ಶೂಟಿಂಗ್:ಗಮನ ಸೆಳೆದ ನೀರಜ್ ಸಾಧನೆ
ಡೆಹ್ರಾಡೂನ್ (ಪಿಟಿಐ): ಪ್ಯಾರಿಸ್ ಒಲಿಂಪಿಕ್ಸ್ ಕಂಚಿನ ಪದಕ ವಿಜೇತ ಸ್ಟಪ್ಟಿಲ್ ಕುಸಾಳೆ ಮತ್ತು ಅನುಭವಿ ಐಶ್ವರಿ ಪ್ರತಾಪ್ ಸಿಂಗ್ ತೋಮಾರ್ ಅವರಿಗೆ ಆಘಾತ ನೀಡಿದ ಭಾರತೀಯ ನೌಕಾಪಡೆಯ ನೀರಜ್ ಕುಮಾರ್ ಅವರು ರಾಷ್ಟ್ರೀಯ ಕ್ರೀಡೆಗಳ ಪುರುಷರ 50 ಮೀ. ರೈಫಲ್ 3 ಪೊಸಿಷನ್ಸ್ ಸ್ಪರ್ಧೆಯಲ್ಲಿ ಗುರುವಾರ ಚಿನ್ನ ಗೆದ್ದುಕೊಂಡು ಗಮನ ಸೆಳೆದರು.
25 ವರ್ಷ ವಯಸ್ಸಿನ ನೀರಜ್ ತ್ರಿಶೂಲ್ ಶೂಟಿಂಗ್ ರೇಂಜ್‌ನಲ್ಲಿ ನಡೆದ ಸ್ಪರ್ಧೆಯಲ್ಲಿ ಹೆಸರಾಂತ ಎದುರಾಳಿಗಳಿಗೆ ಅಚ್ಚರಿ ಮೂಡಿಸುವಂತೆ 464.1 ಸ್ಕೋರ್ ಗಳಿಸಿ ಚಿನ್ನ ಗೆದ್ದರು. ಮಧ್ಯ-ಪ್ರದೇಶದ ಐಶ್ವರಿ ಪ್ರತಾಪ್ 462.4ರ ಸ್ಕೋರ್‌ನೊಡನೆ ಬೆಳ್ಳಿ ಹಾಗೂ ಮಹಾರಾಷ್ಟ್ರದ ಸ್ಟಪ್ಟಿಲ್ (446.7) ಮೂನೇ ಸ್ಥಾನ ಪಡೆದರು.
ಬೆಂಗಳೂರಿನ ಯಲಹಂಕದ ಪಡುಕೋಣೆ- ದ್ರಾವಿಡ್ ಸೆಂಟರ್ ಅಫ್ ಸ್ಪೋರ್ಟ್ಸ್ ಎಕ್ಸೆಲೆನ್ಸ್‌ನಲ್ಲಿ ತರಬೇತಿ ಪಡೆಯುತ್ತಿರುವ ನೀರಜ್ ಈ ಕ್ರೀಡೆಗಳಲ್ಲಿ ಸರ್ವಿಸಸ್ ಕ್ರೀಡಾ ನಿಯಂತ್ರಣ ಮಂಡಳಿ ತಂಡವನ್ನುಪ್ರತಿನಿಧಿಸುತ್ತಿದ್ದಾರೆ.
ಬುಧವಾರ ಮಹಿಳೆಯರ 10 ಮೀ. ಏರ್‌ಪಿಸ್ತೂಲ್ ಚಿನ್ನ ಗೆದ್ದಿದ್ದ ಹರಿಯಾಣದ ಸುರುಚಿ ಗುರುವಾರ ಪ್ರಮೋದ್ ಜೊತೆಗೂಡಿ ಮಿಶ್ರ ಡಬಲ್ಸ್ ನಲ್ಲೂ ಅಗ್ರಸ್ಥಾನ ಪಡೆದರು. ರಾಜಸ್ಥಾನ (ಅಂಜಲಿ ಶೇಖಾವತ್ಉಮೇಶ ಚೌಧರಿ) ಎರಡನೇ ಮತ್ತು ಮಹಾರಾಷ್ಟ್ರ (ರಾಹಿ ಸರ್ಬೊಬತ್-ಪ್ರಣವ್ ಅರವಿಂದ ಪಾಟೀಲ) ಮೂರನೇ
ಸ್ಥಾನ ಪಡೆದವು. ಪ್ಯಾರಿಸ್ ಒಲಿಂಪಿಕ್ಸ್ ಅಯ್ಕೆ ಟ್ರಯಲೈನಲ್ಲೂ ನೀರಜ್, ಅವರು ಸೃಷ್ಟಿಲ್, ಐಶ್ವರಿ ಅಂಥ ಅನುಭವಿಗಳನ್ನು ಹಿಂದೆಹಾಕಿದ್ದರು.
ಇದನ್ನೂ ಓದಿ: ಮುಂದಿವೆ ಸವಾಲಿನ ದಿನಗಳು
ಅರ್ಚರಿಯಲ್ಲೂ ಅಚ್ಚರಿ: 18 ವರ್ಷ ವಯಸ್ಸಿನ ಜುಯೆಲ್ ಸರ್ಕಾರ್, ರಾಷ್ಟ್ರೀಯ ಕ್ರೀಡೆಗಳ ಪುರುಷರ ಅರ್ಚರಿ ಸ್ಪರ್ಧೆಯ ರಿಕರ್ವ್ ವಿಭಾಗದಲ್ಲಿ ನಾಲ್ಕು ಬಾರಿಯ ಚಾಂಪಿಯನ್ ತರುಣದೀಪ್ ರಾಯ್ ಅವರನ್ನು ಹಿಂದೆಹಾಕಿ ಸ್ವರ್ಣ ಗೆದ್ದರು. ಮಹಿಳೆಯರ ವಿಭಾಗದ ಇದೇ ಸ್ಪರ್ಧೆಯಲ್ಲಿ ಅನುಭವಿ ದೀಪಿಕಾ ಕುಮಾರಿ ವಿಜೇತರಾದರು.
ಶೂಟಿಂಗ್ ಸ್ಪರ್ಧೆಗಳು ಶುಕ್ರವಾರ ಕೊನೆಗೊಳ್ಳಲಿದ್ದು, ಗುರುವಾರ ಜಾರ್ಖಂಡ್ ಮತ್ತು ಮಹಾರಾಷ್ಟ್ರ ತಲಾ ಎರಡು ಚಿನ್ನ ಗೆದ್ದುಕೊಂಡರೆ, ಒಂದು ಪಶ್ಚಿಮ ಬಂಗಾಳದ ಪಾಲಾಯಿತು.
ಪಶ್ಚಿಮಬಂಗಳಾದ ಮಾಲ್ತಾದವರಾದ ಜುಯೆಲ್ ಸೆಮಿಫೈನಲ್‌ನಲ್ಲಿ 6-2 ರಿಂದ 40 ವರ್ಷ ವಯಸ್ಸಿನ ತರುಣ್ ದೀಪ್ (ಸಿಕ್ಕಿಂ) ಅವರನ್ನು ಸೋಲಿಸಿದರು. ಫೈನಲ್‌ನಲ್ಲಿ 6-2 ರಿಂದ ಇಂದ್ರ ಚಂದ ಇಂದ್ರ (ಸರ್ವಿಸಸ್) ಅವರನ್ನು ಮಣಿಸಿ ಚಿನ್ನ ಗೆದ್ದರು. ತರುಣ್ ದೀಪ್ ಪ್ಲೇ ಆಫ್‌ನಲ್ಲಿ ಸರ್ವಿಸಸ್‌ನ ರಾಹುಲ್ ಅವರನ್ನು ಸೋಲಿಸಿ ಕಂಚಿನ ಪದಕ ಗಳಿಸಿದರು.
ಕರ್ನಾಟಕಕ್ಕೆ
ಪುರುಷರ ತಂಡ ಗುರುವಾರ ನಡೆದ ಹಾಕಿ ಪಂದ್ಯದಲ್ಲಿ ಒಡಿಶಾ ತಂಡವನ್ನು 2-1 ಗೋಲುಗಳಿಂದ ಸೋಲಿಸಿತು.