ಲೋಕಸಭೆ ಚುನಾವಣೆಗೆ ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ಅಭ್ಯರ್ಥಿಗಳ ಪಟ್ಟಿ
ಲೋಕಸಭೆ ಚುನಾವಣೆಗೆ ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ಅಭ್ಯರ್ಥಿಗಳ ಪಟ್ಟಿ ವಿಧಾನಸಭಾ ಚುನಾವಣೆಯಲ್ಲಿ ಹೀನಾಯಕವಾಗಿ ಸೋಲು ಕಂಡಿದ್ದ ಬಿಜೆಪಿ ಮತ್ತು ಜೆಡಿಎಸ್ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಆಡಳಿತ ರೂಢ ಕಾಂಗ್ರೆಸ್ ಗೆ ಸೋಲಿನ ರುಚಿ ತೋರಿಸಲು ನಾಯಕರು ಮೈತ್ರಿಯಾಗಲಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ವಿರುದ್ಧ ಬಿಜೆಪಿ ಹಾಗೂ ಜೆಡಿಎಸ್ ರಾಜಕೀಯ ರಣತಂತ್ರವನ್ನು ಹೆಣೆದು ಶತಾಯ ಗತಾಯ ರಾಜ್ಯ 28 ಲೋಕಸಭಾ ಕ್ಷೇತ್ರಗಳ ಪೈಕಿ 28 ಕ್ಷೇತ್ರಗಳನ್ನು ಗೆಲ್ಲುವ ನಿಟ್ಟಿನಲ್ಲಿ ಬಿಜೆಪಿ ಹಾಗೂ ಜೆಡಿಎಸ್ ತಂತ್ರಗಾರಿಕೆಯನ್ನು ನಡೆಸಿದೆ. ಬಹುತೇಕ ಕ್ಷೇತ್ರ ಹಂಚಿಕೆ ಅಂತಿಮವಾಗಿದ್ದು, ಅಧಿಕೃತ ಘೋಷಣೆ ಒಂದೇ ಬಾಕಿ ಉಳಿದಿದೆ.
ಇಗಾಗಲೇ ಲೋಕಸಭಾ ಚುನಾವಣೆಯ ತಯಾರಿ ಹಾಗೂ ಕ್ಷೇತ್ರ ಹಂಚಿಕೆ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಮಾಜಿ ಮುಖ್ಯ ಮಂತ್ರಿಗಳಾದ ಹೆಚ್ ಡಿ ಕುಮಾರಸ್ವಾಮಿ ಅವರು ಮೈತ್ರಿ ಸೂತ್ರವನ್ನು ಹೆಣೆದಿದ್ದಾರೆ. ರಾಜ್ಯದಲ್ಲಿ ಒಟ್ಟು 28 ಕ್ಷೇತ್ರಗಳ ಪೈಕಿ 24 ಕ್ಷೇತ್ರಗಳು ಹಾಗೂ ನಾಲ್ಕು ಕ್ಷೇತ್ರಗಳು ಜೆಡಿಎಸ್ ಗೆ ಸಿಗಲಿದೆ ಎಂದು ಈ ಮೂಲಗಳು ತಿಳಿಸಿದೆ.
ಲೋಕಸಭೆ ಚುನಾವಣೆಗೆ ಬಿಜೆಪಿ ಮತ್ತು ಜೆಡಿಎಸ್ ಬಿಟ್ಟುಕೊಡಲು ನಿರ್ಧರಿಸಿದ ಕ್ಷೇತ್ರಗಳು:-
ಜೆಡಿಎಸ್ ಪಕ್ಷವೂ ಮಂಡ್ಯ, ಹಾಸನ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು ಮತ್ತು ಬೆಂಗಳೂರು ಗ್ರಾಮಾಂತರ ಕ್ಷೇತ್ರಗಳನ್ನು ಕೇಳಿದೆ. ಆದರೆ, ಬಿಜೆಪಿ ಹೈಕಮಾಂಡ್ ಆರು ಕ್ಷೇತ್ರಗಳ ಪೈಕಿ ನಾಲ್ಕು ಕ್ಷೇತ್ರಗಳನ್ನ ಬಿಟ್ಟುಕೊಡಲು ನಿರ್ಧರಿಸಿದೆ ಈ ಮೂಲಗಳಿಂದ ತಿಳಿದು ಬರುತ್ತಿದೆ.
ಸಂಭವನೀಯ ಅಭ್ಯರ್ಥಿಗಳ ಪಟ್ಟಿಯಲ್ಲಿ ಯಾರು- ಯಾರಿದ್ದಾರೆ? ಎನ್ನುವ ಹಂಬಲ ನಿಮಗೂ ಇದಿಯೇ. ಹಾಗಾದರೆ ಸಂಪೂರ್ಣ ಮಾಹಿತಿಯನ್ನು ಕೆಳಗೆ ತಿಳಿದುಕೊಳ್ಳೋಣ ಬನ್ನಿ.
Read More:-HSRP ನಂಬರ್ ಪ್ಲೇಟ್ ಕೊನೆ ದಿನಾಂಕ ವಿಸ್ತರಣೆ: ರಾಮಲಿಂಗರೆಡ್ಡಿ ಘೋಷಣೆ
ಜೆಡಿಎಸ್ ಮತ್ತು ಬಿಜೆಪಿ ಸಂಭವನೀಯ ಅಭ್ಯರ್ಥಿಗಳ ಪಟ್ಟಿ ಇಲ್ಲಿದೆ ನೋಡಿ
ಬೆಳಗಾವಿ: ಶ್ರದ್ಧಾ ಶೆಟ್ಟರ್
ಬೀದರ್ : ಭಗವಚಿತ್ ಖೂಬಾ
ಚಿಕ್ಕೊಡಿ : ರಮೇಶ್ ಕತ್ತಿ ಅಥವಾ ಅಣ್ಣಾ ಸಾಹೇಬ ಜೊಲ್ಲೆ
ರಾಯಚೂರು : ರಾಜಾ ಅಮರೇಶ್ವರ
ಕೊಪ್ಪಳ : ಕರಡಿ ಸಂಗಣ್ಣ
ವಿಜಯಪುರ : ರಮೇಶ್ ಜಿಗಜಿಣಗಿ
ಕಲಬುರ್ಗಿ : ಉಮೇಶ್ ಜಾದವ್
ಕೋಲಾರ : ಮುನಿಸ್ವಾಮಿ
ಹುಬ್ಬಳಿ- ಧಾರವಾಡ : ಪ್ರಹ್ಲಾದ್ ಜೋಶಿ
ಚಿತ್ರದುರ್ಗ : ಎ ನಾರಾಯಣಸ್ವಾಮಿ
ಬಾಗಲಕೋಟೆ : ಪಿ ಸಿ ಗದ್ದಿಗೌಡರ್
ಬಳ್ಳಾರಿ : ಶ್ರೀ ರಾಮುಲು
ಹಾವೇರಿ : ಬಿ ಸಿ ಪಾಟೀಲ್, ಕೆ ಎಸ್ ಈಶ್ವರಪ್ಪ ಪುತ್ರ ಕಾಂತೇಶ್
ಚಿಕ್ಕಬಳ್ಳಾಪುರ : ಡಾ. ಕೆ ಸುಧಾಕರ್ ಅಥವಾ ಅಲೋಕ್ ವಿಶ್ವನಾಥ್
ಉತ್ತರ ಕನ್ನಡ : ಅನಚಿತ್ ಕುಮಾರ್ ಹೆಗ್ಡೆ, ವಿಶ್ವೇಶ್ವರ ಹೆಗಡೆ ಕಾಗೇರಿ
ದಕ್ಷಿಣ ಕನ್ನಡ : ನಳಿನ್ ಕುಮಾರ್ ಕಟೀಲ್
ಮೈಸೂರು : ಪ್ರತಾಪ್ ಸಿಂಹ
ಚಾಮರಾಜನಗರ : ಡಾ. ಮೋಹನ್, ಕೊಳ್ಳೇಗಾಲ ಎನ್ ಮಹೇಶ್
ಚಿಕ್ಕಮಗಳೂರು : ಸಿ ಟಿ ರವಿ
ದಾವಣಗೆರೆ : ಜಿ ಎಂ ಸಿದ್ಧೇಶ್ವರ್
ಶಿವಮೊಗ್ಗ : ಬಿ ವೈ ರಾಘವೇಂದ್ರ
Useful information