ಶಾಲೆಗೆ 6 ಲಕ್ಷ ಜಮೀನು ಖರೀದಿಸಿ ಕೊಟ್ಟ ಶಾಸಕ

ಶಾಲೆಗೆ 6 ಲಕ್ಷ ಜಮೀನು ಖರೀದಿಸಿ ಕೊಟ್ಟ ಶಾಸಕ

₹1,120 ಕೋಟಿ ತೆರಿಗೆ ವಂಚನೆ ಪತ್ತೆ

ಕೂಡ್ಲಿಗಿ (ವಿಜಯನಗರ ಜಿಲ್ಲೆ): ತಾಲ್ಲೂಕಿನ ಗುಣಸಾಗರ ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಹೆಚ್ಚುವರಿ ಕೊಠಡಿ ನಿರ್ಮಿಸಲು ಅಗತ್ಯವಿದ್ದ 75 ಸೆಂಟ್ಸ್ ಜಾಗವನ್ನು ಶಾಸಕ ಡಾ.ಎನ್‌. ಟಿ.ಶ್ರೀನಿವಾಸ್ ₹6 ಲಕ್ಷಕ್ಕೆ ಖರೀದಿಸಿ, ಶಾಲೆಗೆ ನೀಡಿದರು. ಗುಣ ಸಾಗರ ಗ್ರಾಮದ ಮಧ್ಯ- ಭಾಗದಲ್ಲಿ ಶಾಲೆ ಇದ್ದು, ಹೆಚ್ಚಿನ ಕೊಠಡಿ ನಿರ್ಮಾಣಕ್ಕೆ ಅಲ್ಲಿ ಜಾಗ ಇರಲಿಲ್ಲ. ಗ್ರಾಮದ ಹತ್ತಿರ ಯಾವುದೇ ಸರ್ಕಾರಿ ಜಮೀನು ಸಹ ಇರಲಿಲ್ಲ. ಅಲ್ಲಿ ರವಿ ಎಂಬುವರಿಗೆ ಸೇರಿದ 75 ಸೆಂಟ್ಸ್ ಜಾಗ ಇತ್ತು. ಗ್ರಾಮದ ಮುಖಂಡ ಕೋಟೇಶ್ ಅವರ ಸಹಕಾರದಿಂದ ಶಾಸಕರು ₹6 ಲಕ್ಷವನ್ನು ರವಿ ಅವರಿಗೆ ನೀಡಿ ಜಾಗ ಖರೀದಿಸಿದರು. ರವಿ ಅವರಿಂದಲೇ ಶಾಲೆಗೆ ದಾನಪತ್ರದ ಮೂಲಕ ಜಾಗ ನೋಂದಣಿ ಮಾಡಿಸಿದರು.

2023-24ನೇ ಸಾಲಿನ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ (ಕೆಕೆಆರ್‌ಡಿಬಿ) ಮ್ಯಾಕ್ರೋ ಯೋಜನೆಯಡಿ ₹44.11 ಲಕ್ಷ ಈ ಶಾಲೆಗೆ ಮಂಜೂರಾಗಿದೆ. 2 ಕೊಠಡಿಗಳು, ಆಡುಗೆ ಕೋಣೆ, ಶೌಚಾಲಯ, ನೀರು ಸಂಗ್ರಹಣಾ ಸೌಲಭ್ಯಗಳನ್ನು ಕಲ್ಪಿಸುವ ಕಾಮಗಾರಿಗೆ ಶಾಸಕರು ಮಂಗಳವಾರ ಚಾಲನೆ ನೀಡಿದರು.

ಬೆಂಗಳೂರು: ವಾಣಿಜ್ಯ ತೆರಿಗೆಗಳ ಇಲಾಖೆ, ಅಬಕಾರಿ
ಇಲಾಖೆ, ನೋಂದಣಿ ಮತ್ತು ಮುದ್ರಾಂಕ ಇಲಾಖೆಗಳು ತೆರಿಗೆ ವಂಚನೆಗಳ ಪ್ರಕರಣಗಳನ್ನು ಪತ್ತೆ ಮಾಡಿದ್ದು, ಒಟ್ಟು 15,479 ಪ್ರಕರಣಗಳನ್ನು ದಾಖಲಿಸಲಾಗಿದೆ. ಸುಮಾರು ₹1,120.34 ಕೋಟಿಗೂ ಅಧಿಕ ತೆರಿಗೆ ವಂಚಿಸಿರುವುದು ದೃಢಪಟ್ಟಿದೆ.

ಇದನ್ನೂ ಓದಿ: ವಿಭಿನ್ನ ಆಲೋಚನೆ: ಆರೋಗ್ಯಕರ ಜಗತ್ತು

ವಾಣಿಜ್ಯ ತೆರಿಗೆ ಇಲಾಖೆಯೊಂದರಲ್ಲೇ ಅತ್ಯಧಿಕ ಪ್ರಕರಣಗಳು (15,465) ಪತ್ತೆಯಾಗಿವೆ. ಇದರಲ್ಲಿ 6,083 ಪ್ರಕರಣಗಳನ್ನು ವಿಚಾರಣೆ ಮತ್ತು ತನಿಖೆಗೆ ಒಳಪ ಡಿಸಿ ₹1,120.34 ಕೋಟಿಯಷ್ಟು ನಷ್ಟವಾಗಿದೆ ಎಂದು ನಿರ್ಧರಿಸಿ, ದಂಡ ವಸೂಲಿಗೆ ತೀರ್ಮಾನಿಸಲಾಗಿದೆ. ಇನ್ನೂ 9,382 ಪ್ರಕರಣಗಳನ್ನು ಇತ್ಯರ್ಥಗೊಳಿಸಿಲ್ಲ.

ಮಹಾಲೇಖಪಾಲರ (ಸಿಎಜಿ) ‘ರಾಜಸ್ವ ಲೆಕ್ಕಪರಿ- ಶೋಧನೆ ಭಾಗ 2’ ರಲ್ಲಿ ಈ ಮಾಹಿತಿ ಬಹಿರಂಗವಾಗಿದೆ. 2021 ರಿಂದ 2023 ರವರೆಗಿನ ಅವಧಿಯಲ್ಲಿ ಈ ಪ್ರಕ -ರಣಗಳನ್ನು ಪತ್ತೆ ಮಾಡಲಾಗಿದೆ.

ಈ ಅವಧಿಯಲ್ಲಿ ಅಬಕಾರಿ, ನೋಂದಣಿ ಮತ್ತು ಮುದ್ರಾಂಕ ಇಲಾಖೆಗಳಿಗಿಂತ ವಾಣಿಜ್ಯ ತೆರಿಗೆ ಇಲಾಖೆ ವ್ಯಾಪ್ತಿಯಲ್ಲಿ ಹೆಚ್ಚಿನ ಪ್ರಕರಣಗಳು ಬಯಲಿಗೆ ಬಂದಿವೆ.ಪ್ರಕರಣಗಳನ್ನು ಇತ್ಯರ್ಥಗೊಳಿಸುವಲ್ಲಿ ವಾಣಿಜ್ಯ ಇಲಾಖೆ ಇತರ ಎರಡು ಇಲಾಖೆಗಳಿಗಿಂತ ಹೆಚ್ಚು ಮುತುವರ್ಜಿ ವಹಿಸಿದ್ದರೂ ಆ ವರ್ಷದ ಅಂತ್ಯದಲ್ಲಿ ಗಮನಾರ್ಹ ಸಂಖ್ಯೆಯ ಪ್ರಕರಣಗಳು ಇತ್ಯರ್ಥವಾಗದೇ ಬಾಕಿ ಉಳಿದಿದ್ದವು. ಹೀಗಾಗಿ ಇತ್ಯರ್ಥಗೊಳ್ಳದ 9,382 ಪ್ರಕರಣಗಳ ನಷ್ಟದ ಮೊತ್ತವನ್ನು ನಿರ್ಧರಿಸಲು ಇನ್ನೂ ಸಾಧ್ಯವಾಗಿಲ್ಲ ಎಂದು ಸಿಎಜಿ ವರದಿ ಅಭಿಪ್ರಾಯಪಟ್ಟಿದೆ.

ಅಬಕಾರಿ ಇಲಾಖೆಯಲ್ಲಿ ತೆರಿಗೆ ವಂಚನೆಯ ಮೂರು ಪ್ರಕರಣಗಳು ದಾಖಲಾಗಿದ್ದರೂ ಒಂದನ್ನೂ ಇತ್ಯರ್ಥ ಗೊಳಿಸಿಲ್ಲ. ಇದರಿಂದ ಆಗಿರುವ ನಷ್ಟದ ಪ್ರಮಾಣ ವನ್ನು ಅಂದಾಜು ಮಾಡಲು ಸಾಧ್ಯವಾಗಿಲ್ಲ. ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ ತೆರಿಗೆ ವಂಚನೆಯ ಒಟ್ಟು 11 ಪ್ರಕರಣಗಳು ಪತ್ತೆಯಾಗಿದ್ದು, ಕೇವಲ 1 ಪ್ರಕರಣ ಮಾತ್ರ ಇತ್ಯರ್ಥಗೊಳಿಸಿದ್ದು, ನಷ್ಟದ ಮೊತ್ತ ₹5 ಲಕ್ಷ ಎಂದು ಅಂದಾಜಿಸಲಾಗಿದೆ. 10 ಪ್ರಕರಣಗಳ ತೆರಿಗೆ ವಂಚನೆ ಪ್ರಕರಣ ಇತ್ಯರ್ಥಗೊಳಿಸದ ಕಾರಣ ನಷ್ಟದ ಪ್ರಮಾಣ ಅಂದಾಜು ಮಾಡಿಲ್ಲ.

ಮರು ಪಾವತಿಯಲ್ಲಿ ಅಲ್ಪ ಪ್ರಗತಿ:ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಮರುಪಾವತಿಗೆ ಕೋರಿಕೆ ಸಲ್ಲಿಸಿ ಒಟ್ಟು 9,254 ಅರ್ಜಿಗಳು ಬಂದಿದ್ದವು, ಅದರಲ್ಲಿ 8,094 ಪ್ರಕರಣಗಳಲ್ಲಿ ಮರುಪಾವತಿ ಮಾಡಿದ್ದು, ₹5,496.91 ಕೋಟಿ ಪಾವತಿಸಲಾಗಿದೆ. ಆದರೂ ವರ್ಷದ ಅಂತ್ಯದಲ್ಲಿ 2,239 ಪ್ರಕರಣಗಳು ಬಾಕಿ ಉಳಿದಿದ್ದು, ₹1,142.88 ಕೋಟಿ ಪಾವತಿ ಮಾಡಬೇಕಾಗಿದೆ. (2020-21 ರ ಸಾಲಿನ ಬಾಕಿ 1,079 ಅರ್ಜಿಗಳು ಸೇರಿ ಒಟ್ಟು 10,303 ಅರ್ಜಿಗಳು ಇದ್ದವು).
ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ ಮರುಪಾವತಿಗಾಗಿ 6,863 ಕೋರಿಕೆ ಅರ್ಜಿಗಳು ಬಂದಿದ್ದು, 4,844 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. ₹79.99 ಕೋಟಿ ಮರುಪಾವತಿ ಮಾಡಿದ್ದು, ಇನ್ನೂ 5,851 ಕೋರಿಕೆಗಳು ಇತ್ಯರ್ಥ ಆಗಬೇಕಿದ್ದು, ಇದರ ಮೊತ್ತ ₹38.68 ಕೋಟಿ.(2020- 21 ರ ಸಾಲಿನ 3,832 ಅರ್ಜಿಗಳು ಸೇರಿ ಒಟ್ಟು 10,695 ಅರ್ಜಿಗಳು ಇದ್ದವು). ಆದರೆ, ಅಬಕಾರಿ ಇಲಾಖೆ ಮರುಪಾವತಿ ಕುರಿತು ಮಾಹಿತಿಯನ್ನು ಒದಗಿಸಿಲ್ಲ ಎಂದು ಸಿಎಜಿ ವರದಿ ತಿಳಿಸಿದೆ.

Leave a Comment