ರಫ್ತು ಯೋಗ್ಯ ಮಾವು ಉತ್ಪಾದನ
ವು ಬೆಳೆದ ಮಾವಿನಹಣ್ಣುಗಳ ಗುಣಮಟ್ಟ ನಾ ಚೆನ್ನಾಗಿದೆ. ವಿದೇಶಗಳಿಗೆ ಕಳುಹಿಸಿದರೆ ಹೆಚ್ಚಿನ ಆದಾಯ ಸಿಗುತ್ತದೆ. ಆದರೆ ಕಳುಹಿಸುವುದು ಹೇಗೆ? ಇದು ಅನೇಕ ಮಾವು ಬೆಳೆಗಾರರ ಪ್ರಶ್ನೆ. ಇನ್ನು ಉತ್ತಮ ದರ್ಜೆಯ ಮಾವು ಬೆಳೆದರೂ ಉತ್ತಮ ಬೆಲೆ ಸಿಗುತ್ತಿಲ್ಲ ಎಂಬ ಅಳಲು ಅನೇಕ ರೈತರದು. ರಫ್ತು ದರ್ಜೆ ಮಾವು ಉತ್ಪಾದನೆ ಮಾಡಲು ಅನುಸರಿಬೇಕಾದ ಕ್ರಮಗಳು ಅನೇಕರಿಗೆ ಗೊತ್ತಿಲ್ಲ. ಸ್ಥಳೀಯ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗಬೇಕಾದರೆ ಹಣ್ಣುಗಳ ಗುಣಮಟ್ಟದ ಕಡೆಗೆ ಹೆಚ್ಚಿನ ಗಮನ ಕೊಡಬೇಕು.
ಕರ್ನಾಟಕದಲ್ಲಿ ಸುಮಾರು 1,50,000 ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯುತ್ತಾರೆ ಎಂಬ ಅಂದಾಜಿದೆ. ರಾಜ್ಯದಲ್ಲಿ ಬೆಳೆಯುವ ಮಾವಿನ ತಳಿಗಳಲ್ಲಿ ಬಾದಾಮಿಯದೇ (ಶೇ.40) ದೊಡ್ಡಪಾಲು . ತೋತಾಪುರಿ (ಶೇ.20), ಬಂಗನ್ಪಲ್ಲ (ಶೇ.10), ನೀಲಂ (ಶೇ.10) ರಸಪುರಿ (5%) ಮತ್ತು ಮಲ್ಲಿಕಾ (ಶೇ.2) ಶೇ.13 ರಷ್ಟು ಸ್ಥಳೀಯ ತಳಿಗಳ ಹಣ್ಣು ಉತ್ಪಾದನೆ ಆಗುತ್ತಿದೆ. 60 ಸಾವಿರ ರೈತರು ಮಾವು ಬೆಳೆಯುತ್ತಾರೆ ಎಂಬ ಅಂದಾಜಿದೆ. ಕರ್ನಾಟಕದಿಂದ ವಿದೇಶಗಳಿಗೆ ರಫ್ತಾಗುವ ಮಾವು ಪ್ರಮಾಣ ಕಡಿಮೆ. ವಿದೇಶಗಳಲ್ಲಿ ಭಾರತೀಯ ಮಾವಿನ ಹಣ್ಣುಗಳಿಗೆ ಹೆಚ್ಚಿನ ಬೇಡಿಕೆ ಇದ್ದರೂ ಹಲವು ಕಾರಣಗಳಿಂದ ರಫ್ತು ವಿಷಯದಲ್ಲಿ ಹೆಚ್ಚಿನ ಪ್ರಗತಿ ಸಾಧ್ಯವಾಗಿಲ್ಲ. ಬೆಳೆಗಾರರು ರಫ್ತು ಬಗ್ಗೆ ಮಾಹಿತಿ ಪಡೆದು ಆಧುನಿಕ ಬೇಸಾಯ ವಿಧಾನ, ಕೊಯ್ದು ನಂತರದ ನಿರ್ವಹಣೆ ಕ್ರಮಗಳನ್ನು ಅನುಸರಿಸಿದರೆ ಗುಣಮಟ್ಟದ ಮಾವಿನ ಹಣ್ಣುಗಳನ್ನು ರಫ್ತು ಮಾಡುವ ಅವಕಾಶಗಳು ಹೆಚ್ಚುತ್ತವೆ.
ರಫ್ತು ದರ್ಜೆಯ ಹಣ್ಣು ಬೆಳೆಯಲು ಅನುಸರಿಸಬೇಕಾದ ಕ್ರಮಗಳು ಹೀಗಿವೆ: ಕೀಟ, ರೋಗಗಳ ನಿಯಂತ್ರಣ: ಅನಗತ್ಯವಾಗಿ ರಾಸಾಯನಿಕ ಔಷಧಗಳನ್ನು ಸಿಂಪರಣೆ ಮಾಡಬಾರದು. ಹೆಚ್ಚು ವಿಷಕಾರಿ ಹಾಗೂ ನಿಷೇಧಿಸಲ್ಪಟ್ಟ ಔಷಧಗಳನ್ನು ಬಳಸಲೇಬಾರದು. ರಾಸಾಯನಿಕಗಳ ಸಿಂಪರಣೆಯನ್ನು ಹೂವು ಹಾಗೂ ಕಾಯಿ ಕಚ್ಚುವ ಹಂತಕ್ಕೆ ಸೀಮಿತಗೊಳಿಸಬೇಕು.
ಇದನ್ನೂ ಓದಿ:ಮರಳುನಾಡಿನಲ್ಲಿ ರೋಹಿತ್ ಬಳಗಕ್ಕೆ ಕಿರೀಟ
ಕೀಟ ಅಥವಾ ರೋಗನಾಶಕಗಳನ್ನು ನಾಲ್ಕು ಹಂತಗಳಲ್ಲಿ ಅಂದರೆ ಹೂ ಬಿಡುವ ಪೂರ್ವದಲ್ಲಿ ಮೊದಲ ಸಿಂಪರಣೆ, ಹೂ ಬಿಟ್ಟಾಗ ಎರಡನೆ ಸಿಂಪರಣೆ, ಪೂರ್ಣ ಪ್ರಮಾಣದಲ್ಲಿ ಹೂ ಈ ಬಿಟ್ಟಾಗ ಅಥವಾ ಕಾಯಿ ಕಟ್ಟುವ ಹಂತದಲ್ಲಿ ಮೂರನೆ ಸಿಂಪರಣೆ ಮತ್ತು ಗೋಲಿ ಗಾತ್ರದ ಕಾಯಿಗಳಾ ದಾಗ ನಾಲ್ಕನೇ ಸಿಂಪರಣೆ ಮಾಡಬೇಕು. ಕಾಯಿಗಳು ಗೋಲಿ ಗಾತ್ರಕ್ಕಿಂತ ಸ್ವಲ್ಪ ದೊಡ್ಡದಾದಾಗ ಬೂದಿ ರೋಗ ಬರುವ ಸಾಧ್ಯತೆ ಇರುವುದರಿಂದ ಅದರ ನಿಯಂತ್ರಣಕ್ಕೆ ಅಗತ್ಯವಿದ್ದರೆ ಮಾತ್ರ ನೀರಿನಲ್ಲಿ ಕರಗುವ ಗಂಧಕವನ್ನು 2 ಗ್ರಾಂ. ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬಹುದು. ಯಾವುದೇ ಹಂತದಲ್ಲೂ ಸಸ್ಯಾಂತರ್ಗತ ಕೀಟ ನಿವಾರಕ ಔಷಧಗಳನ್ನು ಬಳಸಬಾರದು. ಏಕೆಂದರೆ ಇವುಗಳ ವಿಷದ ಅಂಶವು ಸಿಂಪರಣೆ ನಂತರವೂ ಕಾಯಿ ಮತ್ತು ಹಣ್ಣುಗಳಲ್ಲಿ ಉಳಿದು ರಫ್ತಿಗೆ ಅರ್ಹತೆ ಕಳೆದುಕೊಳ್ಳುತ್ತವೆ. ಮಾವಿನ ಮರಗಳಿಗೆ ಅಗತ್ಯ ಪೋಷಕಾಂಶಗಳನ್ನು ನೀಡಬೇಕು. ೮ ರಿಂದ 12 ವರ್ಷಗಳ ವಯಸ್ಸಿನ ಫಲ ಬಿಡುವ ಮಾವಿನ ಮರವೊಂದಕ್ಕೆ ಭೂಮಿಯ ಫಲವತ್ತತೆಗೆ ಅನುಗುಣವಾಗಿ ಪ್ರತಿ ವರ್ಷ ವೈಜ್ಞಾನಿಕವಾಗಿ ಪೋಷಕಾಂಶಗಳನ್ನು ನೀಡಬೇಕು. ಪ್ರತಿಗಿಡಕ್ಕೆ 50ರಿಂದ 100 ಕೆಜಿ ತಿಪ್ಪೆಗೊಬ್ಬರ, 400 ಗ್ರಾಂ ಸಾರಜನಕ, 160 ಗ್ರಾಂ ರಂಜಕ, 600 ಗ್ರಾಂ ಪೋಟ್ಯಾಷ್, 100 ಗ್ರಾಂ ಜಿಂಕ್, ಸಲ್ವೇಟ್ ಹಾಗೂ 2 ಕೆಜಿ ಸುಣ್ಣ (ಹುಳಿ ಮಣ್ಣು ಮತ್ತು ಮರಳು ಭೂಮಿಯಾದಲ್ಲಿ) ಹಾಕಬೇಕು. ಮಾವಿನ ಮರಗಳಿಗೆ ಹೂ ಬಿಡುವ ಮೊದಲು, ಹೂ ಬಿಟ್ಟಾಗ ಮತ್ತು ಕಾಯಿ ಕಟ್ಟುವವರೆಗೆ ನೀರುಣಿಸಬಾರದು. ಕಾಯಿಗಳು ಸಣ್ಣ ಬಟಾಣಿ ಕಾಳಿನಷ್ಟಾದಾಗ ಒಮ್ಮೆ ಮತ್ತು ಆನಂತರ ತಿಂಗಳಿಗೊಮ್ಮೆ ನೀರುಣಿಸಿದರೆ ಕಾಯಿಗಳ ಗಾತ್ರ ಮತ್ತು ಇಳುವರಿ ಹೆಚ್ಚುತ್ತದೆ. ಸ್ಪಿಂಕ್ಲರ್ ವಿಧಾನದಿಂದ ನೀರುಣಿಸಬಾರದು.
ರಫ್ತು ಮಾಡುವ ಬಲಿತ ಕಾಯಿಗಳನ್ನು ಆಯಾ ತಳಿಗಳಿಗೆ ಅನುಗುಣವಾಗಿ ಕೊಯ್ಲುಮಾಡಬೇಕು. ತೋಟದ ಎಲ್ಲಾ ಹಣ್ಣುಗಳನ್ನು ಒಂದೇ ಸಲ ಕೊಯ್ದು ಮಾಡಬಾರದು. ಕೊಯ್ದು ವಿಧಾನ: ರಪ್ಪು ಮಾಡುವು ಉದ್ದೇಶ ಇದ್ದರೆ ಬಲಿತ ಕಾಯಿಗಳನ್ನು ಕೊಯ್ಯುವಾಗ ಸೋನೆ ಕಾಯಿಗಳ ಮೇಲೆ ಬೀಳದಂತೆ ಎಚ್ಚರ ವಹಿಸಬೇಕು. ಒಂದೂವರೆ ಸೆಂ. ಮೀ ಉದ್ದದ ತೊಟ್ಟನ್ನು ಬಿಟ್ಟು ಕತ್ತರಿಸಿದರೆ ಸೋನೆ ಕಾಯಿ ಮೇಲೆ ಬೀಳುವುದನ್ನು ತಪ್ಪಿಸಬಹುದು. ಚಿಕ್ಕ ವಯಸ್ಸಿನ ಮರವಿದ್ದಾಗ ಇದು ಸಾಧ್ಯ. ಮರ ದೊಡ್ಡದಾದರೆ ಹಣ್ಣುಗಳನ್ನು ಕಿತ್ತ ತಕ್ಷಣ ಸೋನೆಯನ್ನು ಬಟ್ಟೆಯಿಂದ ಒರೆಸಿ ತೊಟ್ಟು ಕೆಳಮುಖವಾಗಿ ಇಡಬೇಕು.
ದೋರೆಕಾಯಿಗಳನ್ನು ಗಾತ್ರಕ್ಕೆ ಅನುಗುಣವಾಗಿ ವಿಂಗಡಿಸಬೇಕು. ಕ್ರೇಟ್ ಗಳಿಗೆ ತುಂಬುವಾಗ ಒಂದಕ್ಕೊಂದು ತಗದಂತೆ ಕುಷನ್ ಸ್ಟೀವ್ ಹಾಕಬಹುದು ಅಥವಾ ತೆಳುವಾದು ಕಾಗದ ಇಡಬಹುದು. ರಫ್ತು ಮಾಡುವ ದೋರೆಗಾಯಿ ಇಂತಿಷ್ಟು ತೂಕ ಇರಬೇಕು ಎಂದು ನಿಗದಿ ಮಾಡಲಾಗಿದೆ.ಉದಾಹರಣೆಗೆ ಬಾದಾಮಿ ಜಾತಿಯ ಹೆಣ್ಣು ೨೦೦ ರಿಂದ ೨೫೦ ಗ್ರಾಂ, ಬೆನಿಶಾ ೨೫೦ ರಿಂದ ೩೫೦ ಗ್ರಾಂ, ಮಲ್ಲಿಕಾ ೩೦೦ ರಿಂದ ೪೦೦ ಗ್ರಾಂ ಇರಬೇಕು
ಫ್ರೀ ಕೂಲಿಂಗ್: ದೋರೆಗಾಯಿ ತುಂಬಿದೆ ರಟ್ಟಿನ ಡಬ್ಬಗಳನ್ನು 13
ಡಿಗ್ರಿ ಸೆಂಟಿ ಗ್ರೇಡ್ ಉಷ್ಣಾಂಶವಿರುವ ಮತ್ತು ಶೇ.85 ರಿಂದ 90 ತೇವಾಂಶ ಭರಿತ ಶೀತಲಗೃಹದಲ್ಲಿ ಪ್ರೀ ಕೊಲಿಂಗ್‌ಗೆ ಒಳಪಡಿಸಬೇಕು. ಸಾಮಾನ್ಯವಾಗಿ 4 ರಿಂದ 6 ಗಂಟೆಗಳ ಕಾಲ ತಣ್ಣನೆಯ ಗಾಳಿ ಬಿಡುವ ಮೂಲಕ ಹಣ್ಣುಗಳನ್ನು ರಕ್ಷಸಬಹುದು.
ಹಣ್ಣು ಮಾಗಿದಾಗ ತಳಿಗೆ ಅನುಗುಣವಾಗಿ ಗಾಢ ವರ್ಣ ಹೊಂದಿರಬೇಕು. ಬಾದಾಮಿ ತಳೆಯ ಹಣ್ಣು ಹಳದಿ ವರ್ಣದ ಹಿನ್ನೆಲೆಯಲ್ಲಿ ಕೆಂಪು ವರ್ಣ ಸಂಕುಚಿತವಾಗಿದ್ದರೆ ಅದಕ್ಕೆ ಹೆಚ್ಚಿನ ಬೇಡಿಕೆ, ಬೆಲೆ ಸಿಗುತ್ತದೆ. ರಪ್ತುಹಣ್ಣುಗಳ ಆಕಾರವೂ ಮುಖ್ಯ. ಆಕಾರ ಕೆಟ್ಟ ಹಣ್ಣುಗಳಿಗೆ ಬೇಡಿಕೆ ಇರುವುದಿಲ್ಲ. ಹಣ್ಣುಪೂರ್ಣ ಮಾಗಿದ್ದು ದೃಢವಾಗಿರಬೇಕು. ಸಿಪ್ಪೆ ಮೇಲೆ ಸುಕ್ಕು ಇರಬಾರದು. ಆಕರ್ಷಕವಾಗಿ ಕಾಣುವ, ಸಿಪ್ಪೆಗಳ ಮೇಲೆ ರೋಗ ರುಜಿನ, ಕೀಟಬಾಧೆಯ ಕಲೆ ಇಲ್ಲದ, ಬಿಸಿಲ ಝಳಕ್ಕೆ ಸುಟ್ಟ, ಸೋನೆಯ ಕಲೆ, ಕೊಳೆಯುವ ಸೂಚನೆಯ ಕಂದು ಬಣ್ಣದ ಕಲೆಗಳಿಲ್ಲದ ಹಣ್ಣುಗಳಿಗೆ ವಿದೇಶಿ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚು ಹಣ್ಣುಗಳು ತಳಿಗೆ ಅನುಗುಣವಾಗಿ ರುಚಿ ಹಾಗೂ ಮಧುರ ಪರಿಮಳ ಹೊಂದಿರಬೇಕು. ನಾರಿನ ಅಂಶ ಇರಬಾರದು. ಸಾವಯವ ಪದ್ದತಿಯಲ್ಲಿ ಬೆಳೆದ ಹಣ್ಣುಗಳಿಗೆ ಹೆಚ್ಚು ಬೇಡಿಕೆ ಇದೆ.
ಕರ್ನಾಟಕದ ಹಾಗೂ ಭಾರತದ ಮಾವಿನ ಹಣ್ಣುಗಳಿಗೆ ವಿದೇಶದಲ್ಲಿ ಹೆಚ್ಚಿನ ಬೇಡಿಕೆ ಇದೆ. ನಮ್ಮ ರಾಜ್ಯದಲ್ಲಿ ಏಪ್ರಿಲ್ – ಮೇ ತಿಂಗಳಲ್ಲಿ ಹಣ್ಣುಗಳು ಮಾರುಕಟ್ಟೆಗೆ ಬರುವುದರಿಂದ ಈ ಅವಧಿಯಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹಣ್ಣು ಪೂರೈಕೆಗೆ ಹೆಚ್ಚಿನ ಪೈಪೋಟಿ ಇರುವುದಿಲ್ಲ . ಈ ಅಂಶಗಳನ್ನು ಗಮನದಲ್ಲಿ ಇಟ್ಟುಕೊಂಡು ಗುಣಮಟ್ಟದ ಮಾವು ಉತ್ಪಾದನೆ ಮಾಡಿದರೆ ಹೆಚ್ಚಿನ ಲಾಭಗಳಿಸಬಹುದು.