ಭಗವಂತನ ನಾನಾ ರೂಪಗಳನ್ನು ಬಲ್ಲವರಾರು?

ಭಗವಂತನ ನಾನಾ ರೂಪಗಳನ್ನು ಬಲ್ಲವರಾರು?

ಅದೊಂದು ದಿನ ಬೆಳಿಗ್ಗೆ 9 ಗಂಟೆಯ ಸಮಯ. ಎಲ್ಲರೂ ಅವರವರ ಮನೆಕೆಲಸ ಮುಗಿಸಿ ತಮ್ಮ ಆಫೀಸುಗಳಿಗೆ ಹೋಗುವ ತರಾತುರಿಯಲ್ಲಿದ್ದರು. ಆಟೋ ಮತ್ತು ಕ್ಯಾಬ್ ಗಳಿಗಂತೂ ಈ ಸಮಯದಲ್ಲಿ ಎಲ್ಲಿಲ್ಲದ ಡಿಮಾಂಡು. ಅಷ್ಟರಲ್ಲಿ ಒಬ್ಬ ಹೆಣ್ಣುಮಗಳು ಹೇಗೋ ಒಂದು ಆಟೋವನ್ನು ಬುಕ್ ಮಾಡಿಕೊಂಡು ಬಿಟ್ಟಳು. ಆಕೆ, ಇನ್ನೇನು ಆಟೋವನ್ನು ಹತ್ತಬೇಕೆನ್ನುವಷ್ಟರಲ್ಲಿ, ಗೌರವಾನ್ವಿತನಂತೆ ತೋರುವ ಒಬ್ಬ ವ್ಯಕ್ತಿ ತಕ್ಷಣ ಆಕೆಯ ಬಳಿ ಓಡೋಡಿ ಬಂದು ದಯವಿಟ್ಟು ‘ಈ ಆಟೋವನ್ನು ನನಗೆ ಬಿಟ್ಟು ಬಿಡಿ’ ಎಂದು ಕೇಳಿಕೊಂಡ. ಅದು ಹೇಗೆ ಸಾಧ್ಯ? ನಾನೀಗಲೇ ಇದನ್ನು ಬುಕ್ ಮಾಡಿಯಾಗಿದೆ. ನೀವು ಬೇರೆ ನೋಡಿಕೊಳ್ಳಿ ಎಂದು ఎష్టి ಹೇಳಿದರೂ. ಆ ಮನುಷ್ಯ ಬಿಡಲೇ ಇಲ್ಲ. “ನಾನು ಒಂದು ಅರ್ಜೆಂಟ್ ಕಾರ್ಯದ ನಿಮಿತ್ತ ತಕ್ಷಣ ಹೊರಡಲೇಬೇಕು. ತಡವಾದರೆ, ಅಚಾತುರ್ಯ ನಡೆದೀತು. ನನ್ನ ಕಾರು ಬೇರೆ ಕೆಟ್ಟು ಹೋಗಿದೆ. ಅರ್ಧಗಂಟೆಯಿಂದ ಹುಡುಕುತ್ತಲೇ ಇದ್ದೇನೆ, ಯಾವ ಆಟೋ, ಕ್ಯಾಬುಗಳು ಖಾಲಿಇಲ್ಲ. ದಯವಿಟ್ಟು ಈ ಆಟೋವನ್ನು ನನಗೆ ಬಿಟ್ಟು ಬಿಡಿ. ದೇವರು ನಿಮಗೆ ಒಳ್ಳೇದು ಮಾಡುತ್ತಾನೆ.’ ಎಂದ. ವಿಧಿ ಇಲ್ಲದೆ, ಆಕೆ ಆಟೋದಿಂದ ಕೆಳಗಿಳಿದು, ಅದನ್ನು ಆತನಿಗೆ ಬಿಟ್ಟು ಕೊಟ್ಟು ಬೇರೆ ಗಾಡಿಗಾಗಿ ಹುಡುಕತೊಡಗಿದಳು.

ಆಕೆಗೆ ತುರ್ತಾಗಿ ಸಿಟಿ ಆಸ್ಪತ್ರೆಗೆ ಹೋಗಬೇಕಾಗಿತ್ತು. ಕಾರಣ ಅಲ್ಲಿ ಆಕೆಯ ಅಮ್ಮನಿಗೆ ಅಂದು ಹೃದಯ ಚಿಕಿತ್ಸೆ (ಬೈಪಾಸ್ ಸರ್ಜರಿ) ನಡೆಯುವುದಿತ್ತು. ಅಂತೂ ಇಂತೂ, ಬಹಳ ಹೊತ್ತಿನ ಬಳಿಕ, ಒಂದು ಆಟೋ ಸಿಕ್ಕಿ ಆಸ್ಪತ್ರೆಯನ್ನು ಸೇರಿದಳು. ಅಲ್ಲಿ ತನ್ನ ಅಮ್ಮನ ಬಗ್ಗೆ ವಿಚಾರಿಸಲಾಗಿ ಅವರದು ಆಪರೇಷನ್ ಈಗಾಗಲೇ ಮುಗಿದಿದೆ. ಅವರೀಗ ನಿಧಾನವಾಗಿ ಚೇತರಿಸಿಕೊಳ್ಳಲು ಪ್ರಾರಂಭಿಸಿದ್ದಾರೆ ಎಂಬ ಉತ್ತರ ಬಂತು. ನಾನೀಗ ಅವರನ್ನು ನೋಡಬಹುದೇ? ಎಂದು ಕೇಳಲು, ‘ಸಾಧ್ಯವಿಲ್ಲ, ಸ್ವಲ್ಪ ಹೊತ್ತು ಕಾಯಬೇಕಾಗುತ್ತದೆ. ಬೇಕೆಂದರೆ, ಆಕೆಯನ್ನು ಆಪರೇಟ್ ಮಾಡಿದ ಡಾಕ್ಟರರನ್ನು ನೀವು ಭೇಟಿ ಮಾಡಬಹುದು’ ಎನ್ನುವಷ್ಟರಲ್ಲೇ ಅದೇ ಡಾಕ್ಟರ್ ಆ ಕಡೆ ಬರುತ್ತಿದ್ದರು.
ಷಇವರೇ ಸಕಾಲದಲ್ಲಿ ಬಂದು ನಿಮ್ಮ ತಾಯಿಯ ಪ್ರಾಣವನ್ನು ಉಳಿಸಿದವರು’ ಎಂಬುದಾಗಿ ನರ್ಸ್ ಹೇಳಲು, ಈ ಹೆಣ್ಣು ಮಗಳಿಗೆ ಎಲ್ಲಿಲ್ಲದ ಆಶ್ಚರ್ಯ ಕಾದಿತ್ತು.

ಇದನ್ನೂ ಓದಿ: ಸನಾತನ ಧರ್ಮದಲ್ಲಿ ಭಗವಂತನ ಸಹಿ ಓಂಕಾರ

ಕಾರಣ, ಬೆಳಗ್ಗೆ ತಾನು ಬುಕ್ ಮಾಡಿದ ಆಟೋವನ್ನು ಒತ್ತಾಯದಿಂದ ಪಡಕೊಂಡು ಹೋದವರು ಇದೇ ವ್ಯಕ್ತಿ ಆಗಿದ್ದರು. ಈ ಹೆಂಗಸನ್ನು ಕೂಡಾ ಗುರುತು ಹಿಡಿದ ಡಾಕ್ಟರ್ ಆಕೆಗೆ ಹೇಳಿದರು: ‘ಇಂದು ಬೆಳಿಗ್ಗೆ ನೀವು ನನಗೆ ನ್ನು ನಿಮ್ಮ ಆಟೋವನ್ನು ಬಿಟ್ಟು ಕೊಡದೇ ಇರುತ್ತಿದ್ದರೆ, ಈ ನನ್ನ ರೋಗಿಯ ಪ್ರಾಣವು ಅಪಾಯಕ್ಕೆ ಒಳಗಾಗುತ್ತಿತ್ತು. ಅಂತೂ, ಆಟೋವನ್ನು ಬಿಟ್ಟುಕೊಟ್ಟು, ಒಂದು ರೋಗಿಯ ಪ್ರಾಣವನ್ನು ಉಳಿಸಿದಿರಿ ಹಾಗೂ ನನ್ನ ಕರ್ತವ್ಯವನ್ನು ಸಮಯಕ್ಕೆ ಸರಿಯಾಗಿ ನಿಭಾಯಿಸಲು ನೆರವಾದಿರಿ. ನಾನು ನಿಮಗೆ ಚಿರಋಣಿಯಾಗಿದ್ದೇನೆ’. ಅಷ್ಟರಲ್ಲಿ ನ್ನು ಕಣ್ಣಲ್ಲಿ ನೀರು ತುಂಬಿಕೊಂಡು, ಆ ಮಹಿಳೆ ಹೇಳಿದಳು: “ನಿಮಗೆ ಚಿರಋಣಿಯಾಗಬೇಕಾದವಳು ನಾನು ಡಾಕ್ಟರ್ .ನೀವು ಓಡೋಡಿ ಬಂದು, ಆಪರೇಷನ್ ಮಾಡಿ ಪ್ರಾಣ ಉಳಿಸಿದ ರೋಗಿ ಬೇರಾರೂ ಅಲ್ಲ. ನನ್ನ ತಾಯಿ. ತಾನು ದೊಡ್ಡ ಹೃದ್ರೋಗತಜ್ಞನೆಂದೂ ಹೇಳದೆ, ತಮ್ಮ ಕರ್ತವ್ಯ ಪಾಲನೆ ಮಾಡಿದಿರಿ. ನಾನು ನಿಮಗೆ ಎಷ್ಟು ಆಭಾರಿಯಾಗಿದ್ದರೂ ಸಾಲದು.

‘ ಉತ್ತರವಾಗಿ ವೈದ್ಯರು ಹೇಳಿದರು. ಆದರೂ, “ನಿಮಗೆ ಎಲ್ಲಿಗೆ ಹೋಗಬೇಕು? ಏನು ಅಂತಹ ತುರ್ತು ಕೆಲಸ? ಎಂಬುದೆಲ್ಲಾ ಕೇಳದೇನೆ ತಾವು ತಮ್ಮ ತುರ್ತು ಅವಶ್ಯಕತೆಯನ್ನು ತ್ಯಾಗ ಮಾಡಿ, ಆಟೋವನ್ನು ಬಿಟ್ಟುಕೊಟ್ಟಿರಿ. ಇದು ಪರೋಪಕಾರದ ಪ್ರತೀಕ ಹಾಗೂ ತಮ್ಮ ಉದಾರತೆಯ ಸಂಕೇತ’ ಎಂದರು ವೈದ್ಯರು. ಆ ಹೆಣ್ಣು ಮಗಳು ಕೊನೆಗೊಂದು ಮಾತು ಹೇಳಿದಳು ನಾವು ಇತರರಿಗೆ ಸಹಾಯ ಮಾಡಿದರೆ, ದೇವರು ಒಂದಲ್ಲ ಒಂದು ರೀತಿಯಲ್ಲಿ ನಮಗೂ ಸಹಾಯ ಮಾಡುತ್ತಾನೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ ಡಾಕ್ಟರ್. ನಾನು ಮಾಡಿದ ಒಂದು ಸಣ್ಣ ಉಪಕಾರಕ್ಕೆ ತಾವು ನನ್ನ ಅಮ್ಮನ ಪ್ರಾಣವನ್ನು ಉಳಿಸಿ ಮಹಾದುಪಕಾರನ್ನು ಮಾಡಿರುವಿರಿ.

ಹೌದು: ದೇವರ ರೂಪಗಳನ್ನು ಬಲ್ಲವರು ಯಾರು? ದೇವರು ನಮಗೆ ಯಾವಾಗ, ಎಲ್ಲಿ, ಹೇಗೆ, ಯಾರ ಮೂಲಕ, ಸಹಾಯ ಮಾಡುತ್ತಾನೆಂಬುದನ್ನು ಹೇಳಲಾಗದು. ಆದರೆ ಒಂದಂತೂ ನಿಜ. ನಾವು ಇತರ ಕಷ್ಟವನ್ನು ಅರಿತುಕೊಂಡು, ಅನುಕಂಪವನ್ನು ತೋರಿದರೆ, ಪ್ರತಿಯಾಗಿ ಭಗವಂತನೂ ಒಂದಲ್ಲ ಒಂದು ರೀತಿಯಲ್ಲಿ ಅನುಗ್ರಹವನ್ನು ಮಾಡುತ್ತಿರುತ್ತಾನೆ. ಯಾರದೋ ಆಪತ್ಕಾಲದಲ್ಲಿ ನಾವು ಮಾಡಿದ ಚಿಕ್ಕ ಸಹಾಯ, ನಮಗೆ ನಮ್ಮ ಕಷ್ಟ ಕಾಲದಲ್ಲಿ ದೇವರು ನೀಡಿದ ವರವಾಗಿ ಪರಿಣಮಿಸುತ್ತದೆ.

Leave a Comment