ವಿಜಯ್ ಸೂರ್ಯ ತಮ್ಮ ಎರಡನೇ ಮಗುವಿನ ಫೋಟೋ ಹಂಚಿಕೊಂಡ ಕ್ಷಣ;

ವಿಜಯ್ ಸೂರ್ಯ ತಮ್ಮ ಎರಡನೇ ಮಗುವಿನ ಫೋಟೋ ಹಂಚಿಕೊಂಡ ಕ್ಷಣ;

ವಿಜಯ್ ಸೂರ್ಯ ಎನ್ನುವ ತಕ್ಷಣ ನೆನಪಾಗುವುದು ಗುಳಿಕೆನ್ನೆಯ ಮುದ್ದು ಚೆಲುವ. ‘ಅಗ್ನಿಸಾಕ್ಷಿ’ ಯ ಸಿದ್ದಾರ್ಥ್ ಸನ್ನಿದಿಯ ಮುದ್ದಿನ ಗಂಡ ಕನ್ನಡಿಗರ ಮನ ಮನೆಗಳಲ್ಲಿ ಮನೆಮಾತಾಗಿ ಈಗ ‘ನಮ್ಮ ಲಚ್ಚಿ’ಯ ಸಂಗಮ್ ಆಗಿ ಕನ್ನಡಿಗರ ಪ್ರೀತಿ ಗಳಿಸಿದ್ದಾರೆ.

ಅದೆಷ್ಟೋ ಹುಡುಗಿಯರ ಮನಸ್ಸನ್ನು ಗೆದ್ದು ಎಷ್ಟೋ ಜನರ ಕನಸಿನ ಮಾಲೀಕನು ಆಗಿದ್ದರು. ಆದರೆ ಇವರ ಮದುವೆ ಹೆಣ್ಣು ಮಕ್ಕಳ ಮನಸ್ಸನ್ನು ಹೊಡೆದಿದರಲ್ಲಿ ಎರಡನೇ ಮಾತೆ ಇಲ್ಲ.

ವಿಜಯ್ ಸೂರ್ಯ ಮತ್ತು ಚೈತ್ರ ಶ್ರೀನಿವಾಸ್ ರವರ ಫೋಟೋ:-

ಆದರೆ ವಿಜಯ್ ಸೂರ್ಯ ತಮ್ಮಂತೆಯೇ ಗುಳಿ ಕೆನ್ನೆಯ ಚೆಲುವೆ ಚೈತ್ರ ಶ್ರೀನಿವಾಸ್ ರವರ ಕೈ ಹಿಡಿದು ಇಂದಿಗೆ 5 ವರ್ಷವಾದರೂ ಎಂದಿಗೂ ಲವ್ ಬರ್ಡ್ಸ್ ತರಹವೇ ಕ್ಯೂಟ್ ಕ್ಯೂಟ್ ಚಿತ್ರಗಳನ್ನು ಕಾಲ ಕಾಲಕ್ಕೂ ಇನ್ಸ್ಟಾಗ್ರಾಮ್ ಪೋಸ್ಟ್ ಮೂಲಕ ನೋಡಲು ಸಿಗುತ್ತವೆ.

ಅದೇ ರೀತಿ ವಿಶೇಷವೇನೆಂದರೆ ಅವರ ಮೊದಲ ಮಗ ಸೋಹನ್ ಕೂಡ ಡಿಂಪಲ್ ಸ್ಟಾರ್ ಎಂದೇ ಹೇಳಬಹುದು. ಕಳೆದ ವರ್ಷ ಜೂನ್ 2 ರಂದು ವಿಜಯ್ ಎರಡನೇ ಮಗುವಿಗೆ ತಂದೆಯಾಗಿದ್ದಾರೆ.

Read More : HSRP ನಂಬರ್ ಪ್ಲೇಟ್ ಕೊನೆ ದಿನಾಂಕ ವಿಸ್ತರಣೆ: ರಾಮಲಿಂಗರೆಡ್ಡಿ ಘೋಷಣೆ

ಆದರೆ ಇದುವರೆಗೂ ಮಗುವಿನ ಫೋಟೋವನ್ನು ವಿಜಯ್ ಸೂರ್ಯ ಎಲ್ಲಿಯೂ ಹಂಚಿಕೊಂಡಿಲ್ಲ. ಅಭಿಮಾನಿಗಳು ಸದಾ ಮಗುವನ್ನು ತೋರಿಸುವಂತೆ ಕಾಮೆಂಟ್ಸ್ ಮೂಲಕ ಕೇಳುತ್ತಲೆ ಇದ್ದರು.

ಇದೀಗ ವ್ಯಾಲೆಂಟನ್ಸ್ ಡೇ ದಿನ ತನ್ನ ಪತ್ನಿಗೆ ‘ಹ್ಯಾಪಿ ಆನಿವರ್ಸರಿ ಬಾಬಾ ‘ ಎನ್ನುತ್ತಾ ತಮ್ಮ ತುಂಬು ಕುಟುಂಬದ ಫೋಟೋವನ್ನು ಶೇರ್ ಮಾಡಿದ್ದಾರೆ.

ವಿಜಯ್ ಸೂರ್ಯ ಮತ್ತು ಕುಟುಂಬದ ಫೋಟೋ

ಈ ಫೋಟೋದ ಮೂಲಕ ತಮ್ಮ ಎರಡನೇ ಮಗ ಕಾರ್ತಿಕೆಯ ಸೂರ್ಯನ ಫೋಟೋವನ್ನು ಇದೆ ಮೊದಲ ಬಾರಿಗೆ ಹಂಚಿಕೊಂಡಿದ್ದಾರೆ.

ಈ ಮುದ್ದಾದ ಫೋಟೋ ನೋಡಿ ವಿಜಯ್ ಫ್ಯಾನ್ಸ್ ದಿಲ್ ಕುಶ್ ಆಗಿದ್ದಾರೆ. ಚೆಂದದ ಫೋಟೋ ನೋಡಿ ‘ಡಿಂಪಲ್ ಕುಟುಂಬ ‘ ಎಂದು ಸಾವಿರಾರು ಕಾಮೆಂಟ್ ಕೂಡ ನಾವು ನೋಡಬಹುದಾಗಿದೆ.

ಈ ಮುದ್ದಾದ ಕುಟುಂಬಕ್ಕೆ ಮತ್ತು 5 ವರ್ಷದ ಮದುವೆ ವಾರ್ಷಿಕೋತ್ಸವದ ಶುಭಾಶಯಗಳನ್ನು ತಿಳಿಸೋಣ.

Leave a Comment