ಭಾರತಕ್ಕೆ ಸರಣಿ ಜಯದ ತವಕ

ಭಾರತಕ್ಕೆ ಸರಣಿ ಜಯದ ತವಕ

ಕಟಕ್ (ಪಿಟಿಐ): ನಾಯಕ ರೋಹಿತ್ ಶರ್ಮಾ ಎದುರಿಸುತ್ತಿರುವ ರನ್ ಬರ, ಕೊಹ್ಲಿ ಮರಳಿರುವುದರಿಂದ ತಂಡದಿಂದ ಯಾರನ್ನು ಕೈಬಿಡಬೇಕೆಂಬ ದ್ವಂದ್ವ- ಇವೆರಡು ವಿಷಯ ಸದ್ಯ ಭಾರತ ತಂಡವನ್ನು ಕಾಡುತ್ತಿದೆ. ಇದರ ನಡುವೆಯೇ ಭಾನುವಾರ ಇಂಗ್ಲೆಂಡ್ ವಿರುದ್ಧ ಎರಡನೇ ಏಕದಿನ ಪಂದ್ಯವನ್ನು ಗೆದ್ದು ಸರಣಿ ಸಾಧಿಸಲು ಅತಿಥೇಯರು ತುದಿಗಾಲಲ್ಲಿ ನಿಂತಿದ್ದಾರೆ.

ನಾಗುರದಲ್ಲಿ ನಡೆದ ಮೊದಲ ಏಕದಿನ ಪಂದ್ಯವನ್ನು ಗೆದ್ದ ಭಾರತ ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಪಡೆದಿದೆ. ಈ ಪಂದ್ಯ ಗೆದ್ದರೆ ಮಾತ್ರ ಇಂಗ್ಲೆಂಡ್‌ ಸರಣಿ ಜೀವಂತವಾಗಿಡುವ ಅವಕಾಶ ಸಿಗಲಿದೆ.

ಬಲಮೊಣಕಾಲಿನಲ್ಲಿ ಊತ ಕಾಣಿಸಿದ್ದ ಕಾರಣ ಕೊಹ್ಲಿ ಆ ಪಂದ್ಯ ಆಡಿರಲಿಲ್ಲ. ಇದು ಚಾಂಪಿಯನ್ಸ್ ಟ್ರೋಫಿ ಸನಿಹವಿರುವಾಗ ತಂಡದಲ್ಲಿ ಆತಂಕವನ್ನೂ ಮೂಡಿಸಿತ್ತು. ಆದರೆ ಉಪನಾಯಕ ಶುಭಮನ್ ಗಿಲ್ ಅವರು ಎರಡನೇ ಪಂದ್ಯಕ್ಕೆ ಕೊಹ್ಲಿ ಅಯ್ಕೆಗೆ ಲಭ್ಯರಿರುತ್ತಾರೆ ಎಂದು ಹೇಳಿ ಆ ಕುರಿತ ಊಹಾಪೋಹಗಳಿಗೆ ವಿರಾಮ ಹಾಕಿದ್ದಾರೆ.

ಇದೇ ಕ್ರೀಡಾಂಗಣದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 2019ರಲ್ಲಿ ನಡೆದ ಏಕದಿನ ಪಂದ್ಯದಲ್ಲಿ ಚೇಸ್ ವೇಳೆ ಕೊಹ್ಲಿ 85 ರನ್ ಗಳಿಸಿ ಪಂದ್ಯದ ಆಟಗಾರರಾಗಿದ್ದರು. ಕೊಹ್ಲಿ ತಂಡದೊಂದಿಗೆ ಕಟಕ್‌ಗೆ ಪ್ರಯಾಣ ಬೆಳೆಸಿದ್ದು, ಆರಾಮವಗಿದ್ದಂತೆ ಕಂಡರು.

ದ್ವಂದ್ವ: ಕೊಹ್ಲಿ ಲಭ್ಯತೆ ಭಾರತ ತಂಡಕ್ಕೆ ನೆಮ್ಮದಿ ಮೂಡಿಸಿದರೂ ಯಾರನ್ನು ಕೈಬಿಡಬೇಕೆಂಬ ಉಭಯಸಂಕಟ ಎದುರಾಗಿದೆ. ಕೊಹ್ಲಿ ಬದಲು ಕೊನೆಯ ಗಳಿಗೆಯಲ್ಲಿ ಆಡುವ ಅವಕಾಶ ಪಡೆದಿದ್ದ ಶ್ರೇಯಸ್ ಅಯ್ಯರ್ 36 ಎಸೆತಗಳಲ್ಲಿ 59 ರನ್ ಬಾಚಿದ್ದರಿಂದ ಅವರನ್ನು ಕೈಬಿಡುವ ಸಾಧ್ಯತೆ ಕಡಿಮೆ, ಎಡಗೈ ಆಟಗಾರ ಯಶಸ್ವಿ ಜೈಸ್ವಾಲ್ ಅವರನ್ನು ಕೈಬಿಡುವ ಸಾಧ್ಯತೆ ಅಧಿಕ. ಇದರಿಂದ ಮೂರನೇ ಕ್ರಮಾಂಕದಲ್ಲಿ ಆಡಿದ್ದ ಗಿಲ್ ಮುಂದಿನ ಪಂದ್ಯದಲ್ಲಿ ರೋಹಿತ್ ಜೊತೆ ಇನಿಂಗ್ಸ್ ಆರಂಭಿಸಬೇಕಾಗುತ್ತದೆ. ಜೈಸ್ವಾಲ್ ಮೊದಲ ಪಂದ್ಯದಲ್ಲಿ ಅಂಥ ಆರಂಭ ಪಡೆದಿರಲಿಲ್ಲ.

ಇದನ್ನೂ ಓದಿ:ಸುಂದರ ಕಲಾ ಮ್ಯೂಸಿಯಂ ಸತ್ಯದ ಅಭಯಾರಣ್ಯ

ಸ್ವತಃ ಕೊಹ್ಲಿ ಇತ್ತೀಚಿನ ಕೆಲ ತಿಂಗಳಿಂದ ತಿಣುಕಾಡುತ್ತಿದ್ದಾರೆ. ಆಸ್ಟ್ರೇಲಿಯಾದಲ್ಲಂತೂ ಅವರು ಪದೇ ಪದೇ ಆಫ್ ಸ್ಪಂಪ್ ಆಚೆಗಿನ ಎಸೆತಗಳನ್ನು ಆಡುವ ಪ್ರಲೋಭನೆಗೊಳಗಾಗಿ ದಂಡ
ತತ್ತಿದ್ದಾರೆ. ರಣದ ಟ್ರೋಫಿಯಲ್ಲಿ ಆಡಿದ ಒಂದು ಇನಿಂಗ್ಸ್‌ನಲ್ಲೂ 36 ವರ್ಷ ವಯಸ್ಸಿನ ಬ್ಯಾಟರ್ ನಿರಾಸೆ ಮೂಡಿಸಿದ್ದರು.

ಆದರೆ ಏಕದಿನ ಮಾದರಿ ಕೊಹ್ಲಿ ಅವರಿಗೆ ಅಚ್ಚುಮೆಚ್ಚಿನದು. ಅವರು ಈ ಮಾದರಿಯಲ್ಲಿ 14.000 ರನ್ ಮೈಲಿಗಲ್ಲು ತಲುಪಲು 94 ರನ್ ಅಷ್ಟೇ ದೂರದಲ್ಲಿದ್ದಾರೆ. ಸಚಿನ್ ರತೆಂಡೂಲ್ಕರ್ (18,426) ಮತ್ತು ಕುಮಾರ ಸಂಗಕ್ಕರ (14.234) ಮಾತ್ರ ಅವರಿಗಿಂತ ಮುಂದೆಯಿದ್ದಾರೆ. ತೆಂಡೂಲ್ಕರ್ (350 ಇನಿಂಗ್) ಮತ್ತು ಸಂಗಕ್ಕರ (378 ಇನಿಂಗ್) ಅವರು ಕೊಹ್ಲಿಗಿಂತ ಹೆಚ್ಚು ಪಂದ್ಯಗಳನ್ನು ಆಡಿದ್ದಾರೆ.

ಇಂಗ್ಲೆಂಡ್ ತಂಡದ ನಾಯಕ ಜೋಸ್ ಬಟ್ಲರ್

ರೋಹಿತ್ ರನ್‌ ಕ್ಷಾಮ: ರೋಹಿತ್ ಅವರ ವೈಫಲ್ಯ ಈ ಸರಣಿಯ ಮೊದಲ ಪಂದ್ಯದಲ್ಲೂ ಮುಂದುವರಿದಿದೆ. ಮೊದಲ ಪಂದ್ಯದಲ್ಲಿ ಅವರ ಗಳಿಕೆ ಬರೇ 2. ಕಳೆದ ವರ್ಷದ ಆಗಸ್ಟ್ ನಂತರ ಮುಂಬೈನ ಆಟಗಾರ ಯಾವುದೇ ಮಾದರಿಯಲ್ಲಿ ಅರ್ಧಶತಕ ಗಳಿಸಿಲ್ಲ. ಕೊನೆಯ ಅರ್ಧಶತಕ ಕೊಲಂಬೊದಲ್ಲಿ ಲಂಕಾ ವಿರುದ್ಧ ಮೂರನೇ ಏಕದಿನ ಪಂದ್ಯದಲ್ಲಿ (64 ರನ್) ದಾಖಲಾಗಿತ್ತು. ರೋಹಿತ್ ಮತ್ತೆ ವಿಫಲರಾದಲ್ಲಿ ಅವರ ಕ್ರಿಕೆಟ್ ಭವಿಷ್ಯದ ಮೇಲೆ ಪ್ರತಿಕೂಲ ಪರಿಣಾಮವಾಗಬಹುದು.

ಬೌಲಿಂಗ್ ಚಿಂತೆ ಕಡಿಮೆ: ಮೊಹಮ್ಮದ್ ಶಮಿ ಅವರು ತಂಡಕ್ಕೆ

ಪುನರಾಗಮನ ಮಾಡಿದ ನಂತರ ಲಯಕ್ಕೆ ಮರಳುತ್ತಿದ್ದಾರೆ. ನಾಗುರದಲ್ಲಿ ಎಂಟು ಓವರುಗಳಲ್ಲಿ 38 ರನ್‌ಗಳಷ್ಟೇ ಕೊಟ್ಟು 1 ವಿಕೆಟ್ ಪಡೆದಿದ್ದರು. ಪದಾರ್ಪಣೆ ಮಾಡಿದ ಹರ್ಷಿತ್ ರಾಣಾ ಸ್ವಲ್ಪ ದುಬಾರಿಯಾದರೂ ಮೂರು ಪ್ರಮುಖ ವಿಕೆಟ್‌ಗಳನ್ನು ಪಡೆದು ಭಾರತ ಹಿಡಿತ ಕಳೆದುಕೊಳ್ಳದಂತೆ ನೋಡಿಕೊಂಡಿದ್ದರು. ಬೂಮ್ರಾ ಅವರ ಫಿಟೈಸ್ ಬಗ್ಗೆ ಸ್ಪಷ್ಟತೆ ಇಲ್ಲದ ಕಾರಣ ರಾಣಾ ಅವರಿಗೆ ಸ್ಥಾನ ಬಲಪಡಿಸಿಕೊಳ್ಳಲು ಈ ಸರಣಿ ಸದವಕಾಶವಾಗಿದೆ.

ಸರಣಿ ಮೂರು ಪಂದ್ಯಗಳದ್ದಾಗಿರುವುದರಿಂದ ಬಟ್ಲರ್ ಬಳಗಕ್ಕೆ ಈ ಪಂದ್ಯ ಮಾಡು-ಮಡಿ ಎಂಬಂತಾಗಿದೆ. ಪ್ರವಾಸಿ ತಂಡ ಆಕ್ರಮಣಕಾರಿ ಆಟದ ತಂತ್ರ ಬದಲಾಯಿಸಿಕೊಳ್ಳಲಿದೆಯೇ ಎಂಬುದನ್ನು ಕಾದುನೋಡಬೇಕಾಗಿದೆ.

ಪ್ರವಾಸಿ ಬ್ಯಾಟರ್‌ಗಳು ಭಾರತದ ಸ್ಪಿನ್ನರ್‌ಗಳನ್ನು ಎಷ್ಟರ ಮಟ್ಟಿಗೆ ನಿಭಾಯಿಸುತ್ತಾರೆ ಎಂಬುದರ ಮೇಲೆ ಇಂಗ್ಲೆಂಡ್ ತಂಡದ ಯಶಸ್ಸು ನಿಂತಿದೆ.

Leave a Comment