ಯಾದವ್, ಪೂಜಾ, ಸಾವನ್ ಕೂಟ ದಾಖಲೆ
ಡೆಹ್ರಾಡೂನ್: ಉತ್ತರ ಪ್ರದೇಶದ ಜಾವೆಲಿನ್ ಎಸೆ ತಗರ ಸಚಿನ್ ಯಾದವ್, ಹರಿಯಾಣದ 18 ವರ್ಷದ ಹೈಜಂಪರ್ ಪೂಜಾ ಸಿಂಗ್ ಮತ್ತು ಹಿಮಾಚಲ ಪ್ರದೇಶದ ಓಟಗಾರ ಸಾವನ್ ಬರ್ವಾಲ್ 38ನೇ ರಾಷ್ಟ್ರೀಯ ಬುಧವಾರ ಅಥ್ಲೆಟಿಕ್ಸ್ ಸ್ಪರ್ಧೆಗಳಲ್ಲಿ ರಾಷ್ಟ್ರೀಯ ಕೂಟದ ದಾಖಲೆಗಳನ್ನು ತಿದ್ದಿ ಬರೆದರು. ನೀರಜ್ ಚೋಪ್ರಾ ಮತ್ತು ಕಿಶೋರ್ ಜೇನಾ ಅವರ ಗೈರು ಹಾಜರಾತಿಯಲ್ಲಿ ಆಕರ್ಷಣೆಯ ಕೇಂದ್ರಬಿಂದುವಾಗಿದ್ದ 25 ವರ್ಷದ ಯಾದವ್, ತಮ್ಮ ಐದನೇ ಯತ್ನದಲ್ಲಿ 84.39 ಮೀ. ಜಾವೆಲಿನ್ ಎಸೆದು ಕೂಟ ದಾಖಲೆಯೊಂದಿಗೆ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡರು. ಜತೆಗೆ ಅಂತಾರಾಷ್ಟ್ರೀಯ ಸ್ಪರ್ಧೆಗೆ ಸಿದ್ದವಾಗಿರುವುದನ್ನು ವೈಯಕ್ತಿಕವಾಗಿ ಬಿಂಬಿಸಿದರು. ಚಿನ್ನ ಗೆಲ್ಲುವ ಹಾದಿಯಲ್ಲಿ ಅವರು, 2015 ಆವೃತ್ತಿಯಲ್ಲಿ ರಜಿಂದರ್ ಸಿಂಗ್ ನಿರ್ಮಿಸಿದ್ದ (82.23 ಮೀ.) ಹಿಂದಿನ ದಾಖಲೆಯನ್ನು ಅಳಿಸಿ ಹೊಸ ದಾಖಲೆ ಬರೆದರು.
ಸ್ಪರ್ಧೆಯ ನಂತರ ಪ್ರತಿಕ್ರಿಯಿಸಿದ ಯಾದವ್, ”ವಿಶ್ವ ಅಥ್ಲೆಟಿಕ್ಸ್‌ಗೆ ನಿಗದಿ ಪಡಿಸಲಾದ ಅರ್ಹತಾ ಮಾನದಂಡವನ್ನು ಪೂರೈಸುವುದು (85.50 ಮೀ.) ನನ್ನ ಗುರಿಯಾಗಿತ್ತು. ಆದರೆ ಅಲ್ಪದರಲ್ಲಿ ಇದು ತಪ್ಪಿತು,” ಎಂದು ಹೇಳಿದರು. ಉತ್ತರ ಪ್ರದೇಶದ ರೋಹಿತ್ ಯಾದವ್ (80.47ಮೀ.) ಮತ್ತು ವಿಕಾಶ್ ಶರ್ಮ (79.33 ಮೀ.) ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ಗೆದ್ದುಕೊಂಡರು.
ಹರಿಯಾಣದ ಪೂಜಾ, ಮಹಿಳೆಯರ ಹೈಜಂಪ್ ಸ್ಪರ್ಧೆಯಲ್ಲಿ 1.84 ಮೀ. ಎತ್ತರ ಜಿಗಿದು ಬಂಗಾರ ಪದಕವನ್ನು ಉಳಿಸಿಕೊಂಡರು. 2023ರಲ್ಲಿ ಸ್ವರ್ಣ ಪದಕ ಜಯಿಸಿದ್ದ ಪೂಜಾ, 2022ರಆವೃತ್ತಿಯಲ್ಲಿ ಪಶ್ಚಿಮ ಬಂಗಾಳದ ಸ್ವಪ್ನಾ ಬರ್ಮನ್ ನಿರ್ಮಿಸಿದ್ದ 1.83 ಮೀ. ದಾಖಲೆಯನ್ನು ಹಿಂದಿಕ್ಕಿದರು.
ಇದನ್ನೂ ಓದಿ:2ನೇ ಸ್ತರದ ನಗರಗಳಿಗೆ ಹೂಡಿಕೆ ವಿಸ್ತರಣೆ
20 ವರ್ಷದೊಳಗಿನವರ ವಿಭಾಗದಲ್ಲಿ 1.85 ಮೀ.ಎತ್ತರ ಜಿಗಿದು ವೈಯಕ್ತಿಕ ದಾಖಲೆ ಹೊಂದಿರುವ ಪೂಜಾ, ತಮ್ಮ ಪ್ರದರ್ಶನದಲ್ಲಿ ಸುಧಾರಣೆ ಕಂಡುಕೊಳ್ಳು ವಲ್ಲಿ ಯಶಸ್ವಿಯಾಗಿದ್ದಾರೆ. ತಮಿಳು ನಾಡಿನ ಗೋಬಿಕಾ ಕೆ.(1.79 ಮೀ.) ಮತ್ತು ಕರ್ನಾಟಕದ ಅಭಿನಯ ಶೆಟ್ಟಿ (1.177 ಮೀ.) ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡರು.
ಪುರುಷರ 5000 ಮೀ. ರೇಸ್‌ನಲ್ಲಿ ಸಾವನ್ ಬರ್ಮಾಲ್ 45.93 ಸೆಕೆಂಡ್ ಗಳಲ್ಲಿ ಮೊದಲಿಗರಾಗಿ ಗುರಿ ಮುಟ್ಟಿದರು.
ಕರ್ನಾಟಕದ ಅಭಿನಯ ಶೆಟ್ಟಿಗೆ ಕಂಚಿನ ಪದಕ.ಈ ಹಾದಿಯಲ್ಲಿ ಅವರು 2015ರಲ್ಲಿ ಸರ್ವಿಸಸ್‌ನ ಜಿ.ಲ ಕ್ಷಣನ್ ನಿರ್ಮಿಸಿದ್ದ 13:50.05 ಸೆ.ಗಳು ದಾಖಲೆಯನ್ನು ಅಳಿಸಿ ಕೂಟದಲ್ಲಿ ನೂತನ ದಾಖಲೆ ನಿರ್ಮಿಸಿದರು. ಇದು ಸಾವನ್‌ಗೆ ಹಾಲಿ ಕೂಟದಲ್ಲಿ ಒಲಿದ ಎರಡನೇ ಚಿನ್ನದ ಪದಕ. ಕಳೆದ ಶನಿವಾರ ನಡೆದ 10,000 ಮೀ.ನಲ್ಲಿ ಸಾವನ್ ಕೂಟ ದಾಖಲೆಯೊಂದಿಗೆ ಬಂಗಾರ ಪದಕ ಜಯಿಸಿದ್ದರು. ಹರಿಯಾಣದ ಗಗನ್ ಸಿಂಗ್ (14:00.04 ಸೆ.) ಮತ್ತು ಮಧ್ಯಪ್ರದೇಶದ ಸುನಿಲ್ ದವಾರೆ (14:01.33 ಸೆ.) ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಪಡೆದರು.
ಮಹಿಳೆಯರ 400 ಮೀ. ಹರ್ಡಲ್ಸ್ ಸ್ಪರ್ಧೆಯಲ್ಲಿ ತಮಿಳುನಾಡಿನ ವಿದ್ಯಾ ರಾಮ್ ರಾಜ್ ಸತತ ಮೂರನೇ ವರ್ಷವೂ ಚಿನ್ನದ ಸಾಧನೆ ತೋರಿದರು. 2022 ಮತ್ತು 2023ರ ಆವೃತ್ತಿಯಲ್ಲಿಯೂ ವಿದ್ಯಾ ಬಂಗಾರ ಜಯಿಸಿದ್ದಾರೆ. ದಿಗ್ಗಜೆ ಪಿ.ಟಿ. ಉಷಾ ಅವರೊಂದಿಗೆ 55.42 ಸೆಕೆಂಡ್ ಗಳಲ್ಲಿ ಜಂಟಿ ರಾಷ್ಟ್ರೀಯ ದಾಖಲೆ ಹೊಂದಿರುವ ರಾಮ್ ರಾಜ್, 58.11 ಸೆಕೆಂಡ್ ಗಳಲ್ಲಿ ಮೊದಲಿಗರಾಗಿ ಚಿನ್ನಕ್ಕೆ ಕೊರಳೊಡ್ಡಿದರು.
ತಮಿಳುನಾಡಿನ ಮತ್ತೊಬ್ಬ ಶ್ರೀವಾರ್ತಾನಿ (59.86 ಸೆ.)ಮತ್ತು ಮಹಾರಾಷ್ಟ್ರದ ನೇಹಾ ಧಬಾಲೆ (1:೦೦.52 ಸೆ.) ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕವನ್ನು ತಮ್ಮದಾಗಿಸಿ ಕೊಂಡರು.