ವರ್ತೂರು ಸಂತೋಷ್ ಜೊತೆ ಸಿನಿಮಾ ಮಾಡುವುದಾಗಿ ಬಿಗ್ ಬಾಸ್ ಸ್ಪರ್ಧಿ ಮಾಧ್ಯಮಗಳಿಗೆ ಹೇಳಿಕೆ ಕೊಟ್ಟಿದ್ದಾರೆ.
ಕಳೆದ ಸುಮಾರು ದಿನಗಳಿಂದ ಸುದ್ದಿಯಲ್ಲಿರುವ ಬಿಗ್ ಬಾಸ್ ಸೀಸನ್-10 ರ ಸ್ಪರ್ದಿಗಳು ಅದರಲ್ಲೂ 4ನೇ ರನ್ನರ್ ಅಪ್ ಆದ ವರ್ತೂರು ಸಂತೋಷ್ ರವರನ್ನು ಕರ್ನಾಟಕದಾದ್ಯಂತ ಪ್ರತಿ ಒಂದು ಜಿಲ್ಲೆ, ತಾಲೂಕು, ಹಳ್ಳಿ -ಹಳ್ಳಿಗಳಿಗೂ ಕರೆದು ಅದ್ದೂರಿ ಸ್ವಾಗತ ಮಾಡುತ್ತಿರುವುದು ನಾವೆಲ್ಲಾ ಸೋಶಿಯಲ್ ಮೀಡಿಯಾ ಗಳಲ್ಲಿ ನೋಡುತ್ತಿದ್ದೇವೆ. ಮೊನ್ನೆಯಷ್ಟೇ ಮತ್ತೊಂದು ಬಿಗ್ ಬಾಸ್ ಸ್ಪರ್ದಿಯಾದ ತನಿಷಾ ಕುಪ್ಪಂಡ ರವರ ಹೋಟೆಲ್ ಗೆ ಸ್ವಾಗತಿಸಿ ಬರ್ಜರಿ ಭೋಜನವನ್ನು ವರ್ತೂರು ಸಂತೋಷ್ ರವರಿಗೆ ಉಣಬಡಿಸಿದರು. ಆ ವಿಡಿಯೋ ಸೋಶಿಯಲ್ ಮೀಡಿಯಾ ದಲ್ಲಿ ವೈರಲ್ ಆಗಿ ಮಾಸಿ ಹೋಗುವಷ್ಟರಲ್ಲಿ ತನಿಷಾ ಕುಪ್ಪಂಡ ರವರು ಇನ್ನೊಂದು ವೈರಲ್ ಮಾಹಿತಿಯನ್ನು ನೀಡಿದ್ದಾರೆ.
ವರ್ತೂರು ಸಂತೋಷ್ ಜೊತೆ ಸಿನಿಮಾ ಮಾಡಲು ನನಗೆ ಇಷ್ಟ;
ತನಿಷಾ ಕುಪ್ಪಂಡ ರವರು ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಜೊತೆ ಸಿನಿಮಾ ಮಾಡಲು ಸಿದ್ಧರಿದ್ದಾರೆಂದು ತಮ್ಮದೇ ಪ್ರೊಡಕ್ಷನ್ ಹೌಸ್ ನಲ್ಲಿ ಸಿನಿಮಾ ಮಾಡುವುದಾಗಿ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ:-ಪ್ರಿಯಾಂಕ ಗಾಂಧಿ ಆರೋಗ್ಯದಲ್ಲಿ ಏರುಪೇರು!
ವರ್ತೂರು ಸಂತೋಷ್ ತುಂಬಾ ಬ್ಯುಸಿ ಆಗಿರುವ ಕಾರಣ ನಾನು ಕಾಯುತ್ತಿದ್ದೇನೆ.
ವರ್ತೂರು ಸಂತೋಷ್ ತುಂಬಾ ಬ್ಯುಸಿ ಇರುವ ಕಾರಣ ಸಿನಿಮಾ ಮಾಡುವುದಕ್ಕಾಗಿ ಅವರ ಕಾಲ್ ಶೀಟ್ ಗೆ ನಾನು ಕಾಯುವ ಪರಿಸ್ಥಿತಿ ಎದುರಾಗಿದೆ ಎಂದು ತನಿಷಾ ಕುಪ್ಪಂಡ ರವರು ಹೇಳಿದ್ದಾರೆ. ವರ್ತೂರು ಸಂತೋಷ್ ಆರ್ಟಿಸ್ಟ್ ಅಲ್ಲ ಎಂದು ನಾವು ಬಿಗ್ ಬಾಸ್ ಮನೆಯಲ್ಲಿ ಎಲ್ಲರೂ ಅಂದುಕೊಂಡಿದ್ದೆವು ಆದರೆ ಎಲ್ಲಾರಿಗಿಂತ ಬ್ಯುಸಿ ಅವರೇ ಆರ್ಟಿಸ್ಟ್ ಗಳಿಗಿಂತ ಹೆಚ್ಚು ಬ್ಯುಸಿ ಇರುವ ಕಾರಣ ಅವರ ಕಾಲ್ ಶೀಟ್ ಸಿಕ್ಕರೆ ಖಂಡಿತವಾಗಿಯೂ ನಮ್ಮ ಪ್ರೊಡಕ್ಷನ್ ಹೌಸ್ ನಲ್ಲಿ ನಾನು ಆಕ್ಟ್ ಮಾಡಬಹುದು ಎಂದರು .
ನಮ್ಮಿಬ್ಬರ ವಿಡಿಯೋ ನೋಡಿ ನನಗೂ ಅನಿಸಿದ್ದು ನಿಜ
ಬಿಗ್ ಬಾಸ್ ಮನೆಯ ನಮ್ಮಿಬ್ಬರ ಮುದ್ದಾದ ವಿಡಿಯೋಗಳನ್ನು ನೋಡಿ ಕ್ಯೂಟ್ ಅನಿಸುತ್ತಿತ್ತು. ಹೊರಗಡೆ ಬಂದಮೇಲೆ ನಮ್ಮ ಬಾಂಡಿಂಗ್ ತುಂಬ ಚೆನ್ನಾಗಿತ್ತು ಅಂತ ನನಗೆ ಗೊತ್ತಾಗಿದ್ದು. ಮೀಡಿಯಾದವರ ಪ್ರಕಾರ ಅಥವಾ ಪ್ರೀತಿ ಮತ್ತೊಂದು ಎನ್ನುವ ರೀತಿ ನಾವಿಬ್ಬರು ಕಂಡಿತ ನೋಡಿಲ್ಲ ಎಂದು ಕ್ಲಾರಿಟಿ ಕೊಟ್ಟ ತನಿಷಾ ಕುಪ್ಪಂಡ. ಒಳ್ಳೆ ಸ್ನೇಹಿತರಾಗಿ ಇದ್ದಿವಿ ಮುಂದೆ ಇದೇ ಸ್ನೇಹ ಜೀವನ ಪರ್ಯಂತ ಮುಂದುವರಿಸುವಾಗಿ ನಟಿ ತಿಳಿಸಿದರು. ನಮ್ಮ ವಿಡಿಯೊಗಳನ್ನ ನೋಡಿ ನನ್ನ ಮುಖದಲ್ಲಿ ಮಂದಹಾಸ ಬಂದಿದೆ ನಮ್ಮ ಸ್ನೇಹ ಶಾಶ್ವತ ಎಂದು ನಟಿ ಹೇಳಿಕೊಂಡಿದ್ದಾರೆ.
Super varthooru and Thanisha madve agbeku annodu nammellara aase