ಪರೀಕ್ಷೆ ಸಮರ ಭೂಮಿಯಿಂದಾಚೆಗೆ…
ಪ್ರತಿಯೊಬ್ಬ ಮನುಷ್ಯನಿಗೂ ವಿಶಿಷ್ಟವಾದ ಗುರುತನ್ನು ನೀಡಿದೆ. ನಮ್ಮ ಬೆರಳಚ್ಚುಗಳಿಂದ ಕಣ್ಣುಗುಡ್ಡೆಯವರೆಗೆ, ಗ್ರಹಿಕೆಗಳಿಂದ ಆಲೋಚನೆಗಳವರೆಗೆ, ಪ್ರತಿಭೆಯಿಂದ ಸಾಧನೆಗಳವರೆಗೆ ಪ್ರತಿ ಯೊಬ್ಬರೂ ವಿಶಿಷ್ಟ ಮಾನವ ಅನನ್ಯತೆಯ ಬಗೆಗಿನ ಈ ಅದ್ಭುತ ಸತ್ಯವು ನಮ್ಮ ಸಮಾಜದ ವಿಶಿಷ್ಟ ಲಕ್ಷಣವಾಗಿದೆ ಮತ್ತು ನಮ್ಮ ಶಿಕ್ಷಣ ವ್ಯವಸ್ಥೆಯು ಈ ಅನನ್ಯತೆಯನ್ನು ಪ್ರತಿಬಿಂಬಿಸಬೇಕು. ಪ್ರತಿ ಮಗುವಿಗೆ ಕೆಲವು ಸಹಜವಾದ ಪ್ರತಿಭೆಗಳು ಇರುತ್ತವೆ; ಕೆಲವರು ಶೈಕ್ಷಣಿಕ ತೇಜಸ್ಸಿನಿಂದ ಹೊಳೆಯುತ್ತಾರೆ, ಕೆಲವರು ಸೃಜನಶೀಲತೆಯೆಡೆಗೆ ಒಲವು ಹೊಂದಿರುತ್ತಾರೆ.
‘ಶಿಕ್ಷಣವು ಮನುಷ್ಯನಲ್ಲಿ ಈಗಾಗಲೇ ಇರುವ ಪರಿಪೂರ್ಣತೆಯ ಅಭಿವ್ಯಕ್ತಿಯಾಗಿದೆ’ ಎಂಬ ಸ್ವಾಮಿ ವಿವೇಕಾನಂದರ ಮಾತು ಈ ವಿಶಿಷ್ಟತೆಯ ಪ್ರತಿಬಿಂಬವಾಗಿವೆ. ಮಕ್ಕಳ ಸಹಜ ಪ್ರತಿಭೆಯನ್ನು ಹೊರ ತರುವುದು ಮತ್ತು ಅವರ ಆಯ್ಕೆಯ ಶೈಕ್ಷಣಿಕ ಮತ್ತು ಪಕ್ಷೇತರ ಚಟುವಟಿಕೆಗಳಲ್ಲಿ ಸೃಜನಶೀಲವಾಗಿ ತೊಡಗಿಸಿಕೊಳ್ಳುವಂತೆ ಮಾಡುವುದು ನಮ್ಮ ಶಿಕ್ಷಣ ಸಂಸ್ಥೆಗಳು ಎದುರಿಸುತ್ತಿರುವ ದೊಡ್ಡ ಸವಾಲು.
‘ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) 2020 ಪ್ರತಿಭೆಯನ್ನು ವ್ಯಾಖ್ಯಾನಿಸುವ ಮತ್ತು ಪೋಷಿಸುವ ರೀತಿಯಲ್ಲಿ ಮಾದರಿ ಬದಲಾವಣೆ ತಂದಿದೆ. ಇದು ನಮ್ಮ ದೇಶದ ಪ್ರಗತಿಗೆ ಕೊಡುಗೆ ನೀಡುವ ನಮ್ಮ ಪ್ರತಿಯೊಂದು ಮಗುವಿನಲ್ಲಿ ಇರುವ ವಿಶಿಷ್ಟತೆಯನ್ನು ವಿವರಿಸುವ ತಾತ್ವಿಕ ಚೌಕಟ್ಟಾಗಿದೆ.
ನಮ್ಮ ಪ್ರಧಾನಿ ಮೋದಿಯವರ ದೂರದರ್ಶಿ ನಾಯಕತ್ವದಲ್ಲಿ, ಮಗುವಿನ ಶೈಕ್ಷಣಿಕ ಪ್ರಯಾಣವು ಎಂದಿಗೂ ರೋಮಾಂಚನಕಾರಿ. ಒತ್ತಡ ಮತ್ತು ಆತಂಕದಿಂದ ದೂರವಿರುವುದನ್ನು ಖಚಿತ ಪಡಿಸಿಕೊಳ್ಳಲು ನಾವು ಶಿಕ್ಷಣದಲ್ಲಿ ಆರೋಗ್ಯಕರಸುಧಾರಣೆ ಜಾರಿಗೆ ತರುತ್ತಿದ್ದೇವೆ. ಈ ವಿಧಾನವು ಮೂಲಭೂತ ಕಲಿಕೆಯಿಂದ ಉನ್ನತ ಮಟ್ಟದ ಶಿಕ್ಷಣ ಮತ್ತು ಸಂಶೋಧನೆಗಳವರೆಗೆ ನಮ್ಮ ಶೈಕ್ಷಣಿಕ ಸುಧಾರಣೆಗಳಿಗೆ ಕೇಂದ್ರವಾಗಿದೆ.
ಕೆಲವು ವರ್ಷಗಳ ಹಿಂದೆ. ನಮ್ಮ ಪುಟ್ಟ ಮಕ್ಕಳಿಗೆ ಬಾಲ ವಾಟಿಕಾ ಅಥವಾ ಆಟಿಕೆ ಆಧಾರಿತ ಕಲಿಕೆಯು ವ್ಯಾಪಕವಾದ ಸಂದೇಹಗಳಿಗೆ ಕಾರಣವಾಗಿತ್ತು. ಇಂದು, ಎನ್‌ಇಪಿಯಿಂದಾಗಿ ಈ ನವೀನ ವಿಧಾನಗಳು ಆರಂಭಿಕ ಶಿಕ್ಷಣದಲ್ಲಿ ಕ್ರಾಂತಿ ಮಾಡುತ್ತಿವೆ.
ಇದನ್ನೂ ಓದಿ:ಹೆಚ್ಚುತ್ತಿರುವ ಡಿಜಿಟಲ್ ವಂಚನೆ ಜಾಗೃತಿಯೇ ಮದ್ದು
ಅಕಾಡೆಮಿಕ್ ಬ್ಯಾಂಕ್ ಆಫ್ ಕ್ರೆಡಿಟ್ ಅನ್ನು ಸ್ಥಾಪಿಸುವ ನಮ್ಮ ಕ್ರೆಡಿಟ್ ವರ್ಗಾವಣೆ ನೀತಿಯು ಮತ್ತೊಂದು ವಿನೂತನ ಹೆಜ್ಜೆಯಾಗಿದೆ. ಜೀವನದ ಮಾರ್ಗವು ಯಾವಾಗಲೂ ನೇರವಾಗಿರದೆ ಅಂಕುಡೊಂಕಾಗಿಯೂ ಇರಬಹುದು. ಕಲಿಕೆಯು ವಿಭಿನ್ನ ಸಂದರ್ಭಗಳಲ್ಲಿ ಮತ್ತು ವಿಭಿನ್ನ ಸಂಭವಿಸಬಹುದು ಎಂದು ಅದು ಗುರುತಿಸುತ್ತದೆ. ಆಸಕ್ತಿಯನ್ನು ಅನುಸರಿಸಲು, ಪ್ರಾಯೋಗಿಕ ಅನುಭವವನ್ನು ಪಡೆದುಕೊಳ್ಳಲು ನೆರವಾಗಲು ಔಪಚಾರಿಕ ಮಧ್ಯದಲ್ಲಿಯೇ ಕಲಿಯುವವರು ಶಿಕ್ಷಣವನ್ನು ನಿಲ್ಲಿಸಬಹುದು. ಔಪಚಾರಿಕ ಶಿಕ್ಷಣಕ್ಕೆ ಅವರು ಹಿಂದಿರುಗಿದಾಗ, ಪ ಅನುಭವಗಳು ಮತ್ತು ಸಾಧನೆಗಳನ್ನು ಮೌಲೀಕರಿ ಒ ಸಲಾಗುತ್ತದೆ. ಅವುಗಳನ್ನು ಶೈಕ್ಷಣಿಕ ದಾಖಲೆಗಳಲ್ಲಿ ಕ್ರೆಡಿಟ್ ಸೇರಿಸಲಾಗುತ್ತದೆ. ಈ ಹೊಂದಾಣಿಕೆಯು ಕಲಿಕೆಯ ಬಾಗಿಲುಗಳು ಯಾವಾಗಲೂ ತೆರೆದಿರುತ್ತವೆ ಎಂಬುದನ್ನು ಒತ್ತಿಹೇಳುತ್ತದೆ. ಜನರನ್ನು ಅವರ ಜೀವನದ ಯಾವುದೇ ಹಂತದಲ್ಲಿ ಕಲಿಕೆಯ ಪರಿಸರ ವ್ಯವಸ್ಥೆಗೆ
ಮರಳಿ ತರುತ್ತದೆ. ಪರೀಕ್ಷೆಗಳಲ್ಲಿನ ಯಶಸ್ಸು ಎಂದಿಗೂ ನಮ್ಮ ಯುವ ಜನತೆಯ ಒಟ್ಟಾರೆ ಅಭಿವೃದ್ಧಿಯನ್ನು ಮರೆಮಾಚದ. ಅವರ ಮಾನಸಿಕ ಆರೋಗ್ಯಕ್ಕೆ ಧಕ್ಕೆ ತರದ ಸಂಸ್ಕೃತಿಯನ್ನು ಅಭಿವೃದ್ಧಿ ಪಡಿಸಲು ಸರಕಾರ ಬದ್ಧವಾಗಿದೆ.
ಈ ಮಹತ್ವದ ಸವಾಲನ್ನು ಗುರುತಿಸಿ, ನಮ್ಮ ಸರಕಾರವು ಪರೀಕ್ಷೆಗೆ ಸಂಬಂಧಿಸಿದ ಒತ್ತಡವನ್ನು ಜಯಿಸಲು ಸಹಾಯ ಮಾಡಲು ರಾಷ್ಟ್ರೀಯ ಆದ್ಯತೆಯನ್ನು ನೀಡಿದೆ. ಪ್ರಧಾನಿ ಅಭೂತಪೂರ್ವ ‘ಪರೀಕ್ಷಾ ಪೇ ಚರ್ಚಾ’ ಉಪಕ್ರಮವು ವಿದ್ಯಾರ್ಥಿಗಳು, ಪೋಷಕರು ಮತ್ತು ವಿಧಾನವನ್ನು ಪರಿವರ್ತಿಸುವ ನಮ್ಮ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.
ಪೋಷಕರು ಮತ್ತು ನಾಗರಿಕ ಸಮಾಜವು ಈ ಪರಿವರ್ತನೆಯ ಕೇಂದ್ರವಾಗಿದೆ. ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮವು ಮಾನಸಿಕ ಆರೋಗ್ಯ ಜಿ ಮತ್ತು ಬೆಂಬಲ ಕಲಿಕೆಯ ಪರಿಸರದ ಪ್ರಾಮುಖ್ಯತೆಯನ್ನು ಎತ್ತಿ ತೋರಿಸುವಲ್ಲಿ ಮಹತ್ವದ್ದಾಗಿದೆ. ರವೀಂದ್ರನಾಥ್ ಟ್ಯಾಗೋರ್ ಅವರು ಈ ‘ಮಗುವನ್ನು ನಿಮ್ಮ ಸ್ವಂತ ಕಲಿಕೆಗೆ ಈ ಸೀಮಿತಗೊಳಿಸಬೇಡಿ, ಏಕೆಂದರೆ ಅವನು ಬೇರೆ ಸಮಯದಲ್ಲಿ ಜನಿಸಿದ್ದಾನೆ’ ಎಂದು ಹೇಳಿದ್ದಾರೆ. ಶೈಕ್ಷಣಿಕ ಬದಲಾವಣೆಯ ನಮ್ಮ ವಿಧಾನವು ಈ ಜ್ಞಾನದಿಂದ ಮಾರ್ಗದರ್ಶನ ಪಡೆದಿದೆ. ಶಿಕ್ಷಣದಲ್ಲಿ ಒತ್ತಡವು ಅನಿವಾರ್ಯ ಎಂಬ ಕಲ್ಪನೆಯನ್ನುನೈಜ ಕಲಿಕೆಯು ಬೆಳೆಯುತ್ತದೆ ಪೋಷಣೆಯ ಪರಿಸರದಲ್ಲಿ ఎంబ ತಿಳಿವಳಿಕೆಗೆ
ಬದಲಾಯಿಸಬೇಕಾಗಿದೆ. ಸಮುದಾಯ, ಶಿಕ್ಷಕರು ಮತ್ತು ಕುಟುಂಬಗಳು ಒಟ್ಟಾಗಿ ವಿದ್ಯಾರ್ಥಿಗಳು ಪ್ರವರ್ಧಮಾನಕ್ಕೆ ಬರುವಂತಹ ವಾತಾವರಣ ಸೃಷ್ಟಿಸಲು ಕೆಲಸ ಮಾಡಿದಾಗ, ಯಶಸ್ಸು ಬಂದೇ ಬರುತ್ತದೆ. ತರಗತಿಗಳಿಂದ ಮೈದಾನಗಳವರೆಗೆ, ವೃತ್ತಿಪರ ಕೇಂದ್ರಗಳಿಂದ ಪ್ರಯೋಗಾಲಯಗಳವರೆಗೆ, ತರಬೇತಿ ಸಂಶೋಧನಾ ವೈವಿಧ್ಯಮಯ ಪ್ರತಿಭೆಗಳು ಬೆಳಗುವ ಮತ್ತು ಪ್ರವರ್ಧಮಾನಕ್ಕೆ ಬರುವಂತಹ ಸ್ಥಳಗಳನ್ನು ನಾವು ಸೃಷ್ಟಿಸಬೇಕು. ಸಾಂಪ್ರದಾಯಿಕವಾದ ‘ಒಂದೇ ಅಳತೆ ಎಲ್ಲರಿಗೂ ಸರಿ ಹೊಂದುತ್ತದೆ’ ಎಂಬ ವಿಧಾನವನ್ನು ವೈಯಕ್ತಿಕ ಸಾಮರ್ಥ್ಯವನ್ನು ಗುರುತಿಸುವ ಮತ್ತು ಪೋಷಿಸುವ ಹೆಚ್ಚು ಸೂಕ್ಷ್ಮವಾದ ವ್ಯವಸ್ಥೆಗೆ ಬದಲಿಸಲು ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಆಟದ
ನಾವು ವೇಗವಾಗಿ ಏಕಸಿತ ಭಾರತದತ್ತ ಸಾಗುತ್ತಿರುವಾಗ, ನಮ್ಮ ಶಿಕ್ಷಣ ವ್ಯವಸ್ಥೆಯು ರಾಷ್ಟ್ರೀಯ ಪರಿವರ್ತನೆಯ ಪ್ರಮುಖ ಅಡಿಪಾಯವಾಗಿದೆ. ಪ್ರತಿಯೊಂದು ಕೌಶಲವು ಅರ್ಹತೆಯನ್ನು ಹೊಂದಿದೆ. ಪ್ರತಿ ಪ್ರಯಾಣವು ಮೌಲ್ಯವನ್ನು ಹೊಂದಿದೆ. ನಾವು ವೈವಿಧ್ಯಮಯ ಪ್ರತಿಭೆಗಳನ್ನು ಪೋಷಿಸಿದಾಗ, ನಮ್ಮ ಸಮಾಜದ ರಚನೆ ಬಲಗೊಳ್ಳುತ್ತದೆ.
ನಮ್ಮ ರಾಷ್ಟ್ರದ ಪ್ರತಿಯೊಬ್ಬ ಪೋಷಕರು, ಶಿಕ್ಷಕರು ಮತ್ತು ನಾಗರಿಕರಿಗೆ ಮನವಿ ಮಾಡುತ್ತೇನೆ; ಶಿಕ್ಷಣದ ಪರಿವರ್ತನೆಯು ಕೇವಲ ಸರಕಾರದ ಉಪಕ್ರಮವಲ್ಲ ಇದು ನಮ್ಮ ಸಾಮೂಹಿಕ ಬದ್ಧತೆ ಮತ್ತು ಹಂಚಿಕೆಯ ದೃಷ್ಟಿಕೋನಗಳನ್ನು ಬೇಡುವ ರಾಷ್ಟ್ರೀಯ ಧೈಯವಾಗಿದೆ. ಸರಕಾರ ಮತ್ತು ನಾಗರಿಕ ಸಮಾಜದ ನಡುವಿನ ಸಹಯೋಗ ಮತ್ತು ಪಾಲುದಾರಿಕೆಯು ನಮ್ಮ ನೀತಿಗಳು ಮತ್ತು ಕಾರ್ಯಗಳನ್ನು ವ್ಯಾಖ್ಯಾನಿಸಿದಾಗ ನಾವು ನಮ್ಮ ಗುರಿಗಳನ್ನು ಸಾಧಿಸುತ್ತೇವೆ.
ಭಾರತದ ಭವಿಷ್ಯದ ಅನನ್ಯತೆಯು ಪ್ರತಿ ಮಗುವಿನ ಅನನ್ಯತೆಯಲ್ಲಿದೆ. ನಮ್ಮಪ್ರತಿಭಾವಂತ ವಿದ್ಯಾರ್ಥಿಗಳ ಅನನ್ಯ ಕೊಡುಗೆಗಳನ್ನು ಬಳಸಿಕೊಳ್ಳುವಲ್ಲಿ ಒತ್ತಡರಹಿತ ಶಿಕ್ಷಣವು ಪ್ರಮುಖವಾಗಿದೆ.