ಯೂನುಸ್ ತಳೆಯ ಹೊರಟಿರುವ ಆಯತೊಲ್ಲಾ ಅವತಾರ

Written by karnatakanandi.com

Published on:

ಯೂನುಸ್ ತಳೆಯಹೊರಟಿರುವ ಆಯತೊಲ್ಲಾ ಅವತಾರ

ಬಿಲ್ ಕ್ಲಿಂಟನ್ ಮತ್ತು ಬರಾಕ್ ಒಬಾಮ ಗಾಳಿ ತುಂಬಿದ ಮಹಮದ್ ಯೂನುಸ್ ಎಂಬ ಗೊಂಬೆಯನ್ನು ಜೋ ಬೈಡೆನ್ ಜಗತ್ತಿನ ಮುಂದೆ ಎತ್ತಿ ನಿಲ್ಲಿಸಿದ್ದನ್ನು ನೋಡಿದೆವು. ‘ದೊಡ್ಡಣ್ಣ’ನ ಡೆಮೋಕ್ರಾಟಿಕ್ ಪಕ್ಷ ತನ್ನಿಚ್ಛೆಯಂತೆ ಬಣ್ಣ ಹಚ್ಚಿ, ಬಟ್ಟೆ ತೊಡಿಸಿದ ಈ ಗೊಂಬೆಯನ್ನು ಅದರ ನೂರು ಬಾಯಿಗಳಲ್ಲಿ ಮುಖ್ಯ ಮೂರಾದ ‘ನ್ಯೂಯಾರ್ಕ್ ಟೈಮ್ಸ್’, ‘ವಾಷಿಂಗ್‌ಟನ್ ಪೋಸ್ಟ್’, ‘ಸಿಎನ್ಎನ್’ “ಆಹಾ ಎಷ್ಟು ಚಂದವಿದೆ!’ ಎಂದು ಹೊಗಳಿದ್ದನ್ನೂ ಕೇಳಿದೆವು. ಇನ್ನೆಷ್ಟು ದಿನ ಈ ಬೊಂಬೆಯಾಟ?

ಬೊಂಗೆ ಚುಚ್ಚಲು ದಬ್ಬಣ ಹಿಡಿದು ಡೊನಾಲ್ಡ್ ಟ್ರಂಪ್ ಬರುತ್ತಿದ್ದಾರೆ, ನಿಜ. ಆದರೆ ಅದಕ್ಕೆ ಮುನ್ನ ಬೊಂಬೆ ಜೀವತಳೆದಿದೆ ಮತ್ತು ತನ್ನ ಕ್ಷೇಮಕ್ಕಾಗಿ ತಂತ್ರ ರೂಪಿಸಿತ್ತಿದೆ! ನಮ್ಮ ಪೂರ್ವ ಗಡಿಯಲ್ಲಿ ನಡೆಯುತ್ತಿರುವ ನಾಟಕದ ಹೊಸ ಅಂಕದ ಪರದೆಯೊಂದು ಸದ್ಯದಲ್ಲೇ ಮೇಲೇಳಲಿದೆ. ಅದನ್ನು ವೀಕ್ಷಿಸುವ ಪೂರ್ವತಯಾರಿಯಾಗಿ ಇಂದಿನ ಬಾಂಗ್ಲಾದೇಶದ ಬಗ್ಗೆ ನಮ್ಮ ನೆನಪುಗಳನ್ನು ಪುನರ್‌ಮನನ ಮಾಡಿಕೊಳ್ಳೋಣ.

ಇತ್ತೀಚಿನವರೆಗೂ ಸಿದ್ಧ ಉಡುಪುಗಳ ನಿರ್ಯಾತದಲ್ಲಿ ಬಾಂಗ್ಲಾದೇಶ ಜಾಗತಿಕವಾಗಿ ಎರಡನೆಯ ಸ್ಥಾನದಲ್ಲಿತ್ತು. ದೇಶದ ಒಟ್ಟು ನಿರ್ಯಾತದ 70% ಇದ್ದ ಸಿದ್ಧ ಉಡುಪುಗಳು ಬಾಂಗ್ಲಾದೇಶದ ಅತಿದೊಡ್ಡ ವಿದೇಶಿ ವಿನಿಮಯ (ಡಾಲರ್) ಮೂಲವಾಗಿದ್ದವು. ಆದರೆ ಈಗ ಪರಿಸ್ಥಿತಿ ಊಹಿಸಲಾಗದಿದ್ದಷ್ಟು ಬದಲಾಗಿದೆ. ಜೂನ್-ಜುಲೈನಲ್ಲಾದ ತಥಾಕಥಿತ “ವಿದ್ಯಾರ್ಥಿ ಆಂದೋಲನ’ ಸೃಷ್ಟಿಸಿದ ಅರಾಜಕತೆಯೊಂದಿಗೆ ಆಗಸ್ಟ್‌ನಲ್ಲಿ ಆರಂಭವಾಗಿ ಇನ್ನೂ ನಿಂತಿಲ್ಲದ ರಾಷ್ಟ್ರವ್ಯಾಪಿ ಹಿಂಸಾಚಾರ ಮತ್ತು ಅಶಾಂತಿಯಿಂದಾಗಿ ಬಹುತೇಕ ಸಿದ್ಧ ಉಡುಪುಗಳ ತಯಾರಿಕಾ ಘಟಕಗಳು ಮುಚ್ಚಲ್ಪಟ್ಟವು. ಇದರಿಂದಾಗಿ ಸಿದ್ಧ ಉಡುಪುಗಳ ಜಾಗತಿಕ ಆಯಾತಗಾರರು ಭಾರತದ ತಯಾರಕರತ್ತ ತಿರುಗಿದರು. ಹಿಂದೆಯೂ ಬಾಂಗ್ಲಾದೇಶಕ್ಕೆ ಸಿದ್ಧ ಉಡುಪುಗಳ ತಯಾರಿಕೆಗಾಗಿ ಬಟ್ಟೆಗಳು ಹೋಗುತ್ತಿದ್ದುದು ಭಾರತದ ಬಟ್ಟೆ ಗಿರಣಿಗಳಿಂದಲೇ. ಬಾಂಗ್ಲಾದೇಶದಲ್ಲಿ ಬದಲಾದ ಪರಿಸ್ಥಿತಿಯಿಂದಾಗಿ ಭಾರತದ ಬಟ್ಟೆಗಳು ಲುಧಿಯಾನಾ, ಜಲಂಧರ್, ಸೂರತ್, ಅಹ್ಮದಾಬಾದ್, ಬೆಂಗಳೂರು ಮುಂತಾದ ಭಾರತೀಯ ನಗರಗಳಲ್ಲಿನ ಸಿದ್ದ ಉಡುಪುಗಳ ತಯಾರಿಕಾ ಘಟಕಗಳಿಗೇ ಹೋಗತೊಡಗಿವೆ.

ದೇಶದ ವಿದೇಶಿ ವಿನಿಮಯ ಗಳಿಕೆಯ ಪ್ರಮುಖ ಕ್ಷೇತ್ರಕ್ಕೆ ಹೀಗೆ ಹೊಡೆತ ಬಿದ್ದದ್ದರಿಂದಾಗಿ ವರ್ಷದ ಹಿಂದೆ ಪಾಕಿಸ್ತಾನ ಅಸೂಯೆ ಪಡುವಂತೆ 39 ಬಿಲಿಯನ್ ಡಾಲರ್ ಇದ್ದ ಬಾಂಗ್ಲಾದೇಶದ ವಿದೇಶಿ ವಿನಿಮಯ ಸಂಗ್ರಹ ಇಂದು 18 ಬಿಲಿಯನ್ ಡಾಲರ್‌ಗಳಿಗೆ ಇಳಿದಿದೆ ಮತ್ತು ಅದು ವೇಗವಾಗಿ ತಳಕಾಣುತ್ತಿದೆ. ಹೀಗಾಗಿ ಇನ್ನು ಮೂರು ವಾರಗಳಲ್ಲಿ ಅಗತ್ಯ ವಸ್ತುಗಳ ಆಮದಿಗಾಗಿ ಬಾಂಗ್ಲಾದೇಶದಲ್ಲಿ ಹಣವೇ ಇರುವುದಿಲ್ಲ ಎಂಬ ಸ್ಥಿತಿ ನಿರ್ಮಾಣವಾಗಿದೆ. ಇದರೊಂದಿಗೆ ಕಳೆದ ಸೆಪ್ಟೆಂಬರ್‌ನಲ್ಲಿ ಸಂಭವಿಸಿದ ನೆರೆಯಿಂದಾಗಿ ಬಾಂಗ್ಲಾದೇಶದ ಭತ್ತ ಉತ್ಪಾದನೆಯಲ್ಲಿ ಹನ್ನೊಂದು ಲಕ್ಷ ಟನ್ ಕುಸಿತವಾಯಿತು. ಗಾಯದ ಮೇಲೆ ಬರೆ ಎಳೆದಂತೆ ನೆರೆಯ ಮ್ಯಾನ್ಮಾರ್‌ನ ಅರಕಾನ್ ಬಂಡುಕೋರರ ಸೇನೆ ಎರಡು ವಾರಗಳ ಹಿಂದೆ ಮ್ಯಾನ್ಮಾರ್-ಬಾಂಗ್ಲಾದೇಶ ಗಡಿಯನ್ನು ಬಂದ್‌ ಮಾಡಿ ಆ ನೆರೆನಾಡಿನಿಂದ ಬಾಂಗ್ಲಾದೇಶಕ್ಕೆ ಅಕ್ಕಿಯ ಪೂರೈಕೆಯನ್ನು ತಡೆಹಿಡಿದರು. ಹೀಗಾಗಿ ಬಾಂಗ್ಲಾದೇಶದಲ್ಲಿ ಅಕ್ಕಿಯ ಕೊರತೆ ಏಕಾಏಕಿ ಉಂಟಾಯಿತು. ಇಂದು ಅಲ್ಲಿ ಆಹಾರವಸ್ತುಗಳಿಗೆ ಸಂಬಂಧಿಸಿದಂತೆ ಹಣದುಬ್ಬರ 20% ದಾಟಿ ದೇಶದ ಜನಸಂಖ್ಯೆಯ ಬಹುದೊಡ್ಡ ಭಾಗ ಸಂಕಷ್ಟದಸ್ಥಿತಿ ತಲುಪಿದೆ. ಸದ್ಯಕ್ಕೆ ಭಾರತದ ಖಾಸಗಿ ರಫ್ತುದಾರರಿಂದ ಎರಡು ಲಕ್ಷ ಟನ್ ಅಕ್ಕಿ ಪೂರೈಕೆಯಾಗಿದ್ದರೂ ಸಮಸ್ಯೆಯನ್ನು ಪೂರ್ಣವಾಗಿ ಬಗೆಹರಿಸಲು ಅದು ಸಹಕರಾರಿಯಾಗದು.

ಆರ್ಥಿಕ ಸ್ಥಿತಿ ಹೀಗಿದ್ದರೆ ಸಾಮಾಜಿಕ ಸ್ಥಿತಿ ಸಹ ಕಳವಳಕಾರಿಯಾಗಿಯೇ ಮುಂದುವರಿಯುತ್ತಿದೆ. ಹಿಂದೂಗಳ ಮೇಲಿನ ದೌರ್ಜನ್ಯಗಳು ನಿಲ್ಲುವಂತೆ ಕಾಣುತ್ತಿಲ್ಲ. ಜತೆಗೆ, ಮುಸ್ಲಿಂ ಮೂಲಭೂತವಾದಿಗಳ ಕೆಟ್ಟ ಕಣ್ಣಿಗೆ ಕ್ರಿಶ್ಚಿಯನ್ನರೂ ಸಿಲುಕಿ ಸರಿಯಾಗಿ ಕ್ರಿಸ್‌ಮಸ್ ಸಂದರ್ಭದಲ್ಲೇ ಚಟ್ಟೋಗ್ರಾಮ್ ಪ್ರದೇಶದಲ್ಲಿ ಹದಿನೇಳು ಕ್ರಿಶ್ಚಿಯನ್ ಮನೆಗಳು ಬೆಂಕಿಗಾಹುತಿಯಾಗಿವೆ. ಈ ದುರಂತದ ಹಿಂದಿದ್ದದ್ದು ಬೇನಝೀರ್ ಅಹ್ಮದ್ ಎಂಬ ಮಾಜಿ ಐಜಿಪಿ!

ಇದನ್ನೂ ಓದಿ: ದೇಗುಲ ಪ್ರವೇಶ: ಬೇಕಿದೆ ಪರಿವರ್ತನೆ

ಪರಿಸ್ಥಿತಿಯನ್ನು ಸುಧಾರಿಸಲು ಅಗತ್ಯ ಕ್ರಮ ಕೈಗೊಳ್ಳುವ ಬದಲು ಯೂನುಸ್ ಸರ್ಕಾರ ತನ್ನ ಅಧಿಕಾರವನ್ನು ಭದ್ರಗೊಳಿಸಿಕೊಳ್ಳುವತ್ತ ಗಮನ ನೀಡುತ್ತಿದೆ. ಮೊದಲಿಗೆ ಜನವರಿ 2024ರ ಚುನಾವಣೆಗಳಲ್ಲಿ ಜನರ ಆಯ್ಕೆಯಾಗಿದ್ದ ಅವಾಮಿ ಲೀಗ್ ಅನ್ನು ಹೊರಗಿಟ್ಟು ತಮ್ಮ ಪರವಾಗಿದ್ದ ಬಾಂಗ್ಲಾದೇಶ್ ನ್ಯಾಷನಲಿಸ್ಟ್ ಪಾರ್ಟಿ (ಬಿಎನ್‌ಪಿ) ಮತ್ತು ಜಮಾತ್-ಎ-ಇಸ್ಲಾಮಿಗಳನ್ನು ಜತೆಗಿಟ್ಟುಕೊಂಡು ಉಸ್ತುವಾರಿ ಸರ್ಕಾರ ರಚಿಸಿದ ಯೂನುಸ್ ಈಗ ದೇಶದ ಎರಡು ಪ್ರಮುಖ ರಾಜಕೀಯ ಪಕ್ಷಗಳಲ್ಲೊಂದಾದ ಬಿಎನ್‌ಪಿಯನ್ನೂ ರಾಷ್ಟ್ರ ರಾಜಕಾರಣದಲ್ಲಿ ಮೂಲೆಗುಂಪಾಗಿಸುವ ಹುನ್ನಾರದಲ್ಲಿ ತೊಡಗಿದ್ದಾರೆ ಮತ್ತು ಅದಕ್ಕಾಗಿ ಸಮಯ ಹೊಂದಿಸಿಕೊಳ್ಳುತ್ತಿದ್ದಾರೆ. ಮೂರು ತಿಂಗಳೊಳಗೆ ಮುಕ್ತ ಚುನಾವಣೆಗಳನ್ನು ನಡೆಸಿ ಜನಪ್ರಿಯ ಸರ್ಕಾರಕ್ಕೆ ಅಧಿಕಾರ ಹಸ್ತಾಂತರಿಸುವ ವಾಗ್ದಾನದೊಂದಿಗೆ ಉಸ್ತುವಾರಿಸರ್ಕಾರದ ನೇತೃತ್ವ ವಹಿಸಿಕೊಂಡ ಯೂನುಸ್ ಈಗ ಹೇಳುತ್ತಿರುವುದು ಚುನಾವಣೆಗಳು ನಡೆಯುವುದು 2025ರ ಅಂತ್ಯದಲ್ಲಿ ಅಥವಾ 2026ರ ಆರಂಭದಲ್ಲಿ ಎಂದು! ಇದಿಷ್ಟೇ ಆಗಿದ್ದರೆ ತೊಂದರೆಯೇನೂ ಇರಲಿಲ್ಲ. ಚುನಾವಣೆಗಳಿಗಾಗಿ ಕಾಯುತ್ತ ವರ್ಷಗಳನ್ನು ಕಳೆಯುವುದು ಬಾಂಗ್ಲಾದೇಶೀಯರಿಗೆ ಹೊಸದೇನಲ್ಲ. ಪಾಕಿಸ್ತಾನದ ಭಾಗವಾಗಿದ್ದಾಗ ಅವರು ಮೊತ್ತಮೊದಲ ಸಾರ್ವತ್ರಿಕ ಚುನಾವಣೆಗಳಿಗಾಗಿ ಬರೋಬ್ಬರಿ 23 ವರ್ಷಗಳು ಕಾದರು! ಆಮೇಲೆ ಸ್ವತಂತ್ರಗೊಂಡು ಚುನಾವಣೆ ನಡೆಸಿದ ಮೂರೇ ವರ್ಷಗಳಲ್ಲಿ ರಾಷ್ಟ್ರಪಿತ ಮತ್ತು ಪ್ರಧಾನಿಯ ಹತ್ಯೆಯಾಗಿ, ಇನ್ನೊಂದು ಚುನಾವಣೆ ನಡೆಯಲು ಹದಿನಾರು ವರ್ಷಗಳೇ ಬೇಕಾದವು! ಎರಡು ಚುನಾಯಿತ ಸರ್ಕಾರದ ನಂತರ ಸಾಂವಿಧಾನಿಕ ನಿಯಮದ ಪ್ರಕಾರ ಚುನಾವಣೆಗಳನ್ನು ನಡೆಸುವ ಜವಾಬ್ದಾರಿ ಹೊತ್ತು ಬಂದ ಉಸ್ತುವಾರಿ ಸರ್ಕಾರ ಅದ ನೆರವೇರಿಸಿದ್ದು ಒಂದೂವರೆ ವರ್ಷದ ನಂತರ. ಈಗ ಯೂನುಸ್ ನೇತೃತ್ವದ ಉಸ್ತುವಾರಿ ಸರ್ಕಾರವೂ ಅಷ್ಟು ಸಮಯ ತೆಗೆದುಕೊಂಡರೆ ಅದೇನೂ ಪ್ರಮಾದವಲ್ಲ.

ಈಗಿನ ಡಾ.ಮಹಮದ್ ಯೂನುಸ್‌ರಂತೇ ಹಿಂದಿನ ಡಾ. ಫಕ್ರುದ್ದೀನ್ ಅಹ್ಮದ್ ಸಹ ಅರ್ಥಶಾಸ್ತ್ರಜ್ಞರು. ಆದರೆ ಇಬ್ಬರ ಕಾರ್ಯವಿಧಾನಗಳಲ್ಲಿ ಧ್ರುವಗಳ ಅಂತರವಿದೆ. 2001-06ರ ಖಲೀದಾ ಜಿಯಾರ ಬಿಎನ್‌ಪಿ ಆಡಳಿತಾವಧಿಯಲ್ಲಿ ಹುಲುಸಾಗಿ ಬೆಳೆದಿದ್ದ ಇಸ್ಲಾಮಿಕ್ ಮೂಲಭೂತವಾದಿ ಭಯೋತ್ಪಾದನೆಯನ್ನು ಡಾ.ಅಹ್ಮದ್ ಸರಿಸುಮಾರು ಅಡಗಿಸಿದರು. ಜತೆಗೆ, ಭ್ರಷ್ಟಾಚಾರಿ ರಾಜಕಾರಣಿಗಳನ್ನೂ ಶಿಕ್ಷಿಸಿ ರಾಷ್ಟ್ರ ರಾಜಕಾರಣವನ್ನು ಸ್ವಚ್ಛಗೊಳಿಸಿದರು. ಆದರೆ ಈಗಿನ ಡಾ. ಯೂನುಸ್ ತಾವೇ ಭ್ರಷ್ಟರಾಗಿದ್ದಾರೆ ಮತ್ತು ತಮ್ಮ ಜತೆ ಭಯೋತ್ಪಾದಕರನ್ನು ಸೇರಿಸಿಕೊಳ್ಳುತ್ತಿದ್ದಾರೆ! ಭಯೋತ್ಪಾದಕ ಸಂಘಟನೆ ‘ಹಿಜ್-ಉಲ್-ತೆಹೀರ್’ನ ಮಾಜಿ ಸದಸ್ಯ ಅಂದರೆ ಮಾಜಿ ಭಯೋತ್ಪಾದಕ ನಸೀಮುಲ್ ಗನಿ ಎಂಬಾತನನ್ನು ತಮ್ಮ ಸರ್ಕಾರದಲ್ಲಿ ಗೃಹ ಕಾರ್ಯದರ್ಶಿಯಾಗಿ ನೇಮಿಸಿಕೊಂಡಿದ್ದಾರೆ! ಕಾರಾಗೃಹದಲ್ಲಿದ್ದ ಘಾತಕ ಭಯೋತ್ಪಾದಕ ಸಂಘಟನೆ ‘ಅನ್ಸಾರುಲ್ಲ ಬಾಂಗ್ಲಾ ಟೀಮ್’ನ ನೇತಾರ ಜಷೀಮುದ್ದೀನ್ ರೆಹಮಾನಿಯನ್ನು ಯೂನುಸ್ ಬಿಡುಗಡೆಗೊಳಿಸಿದ್ದು ಹಳೆಯ ಸುದ್ದಿ. ಹೀಗೆ ಭಯೋತ್ಪಾದಕರ ಸ್ವರ್ಗವಾಗುತ್ತಿರುವ ಯೂನುಸ್‌ರ ಬಾಂಗ್ಲಾದೇಶದಲ್ಲಿ ಸಾಧುಸಂತರ ಸ್ಥಿತಿ ಶೋಚನೀಯ. ಪುಂಡರೀಕ್‌ ಧಾಮ್ ಇಸ್ಕಾನ್ ಮಂದಿರದ ಮುಖ್ಯಸ್ಥರಾದ ಚಿನ್ನೊಯ್ ಕೃಷ್ಣದಾಸ್ ಬ್ರಹ್ಮಚಾರಿ ಬಂಧನದಲ್ಲಿದ್ದಾರೆ. ತೀವ್ರ ಅನಾರೋಗ್ಯಪೀಡಿತರಾಗಿರುವ ಅವರಿಗೆ ಜಾಮೀನು ಮೂಲಕವಾದರೂ ಬಿಡುಗಡೆಯಾಗುತ್ತಿಲ್ಲ.

ಇದು 2024ರ ಸರಿಸುಮಾರು ಮಧ್ಯದವರೆಗೆ
ಆರ್ಥಿಕವಾಗಿ ಸುಭಿಕ್ಷವಾಗಿದ್ದ, ಸಾಮಾಜಿಕ ಹಾಗೂ ಧಾರ್ಮಿಕವಾಗಿ ಶಾಂತವಾಗಿದ್ದ ಬಾಂಗ್ಲಾದೇಶ ವರ್ಷದ ದ್ವಿತೀಯಾರ್ಧದಲ್ಲಿ ಅಮೆರಿಕದ ಡೆಮೋಕ್ರಾಟಿಕ್ ಪಕ್ಷ ಮತ್ತು ಸರ್ಕಾರದಿಂದಾಗಿ ಮುಟ್ಟಿದ ಅಧೋಗತಿ. ಈ ಬಾಂಗ್ಲಾದೇಶವನ್ನು ಜಾಗತಿಕವಾಗಿ ಗೌರವಾನ್ವಿತವಾದ ಲಂಡನ್‌ನ ‘ದ ಇಕಾನಮಿಸ್ಟ್ ಪತ್ರಿಕೆ’ ‘Country of the Year’ (ವರ್ಷದ ದೇಶ) ಎಂದು ಗುರುತಿಸಿದೆ! ಆದರೆ ಯೂನುಸ್ ನಾಯಕತ್ವದಲ್ಲಿ ದೇಶ ಏನಾಗಿದೆ. ಮುಂದೇನಾಗಬಹುದು ಎನ್ನುವುದು ಪ್ರಜ್ಞಾವಂತ ಬಾಂಗ್ಲಾದೇಶೀಯರಿಗಲ್ಲದೆ ಬಿಎನ್‌ಪಿ ನೇತಾರರಿಗೂ ಗೊತ್ತಾಗುತ್ತಿದೆ. ‘ಢಾಕಾ ಟ್ರಿಬ್ಲೂನ್’ ಪತ್ರಿಕೆಯ ಪ್ರಕಾರ ಇದುವರೆಗೂ ಯೂನುಸ್‌ರ ಕಟ್ಟಾ ಬೆಂಬಲಿಗರಾಗಿದ್ದ ಬಿಎನ್‌ಪಿ ಮಹಾ ಕಾರ್ಯದರ್ಶಿ ಮಿರ್ಜಾ ಫಕ್ರುಲ್ ಇಸ್ಲಾಂ ಆಲಂಗೀರ್ ಈಗ ಬದಲಾಗಿದ್ದಾರೆ. ಇದೇ ಭಾನುವಾರ ‘ರಾಷ್ಟ್ರೀಯ ಪ್ರೆಸ್ ಕ್ಲಬ್’ನಲ್ಲಿ ನಡೆದ ಚರ್ಚೆಯೊಂದರಲ್ಲಿ ಅವರು, ಚುನಾವಣೆಗಳನ್ನು ಮುಂದೂಡುವ ಯೂನುಸ್‌ರ ನಿರ್ಧಾರವನ್ನು ಟೀಕಿಸಿದ್ದಾರೆ ಮತ್ತು ದೇಶದಲ್ಲಿನ ಅರಾಜಕತಾ ಸ್ಥಿತಿಯನ್ನು ಸರಿಪಡಿಸಲು ಸಮರ್ಥವಾದದ್ದು ಚುನಾಯಿತ ಸರ್ಕಾರ, ಅದು ಶೀಘ್ರವೇ ಅಸ್ತಿತ್ವಕ್ಕೆ ಬರಬೇಕು ಎಂದು ವಾದಿಸಿದ್ದಾಗಿ ಪತ್ರಿಕೆ ವರದಿ ಮಾಡಿದೆ. ‘ಪ್ರಜಾಪ್ರಭುತ್ವವಿರೋಧಿ ಹಸೀನಾ ಸರ್ಕಾರ ಹೋಗಿ ಅದರ ಜಾಗದಲ್ಲಿ ಲೂಟಿಗಾರರು ಮತ್ತು ಭ್ರಷ್ಟಾಚಾರಿಗಳ ಕೂಟವೊಂದು ಬಂದು ಕೂತಿದೆ’ ಎಂದು ಕೆಲವು ಪ್ರಮುಖ ಬಿಎನ್‌ಪಿ ನಾಯಕರು ಈಗಾಗಲೇ ಹೇಳಿಯಾಗಿದೆ. ಅವರ ಯೂನುಸ್ ವಿರುದ್ಧದ ಈ ಮಾತುಗಳ ಹಿಂದಿರುವುದು ಯೂನುಸ್ ಬಗೆಗಿನ ಅವರ ಅಪನಂಬಿಕೆ ಹಾಗೂ ಆತಂಕ. ಅವಾಮಿ ಲೀಗ್‌ನೊಂದಿಗೆ ತಮ್ಮ ಪಕ್ಷವನ್ನೂ ಮೂಲೆಗುಂಪಾಗಿಸಿ, ಅಧಿಕಾರವನ್ನು ತಮ್ಮ ಕೈಯಲ್ಲೇ ಕೇಂದ್ರೀಕರಿಸಿಕೊಳ್ಳುವ ಯೂನುಸ್ ತಂತ್ರ ಬಿಎನ್‌ಪಿ ನಾಯಕರಿಗೆ ಅರ್ಥವಾಗಿಹೋಗಿದೆ.

ಸರಿ, ಹಾಗಿದ್ದರೆ ಯೂನುಸ್ ಮಾಡಹೊರಟಿರುವುದೇನು?

ದೇಶದ ಸಂವಿಧಾನವನ್ನೇ ರದ್ದುಮಾಡುವ, ಇರಾನ್‌ನ ಮೂಲಭೂತವಾದಿ ಸರ್ಕಾರಿ ವ್ಯವಸ್ಥೆಯನ್ನು ಬಾಂಗ್ಲಾದೇಶದಲ್ಲಿ ಸ್ಥಾಪಿಸಿ ತಾವು ಅದರ ಸರ್ವೋಚ್ಚನಾಯಕರಾಗುವ ಹವಣಿಕೆಯಲ್ಲಿ ಮಹಮದ್ ಯೂನುಸ್ ಇದ್ದಾರೆ! ಇದರ ತಯಾರಿ ಕನಿಷ್ಟ ಎರಡು ತಿಂಗಳಿಗೂ ಹಿಂದೆಯೇ ಆರಂಭವಾಗಿದೆ. 1971ರ ನಂತರ ಈ ನವೆಂಬರ್ 19ರಂದು ಪಾಕಿಸ್ತಾನದಿಂದ ಬಾಂಗ್ಲಾದೇಶಕ್ಕೆ ಬಂದ ಹಡಗಿನಲ್ಲಿ ನಲವತ್ತು ಟನ್ ಆ‌‌ಡಿಎಕ್ಸ್ ಇತ್ತು ಮತ್ತು ಅದು ಚಟ್ಟೋಗ್ರಾಮ್ ಬಂದರಿನಿಂದ ಗುಪ್ತಸ್ಥಳಕ್ಕೆ ಸಾಗಿಸಲ್ಪಟ್ಟಿತು. ಡಿಸೆಂಬರ್ 23ರಂದು ಬಂದ ಇನ್ನೊಂದು ಪಾಕಿಸ್ತಾನಿ ಹಡಗಿನಲ್ಲಿದ್ದ ಒಂದು ಸಾವಿರ ಕಂಟೇನ‌ರ್ ಗಳಲ್ಲಿದ್ದುದು ಎಕೆ-47 ಸೇರಿದಂತೆ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು. ಜತೆಗೆ, ಅಣೆಕಟ್ಟೆಗಳಂತಹ ಬೃಹತ್ 23 ನಿರ್ಮಿತಗಳನ್ನು ಕೆಡವಬಲ್ಲ ‘Seismic Emulsion Explosive’ (ಎಸ್‌ಇಇ) ಸ್ಫೋಟಕಗಳು! ಇವೂ ಗುಪ್ತಸ್ಥಳಕ್ಕೆ ಸಾಗಿಸಲ್ಪಟ್ಟವು.
ಸೇನೆಗೆ ಆರ್‌ಡಿಎಕ್ಸ್ ಅಗತ್ಯವಿರುವುದಿಲ್ಲ. ಎಕೆ-47 ರೈಫಲ್‌ಗಳು ಮತ್ತದಕ್ಕೆ ಬೇಕಾಗುವ ಗುಂಡುಗಳು ಬೇಕಾದಲ್ಲಿ ಸೇನೆ ಹೀಗೆ ಕಳ್ಳತನದಲ್ಲಿ ಆಮದು ಮಾಡಿಕೊಳ್ಳುವುದಿಲ್ಲ. ಹೀಗಾಗಿ ಪಾಕಿಸ್ತಾನದಿಂದ ಬಂದ ಈ ಸಾಮಗ್ರಿಗಳು ಬಾಂಗ್ಲಾ ಸೇನೆಗಾಗಿ ಅಲ್ಲ. ಎಸ್‌ಇಇ ಸ್ಫೋಟಕಗಳು ಕೆಲವೊಂದು ಅಗತ್ಯಗಳಿಗಾಗಿ ಸೇನೆಗೆ ಬೇಕಾದರೂ ಆ ಪಾಕ್ ಸರಕು ರಹಸ್ಯಸ್ಥಳಕ್ಕೆ ಸಾಗಿಸಿದ್ದನ್ನು ಗಮನಿಸಿದರೆ ಅದನ್ನು ಬಾಂಗ್ಲಾದೇಶಿ ಸೇನೆ ಆಮದು ಮಾಡಿಕೊಂಡಿಲ್ಲ ಎಂದು ಲೆಕ್ಕಹಾಕಬಹುದು. ಹಾಗಿದ್ದರೆ ಇದೆಲ್ಲವೂ ಯಾರಿಗಾಗಿ, ಯಾಕಾಗಿ?

ಸರ್ಕಾರಿ ವ್ಯವಸ್ಥೆಯೊಳಗೆ ಕಾಲಿಡಬಲ್ಲ ಕೆಲವರು ಬಾಂಗ್ಲಾದೇಶಿ ಪತ್ರಕರ್ತರ ಪ್ರಕಾರ ಈ ಸಾಮಗ್ರಿಗಳು ಯೂನುಸ್ ಸ್ಥಾಪಿಸಲಿರುವ “ಇಸ್ಲಾಮಿಕ್ ರೆವಲ್ಯೂಷನರಿ ‘. 54 22 19790 ಮೂಲಭೂತವಾದಿ ಸರ್ಕಾರ ತನ್ನ ಸುರಕ್ಷೆಗಾಗಿ ಕಟ್ಟಿಕೊಂಡಿದ್ದು ‘ಇರಾನಿಯನ್ ರೆವಲ್ಯೂಷನರಿ ಗಾರ್ಡ್ಸ್ ಕೋರ್ಸ್’ (ಚಿಕ್ಕದಾಗಿ ರೆವಲ್ಯೂಷನರಿ ಗಾರ್ಡ್ಸ್ ಮಾದರಿಯಲ್ಲಿರುತ್ತದೆ). ಅದಕ್ಕೆ ಶಸ್ತ್ರಾಸ್ತ್ರಗಳು ಮೇಲೆ ಹೇಳಿದಂತೆ ಈಗಾಗಲೇ ಪಾಕಿಸ್ತಾನದಿಂದ ಬರತೊಡಗಿವೆ. ತರಬೇತಿ ಕೂಡ ಪಾಕ್ ಸೇನೆಯಿಂದಲೇ ಫೆಬ್ರವರಿಯಲ್ಲಿ ಆರಂಭವಾಗಲಿದೆ. ಆದರೆ ಯೂನುಸ್ ಸರ್ಕಾರ ಹೇಳುತ್ತಿರುವುದು ಪಾಕ್ ಸೇನೆ ತರಬೇತಿ ನೀಡುವುದು ಬಾಂಗ್ಲಾದೇಶೀ ಸೇನೆಗೆ ಎಂದು ಜನತೆಯನ್ನು ದಿಕ್ಕುತಪ್ಪಿಸುವ ಮಾತುಗಳು.

1979ರ ನಂತರ ಇರಾನಿ ಸೇನೆಯನ್ನು ಗಡಿಗಳಿಗೆ ಮಾತ್ರ ಸೀಮಿತಗೊಳಿಸಲಾಯಿತು. ಸರ್ವೋಚ್ಚ ಧರ್ಮಗುರು ಆಯಾತೊಲ್ಲಾ ಬೊಮೇನಿ, ಅಧ್ಯಕ್ಷ ಮೆಹ್ಲಿ ಬಜಾರ್ಗನ್, ಅವರ ಮಂತ್ರಿಗಳು ಒಟ್ಟಾರೆ ಹೊಸ ಇಸ್ಲಾಮಿಕ್ ಸರ್ಕಾರಿ ವ್ಯವಸ್ಥೆಯ ಸುರಕ್ಷೆಯ ಜವಾಬ್ದಾರಿ ರೆವಲ್ಯೂಷನರಿ ಗಾರ್ಡ್ಸ್‌ನದಾಯಿತು. ಅಲ್ಲಿ ಇಂದಿಗೂ ಹಾಗೇ ನಡೆಯುತ್ತಿದೆ. ಮಹಮದ್‌ ಯೂನುಸ್ ಬಾಂಗ್ಲಾದೇಶದಲ್ಲಿ ಅನುಕರಿಸಹೊರಟಿರುವುದು ಇದನ್ನು ಅವರು ಸ್ಥಾಪಿಸಬಯಸಿರುವ ಐಆರ್‌ಎ ಅವರು ಮತ್ತವರ ಸರ್ಕಾರದ ಕ್ಷೇಮವನ್ನು ನೋಡಿಕೊಳ್ಳುತ್ತದೆ, ದೇಶದ ಸೇನೆ ಗಡಿಗಳಿಗೆ ಅಟ್ಟಲ್ಪಡುತ್ತದೆ. ಈ ವ್ಯವಸ್ಥೆಯನ್ನು ಯೂನುಸ್ ಜನವರಿಯಲ್ಲಿ ಸ್ಥಾಪಿಸಬಹುದು. ಅವರದನ್ನು ಮಾಡುವುದು ಇತರರನ್ನು ಮುಂದಿಟ್ಟುಕೊಂಡು.

1979ರ ನಂತರ ಇರಾನಿ ಸೇನೆಯನ್ನು ಗಡಿಗಳಿಗೆ ಮಾತ್ರ ಸೀಮಿತಗೊಳಿಸಲಾಯಿತು. ಸರ್ವೋಚ್ಚ ಧರ್ಮಗುರು ಆಯಾತೊಲ್ಲಾ ಬೊಮೇನಿ, ಅಧ್ಯಕ್ಷ ಮೆಹ್ಲಿ ಬಜಾರ್ಗನ್, ಅವರ ಮಂತ್ರಿಗಳು ಒಟ್ಟಾರೆ ಹೊಸ ಇಸ್ಲಾಮಿಕ್ ಸರ್ಕಾರಿ ವ್ಯವಸ್ಥೆಯ ಸುರಕ್ಷೆಯ ಜವಾಬ್ದಾರಿ ರೆವಲ್ಯೂಷನರಿ ಗಾರ್ಡ್ಸ್‌ನದಾಯಿತು. ಅಲ್ಲಿ ಇಂದಿಗೂ ಹಾಗೇ ನಡೆಯುತ್ತಿದೆ. ಮಹಮದ್ ಯೂನುಸ್ ಬಾಂಗ್ಲಾದೇಶದಲ್ಲಿ ಅನುಕರಿಸಹೊರಟಿರುವುದು ಇದನ್ನು. ಅವರು ಸ್ಥಾಪಿಸಬಯಸಿರುವ ಐಆರ್‌ಎ ಅವರು ಮತ್ತವರ ಸರ್ಕಾರದ ಕ್ಷೇಮವನ್ನು ನೋಡಿಕೊಳ್ಳುತ್ತದೆ, ದೇಶದ ಸೇನೆ ಗಡಿಗಳಿಗೆ ಅಟ್ಟಲ್ಪಡುತ್ತದೆ. ಈ ವ್ಯವಸ್ಥೆಯನ್ನು ಯೂನುಸ್ ಜನವರಿಯಲ್ಲಿ ಸ್ಥಾಪಿಸಬಹುದು. ಅವರದನ್ನು ಮಾಡುವುದು ಇತರರನ್ನು ಮುಂದಿಟ್ಟುಕೊಂಡು.

ಯೂನುಸ್ ತಮ್ಮ ಯೋಜನೆಯನ್ನು ಕಾರ್ಯಗತಗೊಳಿಸಬೇಕಾದರೆ ಈಗಿನ ಸಂವಿಧಾನ ರದ್ದಾಗಬೇಕು ಮತ್ತು ಅದು ಒತ್ತುನೀಡುವ ತತ್ವಗಳು ಕಸದಬುಟ್ಟಿ ಸೇರಬೇಕು. ಸಂವಿಧಾನದಲ್ಲಿರುವ ‘ಧರ್ಮನಿರಪೇಕ್ಷತೆ’ ಎಂಬ ಪದವನ್ನು ತೆಗೆಯಬೇಕು ಎಂದು ಅಟಾರ್ನಿ ಜನರಲ್ ಮಹಮದ್ ಅಸಾದುದ್ದಝಝಮಾನ್ ಇದೇ ಡಿಸೆಂಬರ್ 23ರಂದು ಹೇಳಿ ಹೊಸ ಚಿಂತನೆಗೆ ಚಾಲನೆ ಕೊಟ್ಟಾಗಿದೆ. ಸಂವಿಧಾನವನ್ನೇ ಎತ್ತೆಸೆಯುವ ಸೂಚನೆಯನ್ನು ಹಸೀನಾ ವಿರುದ್ಧದ ದಾಂಧಲೆಯುಲ್ಲಿ ಮುಖ್ಯ ಪಾತ್ರ ವಹಿಸಿದ್ದ ‘Students Against Discrimination’ (SAD) ಸಂಘಟನೆಯ ಮುಂದಾಳು ಅಬ್ದುಲ್ ಹನಾನ್ ಮಸೂದ್ ನೀಡಿದ್ದಾರೆ. 1972ರಲ್ಲಿ ಮುಜೀಬ್ ನೀಡಿದ ಸಂವಿಧಾನ ದೇಶಕ್ಕೆ ಒಳ್ಳೆಯದೇನನ್ನೂ ತರಲಿಲ್ಲವೆಂದು ತೀರ್ಪು ನೀಡಿರುವ ಅವರು ದೇಶದ ಸಮಾಜೋ-ರಾಜಕೀಯ ಚಿತ್ರವನ್ನು ಪೂರ್ಣವಾಗಿ ಬದಲಾಯಿಸುವ ಕುರಿತಾಗಿ ಪ್ರಣಾಳಿಕೆಯನ್ನು ಡಿಸೆಂಬರ್ 31ರಂದು ಘೋಷಿಸುವುದಾಗಿ ಹೇಳಿದ್ದಾರೆ (ಈ ಲೇಖನವನ್ನು ಬರೆಯುವ ಹೊತ್ತಿಗೆ ಆ ವಿವರಗಳು ಲಭ್ಯವಾಗಿಲ್ಲ).

ಈ ‘ವಿದ್ಯಾರ್ಥಿ ನಾಯಕ’ ಮತ್ತು ಅಟಾರ್ನಿ ಜನರಲ್ ಯೂನುಸ್ ಆಡಲಿರುವ ನಾಟಕಕ್ಕೆ ವೇದಿಕೆ ಕಟ್ಟುತ್ತಿದ್ದಾರೆ ಎನ್ನಬಹುದು. ಆದರೆ ಇದಕ್ಕೆ ಸೇನಾ ದಂಡನಾಯಕ ವಕಾರ್ ಝಮಾನ್ ಅವರ ಸಮ್ಮತಿ ಇದೆಯೇ? ಉತ್ತರ ‘ಇಲ್ಲ’ ಎಂದು. ಜ.ವಕಾರ್ ಅವರಿಗೆ ಅದೆಷ್ಟು ಸಿಟ್ಟೇರಿದೆಯೆಂದರೆ ಯೂನುಸ್ ಜತೆ ಮಾತಾಡಲೂ ಅವರು ಸಿದ್ಧವಿಲ್ಲ. ಇದೆಲ್ಲವೂ ಹೇಳುವುದು ಬಾಂಗ್ಲಾದೇಶ ಇನ್ನಷ್ಟು ಕೋಭೆಗೊಳಗಾಗುತ್ತದೆ, ಒಂದು ಬಗೆಯಲ್ಲಿ ಅಂತರ್ಯುದ್ಧವನ್ನು ಅನುಭವಿಸುತ್ತದೆ ಎಂದು. ಯೂನುಸ್ -ವಕಾ‌ರ್ ವೈಮನಸ್ಯ ಮತ್ತು ಅಂತಃಕಲಹಕ್ಕಿಳಿಯುವ ಬಾಂಗ್ಲಾದೇಶದ ಬಗ್ಗೆ ಭಾರತದ ನೀತಿಗಳನ್ನು ಹೇಳಲು ಇನ್ನೊಂದು ಕಂತಿನ ಅಗತ್ಯವಿದೆ. ಸರಣಿ ಅನಿವಾರ್ಯವಾಗಿ ಮುಂದುವರಿಯುತ್ತದೆ.

Leave a Comment