ವರುಣ್ ಚಕ್ರವರ್ತಿ ಒಂದು ದಿನಕ್ಕೆ ಸೇರುತ್ತಾರೆ
ನಾಗರ: ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ 14 ವಿಕೆಟ್ ಗಳನ್ನು ಕಬಳಿಸಿ ಸರಣಿಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದ ಮಿಸ್ಟರಿ ಸ್ಪಿನ್ನರ್ ವರುಣ್ ಚಕ್ರವರ್ತಿ ಇದೀಗ ಏಕದಿನ ಸರಣಿಗೂ 16ನೇ ಆಟಗಾರನಾಗಿ ಮತ್ತು 5ನೇ ಸ್ಪಿನ್ನರ್ ಆಗಿ ಭಾರತ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ. ಮುಂಬರುವ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡಲಿರುವ ಭಾರತ ತಂಡಕ್ಕೂ ಅವರು ಸೇರ್ಪಡೆಯಾಗುವ ಸಾಧ್ಯತೆ ಇದೆ.
ತಮಿಳುನಾಡಿನ ಚಕ್ರವರ್ತಿ ಮಂಗಳವಾರ ಭಾರತ ತಂಡದ ಅಭ್ಯಾಸದ ವೇಳೆ ಬೌಲಿಂಗ್ ಮಾಡಿದರು. ಇದರಿಂದ ಅವರು ಏಕದಿನ ಸರಣಿಯಲ್ಲೂ ಕಣಕ್ಕಿಳಿಯುವರು ಎಂಬ ವರದಿಗಳು ಹರಿದಾಡಿದವು. ಬಳಿಕ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ ಏಕದಿನ ತಂಡದ ಉಪನಾಯಕ ಶುಭಮಾನ್ ಗಿಲ್. ಚಕ್ರವರ್ತಿ ಸೇರ್ಪಡೆಯನ್ನು ಖಚಿತಪಡಿಸಿ ದರು. ಸಂಜೆ ಬಿಸಿಸಿಐ ಕೂಡ ಚಕ್ರವರ್ತಿ ಸೇರ್ಪಡೆ ಬಗ್ಗೆ ಅಧಿಕೃತ ಪ್ರಕಟಣೆ ಹೊರಡಿಸಿತು. ಇದರಲ್ಲಿ ವೇಗಿ ಜಸ್‌ಪ್ರೀತ್ ಬುಮ್ರಾರನ್ನು ಹೊರಗಿಟ್ಟು ಮೀಸಲು -ಟಗಾರರಾಗಿದ್ದ ಹರ್ಷಿತ್ ರಾಣಾಗೆ ಸ್ಥಾನ ಕಲ್ಪಿಸಲಾಗಿದೆ. ಇದು ಚಾಂಪಿಯನ್ಸ್ ದೋಫಿಯಲ್ಲಿ ಬುಮ್ರಾ ಆಡುವ ಬಗ್ಗೆಯೂ ಅನುಮಾನ ಮೂಡಿಸಿದೆ.
ಇದನ್ನೂ ಓದಿ: ರಾಜ್ಯದ ಈಜುಪಟುಗಳ ಪಾರಮ್ಯ
ಟಿ20 ಸರಣಿಯಲ್ಲಿ ಅಂಗ್ಲರನ್ನು ಕಾಡಿದ್ದ ಚಕ್ರವರ್ತಿ, ಗುರುವಾರದಿಂದ ಹಡೆಯಲಿರುವ 3 ಪಂದ್ಯಗಳ ಏಕದಿನ ಸರಣಿಯಲ್ಲೂ ಇದೇ ಲಯ ಮುಂದುವ “ಸಲಿ ಎಂಬ ಉದೇಶದಿಂದ ಭಾರತ ತಂಡಕ್ಕೆ ಸೇರ್ಪಡೆಗೊಳಿಸಲು ಟೀಮ್
ಮ್ಯಾನೇಜ್‌ಮೆಂಟ್ ನಿರ್ಧರಿಸಿದೆ. ಏಕದಿನ ಸರಣಿಯಲ್ಲೂ ಮಿಂಚಿದರೆ ಅವರು ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ತಂಡದ ನಾಲ್ವರು ಸ್ಪಿನ್ನರ್‌ಗಳ ಪೈಕಿ ಒಬ್ಬರ ಬದಲಿಗೆ ಸೇರ್ಪಖಿ ಯಾಗುವ ನಿರೀಕ್ಷೆ ಇದೆ. ಕುಲದೀಪ್ ಯಾದವ್ ಅಥವಾ ವಾಷಿಂಗ್ಟನ್ ಸುಂದರ್ ಬದಲಿಗೆ ಚಕ್ರವರ್ತಿ ತುಂಬುವ ಸಾಧ್ಯತೆ ಇದೆ. ರವೀಂದ್ರ ಜಡೇಜಾ ಮತ್ತು ಅಕ್ಷರ್ ಪಟೇಲ್ ತಂಡದಲ್ಲಿರುವ ಇನ್ನಿಬ್ಬರು ಸ್ಪಿನ್ನರ್‌ಗಳಾಗಿದ್ದಾರೆ. ಚಾಂಪಿಯನ್ಸ್ ಟ್ರೋಫಿ ತಂಡದಲ್ಲಿ ಬದಲಾವಣೆ ಮಾಡಲು ಫೆಬ್ರವರಿ 12ರವರೆಗೆ ಅವಕಾಶ ವಿದೆ. ಆದರೆ ಏಕದಿನ ಸರಣಿಯಲ್ಲಿ ಒಂದೂ ಪಂದ್ಯವಾಡದೆ ಅವರು ಚಾಂಪಿಯನ್ಸ್ ಟ್ರೋಫಿ ತಂಡಕ್ಕೆ O
ಸೇರ್ಪಡೆಯಾಗುವ ಸಾಧ್ಯತೆ ಇಲ್ಲ.
ಚಕ್ರವರ್ತಿ ತನ್ನ ಬೌಲಿಂಗ್ ಲಯವನ್ನು ಕಾಯ್ದುಕೊಳ್ಳಲಿ ಮತ್ತು ನೆಟ್ಸ್ನಲ್ಲಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮ, ರಿಷಭ್ ಪಂತ್‌ರಂಥ ಪ್ರಮುಖ ಬ್ಯಾಟರ್ ಗಳಿಗೆ ಹೆಚ್ಚಿನ ಬೌಲಿಂಗ್ ನಡೆಸಲಿ ಎಂದು ಮುಖ್ಯ ಕೋಚ್ ಗೌತಮ್ ಗಂಭೀರ್ ಬಯಸಿದ್ದರಿಂದ ಅವರನ್ನು ಏಕದಿನ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ ಎನ್ನಲಾಗಿದೆ. ಚಕ್ರವರ್ತಿ ರಣಜಿ ಟ್ರೋಫಿಯಲ್ಲಿ ಅಂದರೆ ರೆಡ್‌ಬಾಲ್ ಕ್ರಿಕೆಟ್‌ನಲ್ಲಿ ಅಡುವುದಿಲ್ಲ. ವೈಟ್‌ಬಾಲ್‌ನಲ್ಲೂ ಅವರಿಗೆ ಐಪಿಎಲ್‌ವರೆಗೆ ಯಾವುದೇ ಪಂದ್ಯಗಳಿರಲಿಲ್ಲ. ಹೀಗಾಗಿ ಈಗಿನ ಲಯ ಕಾಯ್ದುಕೊಳ್ಳಲಿ ಎಂಬ ನಿಟ್ಟಿನಲ್ಲಿ ಅವರನ್ನು ಭಾರತ ತಂಡದಲ್ಲಿ ಉಳಿಸಿಕೊಳ್ಳಲಾಗಿದೆ ಎಂದು ಬಿಸಿಸಿಐ ಮೂಲಗಳು ವಿವರಿಸಿವೆ.