ಚೀನಾ ದುಸ್ಸಾಹಸ ಭಾರತಕ್ಕೆ ಕಂಟಕ?
ವಿಶ್ವದಲ್ಲೇ ಅತಿ ದೊಡ್ಡ ಅಣೆಕಟ್ಟು ನಿರ್ಮಾಣಕ್ಕೆ ಚೀನಾ ಮುಂದಾಗಿದೆ. ಅದರಿಂದ ಜಲವಿದ್ಯುತ್ ಉತ್ಪಾದನೆ ಮಾಡಿ, ಹೆಚ್ಚು ಸಮೃದ್ಧಿ ಸಾಧಿಸುವುದು ತನ್ನ ಗುರಿ ಎಂದು ಚೀನಾ ಹೇಳಿಕೊಂಡಿದೆ. ಆದರೆ, ಅಲ್ಲಿನ ತಜ್ಞರೂ ಸೇರಿದಂತೆ ಜಾಗತಿಕ ಮಟ್ಟದ ಹಲವರು ಆ ಅಣೆಕಟ್ಟು ಜನರ ಮೇಲೆ ಮತ್ತು ಪ್ರಕೃತಿಯ ಮೇಲೆ ಬೀರಬಹುದಾದ ಪರಿಣಾಮಗಳ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ಭಾರತವೂ ಈ ಬಗ್ಗೆ ಹಿಂದೆಯೇ ಆಕ್ಷೇಪ ವ್ಯಕ್ತಪಡಿಸಿತ್ತು. ಟಿಬೆಟ್, ಬಾಂಗ್ಲಾ ಭಾರತದ ಜನರ ಸುರಕ್ಷತೆ ಮತ್ತು ಪ್ರಕೃತಿ ವಿನಾಶದ ದೃಷ್ಟಿಯಿಂದ ಅಪಾಯಕಾರಿಯಾಗಿದ್ದರೂ ಚೀನಾ ತನ್ನ ನಿಲುವಿನಿಂದ ಹಿಂದೆ ಸರಿಯುತ್ತಿಲ್ಲ
ಬ್ರಹ್ಮಪುತ್ರ ಭಾರತದಲ್ಲಿ ಹರಿಯುವ ಪ್ರಮುಖ ನದಿಗಳಲ್ಲೊಂದು ಟಿಬೆಟ್‌ನಲ್ಲಿ “ಹುಟ್ಟುವ ಇದು, ಭಾರತ ಮತ್ತು ಬಾಂಗ್ಲಾದೇಶದ ಮೂಲಕ ಹರಿದು ಕೊನೆಗೆ ಬರಗಾಳ ಕೊಲ್ಲಿ ಸೇರುತ್ತದೆ. ಬ್ರಹ್ಮಪುತ್ರ ನದಿಯನ್ನು ಟಿಬೆಟ್‌ನಲ್ಲಿ ಯಾರ್ಲಂಗ್ ಸಂಗೊ ಎಂದು ಕರೆಯುತ್ತಾರೆ. ನದಿಯ ಕೆಳಭಾಗದಲ್ಲಿ ವಿಶ್ವದ ಅತ್ಯಂತ ದೊಡ್ಡ ಆಣೆಕಟ್ಟು ನಿರ್ಮಿಸಿ, ಜಲವಿದ್ಯುತ್ ಉತ್ಪಾದನೆ ಮಾಡುವುದು ಚೀನಾ ಸರ್ಕಾರದ ಯೋಜನೆ ಭಾರತದ ಅರುಣಾಚಲ ಪ್ರದೇಶದ ಗಡಿ ಸಮೀಪ ಇದನ್ನು ನಿರ್ಮಿಸಲಾಗುತ್ತಿದೆ ಎಂದ ಹೇಳಲಾಗುತ್ತಿದೆ.
ಸದ್ಯ ಚೀನಾದ ಶ್ರೀ ಗಾರ್ಜಸ್ ಡ್ಯಾಮ್ (ಯಾಂಟೈ ನದಿಗೆ ಕಟ್ಟಲಾಗಿದೆ) ವಿಶ್ವದ ಅತಿ ದೊಡ್ಡ ಆಣೆಕಟ್ಟಾಗಿದ್ದು, ಜಲವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. ಯಾರ್ಲಂಗ್ ಸಾಂಗೊ ನದಿಯ ಕೆಳಭಾಗದಲ್ಲಿ ಕಟ್ಟಲಾಗುವ ಅಣೆಕಟ್ಟಿನಿಂದ ಅದರ ಮೂರು ಪಟ್ಟು ಜಲವಿದ್ಯುತ್ ಉತ್ಪಾದನೆ ಮಾಡುವುದು ಚೀನಾದ ಲೆಕ್ಕಾಚಾರ. ಚೀನಾದ ಮಾಧ್ಯಮಗಳು ಇದು ಸುರಕ್ಷಿತ ಯೋಜನೆಯಾಗಿದ್ದು, ಪರಿಸರ ರಕ್ಷಣೆಯನ್ನು ತನ್ನ ಆದ್ಯತೆಯಾಗಿಸಿಕೊಂಡಿದೆ ಎಂದು ವಿವರಿಸಿವೆ. ಈ ಯೋಜನೆಯು ದೇಶದ ಸಮೃದ್ಧಿಯನ್ನು ಹೆಚ್ಚಿಸಲಿದ್ದು ಬೀಜಿಂಗ್‌ನ ಶೂನ್ಯ ಇಂಗಾಲ ಹೊರಸೂಸುವಿಕೆಯ ಗುರಿಗೆ ತಕ್ಕಂತಿದೆ ಎಂದಿವೆ.
ಇದನ್ನೂ ಓದಿ: ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ಕ್ರೀಡಾಂಗಣಕ್ಕೆ ‘ಗುಲಾಬಿ ರಂಗು’ ಬೂಮ್ರಾ ಬೌಲಿಂಗ್‌ಗೆ ಮೆಕ್‌ಗ್ರಾ ಅಭಿಮಾನಿ
ಚೀನಾದ ಕಮ್ಯುನಿಸ್ಟ್ ಪಕ್ಷವು 2021ರಲ್ಲಿ ಬಿಡುಗಡೆ ಮಾಡಿರುವ ಐದು ವರ್ಷಗಳ ಅರ್ಥಿಕ ಅಭಿವೃದ್ಧಿ ಯೋಜನೆಯಲ್ಲಿಯೂ ಈ ಅಣೆಕಟ್ಟು ಸ್ಥಾನ ಪಡೆದಿದೆ. ಟಿಬೆಟ್‌ನಲ್ಲಿ ಹಲವು ಜಲವಿದ್ಯುತ್ ಯೋಜನೆಗಳನ್ನು ಕೈಗೆತ್ತಿಕೊಳ್ಳುವ ಬಗ್ಗೆ ಚಿಂತಿಸುತ್ತಿದ್ದು, ಅವುಗಳಲ್ಲಿ ಇದು ಒಂದು ಯೋಜನೆ ಎನ್ನಲಾಗುತ್ತಿದೆ.
ಆದರೆ, ವಿಶ್ವದ ಅತಿ ದೊಡ್ಡ ಅಣೆಕಟ್ಟು ನಿರ್ಮಾಣದ ಬಗ್ಗೆ ಚೀನಾದಲ್ಲೇ ಆತಂಕ ವ್ಯಕ್ತವಾಗಿದೆ. ಬ್ರಹ್ಮಪುತ್ರ ನದಿ ಹಿಮಾಲಯದ ಗಿರಿ ಕಂದರಗಳಲ್ಲಿ ಹರಿಯುತ್ತದೆ. ಲಕ್ಷಾಂತರ ಜೀವಪ್ರಭೇದ, ಕೋಟ್ಯಂತರ ಜನರ ಬದುಕಿಗೆ ಆಸರೆಯಾಗಿರುವ ನದಿ, ಇಂಥ ಕಡಿದಾದ, ಆಳದ ಕಣಿವೆ ಇರುವ ಭೂಕಂಪ ಸಂಭವನೀಯ ಪ್ರದೇಶದಲ್ಲಿ ಅಣೆಕಟ್ಟು ನಿರ್ಮಾಣಕ್ಕಾಗಿ ಆಗೆಯುವುದು ಭೂಕುಸಿತದಂಥ ಅವಘಡಗಳಿಗೆ ಕಾರಣವಾಗುತ್ತದೆ ಎಂದು ಚೀನಾದ ವಿಜ್ಞಾನಿಗಳೇ ಕಳವಳ ವ್ಯಕ್ತಪಡಿಸಿದ್ದಾರೆ. ಜತೆಗೆ, ಅಮೆರಿಕದ ಗ್ರಾಂಡ್ ಕ್ಯಾನನ್‌ಗಿಂತಲೂ ಮೂರು ಪಟ್ಟು ಅಳವಾದ ಹಿಮಾಲಯದ ಕಣಿವೆಗಳಲ್ಲಿ ಆಣೆಕಟ್ಟು ನಿರ್ಮಾಣವಾಗಲಿದೆ. ಅದಕ್ಕೆ ಬೇಕಾದ ಆಗಾಧ ಎಂಜಿನಿಯರಿಂಗ್ ಕೌಶಲ ಮತ್ತಿತರ ಆಗತ್ಯಗಳನ್ನು ಪೂರೈಸುವುದು ಹೇಗೆ ಎನ್ನುವ ಪ್ರಶ್ನೆಗಳು ಹುಟ್ಟಿಕೊಂಡಿವೆ.
ಒಂದು ವೇಳೆ, ಭೂಕಂಪವನ್ನು ತಡೆಯುವ ರೀತಿಯಲ್ಲಿ ಆಣೆಕಟ್ಟು ನಿರ್ಮಿಸಿದರೂ ಅದರಿಂದ ಉಂಟಾಗುವ ಗುಡ್ಡಕುಸಿತ, ಮಣ್ಣು-ಕಲ್ಲಿನ ಅನಿಯಂತ್ರಿತ ಹರಿಯುವಿಕೆ ತಡೆಯುವುದು ಸಾಧ್ಯವಾಗುವುದಿಲ್ಲ. ಇದು ಯೋಜನೆಗೆ ಗಂಭೀರ ಸವಾಲೊಡ್ಡಲಿದೆ ಎಂದು ಸಿಚೌನ್ ಪ್ರಾಂತೀಯ ಭೂವಿಜ್ಞಾನ ಬ್ಯೂರೊದ ಎಂಜಿನಿಯರ್ ಒಬ್ಬರು 2022ರಲ್ಲೇ ಎಚ್ಚರಿಕೆ ನೀಡಿದ್ದರು. ಯಾರ್ಲಂಗ್ ಸಂಗೊ ಟುಟ್ನ ಅತಿ ಉದ್ದದ ನದಿ. ಟಿಬೆಟ್‌ನಲ್ಲಿ ಚೀನಾ ಈಗಾಗಲೇ
ಹಲವು ಅಣೆಕಟ್ಟುಗಳನ್ನು ನಿರ್ಮಿಸಿದೆ. 2024ರ ಆರಂಭದಲ್ಲಿ ಅಣೆಕಟ್ಟೆಂದರ ನಿರ್ಮಾಣದಿಂದ ಜನರಿಗೆ ತೊಂದರೆಯಾಗಿದ್ದಲ್ಲದೇ ಹಲವು ಬೌದ್ಧ ವಿಹಾರಗಳು ಮುಳುಗಿಹೋಗಿದ್ದವು. ಅದರ ವಿರುದ್ಧ ಪ್ರತಿಭಟಿಸಿದ್ದ ಟಿಬೆಟ್ ಜನರನ್ನು ಬಂಧಿಸಿದ್ದ ಚೀನಾ ಸರ್ಕಾರ, ಅವರ ವಿರುದ್ಧ ಕಠಿಣ ಕ್ರಮ ಜರುಗಿಸಿತ್ತು. ಶ್ರೀ ಗಾರ್ಜಸ್ ಡ್ಯಾಮ್ ನಿರ್ಮಾಣದಿಂದ ಟಿಬೆಟ್‌ನ 14 ಲಕ್ಷ ಮಂದಿ ನಿರ್ವಸಿತರಾಗಿದ್ದರು. ಈಗ ಚೀನಾ ಕಟ್ಟಲು ಹೊರಟಿರುವ ವಿಶ್ವದ ಅತಿ ದೊಡ್ಡ ಅಣೆಕಟ್ಟಿನ ವ್ಯಾಪ್ತಿಯಲ್ಲಿ ಹೆಚ್ಚು ಜನವಸತಿ ಇರುವ ಪ್ರದೇಶಗಳೂ ಸೇರಿವೆ. ಹೀಗಾಗಿ ಅತಿ ಹೆಚ್ಚು ಮಂದಿ ನಿರ್ವಸಿತರಾಗಬೇಕಾಗುತ್ತದೆ ಎಂದು ‘ಟಿಬೆಟ್ ವಾಚ್’ ಎಂಬ ಲಂಡನ್ನಿನ ಎನ್‌ಜಿಒ ಕಳವಳ ವ್ಯಕ್ತಪಡಿಸಿದೆ.
ಬ್ರಹ್ಮಪುತ್ರದ ನೀರಿನಲ್ಲಿ ಭಾರತ ಮತ್ತು ಬಾಂಗ್ಲಾ ದೇಶಗಳಿಗೂ ಪಾಲು ಇದೆ. ಬ್ರಹ್ಮಪುತ್ರ ಸೇರಿದಂತೆ ಈ ಭಾಗದ ನದಿಗಳ ನೀರಿನ ಮೇಲೆ ನಿಯಂತ್ರಣ ಸಾಧಿಸುವ ಮೂಲಕ ಚೀನಾವು ಭಾರತದ ಆರ್ಥಿಕತೆಯ ಮೇಲೆ ತನ್ನ ಹಿಡಿತ ಬಿಗಿಗೊಳಿಸಲು ಪ್ರಯತ್ನಿಸುತ್ತಿದೆ ಎಂದು ಆಸ್ಟ್ರೇಲಿಯಾ ಮೂಲದ ಚಿಂತಕರ ಚಾವಡಿ “ಲೊವಿ ಇನ್ಸ್‌ಟಿಟ್ಯೂಟ್” 2020ರ ತನ್ನ ವರದಿಯಲ್ಲಿ ಅಭಿಪ್ರಾಯಪಟ್ಟಿತ್ತು.