ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ಕ್ರೀಡಾಂಗಣಕ್ಕೆ ‘ಗುಲಾಬಿ ರಂಗು’ ಬೂಮ್ರಾ ಬೌಲಿಂಗ್‌ಗೆ ಮೆಕ್‌ಗ್ರಾ ಅಭಿಮಾನಿ
ಮೆಲ್ಬರ್ನ್ ಬಾರ್ಡರ್-ಗಾವಸ್ಕರ್ ಟ್ರೋಫಿ ಕ್ರಿಕೆಟ್ ಟೆಸ್ಟ್ ಸರಣೆಯಲ್ಲಿ ಭಾರತದ ವೇಗಿ ಜಸ್‌ಪ್ರೀತ್ ಬೂಮ್ರಾ ಇದುವರೆಗೆ ಅಮೋಘವಾಗಿ ಬೌಲಿಂಗ್ ಮಾಡಿದ್ದಾರೆ.
ಸರಣಿಯಲ್ಲಿ ಆಸ್ಟ್ರೇಲಿಯಾ ತಂಡವು 2-1 ರಿಂದ ಕೊನೆಯ ಮತ್ತು ಐದನೇ ಪಂದ್ಯವು ಸಿಡ್ನಿಯಲ್ಲಿ ಶುಕ್ರವಾರ ಆರಂಭವಾಗಲಿದ್ದು, 2-2ರ ಸಮಬಲ ಸಾಧಿಸುವತ್ತ ಭಾರತ ಚಿತ್ತ ನೆಟ್ಟಿದೆ. ಫಲಿತಾಂಶ ಏನೇ ಬರಲಿ; ಆದರೆ ಬೂಮ್ರಾ ಮಾತ್ರ ಮನ ಗೆದ್ದಿದ್ದಾರೆ. ಮನಸೋತವರಲ್ಲಿ ಆಸ್ಟ್ರೇಲಿಯಾದ ಮಾಜಿ ವೇಗಿ ಗ್ಲೆನ್ ಮೆಕ್ ಗ್ರಾ ಕೂಡ ಇದ್ದಾರೆ. ‘ನಾನು ಬೊಮ್ಮ ಅವರ ಅಭಿಮಾನಿಯಾಗಿಬಿಟ್ಟ. ದೇನೆ’ ಎಂದು ಗ್ಲೆನ್ ಹೇಳಿದ್ದಾರೆ.
‘ಬೂಮ್ರಾ ಅವರು ಇರದೇ ಹೋಗಿದ್ದರೆ, ಈ ಸರಣಿಯು (ಆಸ್ಟ್ರೇ ಲಿಯಾ ಪಾರಮ್ಯ) ಏಕಪಕ್ಷೀಯವಾಗಿರುತ್ತಿತ್ತು’ ಎಂದು ಮೆಕ್‌ಗ್ರಾ ಅಭಿಪ್ರಾಯಪಟ್ಟಿದ್ದಾರೆ.
ಅವರು ಇಲ್ಲಿ ತಮ್ಮ ಪ್ರತಿಷ್ಠಾನದ ಆಶ್ರಯದಲ್ಲಿ ಆಯೋಜಿಸಿದ್ದ ಕ್ಯಾನ್ಸರ್ ತಡೆ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
2008 ರಲ್ಲಿ ಗ್ಲೆನ್ ಪತ್ನಿ ಜೇನ್ ಅವರು ಕ್ಯಾನ್ಸರ್ ಕಾಯಿಲೆಗೆ ಬಲಿಯಾಗಿದ್ದರು. ಆಗ ಗ್ಲೆನ್ ಫೌಂಡೇಷನ್ ಆರಂಭಿಸಿ ಜಾಗೃತಿ ಮೂಡಿ ಸುತ್ತಿದ್ದಾರೆ. ಐದನೇ ಟೆಸ್ಟ್ ಸಂದರ್ಭದಲ್ಲಿ ಮೆಕ್ ಗ್ರಾ ಫೌಂಡೇಷನ್ ಕಾರ್ಯವನ್ನು ಬೆಂಬಲಿಸಿ ಆಟಗಾರರು ಪಿಂಕ್ ಕ್ಯಾಪ್ ಧರಿಸಿ ಆಡುವರು. ಗ್ಯಾಲರಿಯಲ್ಲಿರುವವರೂ ಗುಲಾಬಿ ವರ್ಣದ ಪೋಷಾಕುಗಳು ಧರಿಸಲಿದ್ದಾರೆ. ‘ಗೋ ಆಸ್ಟ್ರೇಲಿಯಾ ಅಭಿಯಾನ ಇಲ್ಲಿ ನಡೆಸಲಾಗುತ್ತಿದೆ.
ಇದನ್ನೂ ಓದಿ: ಬ್ಯಾಟಿಂಗ್ ವೈಫಲ್ಯಕ್ಕೆ ದಂಡ ತೆತ್ತ ರೋಹಿತ್ ಪಡೆ
ಈ ಸಂದರ್ಭದಲ್ಲಿ ಮಾತನಾಡಿದ ಅವರು, ‘ಬೂಮ್ರಾ ವಿಶಿಷ್ಟ ಶೈಲಿಯ ಬೌಲರ್, ಅವರ ಶೈಲಿಯನ್ನು ಯುವ ಆಟಗಾರರಿಗೆ ಹೇಳಿಕೊಡುವುದು ಕಷ್ಟ, ಆದರೆ ಅಂತಹ ಶೈಲಿಯನ್ನು ಅವರು (ಬೂಮ್ರಾ) ಸರಾಗವಾಗಿ ಪ್ರಯೋಗಿಸುತ್ತಾರೆ. ವಿಸ್ಮಯಕಾರಿ ಬೌಲರ್ ಅವರು ಎಂದರು.
‘ತಮ್ಮ ರನ್ ಅಪ್‌ನ ಕೊನೆಯ ಕೆಲವೇ ಹೆಜ್ಜೆಗಳಲ್ಲಿ ಅವರು ಅಪಾರ ಪ್ರಮಾಣದಲ್ಲಿ ಶಕ್ತಿಯನ್ನು ಸಂಚಯ ಮಾಡಿಕೊಂಡು ಚೆಂಡು ಬಿಡುಗಡೆಗೊಳಿಸುವ ರೀತಿ ಅಮೋಘವಾಗಿದೆ. ಅವರು ವಿಕೆಟ್‌ನ ಎರಡೂ ಕಡೆಯಿಂದ ಚೆಂಡು ಪ್ರಯೋಗಿಸುವುದರ ಮೇಲೆ ಉತ್ತಮ ನಿಯಂತ್ರಣ ಸಾಧಿಸಿದ್ದಾರೆ. ಅವರ ಅಂಕಿ ಸಂಖ್ಯೆಗಳು ಅದ್ಭುತವಾಗಿವೆ. ಅದಕ್ಕಾಗಿಯೇ ನಾನು ಅವರ ಅಭಿಮಾ- ನಿಯಾಗಿರುವೆ’ ಎಂದರು.
ಭಾರತ ತಂಡದಲ್ಲಿರುವ ಕನ್ನಡಿಗ ಪ್ರಸಿದ್ಧ ಕೃಷ್ಣ ಅವರ ಕುರಿತು ಮಾತ ನಾಡಿದ ಅವರು, ‘ಭಾರತವೆಂದರೆ 140 ಕೋಟಿ ಜನಸಂಖ್ಯೆಯಿರುವ ಮತ್ತು ಅಪ್ಪಟ ಕ್ರಿಕೆಟ್ ಪ್ರೇಮಿಗಳ ದೇಶ. ಈ ಆಟವು ಅವರ ಸಂಸ್ಕೃತಿಯ ಭಾಗವೇ ಆಗಿಬಿಟ್ಟಿದೆ. ಒಂದು ತುಂಡು ಜಾಗ ಸಿಕ್ಕಿದರೂ ಕ್ರಿಕೆಟ್ ಆಡಲು ಆರಂಭಿಸುತ್ತಾರೆ. ಅವರ ಆಸಕ್ತಿಯನ್ನು ಕಣ್ಣಾರೆ ಕಂಡಿದ್ದೇನೆ. ಪೇಸ್ ಫೌಂಡೇಷನ್‌ನಲ್ಲಿ ಕೆಲಸ ಮಾಡುವಾಗ ನೋಡಿರುವ ಪ್ರಸಿದ್ಧಕೃಷ್ಣ ಪ್ರತಿಭಾನ್ವಿತ ಬೌಲರ್. ಭವಿಷ್ಯದಲ್ಲಿ ಉತ್ತಮವಾಗಿ ಬೆಳೆಯಬಲ್ಲರು’ ಎಂದರು.
‘ಈಗಿನ ಯುವ ಪೀಳಿಗೆಯ ಮನೋಭಾವ ವಿಭಿನ್ನವಾಗಿದೆ. ಅವರು ಯಾವುದಕ್ಕೂ ಹೆದರುವುದಿಲ್ಲ. ಎಂತಹದೇ ಸ್ಥಿತಿಯಲ್ಲಿಯೂ ಅವರು ದಿಟ್ಟವಾಗಿ ಆಡುತ್ತಾರೆ. ಅವರ ಅ ಗುಣವೇ ನನಗೆ ಅಪಾರ ಇಷ್ಟ. ಆಸ್ಟ್ರೇಲಿಯಾ ತಂಡದಲ್ಲಿರುವ ಸ್ಯಾಮ್ ಕೊನ್‌ಸ್ಟಸ್ ಕೂಡ ಅದೇ ರೀತಿಯ ಹುಡುಗ, ಭಾರತ ತಂಡದಲ್ಲಿ ಯುವ ಆಟಗಾರರಿಗೆ ಕೊರತೆ ಇಲ್ಲ’ ಎಂದು ಹೇಳಿದರು.