ಚಿಂತಾಮಣಿ :ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದಿಂದ ಆರೋಗ್ಯ ಇಲಾಖೆಯ ವೈ.ಇ.ಸರಸ್ವತಮ್ಮ ಹಾಗೂ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಬಿ .ಶಿವಪ್ಪ ನಿವಾಸದಲ್ಲಿ ಮನೆಗೊಂದು ಕವಿಗೋಷ್ಠಿ ಶುಕ್ರವಾರ ಆಯೋಜಿಸಲಾಗಿತ್ತು.
ತಾಲ್ಲೂಕು ಘಟಕದ ನಿಕಟ ಪೂರ್ವ ಅಧ್ಯಕ್ಷ ಮುನಿ ಪಾಪಣ್ಣ ಮಾತನಾಡಿ ‘ಕವಿಗೋಷ್ಠಿ ಕಾರ್ಯಕ್ರಮ ಪ್ರತಿ ಮನೆಯಲ್ಲೂ ನಡೆಯುವಂತಾಗಬೇಕು. ಕನ್ನಡ ಭಾಷೆ ಸಂವಹನ ಭಾಷೆಯಾಗಬೇಕು. ಹಿಂದೆ ಕವಿಗೋಷ್ಠಿಯಲ್ಲಿ 4-5 ಜನ ಕವನ ವಾಚನ ಮಾಡುತ್ತಿದ್ದರು. ಆದರೆ ಈಗ 20- 25 ಜನ ಕವನ ವಾಚನ ಮಾಡುತ್ತಿರುವುದು ಉತ್ತಮ ಬೆಳವಣಿಗೆ’ ಎಂದರು.
ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎನ್. ವಿ. ಶ್ರೀನಿವಾಸನ್ ಮಾತನಾಡಿ ,’ಪರಿಷತ್ತಿತನಿಂದ ಪ್ರತಿ ತಿಂಗಳು ಮನೆಗೊಂದು ಕವಿಗೋಷ್ಠಿ, ಶಾಲಾ ಅಂಗಳದಲ್ಲಿ ಕವಿ-ಕಾವ್ಯ ಪರಿಚಯ, ಹುಣ್ಣಿಮೆಯಂದು ಸಾಧಕರ ಸ್ಮರಣೆ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಗಡಿಭಾಗದಲ್ಲಿ ಕನ್ನಡವನ್ನು ಜನಪ್ರಿಯಗೊಳಿಸಿ, ಆಡು ಭಾಷೆಯನ್ನಾಗಿ ಮಾಡಲು ಸಾಧ್ಯವಾದ ಎಲ್ಲ ಪ್ರಯತ್ನಗಳನ್ನು ಪರಿಷತ್ ನಡೆಸುತ್ತಿದೆ’ ಎಂದರು.
ಭುವನೇಶ್ವರಿ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಪ್ರಗತಿ ಗ್ರಾಮೀಣ ಬ್ಯಾಂಕ್ ಅಧಿಕಾರಿ ಕೇಂದಾರನಾಥ್ ಕನ್ನಡ ಗೀತೆ ಹಾಡಿದರು.
ಇದನ್ನೂ ಓದಿ:- ಮೌಲ್ಯವರ್ಧನೆಗೆ ಬೆಂಬಲ – R&G ಘಟಕಗಳಿಗೆ ಬೆಂಬಲ
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಕೆ. ರೇವಣ್ಪಪ್ಪ, ಸಾಹಿತ್ಯ ಪರಿಷತ್ ಉಪಾಧ್ಯಕ್ಷ ಟಿ. ಸಿ. ಲಕ್ಷ್ಮೀಪತಿ, ಪದಾಧಿಕಾರಿ ಡಿ. ವಿ. ಶಂಕರ ರೆಡ್ಡಿ, ಟಿ .ಎಂ .ಈಶ್ವರ ಸಿಂಗ್, ಕುಂಟಿಗಡ್ಡೆ ಲಕ್ಷ್ಮಣ್, ರಂಗನಾಥ್, ಗುರುಪ್ರಸನ್ನ,ಶಿಮ, ಮಂಜುನಾಥ್, ಕೆ .ಎಸ್. ನೂರುಲ್ಲಾ ,ನಾರಾಯಣಪ್ಪ ,ಚೌಡಪ್ಪ, ರೆಡ್ಡಿ ರಮೇಶ್, ಶ್ರೀನಿವಾಸರೆಡ್ಡಿ, ಎಸ್. ಎಫ್. ಎಸ್ .ಸುರೇಶ್, ಬೇಟರಾಯಪ್ಪ, ಬೀರಪ್ಪ ಗೌಡ, ವಿ. ರಮೇಶ್, ನಾಗರಾಜು, ಎಂ .ಎಸ್. ಶ್ರೀನಿವಾಸಪ್ಪ, ಕೆ.ಎಂ. ವೆಂಕಟೇಶ್, ಇರಗಂಪಲ್ಲಿ ವೆಂಕಟರವಣಪ್ಪ ಕವನ ವಾಚನ ಮಾಡಿದರು.