ಪಂದ್ಯಶ್ರೇಷ್ಠ’ ಪರ್ವೇಶ್ಗೆ ಸಿ.ಎಂ. ಗಾದಿ?
20240 ಚುನಾವಣೆಯಲ್ಲಿ ಪರ್ವೇಶ್ ವರ್ಮಾ ಅವರನ್ನು ಪಟ್ಟಿಯಿಂದಲೇ ಬಿಜೆಪಿ ಕೈಬಿಟ್ಟಿತ್ತು. ಪುನರಾಗಮನ ಮಾಡಿರುವ ಅತಿ ದೊಡ್ಡ ವಿಕೆಟ್ ಪಡೆದಿದ್ದಾರೆ. ಅವರಿಗೆ ದೆಹಲಿ ಬಿಜೆಪಿ ಸರ್ಕಾರದ ನಾಯಕತ್ವ ಸಿಗುತ್ತದೆಯೇ? ಮತ್ತೊಮ್ಮೆ ನವದೆಹಲಿಯ ಶಾಸಕರಿಗೆ ಮುಖ್ಯಮಂತ್ರಿ ಗಾದಿ ದೊರಕಲಿದೆಯೇ?
ಹೀಗೊಂದು ಪ್ರಶ್ನೆ ದೆಹಲಿ ರಾಜಕೀಯ ಪಡಸಾಲೆಯಲ್ಲಿ ಆರಂಭವಾಗಿದೆ. ಪಡಸಾಲೆಯಲ್ಲಿ 1998ರಿಂದ 2013ರವರೆಗೆ ಮೂರು ಅವಧಿಗೆ ಶೀಲಾ ದೀಕ್ಷಿತ್ ನವದೆಹಲಿ ಕ್ಷೇತ್ರದ ಶಾಸಕರಾಗಿದ್ದರು. 2013ರಲ್ಲಿ ದೀಕ್ಷಿತ್ ಅವರನ್ನು ಅರವಿಂದ ಕೇಜಿವಾಲ್ ಸೋಲಿಸಿದ್ದರು. ಅವರು ಹ್ಯಾಟ್ರಿಕ್ ಗೆಲುವು ಸಾಧಿಸಿದ್ದರು. ಈ ಸಲ ಕೇಜಿವಾಲ್ ಅವರನ್ನು ವರ್ಮಾ ಮಣಿಸಿ ದೆಹಲಿ ಮುಖ್ಯಮಂತ್ರಿಯ ಹುದ್ದೆಯ ಪ್ರಮುಖ ಸ್ಪರ್ಧಿಯಾಗಿ ಹೊರಹೊಮ್ಮಿದ್ದಾರೆ.
ಮಾಜಿ ಮುಖ್ಯಮಂತ್ರಿ ಸಾಹಿಬ್ ಸಿಂಗ್ ವರ್ಮಾ ಪುತ್ರ ಪರ್ವೇಶ್ ಅವರು 2014ರಿಂದ 2024ರವರೆಗೆ ಪಶ್ಚಿಮ ದೆಹಲಿಯ ಸಂಸದರಾಗಿದ್ದರು. ವಿವಾದಾತ್ಮಕ ಹೇಳಿಕೆಗಳಿಂದಲೇ ಸುದ್ದಿಯಲ್ಲಿದ್ದವರು. 2024ರ ಲೋಕಸಭಾ ಚುನಾವಣೆಯಲ್ಲಿ ಅವರಿಗೆ ಪಕ್ಷ ಟಿಕೆಟ್ ನಿರಾಕರಿಸಿತ್ತು.
ಅವರ ರಾಜಕೀಯ ಜೀವನ ಮುಗಿದು ಹೋಯಿತು ಎಂದು ಭಾವಿಸಿದವರು ಹೆಚ್ಚು, ಇದೀಗಎಎಪಿ ಸಂಚಾಲಕ ಅರವಿಂದ ಕೇಬ್ರಿವಾಲ್ ಅವರನ್ನು ಸೋಲಿಸುವ ಮೂಲಕ ‘ಅಚ್ಚರಿ’ಯ ಪುನರಾಗಮನದ್ದಾರೆ ಮಾಡಿ.
ಇದನ್ನೂ ಓದಿ:ದಟ್ಟ ಕಾಡಿಗೆ ಜನರೇ ಜೀವ
ಚುನಾವಣೆಗೆ ಸ್ಪರ್ಧಿಸುವ ಮುನ್ನ ಅವರು ಮೆಹೋಲಿ ಕ್ಷೇತ್ರದ ಶಾಸಕರಾಗಿದ್ದರು. 2019ರ ಲೋಕಸಭಾ ಚುನಾವಣೆಯಲ್ಲಿ ಅವರು 5.7 ಲಕ್ಷ ಮತಗಳಿಂದ ಗೆದ್ದಿದ್ದರು. ಇದು ದೆಹಲಿಯ ಚುನಾವಣಾ ಇತಿಹಾಸದಲ್ಲಿಯೇ ಗರಿಷ್ಠ ಅಂತರದಗೆಲುವು, ಲೋಕಸಭಾ ಚುನಾವಣೆಯಲ್ಲಿ ಅವಕಾಶ ವಂಚಿತರಾದ ಸಂದರ್ಭದಲ್ಲಿ ಅವರು ಬಂಡಾಯ ಎಳಲಿಲ್ಲ.ಪಕ್ಷದ ವರಿಷ್ಠರ ತೀರ್ಮಾನವನ್ನು ಒಪ್ಪಿಕೊಂಡರು.2024ರ ಮಾರ್ಚ್ನಿಂದಲೇ ಚುನಾವಣೆಯಲ್ಲಿ ಅವಿಧಾನಸಭಾ ಕಣಕ್ಕಿಳಿಯಲುಸಿದ್ಧತೆ ನಡೆಸಿದರು. ಮಹಾ ದಂಡನಾಯಕ ಕೇಬ್ರಿವಾಲ್ ಅವರನ್ನು ಮಣಿಸುವ ಮೂಲಕ ದೈತ್ಯ ಸಂಹಾರಿಯಾಗಿ ಹೊರಹೊಮ್ಮಿದ್ದಾರೆ. ಒಂದರ್ಥದಲ್ಲಿ ದೆಹಲಿ ಚುನಾವಣಾ ಅಖಾಡದಲ್ಲಿ ಅವರು ಈಗ ‘ಪಂದ್ಯಶ್ರೇಷ್ಠ’
ವರ್ಮಾ ಅವರನ್ನು ನವದೆಹಲಿಯ ಅಭ್ಯರ್ಥಿಯ ನ್ನಾಗಿ ಮಾಡುವ ಮೂಲಕ ಕೇಜಿವಾಲ್ ಅವರು ತಮ್ಮ ಕ್ಷೇತ್ರದಲ್ಲೇ ಹೆಚ್ಚು ಸಮಯ ಇರುವಂತೆ ಬಿಜೆಪಿ ನೋಡಿಕೊಂಡಿತು. ಎಎಪಿಯ ನೀತಿ ಹಾಗೂ ಶೀಷಮಹಲ್ನಲ್ಲಿ ಕೇಜಿವಾಲ್ ಅವರ ವಾಸದ ಕುರಿತು ವರ್ಮಾ ಪದೇ ಪದೇ ಪ್ರಸ್ತಾಪಿಸಿದರು. ಅವರ ಪ್ರಶ್ನೆಗಳಿಗೆ ಉತ್ತರ ಕೊಡುವುದಕ್ಕೆಕೇಜಿವಾಲ್ ಹೆಚ್ಚಿನ ಸಮಯ ಮೀಸಲಿಡಬೇಕಾಯಿತು. ಬಿಜೆಪಿಯ ಸಂದೇಶವನ್ನು ದೆಹಲಿಯ ಜನರಿಗೆ ತಲುಪಿಸುವುದರ ಜೊತೆಗೆ, ಎಎಪಿಯನ್ನು ಉಗ್ರವಾಗಿ ಟೀಕಿಸುವ ಮೂಲಕ ತಮ್ಮನ್ನು ಸಂಭಾವ್ಯ ಅಭ್ಯರ್ಥಿಯಾಗಿ ಬಿಂಬಿಸಿಕೊಂಡರು.
ವರ್ಮಾಗೆ ಅನುಕೂಲ ಮಾಡಿ ಕೊಡುವ ಉದ್ದೇಶದಿಂದ ಸಾವಿರಾರು ಮತದಾರರ ಹೆಸರನ್ನು ಕೈಬಿಡಲಾಗಿದೆ ಹಾಗೂ ಪೂರ್ವಾಂಚಲಿಗಳ ಹೆಸರನ್ನು ಸೇರ್ಪಡೆ ಮಾಡಲಾಗಿದೆ ಎಂದು ಕೇಬ್ರಿವಾಲ್ ಆರೋಪ ಮಾಡಿದರು. ಪೂರ್ವಾಂಚಲಿಗಳಿಗೆ ಎಎಪಿ ವರಿಷ್ಠ ಅವಮಾನಿಸಿದ್ದಾರೆ ಎಂದು ಬಿಜೆಪಿ ಬಿಂಬಿಸಿತು.
ಹಣ ಹಂಚಿದ ಆರೋಪಕ್ಕೆ ವರ್ಮಾ ಇತ್ತೀಚೆಗೆ ಒಳಗಾಗಿದ್ದರು. 2020ರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಅವರು ದ್ವೇಷ ಭಾಷಣ ಮಾಡಿದ್ದರು. ಶಹೀನ್ ಬಾಗ್ ಪ್ರತಿಭಟನಾನಿರತರನ್ನು ಅತ್ಯಾಚಾರಿಗಳು ಹಾಗೂ ಕೊಲೆಗಾರರು ಎಂದು ಜರೆದಿದ್ದರು, ಕೇಜ್ರವಾಲ್ ಅವರನ್ನು ಭಯೋತ್ಪಾದಕ ಎಂದು ನಿಂದಿಸಿದ್ದರು. ಮುಸ್ಲಿಮರನ್ನು ಸಂಪೂರ್ಣವಾಗಿ ಬಹಿಷ್ಕರಿಸಬೇಕು ಎಂದು 2022ರಲ್ಲಿ ಹೇಳಿಕೆ ನೀಡಿದ್ದರು.
‘ನವದೆಹಲಿ ಕ್ಷೇತ್ರದಲ್ಲಿ ಕೇಜಿವಾಲ್ ವಿರುದ್ಧ ಸ್ಪರ್ಧಿಸಲು ಮಾನಸಿಕವಾಗಿ ಸಿದ್ಧರಾಗುವಂತೆ ಪಕ್ಷದ ವರಿಷ್ಠರು ಎರಡು 30 ಹಿಂದೆಯೇ ಸೂಚಿಸಿದ್ದರು. ನನ್ನ ಗೆಲುವಿಗೆ ಮೋದಿ ಅವರೇ ಕಾರಣ’ ಎಂದು ವರ್ಮಾ ಹೇಳಿದ್ದಾರೆ.