ಹತ್ಯೆ-ಆತ್ಮಹತ್ಯೆಯ ಕಾರುಬಾರು

ಹತ್ಯೆ-ಆತ್ಮಹತ್ಯೆಯ ಕಾರುಬಾರು

ರಾಜ್ಯ ಸರ್ಕಾರದ ವಿರುದ್ಧ ಸಿ.ಟಿ.ರವಿ ಆರೋಪ |ರಾಜ್ಯಪಾಲರಿಗೆ ದೂರು

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಶಾಂತಿ, ಸುವ್ಯವಸ್ಥೆಗೆ ಹೆಸರಾಗಿದ್ದ ಕರ್ನಾಟಕ ಹತ್ಯೆ, ಆತ್ಮಹತ್ಯೆ ರಾಜ್ಯವಾಗಿ ಪರಿವರ್ತನೆಯಾಗಿದೆ. ಕಾನೂನು ಎಲ್ಲರಿಗೆ ಒಂದೇ ಆಗಿದ್ದರೂ ಆಡಳಿತ, ಪ್ರತಿಪಕ್ಷಗಳ ಮಧ್ಯೆ ತಾರತಮ್ಯ ಮಾಡಲಾಗುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಆರೋಪಿಸಿದರು.

ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಅವರಿಗೆ ಸೋಮವಾರ ಮನವಿ ಸಲ್ಲಿಸಿದ ನಂತರ ರಾಜಭವನದ ಬಳಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ ಬೆಳಗಾವಿಯ ನೌಕರ ರುದ್ರಣ್ಣ ಯಡಣ್ಣವರ್ ಹಾಗೂ ಬೀದರ್‌ನ ಗುತ್ತಿಗೆದಾರ ಸಚಿನ್ ಪಾಂಚಾಳ್ ಆತ್ಮಹತ್ಯೆ ಪ್ರಕರಣಗಳಲ್ಲಿ ಆರೋಪಿಗಳ ಬಂಧನವಾಗಿಲ್ಲ. ಸಭಾಪತಿ ರೂಲಿಂಗ್ ನೀಡಿದ ನಂತರವೂ ಸಚಿವೆ ಲಕ್ಷ್ಮೀ ಹೆಬ್ಬಾರ್ಳ್ಳ ಸಲ್ಲಿಸಿದ ದೂರಿನ ಮೇರೆಗೆ ಕ್ಷಣಾರ್ಧದಲ್ಲಿ ಎಫ್ ಐಆ‌ರ್ ದಾಖಲಿಸಿದರು. ಆದರೆ ನಾನು ಕೊಟ್ಟಿರುವ ದೂರಿನ ಬಗ್ಗೆ ಎಫ್‌ಐಆ‌ರ್ ಕೂಡ ದಾಖಲಿಸಿಲ್ಲವೆಂದು ಸಿ.ಟಿ.ರವಿ ಹೇಳಿದರು.

ನಂಬಿಕೆಯಿಲ್ಲ: ಮಂತ್ರಿಗಳೇ ಆರೋಪಿ ಸ್ಥಾನದಲ್ಲಿರುವ
ಕಾರಣ ಸಿಐಡಿ ತನಿಖೆಯಿಂದ ನ್ಯಾಯ ಸಿಗುತ್ತದೆ ಎಂಬ ನಂಬಿಕೆಯಿಲ್ಲ. ಸಿಬಿಐ ಅಥವಾ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ಪೊಲೀಸರ ದೌರ್ಜನ್ಯದ ತನಿಖೆ ನಡೆಸಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು. ರಾಜ್ಯಪಾಲರಿಗೆ ದೂರು ಸಲ್ಲಿಸಿದ ನಂತರ ವಿಧಾನಸೌಧಕ್ಕೆ ತೆರಳಿ, ಸಭಾಪತಿ ಬಸವರಾಜ ಹೊರಟ್ಟಿ ಗೈರು ಹಾಜರಿಯಲ್ಲಿ ವಿಧಾನ ಪರಿಷತ್‌ ಕಾರ್ಯದರ್ಶಿಗೆ ದೂರು ಸಲ್ಲಿಸಿದರು.
ನಂತರ ಡಿಜಿಪಿ ಬಳಿ ಈ ಕುರಿತು ದೂರು ಸಲ್ಲಿಸಿದರು.

ವ್ಯಾಪ್ತಿಗೆ ಬರಲ್ಲವೆಂದರೆ ಹೇಗೆ?
ಕಲಾಪ ಮುಗಿದ ನಂತರವೂ ಸದನದ ಒಳಗೆ ಏನಾದರೂ ಘಟನೆ ನಡೆದರೆ ಅದರ ವಿರುದ್ಧ ಕ್ರಮ ತೆಗೆದುಕೊಳ್ಳುವ ಹಕ್ಕನ್ನು ಸಂವಿಧಾನ ಸಭಾಪತಿ ಅವರಿಗೆ ನೀಡಿದೆ. ಈ ಘಟನೆ ಕಲಾಪದ ವ್ಯಾಪ್ತಿಗೆ ಬರುವುದಿಲ್ಲ ಎಂದು ತಪ್ಪಿಸಿಕೊಳ್ಳುವಂತಿಲ್ಲ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಬೇಜವಾಬ್ದಾರಿ ಧೋರಣೆ ಸಲ್ಲ

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಿಧಾನ ಪರಿಷತ್‌ನಲ್ಲಿ ಸಿ.ಟಿ.ರವಿ ಅವರಿಂದ ಲಕ್ಷ್ಮೀ ಹೆಬ್ಬಾಳ್ಳ‌ರ್ ಅವರ ಮೇಲೆ ಅಹಿತಕರ ಮಾತುಗಳ ಪ್ರಯೋಗ ಆದ ವೇಳೆ ಸಭಾಪತಿಗಳ ಹೇಳಿಕೆ ನಿರೀಕ್ಷಿತವಾಗಿರಲಿಲ್ಲ. ಕಲಾಪ ಮುಗಿದ ವೇಳೆ ಈ ಘಟನೆ ನಡೆದ ಕಾರಣಕ್ಕೆ ಇದರ ಬಗ್ಗೆ ಏನನ್ನೂ ಹೇಳಲು ಇಷ್ಟಪಡುವುದಿಲ್ಲ ಎಂದಿದ್ದಾರೆ.

ಮಾಧ್ಯಮಗಳಲ್ಲಿ ನೋಡಿದ ಪ್ರಕಾರ ಸುಳ್ಳು ಪ್ರಕರಣಗಳ ಬಗ್ಗೆ ನಾನು ಪ್ರತಿಕ್ರಿಯೆ ನೀಡಲು ಬಯಸುವುದಿಲ್ಲ ಎಂದಿದ್ದಾರೆ. ಡಿ.26ರಂದು ಸಭಾಪತಿಗಳ ಕಾರ್ಯದರ್ಶಿಯವರಿಗೆ ಸಿ.ಟಿ.ರವಿ ಪ್ರಕರಣದ ಕುರಿತು ತನಿಖೆ ನಡೆಸಬೇಕು ಎಂದು ಪತ್ರ ಬರೆದು ಮನವಿ ಮಾಡಿದ್ದೇವೆ. ಸಿ.ಟಿ.ರವಿ ನಿಂದನಾತ್ಮಕ ಪದ ಪ್ರಯೋಗ ಮಾಡಿದಾಗ ಕಲಾಪ ಮುಗಿದಿತ್ತೇ ಹೊರತು ಸದನದಲ್ಲಿ ಎಲ್ಲರೂ ಹಾಜರಿದ್ದರು. ಮಾರ್ಷಲ್‌ಗಳು, ಸಿಬ್ಬಂದಿ, ಪಕ್ಷಗಳ ಪ್ರತಿನಿಧಿಗಳು, ಮಾಧ್ಯಮದವರೂ ಘಟನೆಯನ್ನು ಚಿತ್ರೀಕರಣ ಮಾಡುತ್ತಿದ್ದರು. ಇದನ್ನು ಸಭಾಪತಿಗಳ ವ್ಯಾಪ್ತಿಗೆ ಬರಲು ಸಾಧ್ಯವಿಲ್ಲ ಎಂದು ಹೇಳಲು ಹೇಗೆ ಸಾಧ್ಯ. ಘಟನೆ ನಡೆದ ವೇಳೆ ಸದನದಲ್ಲಿ ಹಾಜರಿದ್ದವರ ಬಳಿ ವಿಚಾರಣೆ ನಡೆಸಲಿ, ವಿಡಿಯೋ ಸೇರಿ ಅನೇಕ ಸಾಕ್ಷಿಗಳಿದ್ದು, ಪರೀಕ್ಷೆಗೆ ಒಳಪಡಿಸಿದರೆ ಸತ್ಯ ತಿಳಿಯುತ್ತದೆ ಎಂದರು.

ಸಿಸಿಟಿವಿ ದೃಶ್ಯಾವಳಿ ಕೇಳಿದ ಪೊಲೀಸರು

ವಿಧಾನ ಪರಿಷತ್‌ನಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಳರ್‌ ಅವರನ್ನು ಬಿಜೆಪಿ ಶಾಸಕ ಸಿ.ಟಿ. ರವಿ ನಿಂದಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ సిసి టివి ದೃಶ್ಯಾವಳಿಗಳನ್ನು ನೀಡುವಂತೆ ಪೊಲೀಸರು ಸಭಾಪತಿ ಅವರಿಗೆ ಪತ್ರ ಬರೆದಿದ್ದಾರೆ. ಆದರೆ ಪರಿಷತ್‌ ಸಚಿವಾಲಯ ಈ ರೀತಿಯಲ್ಲಿ ನೇರ ಪತ್ರ ಬರೆಯುವಂತಿಲ್ಲವೆಂಬ ಉತ್ತರ ಬರೆದಿದೆ.

ಬೆಳಗಾವಿಯ ಸಹಾಯಕ ಪೊಲೀಸ್ ಆಯುಕ್ತರು ಡಿ.23 ರಂದು ಬರೆದ ಪತ್ರ ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ಡಿ.26 ರಂದು ತಲುಪಿದೆ. ಅದನ್ನು ಪರಿಷತ್‌ನ ಕಾರ್ಯದರ್ಶಿ ಅವರಿಗೆ ಕಳುಹಿಸಿ ಉತ್ತರ ನೀಡುವಂತೆ ಸೂಚಿಸಿದ್ದರು. ಕಾರ್ಯದರ್ಶಿ ಅವರು ಸಭಾಪತಿ ಅವರಿಗೆ ನೇರವಾಗಿ ಪತ್ರ ಬರೆಯಬಾರದು ಎಂಬ ಉತ್ತರ ನೀಡಿದ್ದಾರೆ. ಪರಿಷತ್‌ನ ಸಭಾಂಗಣ ಇರುವುದು ಕಲಾಪ ನಡೆಸುವುದಕ್ಕೆ, ಅದು ಸಭಾಪತಿ ಅವರ ವ್ಯಾಪ್ತಿಗೆ ಬರುತ್ತದೆ. ಅಲ್ಲಿ ಏನೇ ನಡೆದರೂ ಸಭಾಪತಿ ಅವರೇ ಬಗೆ ಹರಿಸುತ್ತಾರೆ ಎಂಬ ಅಂಶವನ್ನು ಉಲ್ಲೇಖಿಸಿದ್ದಾರೆ. ಸಚಿವರಿಂದ ದೂರು ಬಂದಿಲ್ಲ: ಈ ನಡುವೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಳರ್ ಅವರ ವಿರುದ್ಧ ಸಿ.ಟಿ. ರವಿ ಸಭಾಪತಿ ಅವರಿಗೆ ದೂರು ನೀಡಿದ್ದಾರೆ. ಆದರೆ ಸಚಿವೆ ಇನ್ನೂ ದೂರು ನೀಡಿಲ್ಲ. ಅವರು ಹಿರೇಬಾಗೇವಾಡಿ ಠಾಣೆಗೆ ಮಾತ್ರ ದೂರು ನೀಡಿದ್ದಾರೆ.

Leave a Comment