ಸೆಬಿ ‘ಮಿತ್ರ’ ಹೂಡಿಕೆದಾರರಿಗೆ ಆಪ್ತ
ಹೂಡಿಕೆ ಮಾಡಿ ಮರೆತು ಹೋಗುತ್ತಿರುವ ,ಚಾಲ್ತಿಯಲ್ಲಿಇರದೆ ನಿಷ್ಕ್ರಿಯಗೊಂಡಿರುವ ಹಾಗೂ ವಾರಸುದಾರರನ್ನು ಪತ್ತೆ ಹಚ್ಚಲು ಸಾಧ್ಯವಾಗದ ಮ್ಯೂಚುವಲ್ ಫಂಡ್ (ಎಂ.ಎಫ್ )ಹೂಡಿಕೆ ಖಾತೆಗಳ ಪತ್ತೆಗೆ ಅನುವಾಗುವಂತೆ ಭಾರತೀಯ ಷೇರು ಪೇಟೆ ನಿಯಂತ್ರಣ ಮಂಡಳಿಯು(ಸೆಬಿ) ‘ಮಿತ್ರ’ ಹೆಸರಿನ ವೇದಿಕೆಯನ್ನು ರೂಪಿಸಿದೆ.ಮ್ಯೂಚುವಲ್ ಫಂಡ್ ಇನ್‌ವೆಸ್ಟ್‌ಮೆಂಟ್ ಟ್ರೇಸಿಂಗ್ ಮತ್ತು ರಿಟ್ರೇವಲ್ ಅಸಿಸ್ಟೆಂಟ್ ಎಂಬುದು ‘ಮಿತ್ರ’ದ ವಿಸ್ತ್ರತ ರೂಪ. ಹಲವಾರು ಹಳೆಯ ಮ್ಯೂಚುವಲ್ ಫಂಡ್ ಹಂತಗಳು ಚಾಲ್ತಿಯಲ್ಲಿರದ ಅಥವಾ ಅವರ ಕಾರಣ ಹೂಡಿಕೆದಾರರು ವಾರಸುದಾರರು ಹಣ ಪಡೆಯುವುದು ಕಷ್ಟಕರವಾಗಿದೆ. ಸಬಿ ಪ್ರಕಾರ ಬರೋಬ್ಬರಿ ₹500 ಕೋಟಿ ಮೊತ್ತವು ಯಾರೂ ದಿಕ್ಕಿಲ್ಲದೆ ಮ್ಯೂಚುವಲ್ ಫಂಡ್ ಕಂಪನಿಗಳಬಳಿಕೊಳೆಯುತ್ತಿದೆ.
ಅಂತಹ ಕ್ಷೇಮು ಮಾಡದ ಮ್ಯೂಚುವಲ್ ಫಂಡ್ ಹೂಡಿಕೆಗಳನ್ನು ಪತ್ತೆ ಹಚ್ಚಲು ಮತ್ತು ದುಡ್ಡನ್ನು ಅರ್ಹರು ಮರಳಿ ಪಡೆದುಕೊಳ್ಳಲು “ಮಿತ್ರ’ ನೆರವಿಗೆ ಬರುತ್ತದೆ. ಅಲ್ಲದೆ, ಕೆವೈಸಿ ಪೂರ್ಣಗೊಳಿಸದ, ಮ್ಯೂಚುವಲ್ ಫಂಡ್ ಖಾತೆಗಳನ್ನು ಅಪ್‌ಡೇಟ್ ಮಾಡಿ ಸಂಭಾವ್ಯ ವಂಚನೆ ತಪ್ಪಿಸಲು ಸಹ ಸಹಾಯ ಮಾಡಲಿದೆ.ಮಿತ್ರ ಪೋರ್ಟಲ್ ಏಕೆ ಅಗತ್ಯ?: ಆರಂಭಿಕ ಹಂತಗಳಲ್ಲಿ ಮ್ಯೂಚುವಲ್ ಫಂಡ್ ಹೂಡಿಕೆಗಳ ಡಿಜಿಟಲೀಕರಣ ಆಗಿರಲಿಲ್ಲ. ಪತ್ರದ ರೂಪದಲ್ಲಿ ಹೂಡಿಕೆ ದಾಖಲೆಗಳನ್ನುಹೂಡಿಕೆದಾರನಿಗೆ ನೀಡಲಾಗುತ್ತಿತ್ತು. ತಂತ್ರಜ್ಞಾನದ ಬೆಳವಣಿಗೆ ಮತ್ತು ಕೆವೈಸಿ ಪದ್ಧತಿ ಪರಿಚಯಿಸಿದ ನಂತರ ಮ್ಯೂಚುವಲ್ ಫಂಡ್ ಹೂಡಿಕೆ ಕಂಪನಿಗಳು ಡಿಜಿಟಲ್ ದಾಖಲೆಗಳ ವಿತರಣೆಗೆ ಮುಂದಾದವು.
ಆದರೆ, ಅನೇಕರು ತಂತ್ರಜ್ಞಾನದ ಅಳವಡಿಕೆ ನಂತರವೂ ಮ್ಯೂಚುವಲ್ ಫಂಡ್ ಹೂಡಿಕೆ ವಿವರಗಳನ್ನು ಟ್ರ್ಯಾಕ್ ಮಾಡಲು ಸಾಧ್ಯವಾಗುತ್ತಿಲ್ಲ. ಅಲ್ಲದೆ 10 ವರ್ಷಗಳಿಗಿಂತಲೂ ಹೆಚ್ಚಿನ ಕಾಲದಿಂದ ವಹಿವಾಟು ನಡೆಸಲು ಹಲವು ಮ್ಯೂಚುವಲ್ ಫಂಡ್ ಖಾತೆಗಳು ನಿಷ್ಕ್ರಿಯವಾಗಿವೆ. ಅವೆಲ್ಲವನ್ನು ಪತ್ತೆ ಮಾಡಬೇಕಾದರೆ ಮಿತ್ರ ಪೋರ್ಟಲ್ ನೆರವಾಗುತ್ತದೆ.
ಇದನ್ನೂ ಓದಿ:ನಿರ್ಜೀವ’ ಹಾಳೆಯಲ್ಲೊಂದು ಭಾವಲಹರಿ
ಹೂಡಿಕೆ ಪತ್ತೆ ಹೇಗೆ? ಮ್ಯೂಚುವಲ್ ಫಂಡ್ಸೆಂ ಟ್ರಲ್ ಡಾಟ್ ಕಾಂಗೆ (https://www. mfcentral.com/) ಭೇಟಿ ನೀಡಿದರೆ ಅಲ್ಲಿ ‘ಮಿತ್ರ’ ಎನ್ನುವ ಹೈಪರ್ ಲಿಂಕ್ ಇದೆ. ಅದರ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಪ್ಯಾನ್ ಕಾರ್ಡ್ ನಂಬರ್ ಮತ್ತು ಮೊಬೈಲ್ ನಂಬರ್ ನಮೂದಿಸುವಂತೆ ಕೇಳುತ್ತದೆ. ಮೊಬೈಲ್ ನಂಬರ್ ನಮೂದಿಸಿದ ನಂತರ ನಿಮ್ಮ ಮೊಬೈಲ್‌ಗೆ ಬರುವ ಒಟಿಪಿ ನಮೂದಿಸಿದರೆ ‘ಮಿತ್ರ’ ಪೋರ್ಟಲ್‌ಗೆ ನೀವು ಲಾಗಿನ್ ಆಗುತ್ತೀರಿ.ಮೊದಲನೇ ಬಾಕ್ಸ್‌ನಲ್ಲಿ ಹೂಡಿಕೆದಾರರ ಹೆಸರನ್ನು ಬರೆಯ ಬೇಕಾಗುತ್ತದೆ. ಹೂಡಿಕೆದಾರರ ಪ್ಯಾನ್ ನಂಬರ್, ಇ-ಮೇಲ್ ವಿಳಾಸ, ಮೊಬೈಲ್ ನಂಬರ್, ಹುಟ್ಟಿದ ದಿನಾಂಕ, ಬ್ಯಾಂಕ್ ಖಾತೆ ಸಂಖ್ಯೆ, ಪ್ಯಾನ್ ಎಕ್ಸೆಂಪ್ಟ್ ಕೆವೈಸಿ ರಫರನ್ಸ್ ನಂಬರ್ (ಪಿಇಕೆಆರ್‌ಎನ್) ಬಳಸಿ ಹುಡುಕಲುಸಾಧ್ಯವಿದೆ.
ಹೂಡಿಕೆದಾರರ ವಿಳಾಸ ಗೊತ್ತಿದ್ದರೆ ವಿಳಾಸ, ಇಲ್ಲ ನಾಮಿನಿ ಹೆಸರು, ಅದೂ ಗೊತ್ತಿಲ್ಲ ಅಂದರೆ ನಗರ ಅಥವಾ ಪಿನ್‌ಕೋಡ್ ನಮೂದಿ ಸಬಹುದಾಗಿದೆ. ಒಂದೊಮ್ಮೆ ಮ್ಯೂಚುವಲ್ ಫಂಡ್ ಹೂಡಿಕೆಯ ಪೋಲಿಯೊ ನಂಬರ್ ಇದ್ದರೆ ಅಥವಾ ಮ್ಯೂಚುವಲ್ ಫಂಡ್ ಹೂಡಿಕೆ ಮಾಡಿರುವ ಕಂಪನಿಯ ಹೆಸರು ಗೊತ್ತಿದ್ದರೆ ನಮೂದಿಸಬಹುದಾಗಿದೆ. ‘ಮಿತ್ರ’ದಲ್ಲಿ ಕಳೆದು ಹೋಗಿರುವ,ನಿಷ್ಕ್ರಿಯವಾಗಿರುವ ನಿಮ್ಮದೇ ಮ್ಯೂಚುವಲ್ ಫಂಡ್ ಹೂಡಿಕೆಗಳು ಅಥವಾ ಬೇರೆಯವರು ಕಳೆದುಕೊಂಡಿರುವ ಮ್ಯೂಚುವಲ್ ಫಂಡ್ ಹೂಡಿಕೆಯನ್ನು ಹುಡುಕಲು ಸಾಧ್ಯವಿದೆ.ಒಬ್ಬ ವ್ಯಕ್ತಿ ಲಾಗಿನ್ ಆದರೆ ಗರಿಷ್ಠ 25ಬಾರಿಹುಡುಕಾಟ ನಡೆಸಲು ಅವಕಾಶನೀಡಲಾಗಿದೆ. ನಿಮ್ಮ ಅಥವಾ ನಿಮ್ಮವರ ಹೆಸರಿನಲ್ಲಿ ಮ್ಯೂಚುವಲ್ ಫಂಡ್ ಇದೆ ಎನ್ನುವ ಸಂದೇಶ ಬಂದರೆ ಪ್ಯಾನ್ಸ್ ನಂಬರ್, ವಿಳಾಸ ದೃಢೀಕರಣ, ಆಧಾರ್, ಫೋಟೊ, ಬ್ಯಾಂಕ್ ಪಾಸ್‌ಬುಕ್ ಸೇರಿದಂತೆ ಇನ್ನಿತರ ಸೂಚಿತ ದಾಖಲೆಗಳೊಂದಿಗೆ ಮ್ಯೂಚುವಲ್ ಫಂಡ್
ಕಚೇರಿ, ಕೇಫಿನ್ ಕಚೇರಿ ಅಥವಾ ಕ್ಯಾಮ್ಸ್ ಕಚೇರಿಗೆ ಭೇಟಿ ನೀಡಬೇಕಾಗುತ್ತದೆ. ಎಲ್ಲಾ ದಾಖಲೆಗಳನ್ನು ಪರಿಶೀಲಿಸಿದ ಬಳಿಕ ಹೂಡಿಕೆಯಿಂದ ಬರಬೇಕಾದ ಮೊತ್ತ ನಿಮಗೆ ಲಭಿಸುತ್ತದೆ.