನ್ ಮಾಹಿತಿತಾಣದಲ್ಲಿ ನಿಮ್ಮ ಪರಿಚಯದ ಬರಹವಿದ್ದರೆ, ಅದರಲ್ಲಿ ನಿಮ್ಮ ಪತಿ ಅಥವಾ ಪತ್ನಿಯನ್ನು ಸ್ಪಷ್ಟವಾಗಿ ಹಾಗೇ ಗುರುತಿಸದೆ ‘Partner’ ಎಂದು ಹೇಳಲಾಗಿದ್ದರೆ ಅಲ್ಲಿ ಈ ಡಿಇಐ ಎಡವಟ್ಟು ಚಿಂತನೆಯ ಒಂದು ಪುಟ್ಟ ಉದಾಹರಣೆಯಷ್ಟೇ ಈ ಬಗೆಯ ಚಿಂತನೆ ಮತ್ತು ಎಲ್‌ಜಿಬಿಟಿಯ ವೈಭವೀಕರಣ ಬರಾಕ್ ಹುಸೇನ್ ಒಬಾಮರ ಡೆಮೋಕ್ರಾಟಿಕ್ ಅಡಳಿತದಿಂದೀಚೆಗೆ ದೊಡ್ಡದಾಗಿ ಕಾಣಬರುತ್ತಿದೆ. ಇದನ್ನು ಸರ್ಬಿಯಾದ ಕಚೇರಿಗಳು ಮತ್ತು ವ್ಯಾವಹಾರಿಕ ಗುಂಪುಗಳಲ್ಲಿ ಹರಡಲು ಐಎಸ್‌ಎಐಡಿ 1.5 ಬಿಲಿಯನ್ ಡಾಲರ್‌ಗಳನ್ನು ಸುರಿದಿದೆಯಂತೆ! ಬಿಲ್ ಕ್ಲಿಂಟನ್ ನ್ಯಾಟೋ ವಾಯುಸೇನೆಯನ್ನು ಬಳಸಿ ಆ ಪುಟ್ಟ ದೇಶವನ್ನು ಬರ್ಬರ ದಾಳಿಗೊಳಪಡಿಸಿದ್ದು ನೆನಪಿದೆಯೇ? ಹೇಳಿ, ಆ ದೇಶಕ್ಕೆ ಹಣದ ಅಗತ್ಯವಿರುವುದು ಪುನರ್ನಿರ್ಮಣಕ್ಕೋ ಈ ಎಡವಟ್ಟು ವಿಚಾರಗಳ ಪ್ರಚಾರಕ್ಕೋ? ಅಷ್ಟು ದೂರ ಯಾಕೆ ಹೋಗಬೇಕು, ಅಮೆರಿಕಾದಲ್ಲೇ ನಾರ್ತ್ ಕೆರೋಲಿನಾ ವಿಶ್ವವಿದ್ಯಾಲಯದಲ್ಲಿ ಇಲಿಗಳಲ್ಲಿ ತೃತೀಯ ಲಿಂಗಿಗಳನ್ನುಸೃಷ್ಟಿಸುವಬಗೆಗಿನ ‘ಸಂಶೋಧನೆ'(?)ಗಾಗಿ ಯುಎಸ್‌ಎಐಡಿ ಹಣಚೆಲ್ಲಿದೆ!


ಇದನ್ನೇ ಇನ್ನಷ್ಟು ಶೋಧಿಸಿದರೆ ಐರ್ಲೆಂಡ್‌ ನಲ್ಲಿ ಡಿಇಐ ಸಂಗೀತವನ್ನು ಸೃಷ್ಟಿಸಿ ಪ್ರಚಾರ ಮಾಡಲು 70,000 ಡಾಲ‌ಗರ್‌ಳು ವ್ಯಯಿಸಲ್ಪಟ್ಟಿವೆಯಂತೆ. ಲಿಂಗಾಂತರಿಗಳ ಸಂಗೀತ ಕಛೇರಿಗಳನ್ನು ಏರ್ಪಡಿಸಲು ಕೊಲಂಬಿಯಾದಲ್ಲಿ 47 ಮಿಲಿಯನ್ ಡಾಲರ್, ಪೆರುವಿನಲ್ಲಿ ಎಲ್‌ಜಿಬಿಟಿ ಕಾಮಿಕ್ ಪುಸ್ತಕಗಳನ್ನು ರಚಿಸಿ ಹಂಚಲು 32 ಮಿಲಿಯನ್ ಡಾಲರ್‌ಗಳನ್ನು ಯುಎಸ್‌ಎಐಡಿ ಎಸೆದಿದೆಯಂತೆ! ಜತೆಗೆ ಸುರಿನಾಂನ ವಿದ್ಯಾರ್ಥಿಗಳಿಗೆ 25 ಮಿಲಿಯನ್ ಡಾಲರ್ ಮೊತ್ತದ ವಿದ್ಯಾರ್ಥಿ ವೇತನಗಳು! ಅಂದರೆ ಆ ದೇಶದ ಯುವಜನತೆಯನ್ನು ಸರ್ಕಾರದ ವಿರುದ್ದ ದಂಗೆಯೇಳಲು ಪ್ರಚೋದಿಸುವ ಕೆಲಸ ಆರಂಭವಾಗಿದೆ!

Leave a Comment