ಪ್ರಶಸ್ತಿ ಡಬಲ್ ಮೇಲೆ ಹಂಪಿ ಕಣ್ಣು

ಪ್ರಶಸ್ತಿ ಡಬಲ್ ಮೇಲೆ ಹಂಪಿ ಕಣ್ಣು

ಮಂಗಳೂರು: ಕರ್ನಾಟಕ ಕೆಒಎ ಒಲಿಂಪಿಕ್ ಸಂಸ್ಥೆ ಆಶ್ರಯದಲ್ಲಿ ಜನವರಿ 17ರಿಂದ 23ರವರೆಗೆ ಮಂಗಳೂರು ಹಾಗೂ ಉಡುಪಿ ನಗರಗಳಲ್ಲಿ ರಾಜ್ಯ ಒಲಿಂಪಿಕ್ಸ್ ಕೂಟವನ್ನು ಏರ್ಪಡಿಸಲಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಗರದ ಮಂಗಳ ಕ್ರೀಡಾಂಗಣದಲ್ಲಿ 17ರಂದು ರಾಜ್ಯ ಒಲಿಂಪಿಕ್ ಕ್ರೀಡೆಗಳಿಗೆ ಚಾಲನೆ ನೀಡಲಿದ್ದಾರೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲೈ ಮುಗಿಲನ್ ತಿಳಿಸಿದರು.

ಈ ಕೂಟದಲ್ಲಿ 1,800 ಕ್ರೀಡಾಪಟುಗಳು ಭಾಗವಹಿಸುವ ನಿರೀಕ್ಷೆ ಇದೆ. ಜಿಲ್ಲಾಡಳಿತವು ಕ್ರೀಡಾಪಟುಗಳು, ಕೋಚ್‌ಗಳು, ಪ್ರತಿನಿಧಿಗಳು ಸೇರಿದಂತೆ 2,500ಕ್ಕೂ ಹೆಚ್ಚು ಮಂದಿಗೆ ವಸತಿ ವ್ಯವಸ್ಥೆ ಕಲ್ಪಿಸಲಿದೆ ಎಂದು ಅವರು ಸೋಮವಾರ ಸುದ್ದಿಗಾರರಿಗೆ ತಿಳಿಸಿದರು.

ನಗರದ ನೆಹರೂ ಮೈದಾನದಲ್ಲಿ ಫುಟ್‌ಬಾಲ್, ಕೊಕ್ಕೊ, ಮಂಗಳ ಕ್ರೀಡಾಂಗಣದಲ್ಲಿ ನೆಟ್‌ಬಾಲ್ ಮತ್ತು ವಾಲಿಬಾಲ್, ಎಮ್ಮೆಕೆರೆಯ ಅಂತರರಾಷ್ಟ್ರೀಯ ಈಜುಕೊಳದಲ್ಲಿ ಈಜು ಸ್ಪರ್ಧೆಗಳು, ಯು.ಎಸ್. ಮಲ್ಯ ಒಳಾಂಗಣ ಕ್ರೀಡಾಂಗಣದಲ್ಲಿ ಬ್ಯಾಸ್ಕೆಟ್‌ಬಾಲ್ ಮತ್ತು ಫೆನ್ಸಿಂಗ್‌, ಹಂಪನಕಟ್ಟೆಯ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಸಭಾಂಗಣದಲ್ಲಿ ಟೇಕ್ವಾಂಡೊ ಮತ್ತು ವುಷು, ಅಂಬೇಡ್ಕ‌ರ್ ಭವನದಲ್ಲಿ ವೇಟ್ ಲಿಫ್ಟಿಂಗ್ ಸ್ಪರ್ಧೆಗಳು, ಅತ್ತಾವರದ ಕೆಎಂಸಿ ಮರಿನಾ ಒಳಾಂಗಣ ಕ್ರೀಡಾಂಗಣದಲ್ಲಿ ಬ್ಯಾಡ್ಮಿಂಟನ್ ಸ್ಪರ್ಧೆಗಳು ನಡೆಯಲಿವೆ ಎಂದು ಅವರು ಮಾಹಿತಿ ನೀಡಿದರು.

ಇದನ್ನೂ ಓದಿ: ಬ್ಯಾಟಿಂಗ್‌ ವೈಫಲ್ಯಕ್ಕೆ ದಂಡ ತೆತ್ತ ರೋಹಿತ್ ಪಡೆ

ನ್ಯೂಯಾರ್ಕ್ (ಪಿಟಿಐ): ಭಾರತದ ಗ್ರಾಂಡ್‌ಮಾಸ್ಟರ್ ಕೋನೇರು ಹಂಪಿ ವಿಶ್ವ ಬ್ಯಾಪಿಡ್ ಚೆಸ್ ಚಾಂಪಿಯನ್‌ಷಿಪ್‌ನಲ್ಲಿ ಎರಡನೇ ಬಾರಿ ಚಿನ್ನ ಗೆದ್ದು ಒಂದು ದಿನ ಕಳೆದಿದೆ. ಈಗ ಅವರು ಮಂಗಳವಾರ ಆರಂಭವಾಗಲಿರುವ ಫಿಡೆ ವಿಶ್ವ ಬಿಲ್ಡ್ ಚಾಂಪಿಯನ್‌ಷಿಪ್‌ನಲ್ಲೂ ಚಿನ್ನ ಗೆದ್ದು ಅವಳಿ ಚಾಂಪಿಯನ್ ಆಗುವತ್ತ ಚಿತ್ತ ನೆಟ್ಟಿದ್ದಾರೆ.
2019ರಲ್ಲಿ ಮೊದಲ ಬಾರಿ ಅವರು ವಿಶ್ವ ಕ್ಯಾಪಿಡ್ ಚಾಂಪಿಯನ್ ಆಗಿದ್ದ ಹಂಪಿ, ಭಾನುವಾರ ಎರಡನೇ ಬಾರಿ ಚಿನ್ನ ಗೆಲ್ಲುವ ಮೂಲಕ ಈ ಸಾಧನೆ ಮಾಡಿದ ವಿಶ್ವದ ಎರಡನೇ ಆಟಗಾರ್ತಿ ಎನಿಸಿದ್ದಾರೆ. ಚೀನಾದ ಜು ವೆನ್‌ಜುನ್ ಮೊದಲನೆಯವರು.

ಬಿಟ್‌ನಲ್ಲೂ ಗೆದ್ದರೆ ಹೆಚ್ಚುವರಿಯಾಗಿ ₹50 ಲಕ್ಷ ಬಹುಮಾನ ಮೊತ್ತ ಅವರ ಪಾಲಾಗಲಿದೆ. ಎರಡೂ ಟೂರ್ನಿಗಳ ವಿಜೇತರಿಗೆ ಸಮಾನ ಬಹುಮಾನದ ಹಣ ನಿಗದಿಯಾಗಿದೆ.

ಬಿಟ್ಟೆ ಚಾಂಪಿಯನ್‌ಷಿಪ್‌ನ ಓಪನ್ ವಿಭಾಗದಲ್ಲಿ 13 ಸುತ್ತುಗಳಿವೆ. ಮಹಿಳಾ ವಿಭಾಗದಲ್ಲಿ 11 ಸುತ್ತುಗಳು ಇರಲಿವೆ.

ದ್ರೋಣವಲ್ಲಿ ಹಾರಿಕಾ ಕೂಡ ಬಿಟ್‌ನಲ್ಲಿ ಉತ್ತಮ ಆಟಗಾರ್ತಿ. ಇವರ ಜೊತೆಗೆ ಗ್ರಾಂಡ್‌ಮಾಸ್ಟರ್ ಆರ್. ವೈಶಾಲಿ, ಐಎಂ ದಿವ್ಯಾ ದೇಶಮುಖ್ ಕೂಡ ಉತ್ತಮ ಪ್ರದರ್ಶನದ ಹಂಬಲ- ದಲ್ಲಿದ್ದಾರೆ.

ಓಪನ್ ವಿಭಾಗದಲ್ಲಿ ಹಾಲಿ ಚಾಂಪಿಯನ್ ಮ್ಯಾಗ್ನಸ್ ಕಾರ್ಲ್ ಸನ್ ಮತ್ತೊಮ್ಮೆ ಪ್ರಶಸ್ತಿಗೆ ಫೇವರೀಟ್ ಆಗಿದ್ದಾರೆ. ವಸ್ತ್ರಸಂಹಿತೆ ಉಲ್ಲಂಘನೆಗಾಗಿ ಅವರು ರಾಪಿಡ್ ಕೋನೇರು ಹಂಪಿ ಚಾಂಪಿಯನ್‌ಷಿಪ್‌ನ ಅನರ್ಹಗೊಂಡಿದ್ದರು. ಅರ್ಧದಲ್ಲೇ ಭಾರತದ ಆಟಗಾರರಲ್ಲಿ ಆರ್. ಪ್ರಜ್ಞಾನಂದ, ಅರ್ಜುನ್ ಇರಿಗೇಶಿ, ಫ್ರಾನ್ಸ್‌ನ ಅಲಿರೇಝಾ ಫಿರೋಝ್ ಮತ್ತು ಉಜ್ಜಕಿಸ್ತಾನದ ನಾಡಿರ್ಬೆಕ್ ಅಬ್ದುಸತ್ತಾರೋವ್ ಅವರೂ ಕಾರ್ಲ್‌ಸನ್ ಅವರಿಗೆ ಪೈಪೋಟಿ ನೀಡಬಲ್ಲರು. ರಾಪಿಡ್ ವಿಭಾಗದಲ್ಲಿ ಇರಿಗೇಶಿ ಐದನೇ ಸ್ಥಾನ ಗಳಿಸಿದ್ದರು

Leave a Comment