ಬರಲಿದೆ ಬೈಜಿಕ ಗಡಿಯಾರ
ಹೊಸ ವರ್ಷಕ್ಕೆ ಹೊಸ ಬಗೆಯ ಗಡಿಯಾರ ಬರಬಹುದೇ ?. ಕೆಲವು ತಿಂಗಳುಗಳ ಹಿಂದೆ ಪ್ರಕಟವಾದ ಶೋಧಗಳ ಪ್ರಕಾರ ಜಗತ್ತಿನ ಅತ್ಯಂತ ನಿಖರವಾದ ಗಡಿಯಾರಗಳು ತಯಾರಾಗುವ ಕಾಲ ಸನ್ನಿಹಿತವಾಗಿವೆಯಂತೆ .ಪರಮಾಣುಗಳ ಕೇಂದ್ರಗಳಲ್ಲಿ ನ ಸೂಕ್ಷ್ಮ ಬದಲಾವಣೆಗಳನ್ನು ಗಮನಿಸುವ ಮೂಲಕ ಸಮಯವನ್ನು ಅಳೆಯುವ ಈ ನ್ಯೂಕ್ಲಿಯರ್ ಗಡಿಯಾರಗಳನ್ನು ತಯಾರಿಸಲು ಅಗತ್ಯವಾದ ಎಲ್ಲಾ ಸಾಧನೆಗಳನ್ನೂ ತಯಾರಿಸಲಾಗಿದೆ ಎಂದು ‘ನೇಚರ್’ ಹಾಗೂ ‘ಸೈನ್ಸ್ ‘ಪ್ರತ್ರಿಕೆಗಳು ವರದಿ ಮಾಡಿವೆ. ಗಡಿಯಾರ ಎಂದರೆ ಕಾಲಮಾಪಕ .
ಒಂದಾನೊಂದು ಕಾಲದಲ್ಲಿ ಹಗಲು ,ರಾತ್ರಿಗಳನ್ನೇ ಕಾಲಮಾಪಕವನ್ನಾಗಿ ಬಳಸುತ್ತಿದ್ದೇವು. ಇದು ಭೂಮಿಯ ಒಂದು ಗಿರಾಕಿಗೆ ಸಮಾನ. ಇದನ್ನೇ 24 ವಿಭಾಗಗಳನ್ನಾಗಿಸಿ ಗಂಟೆಗಳೆಂದು ಕರೆದೆವು. ಕಾಲವನ್ನು ಅಳೆಯುವ ಗಡಿಯಾರಗಳೆಲ್ಲದರ ಗುಣವು ಒಂದೇ. ನಿಯಕ ಅವಧಿಯಲ್ಲಿ ಅವು ತಮ್ಮ ಕ್ರಿಯೆಯನ್ನು ಮರುಕಳಿಸುತ್ತೇವೆ ಭೂಮಿ ಒಂದು ದಿನದಲ್ಲಿ ಗಿರಾಕಿ ಹೊಡೆದು ಇನ್ನೊಂದನ್ನು ಆರಂಭಿಸುತ್ತದೆ. ಭೂಮಿ ಸೂರ್ಯನ ಸುತ್ತಲೂ ಒಂದು ಪ್ರದಕ್ಷಿಣೆಯನ್ನು ಮುನ್ನೂರ 365… 25 ದಿನಗಳಲ್ಲಿ ಪೂರೈಸಿ ,ಇನ್ನೊಂದು ಪ್ರದಕ್ಷಿಣೆಗೆ ತೊಡಗುತ್ತದೆ .ಹೀಗೆ ನಿಯತವಾಗಿ ಮರುಕಳಿಸುವ ಯಾವುದೇ ವಿದ್ಯಮಾನವುವೂ ಕಾಲವನ್ನು ಅಳೆಯಲು ನೆರವಾಗಬೇಕು ಎನ್ನುವುದೇ ಗಡಿಯಾರದ ತತ್ವ .
ಕಾಲವನ್ನು ಅಳೆಯಲು ಆರಂಭದ ಗಡಿಯಾರಗಳಲ್ಲಿ ರಂದ್ರದ ಮೂಲಕ ತೊಟ್ಟಿಕ್ಕುವಾ ನೀರು ಇಲ್ಲವೇ ,ಮರಳು ನೆರವಾಗುತ್ತಿತ್ತು. ಅನಂತರದ ಗಿಡಗಳಲ್ಲಿ ಲೋಲಕ ವೊಂದರ ತುಯ್ದಾಟವೇ ಕಾಲವನ್ನು ಮಾಪಿಸಿತು .ನಿರ್ದಿಷ್ಟ ಭಾರವನ್ನು ಹೊತ್ತು, ನಿರ್ದಿಷ್ಟ ಉದ್ದವಿರುವ ಲೋಲಕ ಒಮ್ಮೆ ಅತ್ತಿದ ಇತ್ತಾ ನಿರ್ದಿಷ್ಟ ಅವಧಿಯಲ್ಲಿ ತುಯ್ದಾಡುತ್ತಿದ್ದುದನ್ನು ಗಮನಿಸಿದ ಭೌತವಿಜ್ಞಾನಿಗಳು ಈ ಅವಧಿಯನ್ನೇ ‘ ಸೆಕೆಂಡು ‘ಎಂದು ಕರೆದರು. ಹೀಗೆ ಅತಿ ಸಣ್ಣದೊಂದು ಕಾಲದ ಅಳತೆ ಸಿದ್ಧವಾಗಿತ್ತು . ಇದಕ್ಕಿಂತಲೂ ಸೂಕ್ತವಾದ ಅಳತೆ ಸಾಧ್ಯವಿಲ್ಲವೇ? ಈ ಪ್ರಯತ್ನದಲ್ಲಿಯೇ ಹೊಸ ಬಗೆಯ ನಿಯತಕಾಲಿಕ ಘಟನೆಗಳನ್ನು ಕಾಲಮಾಪಕಗಳನ್ನಾಗಿ ಬಳಸುವ ಪ್ರಯತ್ನ ಶುರುವಾಯಿತು.ಕ್ವಾ ಟ್ಮಾಗರಿಯಾರಗಳಲ್ಲಿ ಹರಳುಗಳು ವಿದ್ಯುತ್ ಹರಿದಾಗ ಕಂಪಿಸುವುದನ್ನು ಬಳಸಿದರು. ಎಲೆಕ್ಟ್ರಾನಿಕ್ ಗಡಿಯಾರಗಳಲ್ಲಿ ವಿದ್ಯುತ್ತಿನ ತರಂಗಗಳ ದೂರಗಳು ಅಥವಾ ಕಂಪನಗಳನ್ನೇ ಅಳೆಯನ್ನಾಗಿ ಬಳಸುತ್ತಾರೆ .
ಇದನ್ನೂ ಓದಿ:- ಕಾರುಗಳಿಗೆ ಜಲಜನಕದ ಅಂಟಿನ ನಂಟು
ಇದು ಕೂಡ ಸೆಕೆಂಡಿಗೆ 60 ಅಥವಾ 50 ಬಾರಿ ಬದಲಾಗುತ್ತದೆ .ಇದಕ್ಕಿಂತಲೂ ನಿಖರವಾದ ಗಡಿಯಾರ ಎಂದರೆ ಇನ್ನು ಕಡಿಮೆ ಅವಧಿಯಲ್ಲಿ ಹೆಚ್ಚು ಬಾರಿ ಮರುಕಳಿಸುವ ವಿದ್ಯಮಾನವಾಗಬೇಕು .ಪರಮಾಣು ಗಡಿಯಾರಗಳು ಇದನ್ನು ಸಾಧಿಸುತ್ತದೆ .ಪರಮಾಣುಗಳಲ್ಲಿ ಇರುವ ಎಲೆಕ್ಟ್ರಾನುಗಳಿಗೆ ಶಕ್ತಿಯೂ ಬಿಸಿಯಾದಾಗ ಅವು ಉತ್ತೇಜನಗೊಳ್ಳುತ್ತವೆ.ಅನಂತರ ಸ್ವಲ್ಪ ಸಮಯದ ನಂತರ ಮೊದಲು ಸ್ಥಿತಿಗೇ ಮರುಳುತ್ತವೆ. ಹೀಗೆ ಮರುಳುವಾಗ ನಿರ್ದಿಷ್ಟ ಪ್ರಮಾಣದ ಶಕ್ತಿಯನ್ನು ವಿಕಿರಣ ಅಥವಾ ಬೆಳಕಿನ ರೂಪದಲ್ಲಿ ಚಮ್ಮಿಸುತ್ತೇವೆ. ಈ ವಿದ್ಯಮಾನವೇ ಕಾಲವನ್ನು ಅಳೆಯಲು ಬಳಸುತ್ತಾರೆ. ಪರಮಾಣುಗಳಲ್ಲಿ ಕೆಲವು ಉತ್ತೇಜಿತ ಸ್ಥಿತಿಯಲ್ಲಿಯೂ ,ಕೆಲವು ಸಾಮಾನ್ಯ ಸ್ಥಿತಿಯಲ್ಲಿಯೂ ಇರುತ್ತವೆ. ಇವೆರಡೂ ಸ್ಥಿತಿಗಳ ನಡುವೆ ಪರಮಾಣುಗಳು ಹೊಯ್ದಾಡುತ್ತಿರುತ್ತವೆ. ಇದೊಂದು ರೀತಿ ಕಂಪನ ಎನ್ನಬಹುದು. ಈ ಕಂಪನಕ್ಕೆ ತಾಳೆ ಹೊಂದುವಂತೆ ತರಂಗಾಂತರ ಇರುವ ಕಿರಣಗಳಿಂದ ಹೊಡೆದಾಗ ನಿರ್ದಿಷ್ಟ ಪ್ರಮಾಣದ ಪರಮಾಣುಗಳಷ್ಟೇ ಮತ್ತೊಂದು ಸ್ಥಿತಿಗೆ ಬದಲಾಗುತ್ತದೆ .ಎಷ್ಟು ಪರಮಾಣುಗಳು ಇದೇ ಬಗೆಯ ವಿದ್ಯಮಾನವನ್ನು ಪರಮಾಣುಗಳ ಕೇಂದ್ರಗಳನ್ನು ಬಳಸಿಯೂ ಮಾಡಬಹುದಲ್ಲ ಎನ್ನುವ ಕಲ್ಪನೆ ಇತ್ತು.
ಅದುವೇ ನ್ಯೂಕ್ಲಿಯರ್ ಗಡಿಯಾರ ಅಥವಾ ಬೈಜಿಕ ಗಡಿಯಾರದ ಕಲ್ಪನೆ. ಆದರೆ ಪರಮಾಣು ಬೀಜಗಳ ಸ್ಥಿತಿಯನ್ನು ಬದಲಿಸುಲು ಶಕ್ತಿಯ ಪ್ರಮಾಣ ಬಹಳ ಹೆಚ್ಚು .ಆದರೆ 20 ವರ್ಷಗಳ ಹಿಂದೆ ಥೋರಿಯಮಿನ ಥೋರಿಯಂ 249 ಎನ್ನುವ ಐಸೋಟೋಪನ್ನು ಬಳಸಬಹುದು ಎನ್ನುವ ಕಲ್ಪನೆ ಬಂದಿತ್ತು. ಥೋರಿಯಂ-249 ರ ಬೀಜಗಳು ಸ್ಥಿತ್ಯಾತರ ವಾಗಲು ಬಹಳ ಕಡಿಮೆ ಶಕ್ತಿ ಸಾಕು ಎಂದು ಲೆಕ್ಕಾಚಾರಗಳು ತಿಳಿಸಿದ್ದವು. ಆದರೆ ಎಷ್ಟು ಶಕ್ತಿ ಎಂಬುದು ತಿಳಿದಿರಲಿಲ್ಲ. ಹೀಗಾಗಿ 20 ವರ್ಷಗಳಿಂದಲೂ ಈ ಪ್ರಯತ್ನ ನೆನೆಗುದಿಗೆ ಬಿದ್ದಿತ್ತು. ಕಳೆದ ವರ್ಷ ಫ್ರಾನ್ಸಿನ ರಾಷ್ಟ್ರೀಯ ಸಂಶೋಧನಾಲಯದ ಭೌತವಿಜ್ಞಾನಿಗಳು ಆಕಸ್ಮಿಕವಾಗಿ ಥೋರಿಯಂ- 249ರ ಬೀಜಗಳು ಸ್ವಸ್ಥಿತಿಗೆ ಮರುಳುವಾಗ ಎಂಟು ಎಲೆಕ್ಟ್ರಿನ್ ವೋಲ್ಟಿ ನಷ್ಟು ಶಕ್ತಿಯನ್ನು ಸೂಸುತ್ತವೆ ಎಂದು ಅಳೆದರು. ಆಂದರೆ ಕನಿಷ್ಠ ಇಷ್ಟು ಶಕ್ತಿಯನ್ನು ನೀಡುವುದು ಸಾಧ್ಯವಾದರೆ ಆ ಬೀಜಗಳ ಸ್ಥಿತ್ಯಂತರಾ ಸಾಧ್ಯ ಎಂದಾಯಿತು. ಇದನ್ನು ಲೇಸರ್ ಬೆಳಕಿನಿಂದ ಮಾಡಬಹುದು. ದುರಾದೃಷ್ಟವಶಾತ್, ಲೇಸರ್ ನ ಬೆಳಕುಗಳು ಪ್ರತಿ ಯೊಂದರ ತರಂಗಾಂ ತರವೂ ಬೇರೆ ಬೇರೆಯಾಗಿರುತ್ತದೆ. ಯಾವ ತರಂಗಾ ತರದ ಬೆಳಕು ಇಷ್ಟು ಶಕ್ತಿಯನ್ನು ಕೊಡುತ್ತದೆ ಎಂಬುದನ್ನು ಪತ್ತೆಮಾಡಿದ್ದಲ್ಲದೆ ಈ ಕೆಲಸ ಮುಂದುವರಿಯುತ್ತಿರಲಿಲ್ಲ.
ಇತ್ತೀಚಿಗಷ್ಟೇ ಜಪಾನಿನ ರಾಷ್ಟ್ರೀಯ ಲೇಸರ್ ಸಂಶೋಧನಾಲಯದ ವಿಜ್ಞಾನಿಯೆ ಮತ್ತು ಸಂಗಡಿಗರು ಸಾವಿರಾರು ಲೇಸರ್ ತರಂಗಗಳನ್ನು ಬಳಸಿ, ಯಾವ ತರಂಗ ಥೋರಿಯಂ 249 ಬೀಜಗಳನ್ನು ಉತ್ತೇಜಿಸುತ್ತದೆ ಎಂದು ಪತ್ತೆ ಮಾಡಿದ್ದಾರೆ. ಇದೇ ವೇಳೆ ಅಮೆರಿಕದ ವಿಜ್ಞಾನಿಗಳು, ಮರಳ ಕಾಣೆಗಳೊಳಗೆ ಥೋರಿಯಂ 249 ಕೊಡಿಸಿ, ಅವು ಈ ಲೇಸರ್ ತರಂಗದಿಂದ ಮಿನುಗಬಲ್ಲುವೇ ಎಂದು ಪರೀಕ್ಷಿಸಿದ್ದಾರೆ. ಇವೆಲ್ಲವೂ ಸಫಲವಾಗಿದೆ. ಸೀಸಿಯಂ ಪರಮಾಣು ಗಡಿಯಾರದ ಜೊತೆಗೆ ಹೋಲಿಸಿದಾಗ, ಅಷ್ಟೇ ನಿಖರವಾಗಿ ಸಮಯ ಹೇಳುತ್ತವೆಂದು ಸ್ಪಷ್ಟವಾಗಿದೆ. ಒಂದೇ ಸಮಸ್ಯೆ. ಆ ಲೇಸರನ್ನು ನಿಖರವಾಗಿ ತಯಾರಿಸುವ ಸಾಧನವೋಂದು ಬೇಕು ಅಷ್ಟೇ. ಅಷ್ಟಾದರೆ ಬೈಜಿಕ ಗಡಿಯಾರ ಸಿದ್ದವಾದಂತೆ. ಮರಳಿನ ಗಡಿಯಾರದಿಂದ ಮರಳಕಣದ ಗಡಿಯಾರಕ್ಕೆ ಪಲ್ಲಟ ವಾಗಲಿದೆ.