ಟ್ರಂಪ್ ಕ್ಷಣ ಚಿತ್ತ, ಕ್ಷಣ ಪಿತ್ತ
ಜಗತ್ತಿಗೆ ವ್ಯಾಪಾರ ಯುದ್ಧ ಬೇಕಿಲ್ಲ ತೆರಿಗೆ ಅಸ್ತ್ರವನ್ನು ಮುಂದಿಟ್ಟುಕೊಂಡು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜಗತ್ತಿನಲ್ಲೊಂದು ವ್ಯಾಪಾರ ಯುದ್ಧವನ್ನೇ ಆರಂಭಿಸಿರುವುದು ಸಂಕಷ್ಟ ಚರ್ಚೆ ಹುಟ್ಟು ಹಾಕಿದೆ. ಅವರ ಈ ಹೆಜ್ಜೆಯಲ್ಲಿ ಸಾಕಷ್ಟು ಗೊಂದಲಗಳೂ, ಆವೈಜ್ಞಾನಿಕ ನಿಲುವುಗಳು ಗೂಡು ಕಟ್ಟಿದಂತಿವೆ. ತನ್ನ ನೆರೆಯ ಕೆನ್ನಡಾ, ಮೆಕ್ಸಿಕೋವನ್ನು ಶಿಕ್ಷಿಸುವ ದೃಷ್ಟಿಯಿಂದ ಶೇ.25ರಷ್ಟು ಬೃಹತ್ ಸುಂಕವನ್ನು ವಿಧಿಸುವುದಾಗಿ ಭಾರಿ ಜೋರು ದನಿಯಲ್ಲಿ ಘೋಷಿಸಿದ್ದರು. ಫೆಬ್ರವರಿ ಒಂದರಿಂದಲೇ ಅದು ಜಾರಿಗೊಳಿಸಬೇಕಿತ್ತು ಕೂಡ. ಆದರೆ ಕೇವಲ 24 ಗಂಟೆಯಲ್ಲಿ ಈ ನಿಷೇಧದಿಂದ ಹಿಂದೆ ಸರಿದಿದ್ದಾರೆ. ಆದರೆ ಚೀನಾದ ಮೇಲೆ ಶೇ. 10ರಷ್ಟು ಅಮದು ಸುಂಕವನ್ನು ವಿಧಿಸುವ ಘೋಷಣೆಯಿಂದ ಟ್ರಂಪ್ ಹಿಂದೆ ಸರಿದಿಲ್ಲ ಎನ್ನುವುದು ಗಮನಾರ್ಹ.
ಭಾರತ ತನಗೆ ಹೆಚ್ಚು ತೆರಿಗೆ ವಿಧಿಸುತಿದೆ ಎಲ್ಲೂ ಡ್ರಮ್ ಆರಂಭದಲ್ಲಿ ಗುಡುಗಿದರೂ, ಕಡೆ ಕ್ಷಣದಲ್ಲಿ ಈ ತೆರಿಗೆ ಸಮರದಿಂದ ಅವರ ಭಾರತವನ್ನು ಕೈ ಬಿಟ್ಟಿರುವುದು ಹೊಸ ದಿಲ್ಲಿಗೆ ತಾತ್ಕಾಲಿಕ ಸಮಾಧಾನವಷ್ಟೇ. ರಮ್ ಉರುಳಿಸುತ್ತಿರುವ ದಾಳಗಳಿಗೆ ಭಾರತದ ದಿಕ್ಕಿನಿಂದ ಕೊಂಚ ಹಿನ್ನಡೆ ಕಂಡು ಬಂದರು ಅಮೆರಿಕ ಕೈಗೆತ್ತಿಕೊಳ್ಳುವುದು ತೆರಿಗೆಯ ಏಟು ಎಂಬುದನ್ನು ಕೇಂದ್ರ ಸರ್ಕಾರ ಮರೆಯಬಾರದು. ಭಾರತದಿಂದ ಪೂರೈಕೆ ಆಗುವ ಉತ್ಪನ್ನಗಳ ಮೇಲೆ ತೆರಿಗೆ ತಿಳಿಸುವಂತೆ ಅಮೆರಿಕ ನಿರಂತರ ಒತ್ತಡ ಹೇರುತ್ತಿದೆ. ಆದರೆ ಭಾರತ ಕೇವಲ ಅಮೇರಿಕಕ್ಕೆ ಅಮದು ಸುಂಕದಲ್ಲಿ ರಿಯಾಯಿತಿ ನೀಡಿದ್ದಾರೆ ಅದು ವಿಶ್ವ ವ್ಯಾಪಾರ ಸಂಸ್ಥೆ (ಡಬ್ಲ್ಯೂ ಟಿಒ) ನಿಯಮಗಳಿಗೆ ವಿರುದ್ಧವಾಗುತ್ತದೆ. ಡಬ್ಲ್ಯೂ ಟಿ ಒ ನಿಯಮಗಳು ಎಲ್ಲಾ ದೇಶಗಳಿಗೂ ಸಮಾನ ಸುಂಕು ವಿಧಿಸಬೇಕು ಎಂದೇ ಹೇಳುತ್ತದೆ. ಆದರೆ ಭಾರತವು ರಫ್ತು ಸುಂಕದಲ್ಲಿ ರಿಯಾಯಿತಿ ನೀಡಿದ್ದಾರೆ, ಕೇಂದ್ರ ಸರ್ಕಾರದ ಆತ್ಮ ನಿರ್ಭರ ಭಾರತದ ಗುರಿಯೇ ದುರ್ಬಲವಾಗುತ್ತದೆ.
ಇದನ್ನೂ ಓದಿ: ನೌಕರ ಸ್ನೇಹ ನೌಕರ ಸ್ನೇಹಿ ಎಂದೇ ಹೆಸರಾಗಿದ್ದವರು ಡಾಕ್ಟರ್.
ಅಮೇರಿಕವು ಟ್ರಂಪ ಆಡಳಿತದಲ್ಲಿ ಡಬ್ಲ್ಯೂ ಟಿ ಒ ಒಪ್ಪಂದಗಳನ್ನು ಮನಸೋ ಇಚ್ಚೆ ಉಲ್ಲಂಘಿಸುತ್ತಿದೆ. ಒಂದೊಂದು ರಾಷ್ಟ್ರಕ್ಕೆ ಒಂದೊಂದು ತೆರಿಗೆ ಎನ್ನುವುದು ಅಸಂಬದ್ಧವಲ್ಲದೆ ಮತ್ತೇನು? ಅಮೆರಿಕ ಫಸ್ಟ್ ನೀತಿಯ ಪರಿಣಾಮವಾಗಿ ಯಾವುದೇ ಒಂದು ರಾಷ್ಟ್ರದ ಮೇಲೆ ತೆರಿಗೆ ಬರೆ ಎಳೆದರೂ, ಕಾಲಕ್ರಮೇಣ ಅದರಿಂದ ಏಳುವ ತರಂಗಗಳು ಜಾಗತಿಕ ಆರ್ಥಿಕತೆಯ ಮೇಲೆ ಮಕರ ಆತ್ಮಕ ಪರಿಣಾಮ ಬೀರುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಈ ತರಂಗಗಳನ್ನು ಚೀನವೇ ತೀರ್ವಗೊಳಿಸುವುದರಲ್ಲಿ ಯಾವ ಅನುಮಾನವೂ ಇಲ್ಲ. ಈಗಾಗಲೇ ಚೀನಾವು ಅಮೆರಿಕದ ಕಲ್ಲಿದ್ದಲು, ದ್ರವಿಕೃತ ನೈಸರ್ಗಿಕ ಅನಿಲದ ಮೇಲೆ ಸುಂಕ ವಿಧಿಸಲು ಆರಂಭಿಸಿದೆ. ನಿಧಾನಕ್ಕೆ ಚೀನದ ಮಿತ್ರ ರಾಷ್ಟ್ರಗಳು ಇದೆ ಹೆಜ್ಜೆ ಅನುಸರಿಸಲು ಶುರು ಮಾಡಿದ್ದಾರೆ, ಅಮೆರಿಕ ಮತ್ತಷ್ಟು ಕೆರಳಲೂಬಹುದು. ತತ್ಪರಿಣಾಮ, ಅಮೇರಿಕಾ ಚೀನಾದ ತೆರಿಗೆ ಯುದ್ಧದಿಂದ ಬಡವಾಗುವುದು ಏಷ್ಯಾದ, ಆಫ್ರಿಕಾದ ಅಭಿವೃದ್ಧಿಶೀಲ ಹಾಗೂ ಬಡ ರಾಷ್ಟ್ರಗಳು ಮಾತ್ರ.
ರಾಷ್ಟ್ರ ರಾಷ್ಟ್ರಗಳ ನಡುವಿನ ವಾಣಿಜ್ಯಕ ಸಂಬಂಧ ಹೇಗಿರಬೇಕೆನ್ನುವ ಡಬ್ಲ್ಯೂ ಟಿ ಒ ಸೂತ್ರಕ್ಕೆ ವಿಶ್ವ ತಲೇ ಬಾಗಿದೆ . ಇಲ್ಲಿಯ ತನಕ ಹೇಳಿಕೊಳ್ಳುವಂಥ ಅಂತ ಗೊಂದಲಗಳು ಕಂಡುಬಂದಿಲ್ಲ. ಎಲ್ಲರಿಗೂ ಬುದ್ಧಿ ಹೇಳುವ ಅಮೆರಿಕವೇ ಡಬ್ಲ್ಯೂ ಟಿ ಒ ಆಶಯಗಳನ್ನು ಗಳಿಗೆ ತೋರಿಸುತ್ತಾ ಸಾಗಿದರೆ, ಬೆಲೆಯೇ ಎದ್ದು ಹೊಲ ಮೇಯ್ದಂತೆ ಆಗುತ್ತದಷ್ಟೇ. ಅಮೆರಿಕ ಚೀನಾ ನಡುವೆ ಭೌಗೋಳಿಕ ರಾಜ್ಯ ತಂತ್ರಕ ವೈರತ್ವಗಳು ತರಕಕ್ಕೇರಿ ಈಗಾಗಲೇ ಸಾಕಷ್ಟು ಬಿಸಿ ಸೃಷ್ಟಿಸಿದೆ. ಇನ್ನು ವ್ಯವಹಾರಿಕವಾಗಿ ಈ ವೈರತ್ವ ಸೋಂಕಿಗಾಗಿ ಪರಿಣಮಿಸಿದ್ದರೆ ಅದಕ್ಕೆ ಚಿಕಿತ್ಸೆ ದುಬಾರಿಯೇ ಆಗಬಹುದು.
ಅಮೆರಿಕ ಪ್ರತೀ ಹೆಜ್ಜೆಕ್ಷಣ ಚಿತ್ತ ಕ್ಷಣ ಪಿತ್ತ ಎನ್ನುವಂತಾಗಬಾರದು. ಟ್ರಂಪ್ ತನ್ನ ನೀತಿಗಳ ಬಗ್ಗೆ ಸ್ಪಷ್ಟತೆ ಹೊಂದುವುದು ಅತಿ ಮುಖ್ಯ. ಆರ್ಥಿಕ ಹಿಂಜರಿತದ ಈ ಕಾಲದಲ್ಲಿ ಯಾರಿಗೋ ಬುದ್ಧಿ ಕಲಿಸಲು ಹೋಗಿ ವ್ಯಾಪಾರ ಯುದ್ಧ ಎಬ್ಬಿಸುವುದು ಅಷ್ಟು ಸಮಂಜಸವಲ್ಲ.