ದುಡುಕಿನ ನಿರ್ಧಾರ ಕೆಡುಕಿಗೆ ಮಹಾದ್ವಾರ
ವಿವೇಚನೆ ಇಲ್ಲದೇ ದುಡುಕಿನಲ್ಲಿ ಕೈಗೊಂಡ ನಿರ್ಧಾರ ಜೀವನ ಪರ್ಯಂತ ಕೊರಗುವಂತೆ ಮಾಡುತ್ತದೆ ಏಕಲವ್ಯನು ತನ್ನಷ್ಟಕ್ಕೆ ತಾನೇ ಕಲಿತರೂ ಗುರುವಿನ ಮಾತಿಗೆ ಕಟ್ಟುಬಿದ್ದು ಬೆರಳನ್ನು ಕಟ್ ಈ ಮಾಡಿಕೊಳ್ಳಬೇಕಾಯಿತು. ಇತ್ತೀಚೆಗೆ ಮತ್ತೊಬ್ಬ ಕಂಪ್ಯೂಟರನ್ನು ಕಲಿಯದೇ ಕರದ ಬೆರಳುಗಳನ್ನು ಕಳೆದುಕೊಳ್ಳಬೇಕಾಯಿತು. ಅವನು ಕಲಿತು ಕೆಟ್ಟ ಇವನು ಕಲಿಯಲಾಗದೇ ಕೈಕೊಟ್ಟ !
ಅರ್ಜುನನ್ನು ವಿಶ್ವದ ಏಕಮೇವ ಶ್ರೇಷ್ಠ ಧನುರ್ದಾರಿಯನ್ನಾಗಿ ಮಾಡುವ ಮಹದಾಸೆ ಗುರು ದ್ರೋಣಾಚಾರ್ಯರದು. ತಮ್ಮ ಆಕಾಂಕ್ಷೆಗೆ ಏಕಲವ್ಯನು ಎಲ್ಲಿ ಅಡ್ಡಿಯಾಗಿಬಿಡುತ್ತಾನೋ ಎನ್ನುವ ಆತಂಕ ಅವರನ್ನು ಕಾಡಿತ್ತು. ಅವರ ಇನಿತು ಸಹಾಯವಿಲ್ಲದೇ, ಮಾರ್ಗದರ್ಶನವಿಲ್ಲದೇ ಕೇವಲ ಸಂಕಲ್ಪದಿಂದ ಶಬ್ದವೇದಿ ಧನುರ್ವಿದ್ಯೆಯನ್ನು ಕಲಿತು ಏಕಲವ್ಯನು ಅವರ ಚಿಂತೆಗೆ ಕಾರಣನಾಗಿದ್ದ. ಇದಕ್ಕೆ ಉಪಾಯಮಾಡಿ. ದ್ರೋಣಾಚಾರ್ಯರು ಗುರುದಕ್ಷಿಣೆಗಾಗಿ ಕೇಳುತ್ತಾರೆ. ಏಕಲವ್ಯನು ಗುರುದಕ್ಷಿಣೆಯಾಗಿ ತನ್ನ ಹೆಬ್ಬರಳನ್ನೇ ಕತ್ತರಿಸಿ ಅರ್ಪಿಸಿದರೆ ಇಲ್ಲೊಬ್ಬ ಮಹಾಶಯ ಕಲಿಯಲಾಗದೇ, ಕಲಿಯದೇ, ಯಾರೂ ಕೇಳದೇ ತನಗೆ ತಾನೇ ತನ್ನ ನಾಲ್ಕು ಬೆರಳುಗಳನ್ನು ಕತ್ತರಿಸಿಕೊಂಡು ಆಧುನಿಕ ಏಕಲವ್ಯನಾಗಿದ್ದಾನೆ! ಸೂರತ್‌ನ ವಜ್ರ ವ್ಯಾಪಾರಿಯೊಬ್ಬರ ಬಳಿ ಲೆಕ್ಕಪತ್ರ ವಿಭಾಗದಲ್ಲಿ 33 ವರ್ಷದ ಮಯೂರ್ ತರಪರ ಎಂಬ ವ್ಯಕ್ತಿ ಕೆಲಸ ಮಾಡುತ್ತಿದ್ದ. ಆಧುನಿಕ ಅಕೌಂಟ್ಸ್‌ಗಾಗಿ ಅವನು ಕಂಪ್ಯೂಟರ್ ಕಲಿಯಬೇಕಾಗಿತ್ತು. ಆದರೆ ಅವನಿಗೆ ಅದು ಇಷ್ಟವಿರಲಿಲ್ಲ. ಹಾಗಂತ ಮಾಲಿಕರಿಗೆ ಹೇಳುವ ಧೈರ್ಯವೂ ಅವನಲ್ಲಿ ಇರಲಿಲ್ಲ. ಏನು ಮಾಡಬೇಕೆಂದು ತೋಚದೇ ತನ್ನ ಬೆರಳುಗಳೇ ಇರದಿದ್ದರೆ ಕಂಪ್ಯೂಟರ್ ಕಲಿಯುವುದನ್ನು ತಪ್ಪಿಸಬಹುದೆಂದು ಎಡಗೈಯ ನಾಲ್ಕು ಬೆರಳುಗಳನ್ನು ಕತ್ತರಿಸಿ, ಚೀಲದಲ್ಲಿ ಹಾಕಿ ಎಸೆದುಬಿಟ್ಟ! ತಾನು ಮೂರ್ಛ ಹೋಗಿ ಬಿದ್ದಾಗ ವಾಮಾಚಾರಿಗಳು ತನ್ನ ಬೆರಳುಗಳನ್ನು ಕತ್ತರಿಸಿಕೊಂಡಿದ್ದಾರೆಂದು ಕತೆ ಕಟ್ಟಿದ! ಪೊಲೀಸರಿಗೆ ದೂರಿತ್ತ. ತನಿಖೆ ನಡೆಸಿದ ಪೊಲೀಸರು ರಹಸ್ಯ ಬಿಡಿಸಿದರು. ವಿವೇಚನೆ ಇಲ್ಲದೇ ದುಡುಕಿನಲ್ಲಿ ಕೈಗೊಂಡ ನಿರ್ಧಾರ ಜೀವನ ಪರ್ಯಂತ ಕೊರಗುವಂತೆ ಮಾಡುತ್ತದೆ. ಏಕಲವ್ಯನು ತನ್ನಷ್ಟಕ್ಕೆ ತಾನೇ ಕಲಿತರೂ ಗುರುವಿನ ಮಾತಿಗೆ ಕಟ್ಟುಬಿದ್ದು ಬೆರಳನ್ನು ಕಟ್ ಮಾಡಿಕೊಳ್ಳಬೇಕಾಯಿತು. ಕಂಪ್ಯೂಟರನ್ನು ಕಲಿಯದೇ ಕರದ ಬೆರಳುಗಳನ್ನು ಕಳೆದುಕೊಳ್ಳಬೇಕಾಯಿತು. ಅವನು ಕಲಿತು ಕೆಟ್ಟ ಇವನು ಕಲಿಯಲಾಗದೇ ಕೈಕೊಟ್ಟ!
ಇತ್ತೀಚೆಗೆ ಮಹಾರಾಷ್ಟ್ರದ ಠಾಣೆ ಜಿಲ್ಲೆಯ ಗುಲಾಂ ಮುರ್ತಾಜಾ ಬೋಟಾಲ್ ತನ್ನ ಮಗಳನ್ನು ಇಬಾದ್ ಆಲೇಖ ಫಾಲ್ಕೆಗೆ ಕೊಟ್ಟು ಮದುವೆ ಮಾಡಿದನು.
ಇದನ್ನೂ ಓದಿ: ಪಣಿಯನ್ ಹುಡುಗಿ
ನವವಿವಾಹಿತ ಮದುಮಕ್ಕಳು ಮಧುಚಂದ್ರಕ್ಕೆ ಹೋಗಬೇಕಿತ್ತು. ಮಾವನಿಗೆ ತನ್ನ ಮಗಳು ಅಳಿಯಂದಿರನ್ನು ವಿದೇಶದ ಯಾವುದಾದರೂ ಒಂದು ಧಾರ್ಮಿಕ ಸ್ಥಳಕ್ಕೆ ಕಳಿಸುವ ಇಚ್ಛೆ ಇತ್ತು. ಆದರೆ ಅಳಿಯ ಫಾಲೆಗೆ ಜಮ್ಮು-ಕಾಶ್ಮೀರಕ್ಕೆ ಹೋಗುವ ಆಸೆ ಆಗಿತ್ತು. ಇದೇ ಕಾರಣಕ್ಕಾಗಿ ಮಾವ-ಅಳಿಯನ ಮಧ್ಯೆ ಜಗಳವಾಗಿತ್ತು. ಆದರೆ ವಿಷಯವನ್ನು ಗಂಭೀರವಾಗಿತೆಗೆದುಕೊಂಡ ಮಾವ ತನ್ನ ಸಿಟ್ಟನ್ನು ತೀರಿಸಿಕೊಳ್ಳಲು 5 ಗುರು ಕಾಯುತಿದ್ದ. ರಾತ್ರಿ ಮನೆಗೆ ಮರಳಿದ ಅಳಿಯನು ರಸ್ತೆ ಬದಿ ವಾಹನವನ್ನು ನಿಲ್ಲಿಸುತ್ತಿದ್ದಾಗ ಅವನ ಮೇಲೆ ಮಾವನು ಅಸಿಡ್‌ನ್ನು ಎರಚಿದ್ದಾನೆ. ಗಾಯಗೊಂಡ ಅಳಿಯನನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಓಟಕಿತ್ತ ಮಾವನ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಸಿಟ್ಟಿನ ಕೈಗೆ ಬುದ್ದಿಕೊಟ್ಟರೆ ಹೀಗಾಗುತ್ತದೆ. ಖುಷಿಯಿಂದ ಮಧುಚಂದ್ರಕ್ಕೆ ಕಳಿಸಿಕೊಡಬೇಕಾದ ಮಾವನು. “ಮಾವನ ಮನೆ’ಗೆ ಹೋಗಬೇಕಾಯಿತು. ತನ್ನ ಮಾತೇ ನಡೆಯಬೇಕೆನ್ನುವ ಹಟವೂ ಇದಕ್ಕೆ ಕಾರಣವಾಗಿರಬಹುದು.
ಇತ್ತೀಚೆಗೆ ಮೊಬೈಲ್ ಜನ್ಯ ರೋಗಗಳು ಕಾಣಿಸಿಕೊಳ್ಳಲು ಪ್ರಾರಂಭಿಸಿವೆ. ಚಿಕ್ಕ ಮಕ್ಕಳು ತಂಟೆಮಾಡದಿರಲೆಂದು, ಊಟ-ತಿಂಡಿ ತಿನ್ನಲೆಂದು, ಸುಮ್ಮನೇ ತಮ್ಮಷ್ಟಕ್ಕೆ ತಾವು ಆಡಿಕೊಂಡಿರಲೆಂದು ಬ್ರಹ್ಮಾಸ್ತ್ರವಾಗಿ ಈ ಜಂಗಮವಾಣಿಯನ್ನು ಪಾಲಕರು ಮಕ್ಕಳ ಕೈಗೆ ಕೊಟ್ಟು ಗೆದ್ದೆವೆಂದು ಬೀಗುತ್ತಾರೆ. ಮೊಬೈಲಿನ ಚಿತ್ತಾಕರ್ಶಕ ಚಿತ್ರ, ಗೇಮ್‌ಗಳಿಗೆ ಮನಸೋತು ಎಳೆಕಂದಮ್ಮಗಳು ಮೊಬೈಲ್ ವ್ಯಸನಕ್ಕೆ ಒಳಗಾಗುತ್ತಿದ್ದಾರೆ. ಇದನ್ನು ಪ್ರಾರಂಭಿಕ ಹಂತದಲ್ಲೇ ನಿಯಂತ್ರಿಸಬೇಕು. ಇಲ್ಲವಾದರೆ ಇದೊಂದು ದೊಡ್ಡ ಸಮಸ್ಯೆಯಾಗಿ ಪರಿಣಮಿಸುತ್ತದೆ. ಈ ರೀತಿ ಮೊಬೈಲ್ ವ್ಯಸನಕ್ಕೊಳಗಾದ ಮಕ್ಕಳು ಮಾನಸಿಕ, ಶಾರೀರಿಕ ಮತ್ತು ಭೌದ್ಧಿಕ ರೋಗಗಳಿಗೆ ತುತ್ತಾಗುತ್ತಾರೆ. ದಿನವಿಡೀ ಮೊಬೈಲ್‌ನಲ್ಲೇ ಮುಳುಗಿ ಅವರು ಸಹಜ ಸಾಮಾಜಿಕರಣದ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವುದು ತಪ್ಪುತ್ತಿದೆ. ಹೀಗಾಗಿ ಅವರಿಗೆ ಮೊಬೈಲೇ ಜಗತ್ತಾಗಿ ಪರಿಣಮಿಸಿದೆ. ಅವರ ವ್ಯಕ್ತಿತ್ವ ಮತ್ತು ಅಂತರ್ ವ್ಯಕ್ತಿ ಸಂಬಂಧಗಳು, ಕೌಶಲಗಳು ವಿಕಾಸವಾಗದೇ ಖಿನ್ನತೆಗೊಳಗಾಗುತ್ತಿದ್ದಾರೆ. ನರಮಂಡಲದ ಮೇಲೂ ಇದರ ಪರಿಣಾಮಗಳಾಗುತ್ತಿವೆ. ಕೆಲವು ಪಟ್ಟಣಗಳಲ್ಲಿ “ಮೊಬೈಲ್ ವ್ಯಸನ ಪರಿಹಾರ ಕೇಂದ್ರ’ಗಳೂ ಪ್ರಾರಂಭವಾಗಿವೆ ಎಂದರೆ ಸಮಸ್ಯೆಯ ಗಂಭೀರತೆಯ ಅರ್ಥವಾಗುತ್ತದೆ. ವ್ಯಸನಿಗಳು ತಮಗೆ ಮೊಬೈಲ್‌ನ್ನು ಕೊಡದಿದ್ದಾಗ ತಂದೆ, ತಾಯಿ, ಬಂಧು, ಸ್ನೇಹಿತನೆನ್ನದೇ ಹಲ್ಲೆ ದಾಳಿ ಮಾಡಿದ ಉದಾಹರಣೆಗಳಿವೆ. ದುಡುಕಿಆತ್ಮಕ್ಕೆ ಪಡ್ಡಿಕೊಂಡ ವಳ್ಳಿ ಬೇಸತ್ತು ಪತಿಯಂದಿರ ತೆ ಸಾವಿಗೆ ಶರಣಾಗುತ್ತಿದ್ದಾರೆ. ಇತ್ತೀಚೆಗೆ ಬೆಂಗಳೂರಿನಲ್ಲಿ ಉತ್ತರ ಭಾರತ ಮೂಲದ ಸುಭಾಷ್ ಅತುಲ ಆತ್ಮಹತ್ಯೆ ಆದ ದ ಮಾಡಿಕೊಂಡ. ಅದಕ್ಕೂ ಮುನ್ನ ಅವರು ತನ್ನ ಆತ್ಮಹತ್ಯೆಗೆ – ಕಾರಣ ತಿಳಿಸುತ್ತ ಅದಕ್ಕೆ ತನ್ನ ಪತ್ನಿಯೇ ಕಾರಣವೆಂದು ದೂಷಿಸಿದ್ದಾನೆ.
24 ಪುಟಗಳ ಡೆತ್ ನೋಟ್‌ನಲ್ಲಿ ತನ್ನ ಪತ್ನಿ ಮತ್ತಾಕೆಯ ಮನೆಯವರು ಅವನು ಆತ್ಮಹತ್ಯೆಗೆ ಎಳಸುವಂತೆ ಸಂಚು ಹೊಡಿದ್ದರೆಂದು ಆಪಾದಿಸಿದ್ದಾನೆ . ಅವರ ಒತ್ತಡಕ್ಕೊಳಗಾದ ಅವನು ಮರಳಿಬಾರದ ಲೋಕಕ್ಕೆ ಹೋಗಿದ್ದಾನೆ. ಇಂತಹ ಕೇಸುಗಳು ಇತ್ತೀಚೆಗೆ ಹೆಚ್ಚಾಗುತ್ತಿರುವುದು ತುಂಬ ಕಳವಳಕಾರಿಯಾದುದು. ನ ಒತ್ತಡ, ಪ್ರಚೋದನೆ, ಖಿನ್ನತೆಗೊಳಗಾಗಿ ಜೀವವನ್ನೇ ಕಳೆದುಕೊಳ್ಳುವುದು ತೀರ ಅಮಾನುಷವಾದುದೇ ಸರಿ, ಸಿಟ್ಟಿನ ಭರದಲ್ಲಿ ಕೈ ಸುಟ್ಟುಕೊಳ್ಳಬಾರದು. ಸತ್ತು ಸೇಡು ತೀರಿಸಿಕೊಳ್ಳುವುದಲ್ಲ. ಸತ್ತು ಸುದ್ದಿಯಾಗುವುದಕ್ಕಿಂತ ಬದುಕಿ ಸಾಧಿಸಬೇಕು. ಸಿಟ್ಟಿನ ಧಾವಂತದಲ್ಲಿ ಉತ್ತರ ಕೊಡಲು ಹೋಗಿ ಮನುಷ್ಯ ವಿವೇಚನೆಯನ್ನು ಕಳೆದುಕೊಳ್ಳಬಾರದು.
ಭೃಗು, ಋಷಿಯ ಮುಂಗೋಪಕ್ಕೆ ಗುರಿಯಾಗಿ ಶ್ರೀ ಹರಿಯ ದ್ವಾರಪಾಲಕರಾದ ಜಯ- ವಿಜಯರು ಶ್ರೀ ಹರಿಯ ವೈರಿಗಳಾಗಿ ಮೂರು ಜನ್ಮ ತಳೆಯುವಂತಾಯಿತು. ಭೈಗು ಮುನಿ ತಾನಿರುವ ವಿಷ್ಣುವಿನ ಹೃದಯ ಸ್ಥಾನಕ್ಕೆ ತನ್ನ ಪಾದದಿಂದ ಒದ್ದನೆಂದು ಲಕುಮಿಯು ಕೋಪಗಂಡು ವೈಕುಂಠ ತೊರೆದು ಕೊಲ್ಲಾಪುರಕ್ಕೆ ಬಂದು ನೆಲೆಸಿದಳು. ದುರ್ವಾಸಮುನಿಯ ಕಡುಕೋಪ, ವಿಶ್ವಾಮಿತ್ರನ ಸುಡುಕೋಪ, ಅದರ ಪರಿಣಾಮಗಳು, ಮತ್ತು ಅದನ್ನು ಶಾಂತಗೊಳಿಸಲು ತ್ರಿಮೂರ್ತಿಗಳನ್ನೂ ಮೊದಲ್ಗೊಂಡು ದೇವಾನುದೇವತೆಗಳ ಹರಸಾಹಸ ಎಲ್ಲ ನಮ್ಮ ಸಂಸ್ಕೃತಿ-ಪರಂಪರೆಗಳ ಭಾಗವಾಗಿಬಿಟ್ಟಿವೆ. ಮನ್ಮಥನ ಹಗುರಾದ ಛೇಷ್ಟೆ ಲೋಕರಕ್ಷಕ ಶಿವನ ಸಿಟ್ಟನ್ನು ನೆತ್ತಿಗೇರಿಸಿತು. ರುದ್ರ ತೆರೆದ 3ನೇ ಕಣ್ಣಿನಿಂದಾಗಿ ಮನ್ಮಥನು ಸುಟ್ಟು ಬೂದಿಯಾದ. ತ್ರಿಲೋಕಕ್ಕೆಲ್ಲ ಚಿಂತೆಯಾಯಿತು. ಮನ್ಮಥನಿರದೇ ಇನ್ನು ಸಂಸಾರದ ಮುಂದುವರಿಕೆ ಹೇಗೆ? ಅದು ಕೇವಲ ರತಿಯ ಗೋಳಾಗಿರಲಿಲ್ಲ. ಇಡೀ ಜಗದ ನೋವಾಗಿತ್ತು. ಜಗದ ಮುನ್ನಡೆಗಾಗಿ ಆ ಸ್ವತಃ ಜಗನ್ಮಾತೆ ಜಗದ್‌ರಕ್ಷಕನ ಮೊರೆ ಹೋಗಬೇಕಾಯಿತು. ಅರೆಕ್ಷಣದ ಆಗ ಗಡಿಬಿಡಿಯಲ್ಲಿ ತೆಗೆದುಕೊಂಡ ನಿರ್ಧಾರ ಸಿಟ್ಟು ಆಗ ಕೊನೆತನಕದ ಕೊರಗಿಗೆ ಆಹ್ವಾನ ಕೊಟ್ಟಿತ್ತು.
ರಾವಣನ ಸೀತಾಪರಹರಣದ ದುಡುಕಿನ ನಿರ್ಧಾರ ರಾಮಾಯಣಕ್ಕೆ ಕಾರಣವಾಯಿತು. ಜಗತ್ತಿನಾದ್ಯಂತ ಕ್ಷತ್ರಿಯರೆಲ್ಲರನ್ನೂ ನಾಶ ಪಡಿಸುವ ಪರಶುರಾಮರ ನಿರ್ಧಾರ ಕ್ಷತ್ರಿಯರ ಅಳಸಿಗೆ ಕಾರಣವಾಯಿತು. ಹನುಮನ ಬಾಲಕ್ಕೆ ಬೆಂಕಿ ಹಚಿವುದು ಲಂಕೇಶ್ವರನ ದುಡುಕಿನ ನಿರ್ಧಾರವಾಗಿತ್ತು. ಆದರೆ ಅದರಿಂದ ಇಡೀ ಲಂಕೆಗೆ ಕಿಚ್ಚಿಟ್ಟಂತೆ ಆಗಿತ್ತು. ದುರ್ಯೋಧನನು ಇಂದ್ರಪ್ರಸ್ಥಕ್ಕೆ ಬಂ ಬಂದಾಗ ಅಲ್ಲಿಯ ಆದತವಾದ ವಿನ್ಯಾಸಗಳನ್ನು ತಿಳಿಯದಿದ್ದಾಗ ದೇವಿ ಮಾಡಿದ ಅಪಗಳನ್ನು ಕುರುಕ್ಷೇತ್ರ ಯುದ್ಧಕ್ಕೆ ಕಾರಣವಾಯಿತು. ಗಂಡ-ಹೆಂಡಂದಿರು ಚಿಕ್ಕ ಚಿಕ್ಕ ಮೀರಿತ್ತದೆ. ಆಗ ಸಿಟ್ಟು ಹೊರುತ್ತದೆ. ಹೀಗೊಬ್ಬ ತಂದುಕ ಮಹಂಡಾಯ ಜೊತೆಗಿನ ಜಗಳಕ್ಕೆ ಮಗುವೇ ಕಾರಣವೆಂದು ಚಿಕ್ಕಮಗುವಿನ ಕಾಲು ಹಿಡಿದು ಗರಗರನೇ ತಿರುಗಿಸಿ ಗೋಡೆಗೆ ತಗುಲಿಸಿದರೆ ಏನಾಗಬೇಡ?! ಇವರ ಸಿಟ್ಟಿಗೆ ಮುಗ್ಧ ಮಗುವಿನ ಬಲಿಯಾಯಿತು. ಯಾರದೋ ತಪ್ಪಿಗೆ ಇನ್ಯಾರಿಗೋ ಶಿಕ್ಷೆ! ಇತ್ತೀಚೆಗಂತೂ ಮಕ್ಕಳಿಗೆ ಸ್ವಲ್ಪವೂ ತಾಳೆ ಎನ್ನುವುದಿಲ್ಲ. ಚಿಕ್ಕ ಚಿಕ್ಕ ಕಾರಣಗಳಿಗೂ ಮುನಿಸಿಕೊಂಡು ಒಂದೋ ತಾವೇ ಅನಾಹುತ ಮಾಡಿಕೊಳ್ಳುತ್ತಾರೆ. ಇಲ್ಲವೋ ಹೆತ್ತು ಹೊತ್ತು ಬೆಳೆಸಿದವರ ಮೇಲೆ ಏರಿ ಹೋಗುತ್ತಾರೆ. ಅಧಿಕಾರಿಗಳ ನಡುವಿನ ಪ್ರತಿಷ್ಠೆಯ ಸಮರ ಅತಿರೇಕಕ್ಕೆ ಹೋಗಿ ಸಿಟ್ಟು ಕೈಕೆಳಗಿನವರ ಮೇಲೆ ಹೋಗೆ ಕ್ರಮಕೈಗೊಳ್ಳುವಂತೆ ಮಾಡುತ್ತದೆ. ಮೇಲಿನವರ ಕಿರುಕುಳಕ್ಕೆ ಬೇಸತ್ತು ಅದೆಷ್ಟೋ ಕೆಳಗಿನ ನೌಕರರು ಜೀವತೆತ್ತ ಸಂದರ್ಭಗಳಿವೆ.
ಕ್ರಿಯೆಗೆ ಪ್ರತಿಕ್ರಿಯೆಗಳಾಗಿ, ಮಾತಿಗೆ ಮಾತು ಬೆಳೆದು ವಿಕೋಪಕ್ಕೆ ಹೋಗುವ ಸಾಧ್ಯತೆಯೇ ಹೆಚ್ಚು. ಹೀಗೆ ದುಡುಕಿ ಮಾಡುವ ನಿರ್ಧಾರಗಳು ಕೆಡುಕಿಗೆ ಮಹಾದ್ವಾರಗಳಾಗುತ್ತವೆ. ಇದರಿಂದ ಯಾರಿಗೂ ಒಳ್ಳೆಯದಾಗುವುದಿಲ್ಲ. ಸ್ವಪ್ರತಿಷ್ಟೆ, ಅತಿಯಾದ ಸ್ವಾಭಿಮಾನ, ಮಿತಿಯಿರದ ಆತ್ಮವಿಶ್ವಾಸ ಮತ್ತು ನೈತಿಕ ಅಹಂಕಾರಗಳು ಈ ರೀತಿಯ ಅನಾಹುತಗಳಿಗೆ ಪರಿಣಾಮವು ಹೆಚ್ಚು ಸಲ ಕೆಟ್ಟದಾಗಿರುತ್ತದೆ. ಆದರೆ ಕೆಲವು ಸಲ ಒಳ್ಳೆಯದೂ ಆಗಿರುತ್ತದೆ. ಆದರೆ ಭಾವಾವೇಶದಲ್ಲಿ ಇಂತಹ ಚಿಂತನೆ ಮಾಡಲು ಸಮಯವೆಲ್ಲಿ ಇರುತ್ತದೆ? ಹಾಗಾದರೆ ಇದಕ್ಕೆ ಪರಿಹಾರವೇನು? ಆಗ ಸಿಟ್ಟಿಗೆ/ಮಾತಿಗೆ ಸ್ವಲ್ಪ ಹೊತ್ತು ಬಿಡುವು ಕೊಡುವುದೇ ಒಳ್ಳೆಯದು. ಯಾವುದಕ್ಕೂ ಪ್ರತಿಕ್ರಿಯಿಸದೇ ಧೀರ್ಘವಾಗಿ ಉಸಿರನ್ನುಳಗೆಳೆದುಕೊಂಡಿಯಾಗಿ ಮನಸು ಸಾವಕಾಶವಾಗಿ ಸಮತೋಲನಕ್ಕೆ ಬರುತ್ತದೆ. ಆಗ ಸಾವಕಾಶವಾಗಿ ಸಮಾತ ಮಾಡಿ ಇತರರನ್ನು ಕೆರಳಿಸದಂತೆ ಸೂಕ್ತವಾಗಿ ಪ್ರತಿಕ್ರಿಯಿಸಬಹುದು.