ನೌಕರ ಸ್ನೇಹ ನೌಕರ ಸ್ನೇಹಿ ಎಂದೇ ಹೆಸರಾಗಿದ್ದವರು ಡಾಕ್ಟರ್.
ಶಿವಶಂಕರ್: ಬಾಲಕೃಷ್ಣ ಗುಣಗಾನನಿಕಟ ಪೂರ್ವ ಜಿಲ್ಲಾಧಿಕಾರಿ ಶಿವಶಂಕರ್ ಗೆ ಹೃದಯ ಸ್ಪರ್ಶಿ ಬೀಳ್ಕೊಡುಗೆ
ಕುಂದಾಣ: ಜನಸ್ನೇಹಿ ಹಾಗೂ ನೌಕರ ಸ್ನೇಹಿ ಎಂದೆ ಹೆಸರಾಗಿದ್ದ ,ಎಂತಹದೇ ಸಮಸ್ಯೆಗಳನ್ನು ಸುಲಲಿತವಾಗಿ ಬಗೆಹರಿಸುತ್ತಿದ್ದ ,ಜಂಟಲ್ ಮ್ಯಾನ್ ನಿಕಟ ಪೂರ್ವ ಜಿಲ್ಲಾಧಿಕಾರಿ ಡಾ. ಎನ್ . ಶಿವಶಂಕರ್ ಎಂದು ದೇವನಹಳ್ಳಿ ತಾಸಿಲ್ದಾರ್ ಎಚ್ .ಬಾಲಕೃಷ್ಣ ತಿಳಿಸಿದರು.
ತಾಲೂಕಿನ ಜಿಲ್ಲಾಡಳಿತ ಭವನದ ಆಡಿಟೋರಿಯಂ ನಲ್ಲಿ ಆಯೋಜಿಸಿದ್ದ ಡಿ.ಸಿ.ಎಸ್ ಶಿವಶಂಕರ್ ರವರಿಗೆ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿ ಕಂದಾಯ ಇಲಾಖೆಯಲ್ಲಿ ಕೆಲಸ ನಿರ್ವಹಿಸುವುದೇ ಒಂದು ಚಾಲೆಂಜ್, ಅನೇಕ ಕ್ಲಿಷ್ಟಕರ ಸನ್ನಿವೇಶಗಳು ಬರುತ್ತಲೇ ಇರುತ್ತವೆ. ಆದರೂ ಹೆಚ್ಚು ಒತ್ತಡಕ್ಕೆ ಒಳಗಾಗದೆ ನಿರ್ವಹಿಸುವುದು ಬಹಳ ಕಷ್ಟ ಅಂತಹ ಸನ್ನಿವೇಶಗಳಲ್ಲೂ ಯಾವುದೇ ಅಡೆತಡೆಗಳು ಎದುರಾದರು ಜಿಲ್ಲಾಧಿಕಾರಿ ಶಿವಶಂಕರ್ ಸಾಹೇಬರು ನಗುನಗುತ್ತಲೇ ಬಗೆಹರಿಸು ವಲ್ಲಿ ನಿಸ್ಸೀಮರು. ಅವರ ಕೈ ಕೆಳಗೆ ಕೆಲಸ ಮಾಡುವವರನ್ನು ಇದುವರೆಗೆ ಏಕವಚನದಲ್ಲಿ ಸಂಬೋಧಿಸಿದ್ದು ಯಾರೂ ನೋಡಿಲ್ಲ ಎಂದರು.
ಇದನ್ನೂ ಓದಿ: ಪ್ರತಿಭೆಗೆ ಉತ್ತೇಜನ ದೊರೆಯುತ್ತದೆ ಸಾಧನೆ ನಿಶ್ಚಿತ: ಡಾ. ಟಿ. ಎಚ್. ಅಂಜನಪ್ಪ
ನಿಕಟಪೂರ್ವ ಜಿಲ್ಲಾಧಿಕಾರಿ ಡಾಕ್ಟರ್. ಏನ್. ಶಿವಶಂಕರ್ ಮಾತನಾಡಿ ನಾನು ಮೊದಲಿನಿಂದಲೂ ಎಸಿ ಆಗಬೇಕೆಂದುಕೊಂಡು ಎಸಿ ಆಗಿ ಗುಲ್ಬರ್ಗ, ಯಾದಗಿರಿ, ಹಾಸನ, ಮಧುಗಿರಿ, ಮಡಿಕೇರಿ ನಂತರ ದೊಡ್ಡಬಳ್ಳಾಪುರದಲ್ಲಿ ಕಾರ್ಯ ನಿರ್ವಹಿಸಿದೆ. ಡಿಸಿ ಆಗಬೇಕು ಅಂದುಕೊಂಡೆ ಬೆಂಗಳೂರು ಗ್ರಾಮ ಜಿಲ್ಲೆಯಲ್ಲಿಯೇ ಜಿಲ್ಲಾಧಿಕಾರಿಯಾಗಿ ಒಂದು ವರ್ಷ ಏಳು ತಿಂಗಳು ಕಾರ್ಯನಿರ್ವಹಿಸಿ ನಿಷ್ಠೆಯಿಂದ ಜನರ ಸೇವೆಯನ್ನು ಮಾಡಿದ್ದೇನೆ ಎನ್ನುವ ಸಮಾಧಾನವಿದೆ ಈ ಬೆಸ್ಕಾಂನಲ್ಲಿ ವ್ಯವಸ್ಥಾಪಕ ನಿರ್ದೇಶಕನಾಗಿ ಪ್ರಮೋಷನ್ ದೊರೆತಿದೆ. ಯಾವುದೇ ಕೆಲಸವಾಗಲಿ ,ಸರ್ಕಾರ ನೀಡುವ ಹುದ್ದೆಯನ್ನು ನಿಷ್ಠೆಯಿಂದ ಮಾಡಬೇಕು ,ಮಾಡುತ್ತೇನೆ ಎಂದು ತಿಳಿಸಿದರು.
ಪಿ ಗಂಗಾಧರಪ್ಪ ಮಾತನಾಡಿ ನಿಕಟಪೂರ್ವ ಜಿಲ್ಲಾಧಿಕಾರಿ ಡಾಕ್ಟರ್. ಏನ್. ಶಿವಶಂಕರ್ ಸಹನಾಮೂರ್ತಿ, ಇತ್ತೀಚೆಗೆ ನಡೆದ ದರಕಾಸ್ತು ಪೋಡಿ ಆಂದೋಲನದಲ್ಲಿ ಅವರ ಮಾರ್ಗದರ್ಶನದಲ್ಲಿ 1236 ಪೋಡಿ ಮಾಡಿಸಿ ರಾಜ್ಯದಲ್ಲಿಯೇ ಬೆಂಗಳೂರು ಗ್ರಾಮಾಂತರ ಜಿಲ್ಲೆ ಪ್ರಥಮ ಸ್ಥಾನಕ್ಕೆ ಭಾಜನವಾಗಿರುವುದು ಅವರ ಹೆಗ್ಗಳಿಕೆ, ಯರಿಗೂ ಒತ್ತಡ ನೀಡದೇ ಸಹನಯಿಂದಸಲೇ ಕೆಲಸ ಮಾಡಿಸಿದ ಜಿಲ್ಲಾಧಿಕಾರಿಯಾಗಿದ್ದಾರೆ ಎಂದರು.
ನಂತರ ಅವರಿಗೆ ಸಮಸ್ತ ಜಿಲ್ಲಾಡಳಿತ, ಅಧಿಕಾರಿ, ಸಿಬ್ಬಂದಿ ವರ್ಗ ಹಾಗೂ ಅವರ ಅಭಿಮಾನಿಗಳಿಂದ ಹೃದಯಸ್ಪರ್ಶಿ ಬೀಳ್ಕೊಡುಗೆ ನೀಡಲಾಯಿತು.
ರಾಜೀವ ಸುಲೋಚನ, ಗುಣವಂತ, ವಿಠಳ ಕಾವಳೆ, ಜಗದೀಶ್ ಸೇರಿ ಹಲವು ಅಧಿಕಾರಿಗಳು ಜಿಲ್ಲಾಧಿಕಾರಿಗಳೊಂದಿಗಿನ ಒಡನಾಟ, ಅವರ ತಾಳ್ಮೆ, ಕೆಲಸದ ವೈಖರಿ, ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವ ರೀತಿ ಅಗಣಿತ ಎಂದು ಗುಣಗಾನ ಮಾಡಿದರು.
ಅಪರ ಜಿಲ್ಲಾಧಿಕಾರಿ ಎಚ. ಅಮರೀಶ್,ಉಪ ವಿಭಾಗಾಧಿಕಾರಿ ದುರ್ಗಾಶ್ರೀ, ದೇವನಹಳ್ಳಿ ಡಿ.ಡಿ.ಎಲ್.ಆರ್.ಸಂತೋಷ್, ದೊಡ್ಡಬಳ್ಳಾಪುರ ತಹಸೀಲ್ದಾರ್,ವಿಭಾ ರಾಠೋಡ್,ಹೊಸಕೋಟೆ ತಹಸೀಲ್ದಾರ್ ಮಲ್ಲಿಕಾರ್ಜುನ್, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಗುಣವಂತ, ರೇಷ್ಮೇ ಇಲಾಖೆ ಉಪನಿರ್ದೇಶಕ ಲಕ್ಷ್ಮಣ್, ಕೈಗಾರಿಕೆ ಇಲಾಖೆ ಉಪ ನಿರ್ದೇಶಕ ನರೇಂದ್ರಬಾಬು, ಯೋಜನೆ ನಿರ್ದೇಶಕ ರಮೇಶ್ , ವಿಠಲ ಕಾವ್ಳೆ ,ರಮೇಶ್ ಸೇರಿ ಜಿಲ್ಲಾಮಟ್ಟದ,ತಾಲೂಕು ಮಟ್ಟದ ಅಧಿಕಾರಿಗಳು ಸಾರ್ವಜನಿಕರು ಉಪಸ್ಥಿತರಿದ್ದರು.