ಮೂರು ತಾಸು ಅಲ್ಲು ಅರ್ಜುನ್ ವಿಚಾರಣೆ

ಮೂರು ತಾಸು ಅಲ್ಲು ಅರ್ಜುನ್ ವಿಚಾರಣೆ

ಹೈದರಾಬಾದ್ (ಪಿಟಿಐ): ಡಿ. 4 ರಂದು ‘ಪುಷ್ಪ 2:ದಿ ರೂಲ್’ ಸಿನಿಮಾದ ಪ್ರೀಮಿಯರ್ ಪ್ರದರ್ಶನ ನಡೆಯಿತ್ತಿದ್ದಾಗ ಉಂಟಾದ ನೂಕು ನುಗ್ಗಲು ಮತ್ತು ಕಾಲ್ತುಳಿತದಲ್ಲಿ ಮಹಿಳೆಯೊಬ್ಬರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲುಗು ನಟ ಅಲ್ಲು ಅರ್ಜುನ್ ಅವರು ಚಿಕ್ಕಡಪಲ್ಲಿ ಠಾಣೆಯ ಪೊಲೀಸರು ಮುಂದೆ ಮಂಗಳವಾರ ವಿಚಾರಣೆಗೆ ಹಾಜರಾದರು.

ಮಂಗಳವಾರ ಬೆಳಗೆ 11 ಗಂಟೆ ಒಳಗಾಗಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿತು. ಹೀಗಾಗಿ, ಅಲ್ಲು ಅರ್ಜುನ್ ಮನೆ ಮುಂದೆ ಹಾಗೂ ಚಿಕ್ಕಡಪಲ್ಲಿ ಠಾಣೆಯ ಮುಂದೆ ಹೆಚ್ಚಿನ ಭದ್ರತೆ ಕಲ್ಪಿಸಲಾಗಿತ್ತು. ಮನೆಯಿಂದ ಹೊರಡುವ ಮುನ್ನ, ಅಭಿಮಾನಿಗಳತ್ತ ಕೈಬೀಸಿದರು. ಠಾಣಿಗೆ ತೆರಳುವ ಮಾರ್ಗದ ಕೆಲವೆಡೆ ನಿರ್ಬಂಧ ವಿಧಿಸಲಾಗಿತ್ತು.

‘ಪೊಲೀಸರ ವಿಚಾರಣೆಗೆ ಸಹಕರಿಸುತ್ತೇನೆ’ಎಂದು ಈ ಹಿಂದೆಯೇ ಅಲ್ಲು ಅರ್ಜುನ್ ತಿಳಿಸಿದ್ದರೂ.

ಇದನ್ನೂ ಓದಿ:- ಕರ್ನಾಟಕದ ರಘು ಚಾಂಪಿಯನ್

ತಂದೆ ಅಲ್ಲು ಅರವಿಂದ್, ಮಾವ ಚಂದ್ರಶೇಖರ್ ರೆಡ್ಡಿ, ಆಪ್ತ ಬನ್ನಿ ವಾಸ್, ವಕೀಲ ಅಶೋಕ್ ರೆಡ್ಡಿ ಜೊತೆಗೆ 11ಗಂಟೆ ನಂತರ ಠಾಣೆಗೆ ಹಾಜರಾದರು. ಮಧ್ಯಾಹ್ನ 2.45ವರೆಗೆ ಸೆಂಟ್ರಲ್ ವಲಯದ ಡಿಸಿಪಿ ಆಕ್ಷಾಂಶ್ ಯಾದವ್ ಅವರು ಅಲ್ಲು ಅವರ ವಿಚಾರಣೆ ನಡೆಸಿದರು. ಕಾಲ್ತುಳಿತಕ್ಕೆ ಸಂಬಂಧಿಸಿದಂತೆ ಪೊಲೀಸರು 20 ಪ್ರಶ್ನೆಗಳನ್ನು ಕೇಳಿದರು. ಈ ಪೈಕಿ ಹಲವು ಪ್ರಶ್ನೆಗಳಿಗೆ ಉತ್ತರಿಸಿದರು. ಘಟನೆ ನಡೆದ ಸ್ಥಳದಲ್ಲಿ ಸಂಗ್ರಹಿಸಿದ ವಿಡಿಯೊ ದೃಶ್ಯಾವಳಿಗಳನ್ನು ತೋರಿಸಿದರು.
‘ಮಹಿಳೆಯೊಬ್ಬರು ಮೃತಪಟ್ಟಿದ್ದು, ಜನದಟ್ಟಣೆ ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ಕೂಡಲೇ ಸ್ಥಳ ತೆರವುಗೊಳಿಸಬೇಕು ಎಂದು ಅಲ್ಲು ಅರ್ಜುನ್ ಗೆ ತಿಳಿಸಲಾಗಿತ್ತು’ಎಂದು ಪೊಲೀಸ ಅಧಿಕಾರಿಗಳು ತಿಳಿಸಿದ್ದರು. ಆದರೆ, ಯಾವ ಅಧಿಕಾರಿಯೂ ಸಂಪರ್ಕಿಸಿರಲಿಲ್ಲ, ಮಹಿಳೆ ಮೃತಪಟ್ಟ ವಿಚಾರ ಮರುದಿನ ಗೊತ್ತಾಗಿತ್ತು ಎಂದು ಅಲ್ಲೂ ಅರ್ಜುನ್ ತಿಳಿಸಿದ್ದರು.

ಕಾಲ್ತುಳಿತದ ವೇಳೆ ಮಹಿಳೆ ಮೃತಪಟ್ಟ ವಿಚಾರದ ಕುರಿತು ಮಾಹಿತಿ ನೀಡಿದ ಅಧಿಕಾರಿಯನ್ನು ಗುರುತು ಹಿರಿಯುವಂತೆ ವಿಚಾರಣೆ ವೇಳೆ ಸೂಚಿಸಲಾಯಿತು.
ಮಂಗಳವಾರ ನಟ ನೀಡಿದ ಹೇಳಿಕೆಯನ್ನು ದಾಖಲಿಸಲಾಗಿದ್ದು,ಅಗತ್ಯ ಬಿದ್ದರೆ ಮತ್ತೊಮ್ಮೆ ಕರೆಸಿಕೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆ್ಯಂಟನಿ ಬಂಧನ: ಅರ್ಜುನ್ ಅವರ ಭದ್ರತೆ ಹಾಗೂ ಬ್ಯಾನ್ಸರ್ ಗಳ ಮೇಲುಸ್ತುವಾರಿ ವಹಿಸಿದ ಆ್ಯಂಟನಿಯನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆ ನಡೆದ ದಿನದಂದು ಆ್ಯಂಟನಿ ಕೂಡ ಸ್ಥಳದಲ್ಲಿದ್ದರು. ಪೊಲೀಸರು ಆ್ಯಂಟನಿಯನ್ನು ಸಂಧ್ಯಾ ಚಿತ್ರಮಂದಿರಕ್ಕೆ ಕರೆದೊಯ್ದು ಅಂದಿನ ಘಟನೆಯನ್ನು ಮರುಸೃಷ್ಟಿ ಮಾಡಿದರು.

Leave a Comment