ವರ್ಧಿತ ಧ್ವನಿ ವ್ಯವಸ್ಥೆಗೆ ಪರವನಾಗಿ
ವರ್ಧಿತ ಧ್ವನಿ ವ್ಯವಸ್ಥೆ ಇಲ್ಲದೆ ಗೌರಿ ಗಣೇಶ ಹಬ್ಬ ಸಂಪೂರ್ಣವಾಗುವುದಿಲ್ಲ. ಹಾಗೆಯೇ ಊರಿನ ಮಕ್ಕಳು ದೊಡ್ಡವರೆಲ್ಲರೂ ಕುಣಿದು ಕುಪ್ಪಳಿಸಿ ಗಣೇಶನ ವಿಸರ್ಜನೆಗೆ ಕರೆದುಕೊಂಡು ಹೋಗುತ್ತಾರೆ. ಆದರೆ ಇಲ್ಲಿಯೇ ಒಂದು ಲೈಸೆನ್ಸ್ ನಿಮ್ಮ ಬಳಿ ಇರಬೇಕೆಂದು ನಿಮಗೆ ತಿಳಿದಿದಿಯೇ?
ಸೌಂಡ್‌ಸಿಸ್ಟಂ ಹಾಕಿಕೊಂಡು ಇಷ್ಟ ಬಂದಂತಹ ಹಾಡುಗಳನ್ನು ಹಾಕಿಕೊಂಡು ಊರಿನಲ್ಲಿರುವ ಮನೆ ಮನೆಗಳಿಗೆ ಹಾಗೂ ಬೀದಿ ಬೀದಿ ಗಳಲ್ಲಿಯೂ ಕೇಳಿಸುವಂತಹ ವರ್ಧಿತ ಧ್ವನಿ ವ್ಯವಸ್ಥೆ ಮಾಡಿಕೊಂಡು ಹೊಗುವಂತಹ ಸಂಧರ್ಭದಲ್ಲಿ ಯಾವ ಸೆಕ್ಯೂರಿಟಿ, ಪೋಲಿಸ್‌ಪೇದೆಗಳು ಅಥವಾ ಪೋಲಿಸ್‌ಸಿಬ್ಬಂದಿ ನಿಮ್ಮನ್ನು ಪ್ರಶ್ನಿಸಬಹುದು ಅದಕ್ಕಾಗಿಯೇ ನೀವು ಸೌಂಡ್‌ಸಿಸ್ಟಂ ಅಳವಡಿಸಬೇಕೆಂದರೆ ಅದಕ್ಕೊಂದು ಪರವನಾಗಿ (ಲೈಸೆನ್ಸ್) ಇದ್ದರೆ ಯರೋಬ್ಬರು ಪ್ರಶ್ನೆ ಮಾಡುವ ಅಗತ್ಯವಿರುವುದಿಲ್ಲ. ಅದಕ್ಕಾಗಿಯೇ ಗೌರಿ ಗಣೇಶ ವಿಸರ್ಜನೆ ಮಾಡುವ ಮೊದಲು ತಾವೆಲ್ಲರೂ ಮಾಡಬೇಕಾದ ಮೊದಲ ಕೆಲಸ ವರ್ಧಿತ ಧ್ವನಿ ವ್ಯವಸ್ಥೆಗೆ ಪರವನಾಗಿ (ಲೈಸೆನ್ಸ್) ತೆಗೆದುಕೊಳ್ಳುವುದು.
ಇದನ್ನೂ ಓದಿ:- ಉದ್ಯೋಗಿನಿ ಯೋಜನೆಯಡಿ ಸರ್ಕಾರದಿಂದ ಮಹಿಳೆಯರಿಗೆ ಸಬ್ಸಿಡಿ ಮುಖಾಂತರ ೩ ಲಕ್ಷ ದೊರೆಯಲಿದೆ!!
ವರ್ಧಿತ ಧ್ವನಿ ವ್ಯವಸ್ಥೆಗೆ ಪರವನಾಗಿ (ಲೈಸೆನ್ಸ್) ಹೇಗೆ ತೆಗೆದುಕೊಳ್ಳುವುದು?
ವರ್ಧಿತ ಧ್ವನಿ ವ್ಯವಸ್ಥೆಗೆ ಪರವನಾಗಿ (ಲೈಸೆನ್ಸ್) ಹೇಗೆ ತೆಗೆದುಕೊಳ್ಳಬೆಕೆಂದರೆ ತುಂಬಾ ಸುಲಭ, ನಿಮ್ಮ ಹತ್ತಿರದ ಗ್ರಾಮ ಒನ್ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿ ವರ್ಧಿತ ಧ್ವನಿ ವ್ಯವಸ್ಥೆಗೆ ಪರವನಾಗಿ (ಲೈಸೆನ್ಸ್) ಗೆ ಅರ್ಜಿ ಹಾಕಿ ಕೊಡುತ್ತಾರೆ.
ಕರ್ನಾಟಕ ನಂದಿ ಯೌಟ್ಯೂಬ್ ಚಾನೆಲ್ ಅನ್ನು ಸಬ್ಸ್ಕ್ರೈಬ್ ಮಾಡಿಕೊಳ್ಳಿ: Karnataka Nandi
ವರ್ಧಿತ ಧ್ವನಿ ವ್ಯವಸ್ಥೆಗೆ ಪರವನಾಗಿ ಮಾಡಿಸಬೇಕೆಂದರೆ ಬೇಕಾಗುವ ದಾಖಲೆಗಳು
- ಮಾಲೀಕರಿಂದ ಅನುಮತಿ ಪತ್ರ.
- ವಾಹನದ ಆರ್ ಸಿ (ವಾಹನ ಬಳಸುತ್ತಿದ್ದರೆ).
- ಚಾಲಕ ಪರವನಾಗಿ (ಡ್ರೈವಿಂಗ್ ಲೈಸೆನ್ಸ್) (ವಾಹನ ಬಳಸುತ್ತಿದ್ದರೆ).
ಇವೆಲ್ಲಾ ಡಾಕ್ಯುಮೆಂಟ್ಸ್ ತೆಗೆದುಕೊಂಡು ಹೋದರೆ ವರ್ಧಿತ ಧ್ವನಿ ವ್ಯವಸ್ಥೆಗೆ ಪರವನಾಗಿ (ಲೈಸೆನ್ಸ್) ಸಿಗುತ್ತದೆ.
Nice writing