ಸಮ್ಮೇಳನದ ನಿರ್ಣಯಗಳು ಶೀಘ್ರ ಅನುಷ್ಠಾನಗೊಳ್ಳಲಿ

Written by karnatakanandi.com

Published on:

ಸಮ್ಮೇಳನದ ನಿರ್ಣಯಗಳು ಶೀಘ್ರ ಅನುಷ್ಠಾನಗೊಳ್ಳಲಿ

ಗಂಡು ಮೆಟ್ಟಿದ, ಸಕ್ಕರೆ ನಾಡು ಮಂಡ್ಯದಲ್ಲಿ ಮೂರು ದಿನಗಳ ಕಾಲ ಅದ್ದೂರಿಯಾಗಿ ನಡೆದು ರವಿವಾರ ಸಮಾರ್ಪಣ ಗೊಂಡಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡ ಭಾಷೆ, ಕನ್ನಡಿಗರ  ಹಿತ ರಕ್ಷಣೆಗಾಗಿ ಐದು ಮುಖ್ಯ ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದೆ. ರಾಷ್ಟ್ರ ಕವಿ ಘೋಷಣೆ ಮಾಡಬೇಕು, ಶಿಕ್ಷಕರ ಹುದ್ದೆ ಭರ್ತಿಗೆ ಕ್ರಮ ಕೈಗೊಳ್ಳಬೇಕು , ಭಾಷಾ ಅಭಿವೃದ್ಧಿ ಸಮಿತಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರ ನೇಮಕ ಮಾಡುವುದು, ಶೀಘ್ರವಾಗಿ ವಿಶ್ವ ಕನ್ನಡ ಸಮ್ಮೇಳನ ಆಯೋಜನೆ, ಸರೋಜಿನಿ ಮಹಿಷಿ ವರದಿ ಅನುಷ್ಠಾನಕ್ಕಾಗಿ ಸರ್ಕಾರಕ್ಕೆ ಆಗ್ರಹ -ಇವೆ ಐದು ನಿರ್ಣಯಗಳು .

ಇನ್ನೀಗ ಈ ನಿರ್ಣಯಗಳನ್ನು ಅದಷ್ಟು ಬೇಗನೆ, ಸಮರ್ಪಣಕವಾಗಿ ಅನುಷ್ಠಾನಗೊಳ್ಳುವಂತೆ ಸಂಬಂಧಿತ ಎಲ್ಲರೂ ಜತೆಗೂಡಿ ನೋಡಿಕೊಳ್ಳಬೇಕಿದೆ. ಈ ಐದು ನಿರ್ಣಯಗಳನ್ನು ಕನ್ನಡ ಮತ್ತು ಕನ್ನಡಿಗರ ಹಿತ ರಕ್ಷಣೆ, ಕನ್ನಡ ನುಡಿಯ ಅಭಿವೃದ್ಧಿಗಳನ್ನು ಲಕ್ಷದಲ್ಲಿ ಇರಿಸಿಕೊಂಡು ತೆಗೆದುಕೊಳ್ಳಲಾಗಿದೆ ಎಂಬುವುದು ಸರ್ವ ವಿದಿತ .ಕಾಲಘಟ್ಟ ಬದಲಾಗುತ್ತಿದ್ದಂತೆ ಯಾವುದೇ ಭಾಷೆ ಎದುರಿಸುವ ಸವಾಲುಗಳು ಕೂಡ ಬದಲಾಗುತ್ತವೆ. ಕನ್ನಡದ ಸ್ಥಿತಿಯು ಇದ್ದಕ್ಕಿಂತ ಭಿನ್ನವಾಗಿಲ್ಲ. ಹೀಗಾಗಿ ಕನ್ನಡ, ಕನ್ನಡತನ ,ಕನ್ನಡದ ಅಸ್ಮಿತೆಯನ್ನು ಗಟ್ಟಿ ಧ್ವನಿಯಲ್ಲಿ ಕೂಗಿ ಹೇಳಬೇಕಾದ ಅನಿವಾರ್ಯ ಇದೆ.

ಈ ಹಿನ್ನೆಲೆಯಲ್ಲಿ ಸ್ವೀಕರಿಸಲಾಗಿರುವ ಐದು ನಿರ್ಣಯಗಳು ಮುಕ್ತವಾಗಿದ್ದು. ಶ್ಲಾಘ್ವವೇ ಆಗಿವೆ. 2006ರಲ್ಲಿ ಜಿ. ಎಸ್ .ಶಿವರುದ್ರಪ್ಪ ಅವರನ್ನು ರಾಷ್ಟ್ರಕವಿ ಎಂದು ಘೋಷಿಸಿದ ಬಳಿಕ ದೀರ್ಘಕಾಲದಿಂದ ರಾಷ್ಟ್ರಕವಿ ಎಂದು ಯಾರನ್ನು ಸ್ವೀಕರಿಸಿಲ್ಲ. ಹಾಗೆಯೇ ಕನ್ನಡದ ಮಕ್ಕಳಿಗೆ ಸರಿಯಾದ ಶಿಕ್ಷಣ ದೊರಕಬೇಕಾದರೆ ಶಿಕ್ಷಕರ ನೇಮಕಾತಿ ಜಾರೂರಾಗಿ ಆಗಬೇಕಾಗಿದೆ. ಭಾಷೆ ಅಭಿವೃದ್ಧಿ ಸಮಿತಿ ಸಕ್ರಿಯವಾಗಿ ಕೆಲಸ ಮಾಡಬೇಕಿದ್ದರೆ ಅದಕ್ಕೆ ನೇಮಕಾತಿ ಆಗಬೇಕು. ರಾಜ್ಯ ಸರ್ಕಾರಿ ನೇಮಕಾತಿಗಳಲ್ಲಿ ಶತ ಪ್ರತಿಶತ ಕನ್ನಡಿಗರಿಗೆ ಮೀಸಲಾತಿ ಸಹಿತ ಸರೋಜಿನಿ ಮಹಷಿ ವರದಿಯ ಅನುಷ್ಠಾನ ಆಗಬೇಕಾಗಿದೆ.

ಇದನ್ನೂ ಓದಿ:- ನಾಪತ್ತೆ ಯಾಗಿದ್ದ ಮಹಿಳೆ ‘ಕನ್ನಡ ‘ದಿಂದಾಗಿ ಪತ್ತೆ

ಇವೆಲ್ಲವೂ ಕನ್ನಡ ಮತ್ತು ಕನ್ನಡಿಗರ ಹಿತಕ್ಕಾಗಿ ಆಗಬೇಕಾದವೇ. ಪ್ರತಿವರ್ಷವೂ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಾಗ ಕೊನೆಯ ದಿನ ಬಹಿರಂಗ ಅಧಿವೇಶನ ನಡೆದು ಇಂತಹ ನಿರ್ಣಯಕಗಳನ್ನು ಕೈಗೊಳ್ಳುವುದು ಬಹಳ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಕ್ರಮ. ಆದರೆ ಈ ನಿರ್ಣಯಗಳು ಪೂರ್ಣವಾಗಿ ಅನುಷ್ಠಾನಗೊಳ್ಳುತ್ತವೆಯೇ ಎಂದು ಪ್ರಶ್ನಿಸಿಕೊಂಡರೆ ನೂರಕ್ಕೆ ನೂರು ಅನುಷ್ಠಾನ ಆಗುತ್ತಿಲ್ಲ ಎಂಬ ಉತ್ತರ ಲಭ್ಯವಾಗುತ್ತದೆ. ಉದಾಹರಣೆಗೆ ಹೇಳುವುದಾದರೆ ಕಳೆದ ಬಾರಿ ಹಾವೇರಿಯಲ್ಲಿ ಸಾಹಿತ್ಯ ಸಮ್ಮೇಳನ ನಡೆದ ಸಂದರ್ಭ ತೆಗೆದುಕೊಳ್ಳಲಾಗಿದ್ದ ಆರು ನಿರ್ಣಯಗಳು ಪೈಕಿ ಕೇವಲ ಎರಡು ಮಾತ್ರ ಸಕಾರಗೊಂಡಿವೆ .

ಆಗಲೂ ದಾವಣಗೆರೆಯಲ್ಲಿ ವಿಶ್ವ ಕನ್ನಡ ಸಮ್ಮೇಳನವನ್ನು ಅದಷ್ಟು ಬೇಗನೆ ಆಯೋಜಿಸಬೇಕು ಎಂಬುದಾಗಿ ನಿರ್ಣಯಿಸಲಾಗಿತ್ತು. ಆದರೆ ಅದಿನ್ನೂ ಸಕಾರಗೊಂಡಿಲ್ಲ .ಬೆಳಗಾವಿ ಗಡಿ ವಿವಾದದ ಬಗ್ಗೆ ಮಹಾಜನ ವರದಿಯ ಕುರಿತು ನ್ಯಾಯಾಲಯದ ತೀರ್ಪಿನಂತೆ ಕ್ರಮ ಮತ್ತಿತರ ನಿರ್ಣಾಯಗಳೂ ಹಾಗೆಯೇ ಉಳಿದುಕೊಂಡಿರುವುದು ವಿಷಾದನೀಯ. ಈ ಬಾರಿಯ ಸಾಹಿತ್ಯ ಸಮ್ಮೇಳನದ ನಿರ್ಣಯಳಿಗೆ ಇಂತಹ ಸ್ಥಿತಿ ಉಂಟಾಗಬಾರದು. ಸರರ್ಕಾರ ,ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡಾಭಿಮಾನಿಗಳಾದ ರಾಜ್ಯದ ಜನತೆ ಪರಸ್ಪರ ಕೈಗೊಡಿಸಿ ತೆಗೆದುಕೊಳ್ಳಲಾಗಿರುವ ಐದು ನಿರ್ಣಯಗಳು ಆದಷ್ಟು ಶೀಘ್ರವಾಗಿ ಅನುಷ್ಠಾನಕ್ಕೆ ಬರುವಂತೆ ನೋಡಿಕೊಳ್ಳಬೇಕಾಗಿದೆ .ಕನ್ನಡ ಎಂಬುದು ನಮ್ಮ ಮಾತೃಭಾಷೆ, ಆದರ ಹಿತರಕ್ಷಣೆ ಸ್ವತಃ ನಮ್ಮದೇ ರಕ್ಷಣೆ ಎಂಬ ಅರಿವು ಎಲ್ಲರಲ್ಲೂ ಇರಬೇಕಾಗಿದೆ.

Leave a Comment