ಸಾರ್ವಜನಿಕ ಆಸ್ಪತ್ರೆಯಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ಘಟಕ

Written by karnatakanandi.com

Published on:

Table of Contents

ಸಾರ್ವಜನಿಕ ಆಸ್ಪತ್ರೆಯಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ಘಟಕ

ಸಾರ್ವಜನಿಕ ಆಸ್ಪತ್ರೆಯಲ್ಲಿ ಇಂದು ಜಿಲ್ಲಾ ತಂಬಾಕು ನಿಯಂತ್ರಣ ಘಟಕ, ಆರೋಗ್ಯ ಇಲಾಖೆ ಮತ್ತು ಕಾರ್ಮಿಕ ಇಲಾಖೆ ಸಹಯೋಗದಲ್ಲಿ ವಿಶ್ವ ತಂಬಾಕು ದಿನಾಚರಣೆಯನ್ನು ಆಯೋಜನೆ ಮಾಡಲಾಗಿತ್ತು. ಕಾರ್ಯಕ್ರಮದಲ್ಲಿ ಪ್ರಧಾನ ಸಿವಿಲ್ ಜೆ.ಎಂ.ಏಪ್.ಸಿ.  ನ್ಯಾಯಧೀಶರಾದ ಪೂಜಾ. ಸಿ.ಜೆ. ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ ದೀಪ ಬೆಳಗುವ ಮೂಲಕ ಚಾಲನೆ ನೀಡಿದರು.

ಸಾರ್ವಜನಿಕ ಆಸ್ಪತ್ರೆಯಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ಘಟಕ

ಕಾರ್ಯಕ್ರಮದಲ್ಲಿ ತಾಲ್ಲೂಕು ಆರೋಗ್ಯಧಿಕಾರಿ ವೆಂಕಟೇಶ್ ಮಾತನಾಡಿ ಅಂಗಡಿ ಮಾಲೀಕರಿಗೆ ತಂಬಾಕಿನ ಕುರಿತು ಅರಿವು ಮೂಡಿಸಿ ಸುಮಾರು 07 ಸಾವಿರಕ್ಕೂ ಹೆಚ್ಚು ದಂಡಗಳನ್ನು ಇಲಾಖೆ ವತಿಯಿಂದ ವಿಧಿಸಿದ್ದೇವೆ. ಗುಲಾಬಿ ಹೂವು ನೀಡುವ ಮೂಲಕ ಅರ್ಥ ಪೂರ್ಣ ಕಾರ್ಯಕ್ರಮಗಳ ಮೂಲಕ ಜಾಗೃತಿ ಕಾರ್ಯಕ್ರಮಗಳನ್ನು ಮಾಡುತ್ತಿದ್ದೇವೆ ಕ್ಯಾನ್ಸರ್ ಕಾರಕ ಧೂಮಪಾನವನ್ನು ನಿಷೇದ ಮಾಡಲು ನಾವು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದೇವೆ.

ಇದನ್ನೂ ಓದಿ:- ಕೆ ಜಿ ರೇಷ್ಮೆಯ ಗೂಡಿಗೆ 2 ರೂ



ಸಾರ್ವಜನಿಕ ಆಸ್ಪತ್ರೆಯಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ಘಟಕ

ಶಾಲಾ ಕಾಲೇಜಗಳಿಂದ 100ಮೀಟರ್ ದೂರದಲ್ಲಿ ಧೂಮಪಾನ ಮಾರಾಟ ಮಾಡುವುದು ಮತ್ತು ಸೇವನೆ ಮಾಡಬಾರದು ಎಂದರು.   ತಂಬಾಕು ಉತ್ಪನ್ನಗಳಿಂದ ಜನರು ದೂರ ಉಳಿದಾಗ ಮಾತ್ರ ಆರೋಗ್ಯಕರ ಸಮಾಜ ನಿರ್ಮಾಣವಾಗುತ್ತದೆ ಎಂದರು. ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷರು ನಾರಾಯಣ ಸ್ವಾಮಿ,ಕಾರ್ಯದರ್ಶಿ ಸಿಜೆ ಭಾಸ್ಕರ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರು ಜಗದೀಶ್, ಆರೋಗ್ಯ ನಿರೀಕ್ಷಕ ದೇವರಾಜ್, ಆರೋಗ್ಯ ಇಲಾಖೆಯ ಅಕ್ಕಲರೆಡ್ಡಿ, ಲಲಿತಾ,   ನಬಿಉಲ್ಲಾ, ಟಿಟಿ ನರಸಿಂಹಪ್ಪ, ವಿಜಯಮ್ಮ, ಮಂಗಳ,ಪಿಎಸ್ಐ   ವೇಣುಗೋಪಾಲ್  
ಕಾರ್ಮಿಕ ಇಲಾಖೆ ನೀರಿಕ್ಷಕಿ ವಿಜಯಲಕ್ಷ್ಮಿ,ಮುಂತಾದವರು ಹಾಜರಿದ್ದರು

Leave a Comment