ಜಿಮ್‌ನಿಂದ ಹೊಮ್ಮಿದ ಭರವಸೆ ಬೆಳಕು

ಜಿಮ್‌ನಿಂದ ಹೊಮ್ಮಿದ ಭರವಸೆ ಬೆಳಕು

ಇನ್ವೆಸ್ಟ್ ಕರ್ನಾಟಕ-2025 ಭಾಗವಾದ ‘ಪ್ಯೂಚರ್ ಆಫ್ ಇನೋವೇಶನ್ ಎಕ್ಸ್‌ಪೋ’ಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಮತ್ತು ಬಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಬುಧವಾರ ಚಾಲನೆ ನೀಡಿದರು.

ಕರ್ನಾಟಕ ಪೆವಿಲಿಯನ್, ಟೊಯೋಟಾ, ಎಂಬೆಸಿ ಗ್ರೂಪ್, ರಾಜ್ಯ ಪ್ರವಾಸೋದ್ಯಮ, ಡೋನ್ ತಂತ್ರಜ್ಞಾನದ ವೈಶಿಷ್ಟ್ಯಪೂರ್ಣ ಹಂತಗಳನ್ನು ವೀಕ್ಷಿಸಿದರಲ್ಲದೆ, ಕೃಷಿ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆಯ ಆಶಾಕಿರಣವಾಗಿರುವ ಆಗಿ ಟೆಕ್ ಮತ್ತು ವೈದ್ಯಕೀಯ ಕ್ಷೇತ್ರದ ರೋಗಪತ್ತೆ ಮತ್ತು ಚಿಕಿತ್ಸೆಗಳಲ್ಲಿನ ಆರೋಗ್ಯಸೇವೆ ತಂತ್ರಜ್ಞಾನಗಳ ಬಗ್ಗೆಯೂ ಮಾಹಿತಿ ಪಡೆದರು.

ನಂತರ ಮಾತನಾಡಿದ ಸಚಿವ ಎಂ.ಬಿ.ಪಾಟೀಲ, ”ಜಾಗತಿಕ ಮಟ್ಟದ ಕಂಪನಿಗಳು ಮತ್ತು ಪ್ರವರ್ಧಮಾನಕ್ಕೆ ಬರುತ್ತಿರುವ ನವೋದ್ಯಮಗಳೂ ಸೇರಿದಂತೆ 40ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸಿದ್ದು, ಡೋನ್, ಬಾಹ್ಯಾಕಾಶ, ಕೃಷಿ, ಆರೋಗ್ಯ, ಉತ್ಪಾದನಾ ವಲಯ, ವೈಮಾಂತರಿಕ್ಷ, ರಕ್ಷಣೆ ಮುಂತಾದ ಕ್ಷೇತ್ರಗಳಲ್ಲಿನ ಆಧುನಿಕ ತಂತ್ರಜ್ಞಾನ ಧಾರೆಗಳನ್ನು ಕಾಣಬಹುದಾಗಿದೆ,” ಎಂದರು.


”ಮರುಬಳಕೆ ಇಂಧನ, ಸೆಮಿಕಂಡಕ್ಟರ್, ವಿದ್ಯುತ್ ಚಾಲಿತ ವಾಹನಗಳು ಮತ್ತು ಸುಸ್ಥಿರ ಉತ್ಪಾದನೆಯಲ್ಲಿ ಹೆಸರು ಮಾಡಿರುವ ಕಂಪನಿಗಳು ಪಾಲ್ಗೊಂಡಿವೆ. ರಾಜ್ಯದ ಸಾಧನೆ ಬಿಂಬಿಸುವ ಪ್ರತ್ಯೇಕ ‘ಕರ್ನಾಟಕ ಪೆವಿಲಿಯನ್’ನಲ್ಲಿ ಕ್ಲಿನ್ಸಿಟಿ, ಫೈಯಿಂಗ್ ವೆಡ್ಜ್, ಬೆಲ್ಲಾ ಟ್ರಿಕ್ಸ್, ಸ್ಟೀಸರ್ವ್, ಫಕ್ಸ್ ಆಟೋ ಮುಂತಾದ ಉದ್ಯಮಗಳಿವೆ. ಜಾಗತಿಕ ಮಟ್ಟದ ಜಿ.ಇ ಹೆಲ್ತ್ ಕೇರ್, ಹೀರೋ ಪ್ಯೂಚರ್ ಎನರ್ಜೀಸ್, ರಿವರ್ ಮೊಬಿಲಿಟಿ, ಸರಳಾ ಏವಿಯೇಶನ್. ಗೆಲಾಕ್ಸಿ ಸ್ಪೇಸ್, ಲ್ಯಾಮ್ ರೀಸರ್ಚ್ ಪ್ರಮುಖ ಕಂಪನಿಗಳಾಗಿವೆ,” ಎಂದು ತಿಳಿಸಿದರು.
ಹತ್ತು ಹಲವು ಅವಕಾಶ

ಸಮಾವೇಶದಲ್ಲಿ ಹಲವು ಗೋಷ್ಠಿಗಳನ್ನು ಆಯೋಜಿಸ ಲಾಗಿದ್ದು, ‘ಸೆಮಿಕಂಡಕ್ಟರ್ ಕ್ರಾಂತಿಯಲ್ಲಿ ಭಾರತದ ನಾಯಕತ್ವದ ಸರದಿ’ ವಿಷಯ ಕುರಿತು ಮಾತನಾಡಿದ ಕ್ಷೇತ್ರದ ದಿಗ್ಗಜ ಉದ್ಯಮಪತಿಗಳು, “ಸೆಮಿಕಂಡಕ್ಟರ್ ಕ್ಷೇತ್ರ ಸಹಿತ ಎಲ್ಲಾ ಕೈಗಾರಿಕೆಗಳಿಗೆ ಬಂಡವಾಳ ಆಕರ್ಷಿಸುವ ಜತೆಗೆ ಪ್ರತಿಭೆ ಮತ್ತು ಸಾಮರ್ಥ್ಯ ಎರಡನ್ನೂ ಸೃಷ್ಟಿಸಲು ಸಾಧ್ಯವಾದರೆ ಹೂಡಿಕೆ ತಾನಾಗಿಯೇ ಹರಿದುಬರುತ್ತದೆ,” ಎಂದರು.

“ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ಮುಂದಿನ 10 ವರ್ಷ ಭಾರತದ್ದಾಗಿದೆ. ಕ್ಷೇತ್ರದ ಈಗಿನ 40 ಶತಕೋಟಿ ಡಾಲರ್ ವಹಿವಾಟು 400 ಶತಕೋಟಿ ಡಾಲರ್ ಮೀರಲಿದೆ. ಆದರೆ, ಶಿಕ್ಷಣ ರಂಗದಲ್ಲಿ ಗುಣಮಟ್ಟದ ಬೋಧಕರು, ಸಂಶೋಧನೆ ಮತ್ತು ಪ್ರಾಯೋಗಿಕ ಕಲಿಕೆ ಕಡೆಗೂ ಆದ್ಯ ಗಮನ ನೀಡಬೇಕಿದೆ. ಶಿಕ್ಷಣ ಸಂಸ್ಥೆಗಳಲ್ಲಿ ಸರಕಾರ ರಾಷ್ಟ್ರೀಯ ಸಮಸ್ಯೆಗಳಿಗೆ ದಕ್ಷ ಪರಿಹಾರಕಂಡುಹಿಡಿಯುವ ಸಂಶೋಧನಾ ಚಟುವಟಿಕೆಗಳನ್ನು ಪ್ರೋತ್ಸಾಹಿಸುವ ಅಗತ್ಯವಿದೆ. ಭಾರತವನ್ನು ಕೆಲವೇ ವರ್ಷಗಳಲ್ಲಿ 5 ಲಕ್ಷ ಕೋಟಿ ಡಾಲರ ಆರ್ಥಿಕತೆಯಾಗಿ ಬೆಳೆಸುವ ಗುರಿಯಿದೆ. ಇದರಲ್ಲಿ 3 ಲಕ್ಷ ಕೋಟಿ ಡಾಲರ್ ಇಎಸ್‌ಡಿಎಂ ಕೊಡುಗೆಯೇ ಇರಲಿದೆ. ಅವಕಾಶಗಳು ಕೇವಲ ಭಾರತಕ್ಕೆ ಮಾತ್ರ ಇರುವುದಿಲ್ಲ, ಎಲ್ಲ ದೇಶಗಳಿಗೂ ಲಭ್ಯವಿರುತ್ತವೆ. ಅವುಗಳ ಲಾಭ ಪಡೆಯಲು ಗುಣಮಟ್ಟದ ಶಿಕ್ಷಣ ವ್ಯವಸ್ಥೆ ಕಡೆಗೆ ಗಮನ ಕೊಡಬೇಕಿದೆ.

ಇದನ್ನೂ ಓದಿ:ಭರವಸೆ ಮೂಡಿಸಿದ ಜಿಮ್-2025

ಸೆಮಿಕಂಡಕ್ಟ‌ರ್ ಕ್ಷೇತ್ರದ ಚಿಪ್ ವಿನ್ಯಾಸದಲ್ಲಿ ಭಾರತದ ಪಾಲು ಶೇ.25ರಷ್ಟಿದ್ದು, ಉತ್ಪಾದನೆಯಲ್ಲಿ ಹಿಂದಿದ್ದೇವೆ. ಮುಂದಿನ 5-10 ವರ್ಷಗಳಲ್ಲಿ ಕೃತಕ ಬುದ್ದಿಮತ್ತೆ ಎಲ್ಲ ಕ್ಷೇತ್ರಗಳನ್ನೂ ಅವರಿಸಲಿದೆ. ಆಗ 15-20 ಮಿಲಿಯನ್ ಡಾಲರ್ ಹೂಡಿಕೆಯಲ್ಲಿ ‘ಪರ್ಸನಲ್ ಡಿಸೈನ್’ ಪರಿಣತಿ ಮುನ್ನೆಲೆಗೆ ಬರಲಿದೆ. ಜಗತ್ತಿನ ದೊಡ್ಡ ದೊಡ್ಡ ಆರ್ಥಿಕತೆಗಳೆಲ್ಲವೂ ಸೆಮಿಕಂಡಕ್ಟರ್ ಕ್ಷೇತ್ರವನ್ನೇ ನೆಚ್ಚಿಕೊಂಡಿವೆ. ತೈವಾನ್ ಮತ್ತು ಜಪಾನಿನಲ್ಲಿ ಸೆಮಿಕಂಡಕ್ಟರ್ ಚಿಪ್ ಉತ್ಪಾದನೆ ಸಮೃದ್ಧವಾಗಿದೆ.ನಮ್ಮಲ್ಲಿ ಸೆಮಿಕಂಡಕ್ಟರ್ ವಲಯಕ್ಕೆ ಇಂಬು ಕೊಡುವಂತಹ ಕಾರ್ಯ ಪರಿಸರ ಪೂರ್ಣ ಪ್ರಮಾಣದಲ್ಲಿ ಸೃಷ್ಟಿಯಾಗಿಲ್ಲ, 20 ವರ್ಷಗಳ ಹಿಂದೆ ಎನ್‌ಎಫ್‌ಸಿ (ನಿಯರ್ ಫೀಲ್ಡ್ ಕಮ್ಯುನಿಕೇಶನ್) ತಂತ್ರಜ್ಞಾನ ಬಂದಾಗ ಬಳಕೆದಾರರೇ ಇರಲಿಲ್ಲ. 10 ಕಾಯಬೇಕಾಯಿತು. ವರ್ಷ ಈಗ ಬೆಂಗಳೂರಿನಲ್ಲೇ ನ್ಯಾನೊ ಮೀಟರ್ ಲೆಕ್ಕದಲ್ಲಿಚಿಪ್ ವಿನ್ಯಾಸಗಳು ಸಿದ್ಧವಾಗುತ್ತಿದ್ದು, ಇದೇ ತಂತ್ರಜ್ಞಾನದ ಶಕ್ತಿಯಾಗಿದೆ. ಕರ್ನಾಟಕದ ವಿಶ್ವವಿದ್ಯಾಲಯಗಳು, ಕಾಲೇಜು ಮತ್ತು ನವೋದ್ಯಮಗಳಲ್ಲಿ ಸೆಮಿಕಂಡಕ್ಟರ್ ಕ್ಷೇತ್ರದ ಬೆಳವಣಿಗೆಗೆ ಅಪಾರ ಅವಕಾಶಗಳಿವೆ,” ಎಂದು ಸಚಿವ ಎಂ.ಬಿ.ಪಾಟೀಲ ತಿಳಿಸಿದರು.

ಟೆಕ್ಸಾಸ್ ಇನ್‌ಸ್ಟುಮೆಂಟ್ಸ್ ಸಿಇಒ ಸಂತೋಷ ಕುಮಾರ್, ಎನ್ಎಎಕ್ಸ್‌ಪಿ ಸೆಮಿಕಂಡಕ್ಟರ್ಸ್ ಉಪಾಧ್ಯಕ್ಷ ಹಿತೇಂದ್ರ ಗಾರ್ಗ್ ಮತ್ತು ಗ್ಲೋಬಲ್ ಫ್ಯಾಬ್ ಎಂಜಿನಿಯರಿಂಗ್ ಸೊಲ್ಯೂಷನ್ಸ್ ವ್ಯವಸ್ಥಾಪಕ ನಿರ್ದೇಶಕ ಜಿತೇಂದ್ರ ಛಡ್ಡಾ ಮತ್ತಿತರರು ಗೋಷ್ಠಿಯಲ್ಲಿ ಪಾಲ್ಗೊಂಡರು.

Leave a Comment