ಮನೋನಿಗ್ರಹವೇ ಎಲ್ಲಾ ಶಕ್ತಿಗಳ ಆಗರ !

Written by karnatakanandi.com

Published on:

ಮನೋನಿಗ್ರಹವೇ ಎಲ್ಲಾ ಶಕ್ತಿಗಳ ಆಗರ !

ಭಗವದ್ಗೀತೆ ಒಂದು ರತ್ನಾಕರ ರತ್ನಗಳ ತವರು ಮನೆ .ಅದನ್ನು ಶುದ್ಧ ಮನಸ್ತಿನಿಂದ, ಪೂರ್ವಗ್ರಹವಿಲ್ಲದೆ ಓದಬೇಕಷ್ಟೆ, ಏಕೆಂದರೆ ಎಲ್ಲ ಗ್ರಹಚಾರಗಳಿಗಿಂತಲೂ, ಅನಿಷ್ಟ ಗ್ರಹಗಳಿಗಿಂತಲೂ ಅಪಾಯಕಾರಿ ಈ ಪೂರ್ವಗ್ರಹ. ಗೀತೆಯ ಆರನೇ ಅಧ್ಯಾಯದಲ್ಲಿ ಒಂದು ಅಮೂಲ್ಯ ರತ್ನವಿದೆ. ಅರ್ಥಾಕ್ ಒಂದು ಅದ್ಭುತ ಶ್ಲೋಕವಿದೆ. ಮಹಾಭಾರತ ಎಂಬ ಸಮುದ್ರದಿಂದ ಮೊಟ್ಟಮೊದಲಿಗೆ ಭಗವದ್ಗೀತೆಯನ್ನು ಹೆಕ್ಕಿ ಹೊರಕ್ಕೆ ತಂದು ,ಅದಕ್ಕೆ ಅದ್ಭುತವಾದ ಭಾಷ್ಯವೊಂದನ್ನು ಬರೆದು ಪ್ರಪಂಚಕ್ಕೆ ಚರಿತ್ರಾರ್ಹ. ಸೇವೆಗೆದ್ದುಶ್ರೀ ಶಂಕರಾಚಾರ್ಯರ ಪ್ರಕಾರ ಈ ಶ್ಲೋಕವೇ ಭಗವದ್ಗೀತೆಯ ಸಾರ. ಅದು ಇರುವುದು ಹೀಗೆ .ವಿದ್ಯಾರ್ಥಿಗಳು, ಯುವಕರು, ಸ್ತ್ರೀ ಪುರುಷರು ಪ್ರತಿಯೊಬ್ಬರೂ ಕಂಠಪಾಠ ಮಾಡಿ ಪ್ರತಿನಿತ್ಯವೂ ನಾಲ್ಕಾರು ಸಲ ಹೇಳಿಕೊಳ್ಳಬೇಕಾದ ಶ್ಲೋಕವಿದು.

ಉದ್ಧರೇದಾತ್ಮನಾತ್ಮಾನಂ ಆತ್ಮಾನಮ್ ಅವಸಾದಯೇತ್ । ಆತ್ಮೈವ ಹಿ ಆತ್ಮನೋ ಬಂಧುರಾತ್ಮೈನ ರಿಪುರಾತ್ಮನಃ |

ಭಾವಾರ್ಥ ಹೀಗೆ: ನಮ್ಮನ್ನು ನಾವೇ ಉದ್ದರಿಸಿಕೊಳ್ಳಬೇಕು. ನಮ್ಮ ಅವಸಾನವೂ ನಮ್ಮಿಂದಲೇ ನಮಗೆ ನಾವೇ ಬಂಧು, ನಮಗೆ ನಾವೇ ವೈರಿ ವೈರಿ ಕೂಡ!

ಇಲ್ಲಿ ಆತ್ಮ ಎಂದರೆ ಅತ್ಮವಲ್ಲ ಮನಸ್ಸು! ಸಂಸ್ಕೃತ ಭಾಷೆಯೇ ಹಾಗೆ. ಒಂದೊಂದು ಶಬ್ದಕ್ಕೆ ಹಲವಾರು ಅರ್ಥಗಳು! ಸಂದರ್ಭವನ್ನು ನೋಡಿ, ಹಿಂದಿನ ಮತ್ತು ಮುಂದಿನ ಶ್ಲೋಕಗಳನ್ನು ನೋಡಿ, ಕವಿ ಯಾವ ವಿಷಯವನ್ನು ಕುರಿತು ಹೇಳಹೊರಟಿದ್ದಾರೆ ಎನ್ನುವುದನ್ನೆಲ್ಲ ನೋಡಿ ಅರ್ಥೈಸಬೇಕು. ಜೊತೆಗೆ ಈ ವಿಷಯವನ್ನು ಕುರಿತ ತಪಸ್ವಿಗಳ ಭಾಷ್ಯವನ್ನು ನೋಡಿ ಅರ್ಥೈಸಬೇಕು. ಇಂಥದ್ದೇನನ್ನೂ ಅನುಸರಿಸದ ಯುರೋಪಿಯನ್ ಪಂಡಿತರು ನಮ್ಮ ಗ್ರಂಥಗಳ ಅರ್ಥವನ್ನು ವಿಕೃತಗೊಳಿಸಿದರು. ಅದನ್ನೇ ಕುರಿಗಳಂತೆ ಅನುಸರಿಸುವ ಭಾರತೀಯ ಕೆಲ ಪಂಡಿತರೂ ಎಲ್ಲವನ್ನೂ ಕಲಸುಮೇಲೋಗರ ಮಾಡುತ್ತಿರುವುದು ದುರಂತ.

ಅದರ ಪ್ರಸ್ತಾಪ ಈಗಾಗಲೇ ಹಲವು ಸಲ ಮಾಡಿದ್ದೇನೆ. ಈ ಶ್ಲೋಕದ ತಾತ್ಪರ್ಯವನ್ನು ವಿಶ್ಲೇಷಿಸಿದರೆ ಸಾಕು ನಮಗೊಂದು ಅದ್ಭುತ ಬೆಳಕು ಸಿಗುತ್ತದೆ. ಅದೇ ನಮ್ಮ ಪೂರ್ಣ ಉದ್ಧಾರಕ್ಕೂ ನಮ್ಮ ಪೂರ್ಣ ಅವನತಿಗೂ ನಮ್ಮ ನಮ್ಮ ಮನಸ್ಸುಗಳೇ ಕಾರಣ, ಆದ್ದರಿಂದ ಭಾರತೀಯ ಚಿಂತನೆ ಋಗ್ವೇದಮೊದಲ ಶ್ಲೋಕದಿಂದ ವಿವೇಕಾನಂದರ ವಿವೇಕಮಯ ಚಿಂತನೆಯವರೆಗೂ ಮತ್ತೆ ಮತ್ತೆ ಒತ್ತುಕೊಟ್ಟಿರುವುದು ಅದ್ಭುತ, ಸರ್ವಶಕ್ತ, ಸದೃಢ, ಸತ್ಯಗಳನ್ನು ಅರಸಿ, ಗ್ರಹಿಸಿ, ಆನಂದಿಸಿ ಜ್ಞಾನಭಂಡಾರವನ್ನೇ ತಮ್ಮದಾಗಿಸಿಕೊಂಡು ವಿಶ್ವದಾದ್ಯಂತ ಗೌರವಯುತವಾದ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳುವುದು ಹೇಗೆ ಎನ್ನುವುದರತ್ತ. ಏಕೆಂದರೆ ಭಾರತ ಬಹು ಹಿಂದೆಯೇ ಕಂಡುಕೊಂಡ ಸತ್ಯ, ‘ನ ಹಿ ಜ್ಞಾನೇನ ಸದೃಶಂ’ ಎನ್ನುವುದು ; ಅರ್ಥಾತ್ ‘ಜ್ಞಾನಕ್ಕೆ ಸಮನಾದ್ದು, ಜ್ಞಾನವನ್ನು ಮೀರಿದ್ದು ಈ ಸೃಷ್ಟಿಯಲ್ಲಿ ಯಾವುದೂ ಇಲ್ಲ’ ಎಂದು. ರಾಜನೂ ಜ್ಞಾನಿಯ ಮುಂದೆ ಅಲ್ಪ, ‘ಸ್ವದೇಶ ಪೂಜ್ಯತೇ ರಾಜಾ | ವಿದ್ವಾನ್ ಸರ್ವತ್ರ ಪೂಜ್ಯತೇ ।” ಎಂದು ಘೋಷಿಸಿದ್ದು ಭಾರತವೇ.

‘ರಾಜನಿಗೆ ತನ್ನ ಪ್ರಾಂತ್ಯದಲ್ಲಿ ಮಾತ್ರ ಗೌರವ ಆದರೆ ವಿದ್ವಾಂಸನಿಗೆ ಎಲ್ಲೆಲ್ಲೂ ಗೌರವ’ ಎಂದು ಇದರರ್ಥ. ಕೇವಲ ಜ್ಞಾನಾರ್ಥಿಯಾದ ಮನಸ್ಸು ಅವರ ಗುರಿಯಾಗಿರಲಿಲ್ಲ. ಎಲ್ಲ ಸದ್ಗುಣಗಳ, ಸಾಮರ್ಥ್ಯಗಳ ತವರುಮನೆಯಾಗಿಸಬೇಕು ಪ್ರತಿಯೊಬ್ಬರ ಮನಸ್ಸನ್ನೂ ಎನ್ನುವುದೇ ಅವರ ಸ್ಪಷ್ಟ ಗುರಿ. ಇದಕ್ಕಾಗಿ ಅವರು ಪ್ರವೇಶಿಸುವ ಸುದೀರ್ಘವಾದ ಸಂಶೋಧನೆ ಕೈಗೊಂಡರು. ವಿವರವಾದ, ವೈಜ್ಞಾನಿಕವಾದ, ಹೊತ್ತಿಗೆಯನ್ನೇ ನಿರ್ಮಿಸಿದರು. ಅದೇ ಪಾತಂಜಲ ಯೋಗಸೂತ್ರಗಳು ಅಥವಾ ರಾಜಯೋಗ, ಮಾನವನ ಮನಸ್ಸನ್ನು ಏಕಾಗ್ರ ಸಾಮಾನ್ಯ ಸ್ಥಿತಿಯಿಂದ ಅದರಾಚೆಗೆ ಯಾವ ಔನ್ನತ್ಯವೂ ಇಲ್ಲ ಎನ್ನುವ ಮಟ್ಟಕ್ಕೆ ಹೇಗೆ ಏರಿಸಬೇಕು ಎಂಬುದರ ವಿವರಣೆ ಈ ಹೊತ್ತಿಗೆಯಲ್ಲಿ ಎಷ್ಟೊಂದು ಕ್ರಮವಾಗಿ, ಸ್ಪಷ್ಟವಾಗಿ ಹೇಳಿದೆಯೆಂದರೆ ಪಾಶ್ಚಾತ್ಯ ಮನೋವಿಜ್ಞಾನಿಗಳಾದ ಕಾರ್ಲ್‌ಯುಂಗ್ ಮತ್ತು ವಿಲಿಯಂ ಜೇಮ್ಸ್ ಮತ್ತಿತರರು ಅದನ್ನು ಕಂಡು ದಂಗಾಗಿದ್ದಾರೆ. ಅವರಾರು ಇದರ ಸಮೀಪವೂ ಬರಲಾಗದಷ್ಟು ಕೆಳಮಟ್ಟದಲ್ಲಿದ್ದವರು.

ಇದನ್ನೂ ಓದಿ: ಜೀವನ ಹಸನು ಮಾಡಿದ ಸಜ್ಜನ

ಯೋಗಸೂತ್ರಗಳ ಮೇಲೆ ವಿವೇಕಾನಂದರ ಭಾಷ್ಯ ಅದ್ಭುತ! ‘ಅಮ್ಮ ನಿನ್ನ ಮಾಯೆಯನ್ನು ಸ್ವಲ್ಪ ನರೇಂದ್ರನ ಮೇಲೆ ಹಾಕು. ಇಲ್ಲದಿದ್ದಲ್ಲಿ ಅವನು ತನ್ನ ಧ್ಯಾನದ ತೀವ್ರತೆಯಲ್ಲಿ ಈ ಶರೀರವನ್ನೇ ಒಗೆದು ಹೋಗಿಬಿಡುವ ಸಂಭವ’ ಎಂದು ಶ್ರೀರಾಮಕೃಷ್ಣರು ಜಗನ್ಮಾತೆಯನ್ನು ಪ್ರಾರ್ಥಿಸಿಕೊಂಡಿದ್ದುಂಟು.! ಅವರು ತಮ್ಮ ಧ್ಯಾನಕಾಲದ ಅನುಭವಗಳನ್ನು ಸೇರಿಸಿಕೊಂಡೇ ಈ ಯೋಗಸೂತ್ರಗಳ ಮೇಲೆ ‘ರಾಜಯೋಗ’ ಎಂಬ ಅದ್ಭುತ ಕೃತಿಯನ್ನು ನಮ್ಮ ಮುಂದಿಟ್ಟಿದ್ದಾರೆ. ಈ ರಾಜಯೋಗದಲ್ಲಿ ಯಾವ ದೇವನೂ ಇಲ್ಲ. ಮನಸ್ಸು ಏಕಾಗ್ರವಾಗುವುದಕ್ಕೆ .ಸಹಾಯ ಮಾಡುವ ಯಾವುದೂ ದೇವನ ಸ್ಥಾನದಲ್ಲಿ ಇರಬಲ್ಲದು. ಒಂದು ಶಬ್ದವೂ ಕೂಡ! ಹಾಗೆ ನೋಡಿದರೆ ಇಲ್ಲಿ ಓಂಕಾರವೇ ದೇವರು.

ತಸ್ಯ ವಾಚಕಃ ಪ್ರಣವಃ’ ಎಂದೇ ಪತಂಜಲಿ ದೇವರನ್ನು ಕುರಿತು ವ್ಯಾಖ್ಯೆಯನ್ನು ನೀಡುವುದು. ಪ್ರಣವ, ಸಂತರು ತಪಸ್ವಿಗಳನ್ನು ಮನಸ್ಸಿನ ಏಕಾಗ್ರತೆಗೆ ವಸ್ತುವನ್ನಾಗಿಸಿಕೊಳ್ಳಬಹುದು. ಚಂಚಲತೆಯಿಂದ ಒದ್ದಾಡುತ್ತಿರುವ, ತತ್ ಪರಿನಾಮವಾಗಿ ಮೃಗೀಯವಾಗಿರುವ ಮನಸು ನಿರ್ವಿಕಲ್ಪ ಸಮಾಧಿ’ ಎಂಬ ಸ್ಥಿತಿಗೇರಿಸಿ ‘ವಿಶ್ವಾತ್ಮನಾದ ಬ್ರಹ್ಮನಲ್ಲಿ ಒಂದಾಗಿಸುವುದು ಹೇಗೆ ಎನ್ನುವುದೇ ಈ ರಾಜಯೋಗದ ವಿಷಯ. ಮನುಷ್ಯ ಜನಾಂಗಕ್ಕೆ ಇದಕ್ಕಿಂತ ಮಾಡಬಹುದಾದ ಸೇವೆ ಬೇರೆ ಏನಾದರೂ ಇದ್ದೀತೆ?! ಇದನ್ನು ಸಾಧಿಸುವುದಕ್ಕೆ ದೇವ, ದೇವಾಲಯ, ಪೂಜೆ, ಚರ್ಚು, ಮಸೀದಿ, ಕತ್ತಿ, ಸಂಖ್ಯಾಬಾಹುಳ್ಯ ಇತ್ಯಾದಿಗಳ ಅವಶ್ಯಕತೆ ಇದೆಯೇ? ನಿಜಕ್ಕೂ ಒಂದು ಧರ್ಮ, ಅದು ಪೂರ್ಣಪ್ರಮಾಣದ ಧರ್ಮವೇ ಆಗಿದ್ದರೆ, ಅದು ಮನುಷ್ಯನಿಗೆ ಹೇಳುವುದು ಇಷ್ಟೇ. ‘ನಿನ್ನ ಉದ್ದಾರಕ್ಕೆ ಕೇವಲ ಒಂದು ನ್ನು ಮನುಷ್ಯ ಶರೀರ ಮತ್ತು ಅದರೊಳಗಿನ ಮನಸ್ಸು ಸಾಕು’ ಎಂದು. ನಿಜಕ್ಕೂ ಒಬ್ಬ ಮನುಷ್ಯನ ನಿಜವಾದ ಆಸ್ತಿ ಇಷ್ಟೇ! ಏಕೆಂದರೆ ಇಷ್ಟರಿಂದಲೇ ಏನನ್ನು ಬೇಕಾದರೂ ಪಡೆಯಬಹುದು. ಆದ್ದರಿಂದಲೇ ತಾಯಿಯ ಗರ್ಭದಿಂದ ಹೊರಬರುವಾಗ ಪರಮಾತ್ಮ ನಮಗೆಲ್ಲ ಕೊಡುವುದು ಒಂದು ಶರೀರ ಮತ್ತು ಒಂದು ಮನಸ್ಸು ಮಾತ್ರ ; ಇನ್ನೇನನ್ನೂ ಕೊಟ್ಟಿರುವುದಿಲ್ಲ. ಆದಿ ಮಾನವನ ಹತ್ತಿರ ಇದ್ದುದಾದರೂ ಅಷ್ಟೇನೇ. ಅಷ್ಟರಿಂದಲೇ ಅವನು ಇಷ್ಟನ್ನೆಲ್ಲ ಮಾಡಿದ.

ಎಷ್ಟೋ ಜನ Self made Men ಒಂದು ಊರಿಗೆ ತಾವು ಹೋಗುವಾಗ ಕೇವಲ ಬರಿಗೈಯಲ್ಲಿ ಬಂದವರು ತಮ್ಮ ಮನಸ್ಸು, ಬುದ್ದಿ, ಶರೀರಗಳನ್ನು ಉಪಯೋಗಿಸಿಕೊಂಡು ಒಂದು ಪುಟ್ಟ ಸಾಮ್ರಾಜ್ಯ (empire)ವನ್ನೇ ಅದೂ ಕೆಲವೇ ವರ್ಷಗಳಲ್ಲಿ ನಿರ್ಮಿಸಿಕೊಂಡಿರುತ್ತಾರೆ.!
ಬಹಳಷ್ಟು ಜನ ಇನ್ನೂ ಅತ್ಯಂತ ಹೀನ, ದೀನ ಸ್ಥಿತಿಯಲ್ಲೇ ನರಳುತ್ತ ಬದುಕುತ್ತಿರುವುದೇಕೆ ಎಂದರೆ ಅವರ ಮನಸ್ಸಿನಲ್ಲಿ ಇರುವ ಶಕ್ತಿಗಳೆಲ್ಲ ಭೂಮಿಯ ಒಳಗಡೆಯೇ ಅಡಗಿರುವ ಬಂಗಾರ, ವಜ್ರಗಳಂತೆ ಸುಮ್ಮನೆ ಬಿದ್ದುಕೊಂಡಿವೆ. ಅವರಿಗೆ ಇನ್ನೂ ಕೈಗೆಟಕುತ್ತಿಲ್ಲ. ಕಾಡುಕಲ್ಲೊಳಗಿರುವ ಶಿಲಾ ವಿಗ್ರಹದಂತೆ! ಅದೂ ಅಲ್ಲದೆ ತಮ್ಮ ಮನಸ್ಸಿನಲ್ಲಿ ಎಷ್ಟೆಲ್ಲ ಶಕ್ತಿಗಳು ಅಡಗಿವೆ. ಅವನ್ನೆಲ್ಲ ಹೇಗೆ ಆಚೆ ತರಬಹುದು ಎಂಬ ವಿಷಯವೇ ಅವರ ಗಮನಕ್ಕೆ ಬಂದಿಲ್ಲ. ಅವರಿಗೆ ಯಾವ ಗುರುಗಳೂ ಹೇಳಿಲ್ಲ, ಇವರೂ ಯಾವ ಉಪಯುಕ್ತ ಪ್ರವಚನವನ್ನೋ, ಪುಸ್ತಕವನ್ನೋ ಅವಲೋಕಿಸಿಯೇ ಇಲ್ಲ. ಅಷ್ಟೇಕೆ! ಮನುಷ್ಯನ ಮನಸ್ಸಿನಲ್ಲಿ ಯಾವ ಯಾವ ಶಕ್ತಿಗಳು ಎಷ್ಟೆಷ್ಟು ಪ್ರಮಾಣದಲ್ಲಿ ಇವೆ, ಅವುಗಳೆಲ್ಲ ಪೂರ್ತಿ ಬೇಡ ಸ್ವಲ್ಪವಾದರೂ ಕೈಗೆಟಕುವಂತಾದರೆ ಮನುಷ್ಯನೊಬ್ಬ ಏನೆಲ್ಲ ಸಾಧಿಸಬಲ್ಲ ಎಂಬುದನ್ನು ನಮ್ಮ ವಿದ್ಯಾರ್ಥಿಗಳಾದರೂ ಇಡೀ ವಿದ್ಯಾರ್ಥಿ ದೆಸೆಯಲ್ಲಿ ಒಂದುಪಾಠವನ್ನಾದರೂ ಓದುತ್ತಾರೆಯೇ? ಮನಸ್ಸನ್ನು ಏಕಾಗ್ರಗೊಳಿಸುವುದು ಹೇಗೆ ಎಂಬುದನ್ನು ಸ್ವಲ್ಪವಾದರೂ ತಿಳಿಯುತ್ತಾರೆಯೇ? ಪ್ರತಿಯೊಂದಕ್ಕೂ ಪಾಶ್ಚಾತ್ಯರನ್ನು ಅನುಸರಿಸ ಹೊರಟರೆ ಇದೆಲ್ಲ ಸಾಧ್ಯವಾಗುವುದಿಲ್ಲ. ಅಮೆರಿಕದಲ್ಲೋ, ಇಂಗ್ಲೆಂಡಿನಲ್ಲೋ ಇದರ ಬಗ್ಗೆ ಕೂಗೆದ್ದರೆ ಮಾತ್ರ ಇವರು ನಿದ್ದೆಯಿಂದ ಏಳಬಲ್ಲರು.

ಹಾರ್ವಡ್ ವಿಶ್ವವಿದ್ಯಾಲಯದಲ್ಲಿ ಪ್ರಜ್ಞೆ (Consciousness) ಯಬಗ್ಗೆ ಆಳ, ಸುದೀರ್ಘಅಧ್ಯಯನ ಮಾಡಲು ಇತ್ತೀಚೆಗೆ ಪ್ರಯತ್ನಗಳು ನಡೆಯುತ್ತಿವೆ. ದಲಾಯಿ ಲಾಮಾ ಇತ್ಯಾದಿ ವರೇಣ್ಯರೂ ಕೂಡ ಈ ವಿಷಯದಲ್ಲಿ ಆಸ್ಥೆ ವಹಿಸುತ್ತಿದ್ದಾರೆ. ಅದನ್ನು ಕಂಡ ನಮ್ಮ ಮನೋ ವಿಶ್ವವಿದ್ಯಾಲಯ(N. I. M. H. A. N. S) ಕೂಡ ಒಂದೆರಡು ಹೆಜ್ಜೆ ಇಡಲು ಪ್ರಾರಂಭಿಸಿದೆ. ಇಷ್ಟೊತ್ತು ಹೇಳಿದಂತೆ ಮನಸ್ಸನ್ನು ಕ್ರಮಗೊಳಿಸಿ, ಏಕಾಗ್ರಗೊಳಿಸಿ ಆ ನಿಟ್ಟಿನಲ್ಲಿ ಮುಂದುವರಿದಿದ್ದೇ ಆದರೆ ಕ್ರಮೇಣ ಮನಸ್ಸಿನಲ್ಲಿ ಜಿನುಗುವ ಬೆಳಕೆ ಪ್ರಜ್ಞೆ (Consciousness). ನಿರ್ವಿಕಲ್ಪ ಸಮಾಧಿಯ ಪ್ರಧಾನಲಕ್ಷಣವೇ ವಿಶ್ವಪ್ರಜ್ಞೆಯನ್ನು ಸಂಪಾದಿಸುವುದು. ಆ ಸ್ಥಿತಿಯಲ್ಲಿ ತುರೀಯ ಅವಸ್ಥೆ (Super conscious state) ಯನ್ನು ಮನುಷ್ಯತಲುಪುತ್ತಾನೆ. ಇಷ್ಟು ಉನ್ನತ ಮಟ್ಟಕ್ಕೆ ಹೋಗಬೇಕಾದ ಅವಶ್ಯಕತೆಯೂ ಇಲ್ಲ. ಈ ಸ್ಥಿತಿಯ ನಾಲ್ಕಾಣಿಯಷ್ಟು ನಮ್ಮದಾಗಿದ್ದೇ ಆದರೆ ಒಂದೆರಡು ನೊಬೆಲ್‌ ಪ್ರಶಸ್ತಿಗಳೇ ನಮ್ಮದಾದಾವು. ಐನ್‌ಸ್ಟೀನ್ ಹೇಳುತ್ತಿದ್ದುದೇ ಈ ಸ್ಥಿತಿಯ ಕಾಲು ಭಾಗವನ್ನು ತಾವು ತಲುಪಿರಬಹುದು ಎಂದು. ಈ ಸ್ಥಿತಿ ನಮ್ಮದಾಗುವುದೇ ಮನಸ್ಸನ್ನು ಪೂರ್ಣಪ್ರಮಾಣದಲ್ಲಿ ಶುದ್ಧಗೊಳಿಸಿದಾಗ, ಶುದ್ಧ ಮನಸ್ಸೇ ಪೂರ್ಣಪ್ರಜ್ಞೆಗೆ ದಾರಿ, ವಿಜ್ಞಾನಗಳ ತವರು ಮನೆಯೂ ಶುದ್ಧ ಮನಸ್ಸೇ, ಸೇಬಿನ ಹಣ್ಣು ಕೆಳಕ್ಕೆ ಬಿದ್ದಿರುವುದನ್ನು ಕಂಡ ನ್ಯೂಟನ್ನನಿಗೆ ಇದಕ್ಕೆ ಕಾರಣವೇನು ಎಂಬ ಪ್ರಶ್ನೆ ಎದ್ದಿದ್ದೂ ತನ್ನ ಮನಸ್ಸಿನಲ್ಲಿಯೇ ಮತ್ತು ಇದಕ್ಕೆ ಕಾರಣ ಗುರುತ್ವಾಕರ್ಷಣೆ ಎಂಬ ಅದ್ಭುತ ರಹಸ್ಯ ಎಂಬ ಉತ್ತರ ಹೊಳೆದಿದ್ದೂ ತನ್ನ ಮನಸ್ಸಿನಲ್ಲಿಯೇ. ಈ ಕಾರಣವನ್ನು ಅವನಿಗೆ ಆ ಕಡೆ ಸೇಬಿನ ಹಣ್ಣೂ ಹೇಳಲಿಲ್ಲ ಈ ಕಡೆ ಭೂಮಿಯೂ ಹೇಳಲಿಲ್ಲ. ಮತ್ತಾವ ಮೂಲವೂ ಇದನ್ನು ಒದಗಿಸಲಿಲ್ಲ.

ಕಾಳಿದಾಸನ ಕೃತಿಗಳಿಂದ ಹಿಡಿದು ನಮ್ಮನ್ನು ದಂಗುಗೊಳಿಸುವ ಯಾವ್ಯಾವ ಆವಿಷ್ಕಾರಗಳು ಇಂದು ಮಾನವನನ್ನು ಚಕಿತಗೊಳಿಸಿದೆಯೋ ಅವೆಲ್ಲ ಉದ್ಭವಿಸಿದ್ದೇ ಮನುಷ್ಯನ ಮನಸ್ಸನ್ನು ಕಲಕಿದಾಗ ಹಾಲಿನಿಂದ ಬೆಣ್ಣೆಯನ್ನು ತೆಗೆದಂತೆ. ಮನುಷ್ಯನ ಮನಸ್ಸೆಂಬ ಸಮುದ್ರದಲ್ಲಿ ಅಮೃತವೂ ಇದೆ ವಿಷವೂ ಇದೆ : ಮಂಥನ ಹೇಗಿರಬೇಕು, ಮಾರ್ಗದರ್ಶನ ಯಾರದ್ದಿರಬೇಕು ಎಂದು ಹೇಳುವುದೇ ‘ಸಮುದ್ರ ಮಂಥನ’ ಎಂಬ ಪೌರಾಣಿಕ ಪ್ರಸಂಗ. ಮನಸ್ಸನ್ನು ಸರಿಯಾಗಿ ಮಂಥನಗೊಳಿಸಿದ್ದೇ ಆದರೆ ವಿವೇಕದಿಂದ ಅದರಲ್ಲಿನ ಕ್ಷೇಶಗಳನ್ನು ಹೊರದಬ್ಬಿ ಶಾಂತಗೊಳಿಸಿ. ಏಕಾಗ್ರಗೊಳಿಸಿದ್ದೇ ಆದರೆ ವಿಶ್ವದ ಯಾವ ರಹಸ್ಯವೂ ನಮಗೆ ತಿಳಿಯದೆ ಉಳಿಯುವುದಿಲ್ಲ ಎನ್ನುವುದನ್ನು ರಾಜಯೋಗ ಸಂಶಯಕ್ಕೆಡೆಯಿಲ್ಲದಂತೆ ತಿಳಿಸುತ್ತದೆ. ರಾಜಯೋಗದ ಮೂರನೇ ಎರಡು ಭಾಗ ಈ ವಿವರಗಳಿಗಾಗಿಯೇ ಮೀಸಲಾಗಿದೆ. ಆದರೆ ಮನಸ್ಸು ಶುದ್ಧವಾಗದೇ ಯಾವುದೂ ಸಂಭವಿಸುವುದಿಲ್ಲ.

ಅದು ಸರಿ! ಮನಸ್ಸನ್ನು ಶುದ್ಧಗೊಳಿಸುವುದು ಹೇಗೆ? ಇದನ್ನೂ ಈ ಪುಸ್ತಕ (ರಾಜಯೋಗ) ವಿವರಣಾತ್ಮಕವಾಗಿ ಹೇಳುತ್ತದೆ. ಆದರೆ ಪ್ರಾರಂಭಿಕ ಹಂತದಲ್ಲಿ ಅನುಸರಿಸಬೇಕಾದ ಎಲ್ಲರಿಗೂ ಎಟುಕುವ ಈ ಶಿಸ್ತನ್ನು ಕುರಿತ ಮೂಲಭೂತ ಅಂಶಗಳನ್ನು ಈ ಲೇಖನದಲ್ಲಿ ಪ್ರಸ್ತಾಪಿಸುವುದಕ್ಕೆ ಮಾತ್ರ ಸಾಧ್ಯ ನನಗೆ.
ಉಪನಿಷತ್ ಸ್ಪಷ್ಟವಾಗಿ ಹೇಳುತ್ತದೆ.
ಮತ್ತ ಡಿವೆ.
‘ಆಹಾರಶುದ್ಧ’ ಸತ್ವಶುದ್ಧಿಃ । ಸತ್ವಶುದ್ಧ ಧೃವಾಸ್ಕೃತಿಃ ಸ್ಕೃತಿಲಂಭೆ ವಿಪ್ರ ಮೋಕ್ಷಕ ಎಂದು. ಅರ್ಥಾತ್ ಮನಸ್ಸು ಶುದ್ಧವಾಗಿ ಇರಬೇಕಾದರೆ ಆಹಾರ ಶುದ್ಧವಾಗಿರಬೇಕು.

ಇಲ್ಲಿ ಆಹಾರ ಎಂದರೆ ಬಾಯಿ, ಕಣ್ಣು, ಕಿವಿ, ಮೂಗು, ಚಿಂತನೆ, ಅಸಕ್ತಿ ಇವುಗಳ ಮೂಲಕ ನಮ್ಮ ಅಂತರ್ಯವನ್ನು ಯಾವ ಯಾವುದು ಪ್ರವೇಶಿಸುತ್ತೋ ಅದೆಲ್ಲ. ನಾವು ಮಾಡುವ ಕೆಲಸ, ನಮ್ಮ ಆಸಕ್ತಿ, ನಮ್ಮ ಆದ್ಯತೆಗಳು, ನಮ್ಮ ಆದರ್ಶಗಳು, =ನಲ್ಲಿ ನಮ್ಮ ಸ್ನೇಹವರ್ಗ, ನಾವು ಬಯಸುವ ಮನರಂಜನೆಗಳು, ಅಷ್ಟೇ ಅಲ್ಲ ನಮ್ಮ ಸಂಪಾದನೆಯ ಮಾರ್ಗ ಶುದ್ಧವಾಗಿದೆಯೋ ಅಶುದ್ಧವಾಗಿದೆಯೋ ಇತ್ಯಾದಿ ಕೂಡ. ಆದ್ದರಿಂದ ಮನಸ್ಸೇ ನಮ್ಮ ಉದ್ದಾರ. ನಮ್ಮ ಅವನತಿಗೆ ಕಾರಣವೆಂದರೂ ಸರಿಯೇ. ಅದ್ದರಿಂದಲೇ ಸಾಮಾನ್ಯರಿಗೂ ಅರ್ಥವಾಗುವ ಭಾಷೆಯಲ್ಲಿ ಉದ್ಧಾರದ ಮಾರ್ಗವನ್ನು ಸನಾತನಧರ್ಮ ಪ್ರಚುರ ಪಡಿಸಿದ್ದು ಹೀಗೆ. ನಿರಂತರ ಸದಾಚಾರ, ಸದ್ವಿಚಾರ, ಸತ್ಕಾರ್ಯಗಳಲ್ಲೇ ತೊಡಗಿ ಎಂದಿಗೂ ದುಷ್ಕೃತ್ಯ, ದುರಾಚಾರ ನಿಮ್ಮದಾಗದಿರಲಿ ಎಂದು.

Leave a Comment