ಬಿಯರ್ ದರ ಏರಿಕೆಗೆ ಇಳಿದ ಕಿಕ್

ಬಿಯರ್ ದರ ಏರಿಕೆಗೆ ಇಳಿದ ಕಿಕ್


ಆರ್ಥಿಕ ಸಂಪನ್ಮೂಲಗಳ ಸಂಗ್ರಹಕ್ಕಾಗಿ ಬಿಯ‌ರ್ ದರ ಹೆಚ್ಚಿಸಿದ ರಾಜ್ಯ ಸರಕಾರಕ್ಕೆ ಮದ್ಯಪ್ರಿಯರು ಶಾಕ್ ಕೊಟ್ಟಿದ್ದಾರೆ. ಬೆಲೆ ಏರಿಕೆ ಕಾರಣಕ್ಕೆ ಮದ್ಯಪ್ರಿಯರು ಬಿಯರ್ ಖರೀದಿಗೆ ನಿರಾಸಕ್ತಿ ತೋರಿದು,ರಾಜ್ಯದಲ್ಲಿ ಬಿಯರ್ ಮಾರಾಟ ಶೇ.16ರಷ್ಟು ಕುಸಿತ ಕಂಡಿದೆ. ಸರಕಾರ ಜ.20ರಿಂದ ಜಾರಿಗೆ ಬರುವಂತೆ ಬಿಯರ್ ಮೇಲಿನ ಹೆಚ್ಚುವರಿ ಅಬಕಾರಿ ಸುಂಕವನ್ನು (ಎಇಡಿ) ಹೆಚ್ಚಿಸಿ ದರ ಏರಿಕೆ ಮಾಡಿತ್ತು. ಇದರೊಂದಿಗೆ ಸಾಮಾನ್ಯ ಬ್ರ್ಯಾಂಡ್‌ಗಳಿಂದ ಪ್ರೀಮಿಯಂ ಬ್ರ್ಯಾಂಡ್ ಗಳವರೆಗೆ ಎಲ್ಲಾ ಬಗೆಯ ಬಿಯರ್ ದರ ಹೆಚ್ಚಳವಾಗಿದ್ದು ಪ್ರತಿ ಬಿಯರ್ ಬಾಟಲಿನ ದರವು ಕನಿಷ್ಠ 10 ರಿಂದ 50 ರೂ ವರೆಗೆ ಏರಿಕೆಯಾಗಿತ್ತು ಅದರಲ್ಲೂ ಆಲ್ಕೋಹಾಲ್ ಪ್ರಮಾಣ ಹೆಚ್ಚಿರುವ ಬಿಯರ್ ಗಳ ಬೆಲೆಯೂ ಗಣನೀಯವಾಗಿ ಹೆಚ್ಚಳವಾಗಿತು, ದರ ಏರಿಕೆ ಕ್ರಮವು ಬಿಯರ್ ವಹಿವಾಟಿನ ಮೇಲೆ ಪ್ರತಿಕೂಲ ಪರಿಣಾಮ ಬೇರಿದ್ದು ರಾಜ್ಯದಲ್ಲೆಡೆ ಜ .2೦ರಿಂದಲೋ ಬಿಯರ್, ಮಾರಾಟ ಕುಸಿಯುತ್ತಲೆ ಸಾಗಿದೆ.

ಪ್ರಸಕ್ತ ಆರ್ಥಿಕ ವರ್ಷದ ಮೂಲದ ಒಂಬತ್ತು ತಿಂಗಳಲ್ಲಿ ಅಬಕಾರಿ ಇಲಾಖೆಯಿಂದ ನಿರೀಕ್ಷಿತ ಆದಾಯ ಬಾರದ ಹಿನ್ನೆಲೆಯಲ್ಲಿ ಸರ್ಕಾರ ಆದಾಯದ ಗುರಿ ಸಾಧನೆಗಾಗಿ ಬಜೆಟ್ ಗೆ ಮುನ್ನವೇ ಬಿಯರ್ ದರ ಹೆಚ್ಚಿಸಿತ್ತು. ಸರಕಾರದ ಈ ನಡೆಯು ಬಿಯರ್ ಪ್ರಿಯರ ಕಣ್ಣುಕೆಂಪಾಗಿಸಿದೆ. ಬೆಲೆ ಹೆಚ್ಚಳದಿಂದ ಬೇಸರಗೊಂಡಿರುವ ಮದ್ಯಪ್ರಿಯರು ಬಿಯರ್ ಸಹವಾಸವೇ ಬೇಡ ಎನ್ನುತ್ತಿದ್ದಾರೆ. ”ಸರಕಾರ ಪದೇಪದೆ ದರ ಏರಿಕೆ ಮಾಡಿ ಜೇಬಿಗೆ ಕತ್ತರಿ ಹಾಕುತ್ತಿದ್ದು, ಕಿಸೆಯೆಲ್ಲಾ ಖಾಲಿಯಾದರೂ ಕಿಕ್ ಮಾತ್ರ ಏರುತ್ತಿಲ್ಲ. ಎಂಬುದು ಮದ್ಯ ಪ್ರಿಯರ ಅಳಲು.45 ಲಕ್ಷ ಲೀಟರ್ ಇಳಿಕೆ: ರಾಜ್ಯದಲ್ಲಿ ಕಳೆದ ವರ್ಷ ಜ.20ರಿಂದ ಫೆ.20ರವರೆಗೆ287 ಲಕ್ಷ ಲೀಟರ್(36.88 ಲಕ್ಷ ಬಾಕ್ಸ್) ಬಿಯರ್ ಮಾರಾಟವಾಗಿತ್ತು. ಈ ವರ್ಷ ಇದೇ ಅವಧಿಯಲ್ಲಿ 243 ಲಕ್ಷ ಲೀಟರ್ (31.16 ಲಕ್ಷ ಬಾಕ್ಸ್) ಬಿಯರ್ ಮಾರಾಟವಾಗಿದೆ.

ಇದನ್ನೂ ಓದಿ:ಟೋಲ್ ವಸೂಲಿ ಮಾಡಿದರೂ ಸೌಲಭ್ಯವಿಲ್ಲ

ಹಿಂದಿನ ವರ್ಷಕ್ಕೆ ಹೋಲಿಸಿದರೆ ಕಳೆದೊಂದು ತಿಂಗಳಲ್ಲಿ ಸುಮಾರು 45 ಲಕ್ಷ ಲೀ. ಬಿಯರ್ ಮಾರಾಟ ಕಡಿಮೆಯಾಗಿದೆ. ಬಾರ್ ಆ್ಯಂಡ್ ರೆಸ್ಟೋರೆಂಟ್ ಮತ್ತು ಚಿಲ್ಲರೆ ಮದ್ಯದ ಅಂಗಡಿಗಳಲ್ಲಿ ಬಿಯ‌ರ್ ಮಾರಾಟ ಕುಸಿದಿರುವ ಕಾರಣ, ರಾಜ್ಯ ಪಾನೀಯ ನಿಗಮಕ್ಕೆ ಬಿಯರ್‌ಗಾಗಿ ಸಲ್ಲಿಸುವ ಖರೀದಿ ಬೇಡಿಕೆ (ಪರ್ಚೇಸ್ ಇಂಡೆಂಟ್) ಕೂಡ ಇಳಿಕೆಯಾಗಿದೆ. ದೇಶೀಯ ಮದ್ಯದ ವಹಿವಾಟಿನಲ್ಲಿ ಹೆಚ್ಚಿನ ಏರಿಳಿತವಾಗಿಲ್ಲ. ಹಿಂದಿನ ವರ್ಷ ಇದೇ ಅವಧಿಯಲ್ಲಿ 497 ಲಕ್ಷ ಲೀ. ಐಎಂಎಲ್ ಮಾರಾಟವಾಗಿತ್ತು. ಈಗ 464 ಲಕ್ಷ ಲೀ. ಐಎಂಎಲ್ ಮಾರಾಟವಾಗಿದೆ.ಬಿಯರ್ ಮಾರಾಟ ಕುಸಿತಕ್ಕೆ ತೆರಿಗೆ ಹೆಚ್ಚಳವೇ ಪ್ರಮುಖ ಕಾರಣ. ಬಿಯರ್ ಮಾರಾಟ ಕುಸಿತ ಕಂಡಿದ್ದರೂ ಸರಕಾರದ ಬೊಕ್ಕಸಕ್ಕೆ ಲುಕ್ಸಾನು ಇಲ್ಲ, ಏಕೆಂದರೆ ಎಇಡಿ ಹೆಚ್ಚಳ ಮಾಡಿರುವುದರಿಂದ ನಿರೀಕ್ಷೆಯಂತೆಯೇ ಆದಾಯ ಹೆಚ್ಚಾಗಲಿದೆ. ಆದರೆ, ಪದೇಪದೆ ದರ ಏರಿಕೆಯಿಂದ ವ್ಯಾಪಾರಕ್ಕೆ ಹೊಡೆತ ಬೀಳುತ್ತಿದೆ,” ಎಂದು ಅಬಕಾರಿ ಉದ್ಯಮದ ಮಂದಿ ಅಳಲು ತೋಡಿಕೊಂಡಿದ್ದಾರೆ.


ಅಗ್ಗದ ಬ್ರ್ಯಾಂಡ್ ಗೆ ಹೆಚ್ಚಿದ ಬೇಡಿಕೆ: ಎಇಡಿ ಹೆಚ್ಚಳದಿಂದ ಮದ್ಯಪ್ರಿಯರಿಗೆ ಬಿಯರ್ ದರ ಏರಿಕೆಯ ಬಿಸಿ ತಟ್ಟಿದೆ. ಖರೀದಿ ಶಕ್ತಿ ಕುಗ್ಗಿರುವುದರಿಂದ ಸಾಕಷ್ಟು ಮದ್ಯ ಪ್ರಿಯರು ಕಡಿಮೆ ಬೆಲೆಯ ಬಿಯರ್ ಬ್ರ್ಯಾಂಡ್ ಗಳತ್ತ ಮುಖಮಾಡುತ್ತಿದ್ದಾರೆ. ಮತ್ತೆ ಕೆಲ ಮದ್ಯಪ್ರಿಯರು ಬಿಯರ್ ಖರೀದಿ ಪ್ರಮಾಣ ಕಡಿಮೆ ಮಾಡಿದ್ದಾರೆ. ಪ್ರೀಮಿಯಂ ಬ್ರಾಂಡ್ ಬಿಯರ್ ಕುಡಿಯುತ್ತಿದ್ದವರು ಕಡಿಮೆ ಬೆಲೆಯ ಮಾಮೂಲಿ ಬ್ರ್ಯಾಂಡ್‌ನ ಬಿಯರ್ ಖರೀದಿಸಲು ಆರಂಭಿಸಿದ್ದಾರೆ. ಹೀಗಾಗಿ, ದುಬಾರಿ ಬ್ರ್ಯಾಂಡ್ ಗಳ ಬಿಯರ್‌ಗಳಿಗೆ ಮೊದಲಿದ್ದಂತೆ ಬೇಡಿಕೆ ಇಲ್ಲ, ಬಹುತೇಕ ಕಡಿಮೆ ಬೆಲೆಯ ಬಿಯರ್‌ಗಳಿಗೆ ಬೇಡಿಕೆ ಹೆಚ್ಚಿದೆ.

Leave a Comment