ಪದವಿ ವಿದ್ಯಾರ್ಥಿಗಳಿಗೆ ಕೌಶಲ ಕಾರ್ಯಕ್ರಮ.
ಯು ಜಿ ಸಿ ಮತ್ತು ಕೇಂದ್ರ ಸರ್ಕಾರದ ಸಹಯೋಗ. ವಿಶ್ವವಿದ್ಯಾಲಯ ಧನಸಹಾಯ ಆಯೋಗದ(ಯು ಜಿ ಸಿ) ಸಹಭಾಗಿತ್ವದಲ್ಲಿ ಪದವಿ ವಿದ್ಯಾರ್ಥಿಗಳಿಗೆ ಕೌಶಲ ಕಾರ್ಯಕ್ರಮವನ್ನು ಪ್ರಾರಂಭಿಸುವ ಕುರಿತು ಸರ್ಕಾರ ಮಾತುಕತೆ ನಡೆಸುತ್ತಿದೆ ಎಂದು ಕೌಶಲಾಭಿವೃದ್ಧಿ ಮತ್ತು ವಾಣಿಜ್ಯೋದ್ಯಮ ಗಾದೆ ರಾಜ್ಯ ಸಚಿವ ಜಯಂತ್ ಚೌಧರಿ ತಿಳಿಸಿದ್ದಾರೆ. ಕೌಶಲ ಉಪ್ರಕ್ರಮಗಳ ಬಗ್ಗೆ’ ದಿ ಸ್ಕಿಲ್ ಕ್ಯಾಪಿಟಲ್ ಆಫ್ ದಿ ವರ್ಲ್ಡ್’ ವೇದಿಕೆಯಲ್ಲಿ ಮಾತನಾಡಿದ ಅವರು, ದೇಶದ ಒಟ್ಟು ಜನಸಂಖ್ಯೆಯಲ್ಲಿ 90 ಕೋಟಿಯಷ್ಟು ಜನರು 30 ವರ್ಷಕ್ಕಿಂತ ಕಡಿಮೆ ವಯಸ್ಸಿನವರು.
ಪ್ರಸ್ತುತ ಸ್ಪರ್ಧಾತ್ಮಕ ಮಾರುಕಟ್ಟೆಗೆ ಅನುಗುಣವಾಗಿ ದೇಶದ ಯುವ ಸಮುದಾಯದ ಕೌಶಲ ಅಭಿವೃದ್ಧಿಗೆ ಸರಕಾರ ಕ್ರಮ ಕೈಗೊಳ್ಳುವುದು ಭವಿಷ್ಯದ ದೃಷ್ಟಿಯಿಂದ ಅನಿವಾರ್ಯವಾಗಿದೆ ಎಂದು ತಿಳಿಸಿದ್ದಾರೆ. ಶಿಕ್ಷಣ ವ್ಯವಸ್ಥೆಯಲ್ಲಿ ಕೌಶಲದ ಆಸಕ್ತಿ ಸೇರಿಸುವುದು, ಶಾಲೆಗೆ ಹೋಗುವ ಮಕ್ಕಳಿಗೆ ರಾಷ್ಟ್ರೀಯ ಶಿಕ್ಷಣ ನೀತಿ ಅಡಿ ವೃತ್ತಿಪರ ಮತ್ತು ಕೌಶಲ ಅಭಿವೃದ್ಧಿ ಕೋರ್ಸ್ಗಳನ್ನು ಕಡ್ಡಾಯಗೊಳಿಸುವ ಅಗತ್ಯವಿದೆ. ವಿದ್ಯಾರ್ಥಿಯ ಪದವಿಗೆ ಮೌಲ್ಯ ಸೇರಿಸುವ ನಿರೀಕ್ಷೆಯಲ್ಲಿ ಹೆಚ್ಚುವರಿ ಕೌಶಲಗಳೊಂದಿಗೆ ಮಕ್ಕಳನ್ನು ಬೆಳೆಸಬೇಕಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಎಎಐಗೆ ಸುರೇಶ್ ಅಧ್ಯಕ್ಷ
ಇತ್ತೀಚಿನ ಇಂಟರ್ನ್ ಷಿಪ್ ನೀತಿಗಳ ಅನುಷ್ಠಾನದಲ್ಲಿ ಐಟಿ ಕಂಪನಿಗಳ ಪಾತ್ರದ ಕುರಿತು ಮಾತನಾಡಿದ ಸಚಿವ ಚೌಧರಿ ಅವರು,”ಶೇ. 66 ರಷ್ಟು ಐಟಿ ಕಂಪನಿಗಳಿಗೆ ಅಗತ್ಯ ಕೌಶಲ ಹೊಂದಿರುವ ಅಭ್ಯರ್ಥಿಗಳು ಸಿಗುತ್ತಿಲ್ಲ ಎಂಬ ಮಾಹಿತಿ ಅಧ್ಯಯನವೊಂದರಿಂದ ತಿಳಿದು ಬಂದಿದೆ. ಹಾಗಾಗಿ, ಪದವಿ ವಿದ್ಯಾರ್ಥಿಗಳಿಗೆ ಸೂಕ್ತ ಕೌಶಲ ನೀಡಿ ಅವರನ್ನು ಉದ್ಯೋಗ ಜಗತ್ತಿಗೆ ಪರಿಚಯಿಸುವುದು ಅಗತ್ಯವಾಗಿದೆ” ಎಂದು ಪ್ರತಿಪಾದಿಸಿದ್ದಾರೆ. 752 ಆನ್ ಲೈನ್ ಕೋರ್ಸ್. ಕೌಶಲ ಅಭಿವೃದ್ಧಿ ಮತ್ತು ಶಿಕ್ಷಣವನ್ನು ಸಂಯೋಜಿಸುವ ವೇದಿಕೆಯಾದ ಸಿಲ್ಕ್ ಇಂಡಿಯಾ ಡಿಜಿಟಲ್ ಹಬ್ ನಲ್ಲಿ ಪ್ರಸ್ತುತ 752 ಆನ್ಲೈನ್ ಕೋರ್ಸ್ ಗಳಿವೆ.
ಇದರಲ್ಲಿ 88 ಲಕ್ಷ ಜನ ನೋಂದಾಯಿಸಿಕೊಂಡಿದ್ದು, 7.5 ಲಕ್ಷ ಜನರು ಡಿಜಿಟಲ್ ಕೋರ್ಸ್ ಗಳಿಗೆ ದಾಖಲಾಗಿದ್ದಾರೆ.ಈ ತರಗತಿಗಳು ಉದ್ಯೋಗಾಕಾಂಕ್ಷಿಗಳು ಉದ್ಯಮಶೀಲತೆ ಯೋಜನೆಗಳಲ್ಲಿ ತೊಡಗಿಸಿಕೊಳ್ಳಲು ನೆರವಾಗಲಿವೆ ಎಂದು ಸಚಿವ ಜಯಂತ್ ಚೌದರಿ ಇತ್ತೀಚೆಗೆ ಮಾಹಿತಿ ನೀಡಿದ್ದರು. ಪ್ರಮುಖ ಐಟಿ ಕಂಪನಿಗಳಾದ ಐಬಿಎಂ, ಸಿಸ್ಕೊ, ಅಮೆಜಾನ್, ಮೈಕ್ರೋಸಾಫ್ಟ್ ಮತ್ತಿತರ ಕಂಪನಿಗಳ ಸಹಯೋಗದಲ್ಲಿ ಎಐ, ಬಿಗ್ ಡೇಟಾ ಅನಾಲಿಟಿಕ್ಸ್, ಬ್ಲಾಕ್ಲ್ ಚೇನ್, ಕ್ಲೌಡ್ ಕಂಪ್ಯೂಟಿಂಗ್, ತಾಂತ್ರಿಕ ಮತ್ತು ವೃತ್ತಿಪರ ಕೌಶಲಗಳನ್ನು ನೀಡಲು ಕೂಡ ಸಚಿವಾಲಯ ಒಪ್ಪಂದಕ್ಕೆ ಸಹಿ ಹಾಕಿದೆ.