ಮಹದಾಯಿ ಜಲವಿವಾದ ಕುರಿತು ಇನ್ನಷ್ಟು ವರದಿ ಸಲ್ಲಿಸಬೇಕಾಗಿದ್ದು
ಈ ಸಂಬಂಧ ಮಹಾದಾಯಿ ನ್ಯಾಯಮಂಡಳಿಗೆ 6 ತಿಂಗಳವರೆಗೆ ಆವಧಿಯನ್ನು ವಿಸ್ತರಿಸಲಾಗಿದೆ. ಈ ಆವಧಿಯು ಆ. 20 ರಿಂದಲೇ ಅನ್ವಯವಾಗಲಿದೆ. ಮಂಡಳಿ ಇನ್ನೂ ಹೆಚ್ಚಿನ ವರದಿ ನೀಡಲು ಕಾಲವಕಾಶ ಕೋರಿ ಜಲಶಕ್ತಿ ಸಚಿವಾಲಯಕ್ಕೆ ಮನವಿ ಮಾಡಿತು. ಈ ಹಿನ್ನಲೆಯಲ್ಲಿ ಸಚಿವಾಲಯ ಅವಧಿಯನ್ನು ವಿಸ್ತರಿಸಿ ಅಧಿಸೂಚನೆ ಪ್ರಕಟಿಸಿದೆ. ಮಹಾದಾಯಿ ಯೋಚನೆಯ ಕುರಿತಾದ ಮಾಹಿತಿ ಇಲ್ಲಿದೆ. ನದಿ ಎಲ್ಲಿದೆ? : ಮಹಾದಾಯಿ ನದಿ ಹುಟ್ಟುವುದು ಕರ್ನಾಟಕದ ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಜಾಂಬೋಟಿಯಲ್ಲಿ. ಕನ್ನಡಿಗರು ಇದನ್ನು ಮಹಾದಾಯಿ ಎಂದರೆ, ಗೋವಾದಲ್ಲಿ ಮಾಂಡೋವಿ ಎನ್ನುತ್ತಾರೆ. ರಾಜ್ಯದಲ್ಲಿ ಹುಟ್ಟಿದರು ಗೋವಾದಲ್ಲಿ ಹೆಚ್ಚು ಹರಿಯುವುದರಿಂದ ಇದು ಗೋವಾದ ಜೀವನದಿಯಾಗಿದೆ. ವಿವಾದ ಏನು? : ಕರ್ನಾಟಕ, ಗೋವಾ ಮಹಾರಾಷ್ಟ್ರಗಳಲ್ಲಿ ವ್ಯಾಪಿಸಿರುವ ಮಹದಾಯಿಯ 200 ಟಿ ಎಂ ಸಿ ಅಡಿಯಷ್ಟು ನೀರು ವ್ಯರ್ಥವಾಗಿ ಅರಬ್ಬಿ ಸಮುದ್ರ ಸೇರುತ್ತದೆ.
ಇದನ್ನೂ ಓದಿ: ರಮೇಶ್ ಕುಮಾರ್ ಜಮೀನು ಸರ್ವೆಗೆ ಡೆಡ್ ಲೈನ್
ಹೀಗಾಗಿ, ಮಹದಾಯಿ ನದಿಯ ಒಂದಿಷ್ಟು ನೀರು, ಮಲಪ್ರಭಾ ನದಿಗೆ ಸೇರುವಂತೆ ಮಾಡಿದ್ದಾರೆ ಹುಬ್ಬಳ್ಳಿ – ಧಾರವಾಡ ಜನತೆಯ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬಹುದೆಂದು ಕರ್ನಾಟಕ ಉದ್ದೇಶಿಸಿದೆ. ಮಹಾದಾಯಿಯಿಂದ ಮಲಪ್ರಭಾ ಗೆ ನೀರು ಹರಿಸುವ ಯೋಜನೆಯೇ ಕಳಸಾ ಮತ್ತು ಬಂಡೂರಿ ನಾಲಾ ಯೋಜನೆ ಯಾಗಿದೆ. ಮಹಾದಾಯಿ – ಮಲಪ್ರಭಾ ನದಿಗಳ ನಡುವೆ ಹರಿಯುವ ಉಪ ನದಿಗಳೇ ಕಳಸಾ ಮತ್ತು ಬಂಡೂರಿಗಳಾಗಿವೆ. ಈ ಯೋಜನೆ ಜಾರಿಯಾದರೆ ರಾಜ್ಯದ ಬೆಳಗಾವಿ ಜಿಲ್ಲೆಯ ಸವದತ್ತಿ ರಾಮದುರ್ಗ ತಾಲೂಕು ಮತ್ತು ಗದಗ ಜಿಲ್ಲೆಯ ಅನೇಕ ಪ್ರದೇಶಗಳಿಗೆ ನೀರು ಹರಿಸಬಹುದು. 1978 ರಲ್ಲೇ ಸಿದ್ದಗೊಂಡ ಈ ಯೋಜನೆಗೆ 2002ರಲ್ಲಿ ಕೇಂದ್ರದ ಅನುಮತಿ ಸಿಕ್ಕಿದೆ. ಆದರೆ, ಇದಕ್ಕೆ ಗೋವಾ ತಗಾದೆಯಿಂದ ನೆನೆಗುದಿಗೆ ಬಿದ್ದಿದೆ. ಗೋವಾದ ತಗಾದೆ ಏನು? : ಕರ್ನಾಟಕ ಸರ್ಕಾರ ಕುಡಿಯುವ ನೀರಿನ ನೆಪದಲ್ಲಿ ನೀರಾವರಿ ಯೋಜನೆಯ ಹುನ್ನಾರ ನಡೆಸಿದೆ. ಮಹಾದಾಯಿ ನದಿ ನೀರಲ್ಲಿ ಕರ್ನಾಟಕಕ್ಕೆ 44.15 ಟಿಎಂಸಿ ಅಡಿ, ಗೋವಾ 147 ಟಿಎಂಸಿ ಅಡಿ, ಮಹಾರಾಷ್ಟ್ರ 7.57 ಟಿಎಂಸಿ ಅಡಿ ಪಾಲು ಹೊಂದಿದೆ. ಕೇಂದ್ರ ಜಲ ಆಯೋಗದ ಪ್ರಕಾರ, ನಮ್ಮ ವ್ಯಾಪ್ತಿಯಲ್ಲಿ ಬರುವ 1.5 ಟಿಎಂಸಿ ಅಡಿ ನೀರನ್ನು ಕುಡಿಯಲು ಮತ್ತು ಕೈಗಾರಿಕೆಗೆ ಬಳಸಲು ಕರ್ನಾಟಕಕ್ಕೆ ಸಂಪೂರ್ಣ ಹಕ್ಕಿದೆ. ಆದರೆ ಗೋವಾ ಹುಬ್ಬಳ್ಳಿ-ಧಾರವಾಡ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಇಲ್ಲ. ಇದರ ಹೆಸರಲ್ಲಿ ಲಕ್ಷಾಂತರ ಹೆಕ್ಟೇರ್ ಪ್ರದೇಶಗಳಿಗೆ.