ಜೂನ್ ತಿಂಗಳ ಯುಜಿಸಿ ನೆಟ್ ಪರೀಕ್ಷೆಗೆ ಪರಿಷ್ಕೃತ ವೇಳಾಪಟ್ಟಿ ಪ್ರಕಟ 2024

ಜೂನ್ ತಿಂಗಳ ಯುಜಿಸಿ ಎನ್ಇಟಿ ಪರೀಕ್ಷೆಗೆ ಪರಿಷ್ಕೃತ ವೇಳಾಪಟ್ಟಿ ಪ್ರಕಟ:-

ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯು ಭಾರತೀಯ ಪ್ರಜೆಗಳಿಗೆ ಭಾರತದ ವಿಶ್ವ ವಿದ್ಯಾಲಯಗಳು ಮತ್ತು ಕಾಲೇಜುಗಳಲ್ಲಿ ಜೂನಿಯರ್ ರಿಸರ್ಚ್ ಫೆಲೋಶಿಪ್ ಮತ್ತು ಅಸಿಸ್ಟಂಟ್ ಪ್ರೊಫೆಸರ್ ಹುದ್ದೆಗೆ ನೇಮಕ ಮಾಡಲು, ಪಿ ಎಚ್ ಡಿ ಪ್ರವೇಶಕ್ಕೆ ಒಂದು ಅರ್ಹತೆಯಾಗಿರುವ ಅರ್ಹತಾ ಪರೀಕ್ಷೆಯಾದ ನ್ಯಾಷನಲ್ ಎಲಿಜಿಬಿಲಿಟಿ ಟೆಸ್ಟ್ ಅನ್ನು ಇದೇ ಜೂನ್ ತಿಂಗಳಲ್ಲಿ ನಡೆಸಲು ಈಗಾಗಲೇ ವೇಳಾಪಟ್ಟಿ ಬಿಡುಗಡೆ ಮಾಡಿತ್ತು. ಆದರೆ ಹಲವು ಅಭ್ಯರ್ಥಿಗಳ ಮನವಿ ಮೇರೆಗೆ ಈಗ ಹೊಸ ವೇಳಾಪಟ್ಟಿ ಬಿಡುಗಡೆ ಮಾಡಲಾಗಿದೆ. ಅಲ್ಲದೇ ಪರಿಷ್ಕೃತ ವೇಳಾಪಟ್ಟಿಗೆ ಕಾರಣವನ್ನು ತಿಳಿಸಿದೆ.

ಈಗಾಗಲೇ ಕೇಂದ್ರ ಲೋಕಸೇವಾ ಆಯೋಗವು ಸಿವಿಲ್ ಸರ್ವೀಸ್ ಎಕ್ಸಾಮ್ ಅನ್ನು ಜೂನ್ 16 ರಂದೇ ನಿಗದಿ ಮಾಡಿದೆ. ಈ ಹಿನ್ನೆಲೆಯಲ್ಲಿ ಎರಡು ಪರೀಕ್ಷೆಗಳನ್ನು ತೆಗೆದುಕೊಂಡಿರುವ ಅಭ್ಯರ್ಥಿಗಳು ಎನ್ಇಟಿ ಗೆ ಪರೀಕ್ಷೆ ದಿನಾಂಕ ಬದಲಾವಣೆ ಕೋರಿ ಮನವಿ ಮಾಡಿದ್ದರು. ಆದ್ದರಿಂದ ಯುಜಿಸಿ ಎನ್ಇಟಿ ಪರೀಕ್ಷೆಗೆ ಹೊಸ ವೇಳಾಪಟ್ಟಿ ಬಿಡುಗಡೆ ಮಾಡಲಾಗಿದೆ.

ಪರೀಕ್ಷೆ ಹೆಸರು : ಯುಜಿಸಿ ಎನ್ಇಟಿ ಜೂನ್ 2024
ಹಿಂದೆ ನಿಗದಿಯಾಗಿದ್ದ ಪರೀಕ್ಷೆ ದಿನಾಂಕ : 16-06-2024
ಪರಿಷ್ಕೃತ ದಿನಾಂಕ : 18-06-2024
ಯುಜಿಸಿ ಎನ್ಇಟಿ ಜೂನ್ 2024 ಫಲಿತಾಂಶ ದಿನಾಂಕ : ಜುಲೈ 2024

ಇದನ್ನೂ ಓದಿ:- ಮತದಾರರ ಗುರುತಿನ ಚೀಟಿ (ವೋಟರ್ ಐಡಿ)ಗೆ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು 2024

ಯುಜಿಸಿ ಎನ್ಇಟಿ ಜೂನ್ 2024 ಅರ್ಜಿ ಪ್ರಕ್ರಿಯೆ ದಿನಾಂಕಗಳು

ಅರ್ಜಿ ಸ್ವೀಕಾರ ಆರಂಭ ದಿನಾಂಕ : ಏಪ್ರಿಲ್ 20, 2024
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : ಮೇ 10, 2024 ರ 11:50 ವರೆಗೆ.
ಆನ್ಲೈನ್ ಮೂಲಕ ಪರೀಕ್ಷೆ ಶುಲ್ಕ ಪಾವತಿಗೆ ಕೊನೆ ದಿನಾಂಕ: ಮೇ 11-12, 2024 ರ ನಡುವೆ.
ಅರ್ಜಿಯಲ್ಲಿನ ಮಾಹಿತಿಗಳ ತಿದ್ದುಪಡಿ ದಿನಾಂಕ : ಮೇ 13-15, 2024

ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿಯು ಯುಜಿಸಿ -ಎನ್ಇಟಿ ಪರೀಕ್ಷೆಯನ್ನು ಒಟ್ಟು 83 ವಿಷಯಗಳಿಗೆ ಒಎಂಆರ್  ಮಾದರಿಯಲ್ಲಿ ನಡೆಸಲಿದೆ.

18-06-2024 ರಂದು ನಡೆಯಲಿರುವ ಯುಜಿಸಿ ಎನ್ಇಟಿ ಪರೀಕ್ಷೆಗೆ 10 ದಿನಗಳ ಮುಂಚಿತವಾಗಿ ಅಭ್ಯರ್ಥಿಗಳ ಮಾಹಿತಿಗಾಗಿ ಪರೀಕ್ಷೆ ಕೇಂಧ್ರದ ಸಿಟಿಯ ಮಾಹಿತಿಯನ್ನು ಬಿಡುಗಡೆ ಮಾಡಲಾಗುವುದು, ugcnet.nta.ac.in / www.nta.ac.in ಗೆ ಭೇಟಿ ನೀಡಿ ಚೆಕ್ ಮಾಡಬಹುದು ಎಂದು ಎನ್ಇಟಿ ಹೇಳಿದೆ.

ಆನ್ಲೈನ್ ಅಪ್ಲಿಕೇಶನ್ ಸಲ್ಲಿಸುವ ವಿಧಾನ:

ವೆಬ್ಸೈಟ್ ವಿಳಾಸ ಕ್ಲಿಕ್ ಮಾಡಿ ಕ್ಕೆ ಭೇಟಿ ನೀಡಿ.

– ‘Latest News >> UGC NET June 2024 Registration / Login’ ಎಂದಿರುವಲ್ಲಿ ಕ್ಲಿಕ್ ಮಾಡಿ.
– ಓಪನ್ ಆದ ವೆಬ್ಪೇಜ್ನಲ್ಲಿ ‘New Candidate Register Here’ ಎಂದಿರುವಲ್ಲಿ ಕ್ಲಿಕ್ ಮಾಡಿ.
– ಕೇಳಲಾದ ಮಾಹಿತಿಗಳನ್ನು ನೀಡಿ ರಿಜಿಸ್ಟ್ರೇಷನ್ ಪಡೆಯಿರಿ.
– ನಂತರ ಹಿಂದಿನ ವೆಬ್ಪುಟಕ್ಕೆ ಹಿಂದಿರುಗಿ.
– ಅಪ್ಲಿಕೇಶನ್ ನಂಬರ್, ಪಾಸ್ವರ್ಡ್, ಸೆಕ್ಯೂರಿಟಿ ಪಿನ್ ನೀಡಿ ಲಾಗಿನ್ ಆಗಿ.
– ಈ ಹಂತದಲ್ಲಿ ಸಂಪೂರ್ಣ ಮಾಹಿತಿ ನೀಡಿ ಅರ್ಜಿ ಸಲ್ಲಿಸಿ.
– ಸರಿಯಾದ ಮಾಹಿತಿಗಳನ್ನು ನೀಡಿ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಮುಂದಿನ ರೆಫರೆನ್ಸ್ಗಾಗಿ ಅರ್ಜಿ ಪ್ರಿಂಟ್ ತೆಗೆದುಕೊಳ್ಳಿ.

ಅರ್ಜಿ ಶುಲ್ಕ ವಿವರ
ಸಾಮಾನ್ಯ ವರ್ಗ/ ಮೀಸಲಾತಿಗೆ ಒಳಪಡದ ಅಭ್ಯರ್ಥಿಗಳಿಗೆ ರೂ.1150.
EWS ಮತ್ತು ಹಿಂದುಳಿದ ವರ್ಗಗಳ (NCL) ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ರೂ.600
ಎಸ್ಸಿ, ಎಸ್ಟಿ, ಪಿಡಬ್ಲ್ಯೂಡಿ, ಟ್ರಾನ್ಸ್ಜೆಂಡರ್ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ರೂ.325.

Leave a Comment