ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ 3 ಕೋಟಿ ರೂ ಅನುದಾನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ 3 ಕೋಟಿ ರೂ ಅನುದಾನ ಶಿಡ್ಲಘಟ್ಟ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ, ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಮತ್ತು ಶಾಸಕ ಬಿ.ಎನ್.ರವಿಕುಮಾರ್ ಅವರ ಆಸಕ್ತಿಯಿಂದಾಗಿ ಮೂರು ಕೋಟಿ ರೂಗಳು ಸರ್ಕಾರದಿಂದ ಅನುದಾನ ಬಂದಿದೆ ಎಂದು ಪ್ರಾಂಶುಪಾಲ ಡಾ.ವಿ.ವೆಂಕಟೇಶ್ ತಿಳಿಸಿದರು
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ನ್ಯಾಕ್ ಬಿ ಶ್ರೇಣಿ ಪ್ರಮಾಣ ಪತ್ರವನ್ನು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪಡೆದುಕೊಂಡಿದೆ. ಕೇಂದ್ರ ಸರ್ಕಾರದ ಪಿ ಎಂ ಉಷಾ ಅನುದಾನದಡಿಯಲ್ಲಿ ಐದು ಕೋಟಿ ರೂ ಅನುದಾನವೂ ಸಹ ಲಭಿಸಲಿದೆ. ಕಾಲೇಜನ್ನು ಸರ್ವಾಂಗೀಣವಾಗಿ ಅಭಿವೃದ್ಧಿ ಮಾಡಲಾಗುತ್ತಿದೆ ಎಂದು ಹೇಳಿದರು.
ಇದನ್ನೂ ಓದಿ:- ಆಗ್ನೇಯ ಶಿಕ್ಷಕರ ಕ್ಷೇತ್ರದಿಂದ ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ಮೈತ್ರಿ ಅಭ್ಯರ್ಥಿಯಾಗಿ ವೈ.ಎ.ನಾರಾಯಣಸ್ವಾಮಿ
ಇದನ್ನೂ ಓದಿ:- ಆಗ್ನೇಯ ಶಿಕ್ಷಕರ ಕ್ಷೇತ್ರದಿಂದ ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ಮೈತ್ರಿ ಅಭ್ಯರ್ಥಿಯಾಗಿ ವೈ.ಎ.ನಾರಾಯಣಸ್ವಾಮಿ
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ 3 ಕೋಟಿ ರೂ ಅನುದಾನ ಕಾಲೇಜಿನ ಅಭಿವೃದ್ದಿ ಪಡಿಸುವ ವಿಶೇಷತೆಗಳು:-
ಕಾಲೇಜಿನಲ್ಲಿ ವಿದ್ಯಾರ್ಥಿಗಳ ಸಂಖ್ಯೆ 500 ಇದ್ದು, ಸಂಖ್ಯೆ ದ್ವಿಗುಣಗೊಳ್ಳಬೇಕು ಎಂಬುದು ನಮ್ಮ ಆಶಯವಾಗಿದೆ. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಬಿ.ಸಿ.ಎ ಸೇರಿದಂತೆ ಎಲ್ಲಾ ವಿಧದ ಪದವಿ ವಿಭಾಗಗಳು ಹಾಗೂ ಎಂ.ಕಾಂ ಕೂಡ ಇದೆ. ಅತ್ಯುತ್ತಮ ಗ್ರಂಥಾಲಯ, ಪ್ರಯೋಗಾಲಯಗಳು, ರಂಗಮಂದಿರಗಳು, ಕಂಪ್ಯೂಟರ್ ಲ್ಯಾಬ್, ಉಪಾಹಾರಗೃಹ ಕೂಡ ಇದೆ. ಮುಂದಿನ ದಿನಗಳಲ್ಲಿ ವಿವಿಧ ರೀತಿಯ ನವೀಕರಣ ನಡೆಸಲಿದ್ದು, ಕೊಠಡಿಗಳು, ಕಾಂಪೌಂಡ್, ಇ ಲೈಬ್ರರಿ, ಶೌಚಾಲಯ, ನೆಲಹಾಸು ಮುಂತಾದ ಉನ್ನತೀಕರಣದ ಕಾಮಗಾರಿಗಳು ನಡೆಯಲಿವೆ. ಕೇಂದ್ರದ ಅನುದಾನ ಬಂದಾಗ ಸ್ನಾತಕೋತ್ತರ ಕೇಂದ್ರ ನಿರ್ಮಿಸಲಾಗುವುದು ಎಂದು ಹೇಳಿದರು.
ನುರಿತ ಬೋಧಕ ಸಿಬ್ಬಂದಿ, ಐ.ಸಿ.ಟಿ (ಡಿಜಿಟಲ್) ತರಗತಿಗಳು, ಎನ್.ಎಸ್.ಎಸ್, ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳು, ಉಚಿತ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಕಾರ್ಯಾಗಾರಗಳು ನಮ್ಮ ಕಾಲೇಜಿನ ವಿಶೇಷತೆಗಳು ಎಂದರು.
ಪ್ರತಿಯೊಬ್ಬ ವಿದ್ಯಾರ್ಥಿಯು ಕಟ್ಟುವ ಶುಲ್ಕವು ವಾಪಸ್ ವಿದ್ಯಾರ್ಥಿವೇತನದ ರೂಪದಲ್ಲಿ ಸರ್ಕಾರದಿಂದ ಅವರ ಅಕೌಂಟಿಗೆ ವಾಪಸಾಗುವುದರಿಂದ ಒಂದು ರೀತಿಯಲ್ಲಿ ಉಚಿತವಾಗಿ ಗುಣಮಟ್ಟದ ಶಿಕ್ಷಣವನ್ನು ಪಡೆಯಬಹುದು ಎಂದು ಹೇಳಿದರು