ಬಾಳೆ ಬಂಗಾರ!

ಬಾಳೆ ಬಂಗಾರ!

ವಿದೇಶಿ ಮಾರುಕಟ್ಟೆಯಲ್ಲಿ ಭಾರತೀಯ ಬಾಳೆ ಹಣ್ಣಿನ ಸುವರ್ಣಯುಗ ಶುರುವಾಗಿದೆ. ಮಾವಿನ ಬಳಿಕ ಇದೀಗ ಬಾಳೆ ಹಣ್ಣೂ ಸಹ ವಿದೇಶಿಗರನ್ನು ಸೆಳೆಯುತ್ತಿದೆ. ವಿದೇಶಿಗರು ಭಾರತೀಯ ನೆಲದ ಬಾಳೆ ಹಣ್ಣಿಗೆ ಮನಸೋತು ಬಹುಬೇಡಿಕೆ ಇಡುತ್ತಿರುವ ಟ್ರೆಂಡ್ ಕಾಣಿಸಿದ್ದು, ಇದರ ಪರಿಣಾಮ ಕಳೆದ ದಶಕದಲ್ಲಿ ಭಾರತದ ಬಾಳೆಹಣ್ಣಿನ ರಫ್ತು ಹತ್ತು ಪಟ್ಟು ಹೆಚ್ಚಳ ಕಂಡಿದೆ.

ಹಿಂದೆಲ್ಲ ಸಾಂಪ್ರದಾಯಿಕ ಬೇಸಾಯಕ್ಕೆ ಜೋತು ಬಿದ್ದಿದ್ದ ರೈತ ಸಮುದಾಯ ಗಳಿಸಿದ್ದಕ್ಕಿಂತ ಕಳೆದುಕೊಳ್ಳುವುದೇ ಹೆಚ್ಚಿರುತ್ತಿತ್ತು. ಆದರೆ ಈಗ ಕಾಲ ಬದಲಾಗಿದೆ. ಕಾಲಕ್ಕೆ ತಕ್ಕಂತೆ ರೈತರು ಬದಲಾಗುತ್ತಿದ್ದಾರೆ. ಬಹುತೇಕರಿಗೆ ಜಾಗತಿಕ ಮಾರುಕಟ್ಟೆಯ ಅರಿವಿದ್ದು, ಅದಕ್ಕೆ ತಕ್ಕಂತೆ ಗುಣಮಟ್ಟದ ಉತ್ಪನ್ನಕ್ಕೆ ಆದ್ಯತೆ ನೀಡುತ್ತಿದ್ದಾರೆ. ಅದರ ಫಲವಾಗಿ ‘ಆಮದು’ ಮಾಡಿಕೊಳ್ಳುವುದಕ್ಕಿಂತ ‘ರಫ್ತು’ ಹೆಚ್ಚಾಗುತ್ತಿದೆ. ಭಾರತೀಯ ಆಹಾರೋತ್ಪನ್ನಗಳ ರಫ್ತು ಪ್ರಮಾಣ 17.8 ಬಿಲಿಯನ್ ಮೀರಿದ್ದು, ಗಮನಾರ್ಹ ಬೆಳವಣಿಗೆ ಕಾಣಬಹುದಾಗಿದೆ. ಅದರಲ್ಲೂ ಉತ್ತಮ ದರ್ಜೆಯ ಹಣ್ಣುಗಳಿಗೆ ಬೃಹತ್ ಮಾರುಕಟ್ಟೆ ಇದ್ದು, ನಾಡಿನ ಬಾಳೆಹಣ್ಣು ಕೂಡ ಪ್ರಾಧಾನ್ಯ ಪಡೆದುಕೊಳ್ಳುತ್ತಿದೆ. 2025ನೇ ಆರ್ಥಿಕ ವರ್ಷದ ಮೊದಲ 9 ತಿಂಗಳಲ್ಲಿ ತಾಜಾ ಹಣ್ಣುಗಳು ಮತ್ತು ತರಕಾರಿಗಳ ಸಾಗಣೆ ಶೇ.5ಕ್ಕಿಂತ ಹೆಚ್ಚು ಅಂದರೆ 2.65 ಬಿಲಿಯನ್‌ಗೆ ತಲುಪಲಿದೆ. ಉತ್ಪಾದಿತ ಆಹಾರ ಧಾನ್ಯಗಳ ಸಾಗಣೆ ಶೇ.10ಕ್ಕಿಂತ ಹೆಚ್ಚಾಗಿ 2.03 ಬಿಲಿಯನ್‌ಗೆ ತಲುಪಿದೆ.

ರಫ್ತು ಪ್ರಮಾಣ ಹೆಚ್ಚಳ ಕೇಂದ್ರದ ಕೃಷಿ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರದ ಪ್ರಕಾರ, ಭಾರತವು ಸಮುದ್ರ ಮಾರ್ಗದ ಮೂಲಕ ನೆದರ್ಲೆಂಡ್‌ಗೆ ಯಶಸ್ವಿ ಪ್ರಾಯೋಗಿಕ ಸಾಗಣಿ ನಂತರದಲ್ಲಿ ಮುಂದಿನ ಐದು ವರ್ಷಗಳಲ್ಲಿ 1 ಬಿಲಿಯನ್ ಡಾಲರ್ ಮೌಲ್ಯದ ಬಾಳೆಹಣ್ಣು ರಫ್ತು ಮಾಡುವ ಗುರಿ ಹೊಂದಿದೆ. ಸಮುದ್ರ ಮಾರ್ಗ ಮುಕ್ತವಾಗಿದ್ದರಿಂದ ಭಾರತೀಯ ಬಾಳೆಹಣ್ಣಿಗೆ ರಷ್ಯಾ ಪ್ರಮುಖ ಮಾರುಕಟ್ಟೆಯಾಗಿ ಹೊರ ಹೊಮ್ಮುವ ನಿರೀಕ್ಷೆಯನ್ನೂ ಹೊಂದಲಾಗಿದೆ. 2023-24ರ ಆರ್ಥಿಕ ವರ್ಷದಲ್ಲಿ ಭಾರತವು 300 ಮಿಲಿಯನ್ ಯುಎಸ್ ಡಾಲರ್ಮೌ ಲ್ಯದ ಬಾಳೆಹಣ್ಣನ್ನು ರಫ್ತು ಮಾಡಿದೆ. ಇದು 2022-23ರಲ್ಲಿನ 176 ಯುಎಸ್ಮಿ ಲಿಯನ್‌ನಿಂದ ಗಮನಾರ್ಹ
ಹೆಚ್ಚಳಕಂಡಂತೆ. ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಸಂಗ್ರಹಿಸಿದ ಅಂಕಿ-ಅಂಶಗಳ ಪ್ರಕಾರ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರತದ ಕದಳಿ ಫಲಕ್ಕೆ ಮನಸೋತ ವಿದೇಶಿಗರು ಭಾರತೀಯ ಬಾಳೆಹಣ್ಣಿನ ಅಗತ್ಯತೆ ತೀವ್ರವಾಗಿದೆ
ಎಂಬುದನ್ನು ಕಂಡುಕೊಳ್ಳಲಾಗಿದೆ.

ಇದನ್ನೂ ಓದಿ: ನಬಾರ್ಡ್ ಪುನರ್ಧನ ಕಡಿತ ಪರಿಶೀಲನೆ ಸಾಧ್ಯತೆ

ಜಾಗತಿಕವಾಗಿ ಬಾಳೆಹಣ್ಣು ರಫಿನಲ್ಲಿ ದೇಶದ ಪಾಲು 2013ರಲ್ಲಿ ಕೇವಲ 0.21 ಪ್ರತಿಶತದಷ್ಟಿತ್ತು. ಅದೀಗ 2023ರ ದಶಕದಲ್ಲಿ 1.74 ಪ್ರತಿಶತಕ್ಕೆ ಏರಿದೆ. ಜಾಗತಿಕವಾಗಿ ಬಾಳೆಹಣ್ಣು ವರ್ಷಕ್ಕೆ ಸುಮಾರು 10 ಬಿಲಿಯನ್ ಯುಎಸ್ ಡಾಲರ್ ಉತ್ಪಾದನೆ ಕಾಣುತ್ತಿದೆ. ಆದಾಗ್ಯೂ, ಬಾಳೆಹಣ್ಣು ಉತ್ಪಾದನೆಯ 15ರಿಂದ 20 ಪ್ರತಿಶತದಷ್ಟು ಮಾತ್ರ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ವಹಿವಾಟು ಆಗುತ್ತಿದ್ದು, ಇದೀಗ ಮಾರುಕಟ್ಟೆ ವಿಸ್ತರಿಸಿಕೊಳ್ಳುತ್ತಿದೆ. ಅವಕಾಶವೂ ಸಾಕಷ್ಟಿದೆ. ಭಾರತ, ಚೀನಾ ಮತ್ತು ಬ್ರೆಜಿಲ್‌ನಂತಹ ದೊಡ್ಡ ಉತ್ಪಾದಕ ದೇಶಗಳಲ್ಲಿ ಬಾಳೆ ಹಣ್ಣು ಹೆಚ್ಚಾಗಿ ಜನರ ಆಹಾರಕ್ರಮದ ಭಾಗವಾಗಿದೆ. ಭಾರತ ಅತಿದೊಡ್ಡ ಉತ್ಪಾದಕ ರಾಷ್ಟ್ರವಾಗಿದ್ದು, ಈಗ ರಫ್ತು ಮಾಡುವಲ್ಲಿಯೂ ಮುಂಚೂಣಿಯಲ್ಲಿ ಕಾಣಿಸಿಕೊಳ್ಳಲಾರಂಭಿಸಿದೆ.

Leave a Comment